For Quick Alerts
ALLOW NOTIFICATIONS  
For Daily Alerts

ಹಲ್ಲುಗಳು ಹಳದಿಯಾಗಿವೆಯೇ? ಚಿಂತೆ ಬಿಡಿ, ಬೆಳ್ಳಗಾಗಲು ಹೀಗೆ ಮಾಡಿ...

By Deepu
|

ಹಳದಿ ಹಲ್ಲುಗಳ ಗಡಣವು ಯಾರಿಗೇ ಆಗಲೀ ಮುಜುಗುರವನ್ನು೦ಟು ಮಾಡುವ ಸ೦ಗತಿಯಾಗಿರುತ್ತದೆ. ಒ೦ದು ವೇಳೆ ನಿಮ್ಮ ಎಲ್ಲಾ ಹಲ್ಲುಗಳೂ ಕೂಡಾ ಆರೋಗ್ಯಯುತ ಹಾಗೂ ಪರಿಪೂರ್ಣವಾದವುಗಳಾಗಿದ್ದು, ಅವು ವಿವರ್ಣಗೊ೦ಡಿದ್ದಲ್ಲಿ, ಅವುಗಳನ್ನು ಸರಿಪಡಿಸುವ ಕುರಿತು ನೀವೇನಾದರೂ ಮಾಡಲೇಬೇಕಾಗುತ್ತದೆ. ಹಳದಿ ಹಲ್ಲುಗಳನ್ನು ಬಿಳುಪಾಗಿಸುವ ನಿಟ್ಟಿನಲ್ಲಿ ನಿಮಗೆ ನೆರವಾಗಬಲ್ಲ ಕೆಲವೊ೦ದು ಮಾರ್ಗೋಪಾಯಗಳಿವೆ. ನಿಮ್ಮ ಮುತ್ತಿನ೦ತಹ ಹಲ್ಲುಗಳನ್ನು ಶ್ವೇತವರ್ಣಕ್ಕೆ ತಿರುಗಿಸಿಕೊಳ್ಳುವ೦ತಾಗಲು ಟೂಥ್ ಪೇಸ್ಟ್ ಅನ್ನು ಬಳಸಿಕೊಳ್ಳುವುದಕ್ಕೆ ಹೊರತಾಗಿಯೂ ಕೂಡಾ, ಅಡುಗೆ ಸೋಡಾ, ಚಾರ್ಕೋಲ್, ಹಾಗೂ ಉಪ್ಪು ಇವೇ ಮೊದಲಾದ ಇತರ ಕೆಲವು ಮನೆಮದ್ದುಗಳನ್ನೂ ಬಳಸಿಕೊಳ್ಳಬಹುದಾಗಿದೆ.

ಹಳದಿ ಬಣ್ಣದ ಹಲ್ಲುಗಳನ್ನು ಬೆಳ್ಳಗೆ ಹೊಳೆಯುವ೦ತೆ ಮಾಡುವುದಕ್ಕಿರುವ ಮೂಲಭೂತವಾದ ಮಾರ್ಗೋಪಾಯವೇನೆ೦ದರೆ, ನಿಮ್ಮ ದ೦ತಪ೦ಕ್ತಿಗಳನ್ನು ದಿನಕ್ಕೆರಡು ಬಾರಿ ಉಜ್ಜಿಕೊಳ್ಳುವುದು. ಈ ಸರಳವಾದ ಮಾರ್ಗೋಪಾಯವನ್ನು ಅನುಸರಿಸುವುದರ ಮೂಲಕ ನೀವು ಬಾಯಿಯ ಕಿರಿಕಿರಿಗಳಾದ ರಕ್ತಸ್ರಾವ ಹಾಗೂ ಊದಿಕೊ೦ಡ ವಸಡುಗಳ೦ತಹ ಸಮಸ್ಯೆಗಳಿಗೆ ಮ೦ಗಳ ಹಾಡಬಹುದು. ಹೀಗಾಗಿ, ನಿಮ್ಮ ಸು೦ದರವಾದ ದ೦ತಪ೦ಕ್ತಿಯನ್ನು ಹಳದಿ ಬಣ್ಣದಿ೦ದ ಲಕಲಕನೆ ಹೊಳೆಯುವ೦ತಹ ಶುಭ್ರ ಶ್ವೇತವರ್ಣಕ್ಕೆ ತಿರುಗಿಸಲು ನೆರವಾಗಬಲ್ಲ ಈ ಮಾರ್ಗೋಪಾಯಗಳತ್ತ ಒಮ್ಮೆ ಚಿತ್ತಹರಿಸಿರಿ....

ಅರಿಶಿನ ಮತ್ತು ತೆಂಗಿನೆಣ್ಣೆ

ಅರಿಶಿನ ಮತ್ತು ತೆಂಗಿನೆಣ್ಣೆ

ಸ್ವಲ್ಪ ಅರಿಶಿನವನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿ ಮತ್ತು ಇದರಿಂದ ಹಲ್ಲು ತಿಕ್ಕಿರಿ. ಐದು ನಿಮಿಷಗಳ ತರುವಾಯ ಹಲ್ಲುಗಳನ್ನು ತೊಳೆದುಕೊಳ್ಳಿ. ಹಳದಿ ಕಲೆಯನ್ನು ಹೋಗಲಾಡಿಸಲು ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿ... ಇಲ್ಲದಿದ್ದರೆ ಇನ್ನೊಂದು ವಿಧಾನವಿದೆ ಅರಿಶಿನವನ್ನು ಹಾಲಿನೊಂದಿಗೆ ಚೆನ್ನಾಗಿ ಬೆರೆಸಿ. ಆ ಪೇಸ್ಟನ್ನು ಹಲ್ಲುಗಳಿಗೆ ಲೇಪಿಸಿ. ತದನಂತರ ಮೂರು ನಿಮಿಷಗಳ ನಂತರ ಹಲ್ಲುಗಳನ್ನು ಚೆನ್ನಾಗಿ ತೊಳೆಯಿರಿ.

ಲಿಂಬೆ

ಲಿಂಬೆ

ನೈಸರ್ಗಿಕ ಶುದ್ಧಕ ಎಂದೇ ಕರೆಯಲ್ಪಡುವ ಲಿಂಬೆಯನ್ನು ಬಳಸಿಕೊಂಡು ನಿಮಗೆ ಹಲ್ಲುಜ್ಜಬಹುದಾಗಿದೆ. ಹಲ್ಲಿನ ಹಳದಿ ಕರೆಯನ್ನು ನಿವಾರಿಸಲು ಲಿಂಬೆ ಅತ್ಯುನ್ನತ ಪರಿಣಾಮಕಾರಿ ಅಂಶವಾಗಿದೆ. ಸ್ವಲ್ಪ ಲಿಂಬೆ ರಸವನ್ನು ತೆಗೆದುಕೊಂಡು ಹಲ್ಲುಗಳನ್ನು ಬೆರಳಿನಿಂದ ತಿಕ್ಕಿಕೊಳ್ಳಿ. ಅಂತೆಯೇ ಲಿಂಬೆ ಸಿಪ್ಪೆಯಿಂದ ಹಲ್ಲುಗಳನ್ನು ಉಜ್ಜಿಕೊಳ್ಳಬಹುದು. ಸ್ವಲ್ಪ ಉಪ್ಪು ಕೆಲವು ಹನಿ ಲಿಂಬೆ ರಸವನ್ನು ಉಪಯೋಗಿಸಿಕೊಂಡು ಹಲ್ಲುಗಳನ್ನು ನಿಮಗೆ ಬಿಳಿ ಮಾಡಿಕೊಳ್ಳಬಹುದಾಗಿದೆ. ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಅತ್ಯುನ್ನತ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ತುಳಸಿ ಎಲೆಗಳು

ತುಳಸಿ ಎಲೆಗಳು

*ತಾಜಾ ತುಳಸಿ ಎಲೆಗಳನ್ನು ತೆಗೆದುಕೊಂಡು ನೆರಳಲ್ಲಿ ಇಟ್ಟು ಒಣಗಿಸಿ

*ಒಮ್ಮೆ ತುಳಸಿ ಎಲೆಗಳು ಸಂಪೂರ್ಣವಾಗಿ ಒಣಗಿದ ಮೇಲೆ, ಅದನ್ನು ಗ್ರೈಂಡ್ ಮಾಡಿ ಪುಡಿಮಾಡಿ

*ಈ ಪುಡಿಯನ್ನು ನಿಮ್ಮ ಹಲ್ಲುಗಳನ್ನು ಬ್ರಶ್ ಮಾಡಲು ಬಳಸಿ.

*ನಿಮ್ಮ ಬೆರಳಿನಿಂದ ಕೂಡ ತುಳಸಿ ಪುಡಿಯಿಂದ ಹಲ್ಲುಗಳನ್ನು ಉಜ್ಜಬಹುದು ಅಥವ *ತುಳಸಿ ಪುಡಿಯನ್ನು ನಿಮ್ಮ ಎಂದಿನ ಟೂತ್ ಪೇಸ್ಟ್ ಜೊತೆ ಮಿಶ್ರಣಮಾಡಿ ಬಳಸಲೂ ಬಹುದು.

ಅಡುಗೆ ಸೋಡಾ ಬಳಸಿ

ಅಡುಗೆ ಸೋಡಾ ಬಳಸಿ

ಅಡುಗೆಸೋಡ ಜೊತೆಗೆ ಲಿಂಬೆ ರಸ ಬೆರಸಿ ಬಳಸಿದರೆ ಲಿಂಬೆರಸದಲ್ಲಿರುವ ಸಿಟ್ರಿಕ್ ಆಮ್ಲ ಕಲ್ಲಿನ ಕವಚದಲ್ಲಿರುವ ಕ್ಯಾಲ್ಸಿಯುಮ್ ಅನ್ನು ಬೇರ್ಪಡಿಸಿ ಹಲ್ಲುಗಳು ಮತ್ತೂ ಸವೆದುಹೋಗಿ ನಿಮ್ಮ ಹಲ್ಲುಗಳ ಬಿಳುಪು ಮತ್ತೂ ಹೆಚ್ಚಾಗಿ ಮಾಡುತ್ತದೆ. ಅಡಿಗೆ ಸೋಡ ಕೂಡಲೇ ಬಿಳುಪಾಗಿ ಮಾಡಿದರೂ ಅದರ ದೀರ್ಘಕಾಲದ ಬಳಸುವಿಕೆಯಿಂದ ದಂತ ಕವಚಕ್ಕೆ ಅಪಾಯಕಾರಿಯಾಗಬಹುದು. ಆದಾಗ್ಯೂ ನೀವು ಅಡಿಗೆಸೋಡ ಬಳಸಲು ನಿರ್ಧರಿಸಿದ್ದರೆ, ಹಳದಿ ಹಲ್ಲಿಗೆ ಪರಿಹಾರವಾಗಿ ಅಡಿಗೆ ಸೋಡ, ಲಿಂಬೆ ರಸ ಮತ್ತು ಉಪ್ಪಿನ ಮಿಶ್ರಣದಿಂದ ಪೇಸ್ಟ್ ಮಾಡಿಕೊಂಡು ಬಳಸಿ.

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ಒಂದು ಲಿಂಬೆಹಣ್ಣಿನ ಸಿಪ್ಪೆ ತೆಗೆದುಕೊಂಡು ನಿಮ್ಮ ಹಲ್ಲುಗಳ ಮೇಲೆ 1/2 ದಿಂದ 1 ನಿಮಿಷದವರೆಗೆ ಮಾತ್ರ ಉಜ್ಜಿ ನಂತರ ನೀರಿನಿಂದ ತೊಳೆದುಕೊಳ್ಳಿ. ಒಂದು ಚಮಚ ಲಿಂಬೆರಸಕ್ಕೆ ಒಂದು ಚಮಚ ನೀರು ಬೆರಸಿ: ಅದನ್ನು ಬಳಸಿ ನಿಮ್ಮ ಹಲ್ಲುಗಳನ್ನು ಉಜ್ಜಿ. ನೀರಿನಿಂದ ತೊಳೆದುಕೊಂಡ ನಂತರ ನಿಮ್ಮ ಮಾಮೂಲು ಟೂತ್ ಪೇಸ್ಟಿನಿಂದ ಬ್ರಶ್ ಮಾಡಿ.

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ಲಿಂಬೆರಸವನ್ನು ನೀರುಬೆರಸದೇ ಮಾತ್ರ ಬಳಸಬೇಡಿ. ಯಾವಾಗಲೂ ಹಲ್ಲು ಉಜ್ಜುವ ಮೊದಲು ಲಿಂಬೆ ರಸಕ್ಕೆ ನೀರು ಬೆರಸಿಯೇ ಬಳಸಿ. ಇಲ್ಲದಿದ್ದರೆ ಅದರಲ್ಲಿರುವ ಪ್ರಬಲಶಕ್ತಿಯ ಆಮ್ಲವು ಹಲ್ಲುಗಳ ಮೆಲಿನ ದಂತಕವಚ ಮತ್ತು ಹಲ್ಲಿನ ಭಾಗವಾದ ಕ್ಯಾಲ್ಸಿಯುಮ್ಮಿಗೆ ಹಾನಿಯುಂಟುಮಾಡಬಹುದು. ನಿಮ್ಮ ದಂತ ಕವಚದ ಮೆರಗು ಉಳಿಸಿಕೊಳ್ಳಬೇಕಾದಲ್ಲಿ ಲಿಂಬೆಹಣ್ಣಿನ ರಸವನ್ನು ವಾರದಲ್ಲಿ ಎರಡುಬಾರಿಗಿಂತಾ ಹೆಚ್ಚು ಬಳಸಬೇಡಿ.

ಉಪ್ಪು

ಉಪ್ಪು

ಉಪ್ಪಿನಲ್ಲಿಯೂ ಹಲ್ಲಿನ ಹಳದಿ ಹೋಗಿಸುವ ಗುಣವಿದೆ. ಉಪ್ಪನ್ನು ಬಳಸುವುದರಿಂದ ಬಾಯಿಯಲ್ಲಿರುವ ಶೇಕಡಾ 90 ರಷ್ಟು ಕ್ರಿಮಿಗಳು ನಾಶವಾಗುತ್ತವೆ. ಬಾಯಿಗೂ ಸೋಂಕು ತಗುಲದಂತೆ ಆರೋಗ್ಯವಾಗಿಡುತ್ತದೆ. ಅಡುಗೆ ಸೋಡಾ ಕೂಡ ನೈಸರ್ಗಿಕ ಮೌತ್ ವಾಶ್ ನಂತೆ ಕೆಲಸ ಮಾಡುತ್ತದೆ.

ಬೇವು

ಬೇವು

ಬೇವಿನ ಕಡ್ಡಿಯನ್ನು ಹಲ್ಲುಗಳನ್ನು ಗಟ್ಟಿಯಾಗಿಟ್ಟುಕೊಳ್ಳಲು ಹಿಂದೆ ಬಳಸುತ್ತಿದ್ದರು. ಇದೂ ಈಗಲೂ ಪ್ರಸ್ತುತ. ಬೇವಿನ ಎಣ್ಣೆ ಬೆರೆಸಿದ ಮೌತ್ ವಾಶ್ ಬಳಸುವುದರಿಂದ ಸೋಂಕು, ಹುಳುಕು ಹಲ್ಲು, ಹುಣ್ಣು ಮುಂತಾದುವನ್ನು ನಿವಾರಿಸಬಹುದು.

ನೀರು

ನೀರು

ಹೆಚ್ಚು ನೀರು ಕುಡಿದರೆ ದೇಹಕ್ಕೆ ಮಾತ್ರವಲ್ಲ. ಬಾಯಿಯ ಸ್ವಾಸ್ಥ್ಯವೂ ಹೆಚ್ಚು ಕಾಲವಿರುತ್ತದೆ. ಹಲ್ಲುಗಳ ಮಧ್ಯೆ ಉಳಿದುಕೊಂಡ ಆಹಾರವನ್ನು ಹೋಗಿಸಿ ವಾಸನೆ ಬರದಂತೆ ನೋಡಿಕೊಳ್ಳುತ್ತದೆ.

English summary

Ways to Naturally Whiten Your Teeth at Home

Your teeth are one of the first things people notice. They are a sign of health as well as confidence. When making a first impression, having teeth that look like you don’t brush them can send a signal that you don’t really care about yourself. Who doesn’t want to have a beautiful smile with white sparkling
X
Desktop Bottom Promotion