ಕುತ್ತಿಗೆಯ ಸುತ್ತಲೂ ಮೂಡಿರುವ ನೆರಿಗೆಯ ಸಮಸ್ಯೆಗೆ ಸೂಕ್ತ ಪರಿಹಾರಗಳು

Posted By: Hemanth
Subscribe to Boldsky

ಮುಖವು ಬಿಳಿಯಾಗಿ, ಕಾಂತಿಯಿಂದ ಹೊಳೆಯುತ್ತಲಿದ್ದು, ಅದರ ಕೆಳಗಿರುವ ಕುತ್ತಿಗೆಯು ಕಪ್ಪಾಗಿದ್ದರೆ ಆಗ ನಿಮ್ಮ ಸೌಂದರ್ಯವು ನೀರಿನಲ್ಲಿಟ್ಟ ಹೋಮದಂತೆ ಆಗುವುದು. ನೀವು ಮುಖಕ್ಕೆ ಎಷ್ಟೇ ಆರೈಕೆ, ಮೇಕಪ್ ಮಾಡಿದರೂ ನೆರಿಗೆಗಟ್ಟಿದ ಕುತ್ತಿಗೆಯ ಬಣ್ಣವು ಎಲ್ಲವನ್ನು ನುಂಗಿ ಹಾಕುವುದು. ಕುತ್ತಿಗೆಯ ಆರೈಕೆ ಮಾಡುವುದು ಕೂಡ ಅತೀ ಅಗತ್ಯವಾಗಿದೆ.

ಕುತ್ತಿಗೆಯಲ್ಲಿ ನೆರಿಗೆಗಳು ಬಂದಿದ್ದರೆ ಅದಕ್ಕೆ ಪ್ರಮುಖ ಕಾರಣ ವಯಸ್ಸಾಗುತ್ತಿದೆ ಎಂದಲ್ಲ. ನಿಮ್ಮ ಜೀವನಶೈಲಿ, ಸೂರ್ಯನ ಬಿಸಿಲಿಗೆ ಅತಿಯಾಗಿ ಮೈಯೊಡ್ಡುವುದು, ಧೂಮಪಾನ ಮತ್ತು ಮಧ್ಯಪಾನ, ರಾಸಾಯನಿಕ ಚಿಕಿತ್ಸೆ ಇತ್ಯಾದಿ ಪ್ರಮುಖವಾಗಿದೆ. ಹದಿಹರೆಯದವರಲ್ಲಿ ಕೂಡ ಇಂತಹ ಸಮಸ್ಯೆ ಕಂಡುಬರುವುದು. ಇಂತಹ ಸಮಸ್ಯೆ ನಿವಾರಣೆ ಮಾಡಲು ಕೆಲವೊಂದು ನೈಸರ್ಗಿಕ ವಿಧಾನಗಳು ಇವೆ. ಇದನ್ನು ನೀವು ಬಳಸಿಕೊಂಡರೆ ಆಗ ನೆರಿಗೆ ಮುಕ್ತ ಮತ್ತು ಯೌವನಯುತ ಕುತ್ತಿಗೆ ಪಡೆಯಲು ನೆರವಾಗುವುದು....

ಎಕ್ಸ್ಫೊಲಿಯೆಟ್

ಎಕ್ಸ್ಫೊಲಿಯೆಟ್

ಎಕ್ಸ್ಫೊಲಿಯೆಟ್ ನಿಂದ ಸತ್ತ ಚರ್ಮದ ಕೋಶಗಳನ್ನು ತೆಗೆಯಲು ನೆರವಾಗುವುದು. ಇದರಿಂದ ಚರ್ಮವು ಬಿಳಿ ಮತ್ತು ಯೌವನಯುತವಾಗುವುದು. ಇದು ಮೊಡವೆ ಬರುವುದನ್ನು ತಡೆಯುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಲಿಂಬೆರಸ

1 ಟೊಮೆಟೊ

5 ಚಮಚ ಓಟ್ ಮೀಲ್

ಬಳಸುವ ವಿಧಾನ

ಟೊಮೆಟೊವನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪ್ಯೂರಿಗೆ ಎರಡು ಚಮಚ ಲಿಂಬೆರಸ ಹಾಕಿ. ಬಳಿಕ ಐದು ಚಮಚ ಓಟ್ ಮೀಲ್ ಹಾಕಿಕೊಳ್ಳಿ. ಈ ಮಿಶ್ರಣವನ್ನು ಕುತ್ತಿಗೆಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ತುಂಬಾ ಗಡುಸಾಗಿ ಸ್ಕ್ರಬ್ ಮಾಡಬೇಡಿ. 15 ನಿಮಿಷ ಇದನ್ನು ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.

ಮಸಾಜ್

ಮಸಾಜ್

ಸ್ಕ್ರಬ್ ಮತ್ತು ಮಾಸ್ಕ್ ನೊಂದಿಗೆ ಮಸಾಜ್ ಕೂಡ ತುಂಬಾ ಪ್ರಾಮುಖ್ಯತೆ ಪಡೆಯುವುದು. ಮಸಾಜ್ ನಿಂದ ಕುತ್ತಿಗೆಯಲ್ಲಿ ರಕ್ತಪರಿಚಲನೆಯು ಹೆಚ್ಚಾಗಿ ನೆರಿಗೆಯು ಕಡಿಮೆಯಾಗುವಂತೆ ಮಾಡುವುದು.

ರಾತ್ರಿ ಮಲಗುವ ಮೊದಲು ಸ್ವಲ್ಪ ಮೊಶ್ಚಿರೈಸರ್ ನ್ನು ಕುತ್ತಿಗೆಗೆ ಹಚ್ಚಿಕೊಳ್ಳಿ. ಮೇಲ್ಮುಖವಾಗಿ ಮೊಶ್ಚಿರೈಸರ್ ಹಚ್ಚಿಕೊಂಡು ಭುಜದ ಭಾಗದಿಂದ ದವಡೆ ಭಾಗಕ್ಕೆ ಮಸಾಜ್ ಮಾಡುತ್ತಾ ಹೋಗಿ. ನೀವು ಮೇಲ್ಮುಖವಾಗಿಯೇ ಮಸಾಜ್ ಮಾಡಿ.

ಮಾಸ್ಕ್

ಮಾಸ್ಕ್

ಸುಂದರ ಹಾಗೂ ಕಾಂತಿಯುತ ಚರ್ಮವನ್ನು ನಿರ್ವಹಣೆ ಮಾಡಲು ಮಾಸ್ಕ್ ತುಂಬಾ ಮುಖ್ಯ. ಸುಂದರ ಹಾಗೂ ಯೌವನಭರಿತ ಕುತ್ತಿಗೆ ಪಡೆಯಲು ಇದನ್ನು ಹಚ್ಚಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಬಾಳೆಹಣ್ಣು

1 ಚಮಚ ಜೇನುತುಪ್ಪ

ಮೊಟ್ಟೆ ಬಿಳಿಭಾಗ

ಬಳಸುವ ವಿಧಾನ

ಬಳಸುವ ವಿಧಾನ

ಹಣ್ಣಾದ ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಂಡು ಪೇಸ್ಟ್ ಮಾಡಿ. ಮೊಟ್ಟೆಯಿಂದ ಅದರ ಬಿಳಿ ಭಾಗವನ್ನು ತೆಗೆಯಿರಿ ಮತ್ತು ಇದನ್ನು ಬಾಳೆಹಣ್ಣಿಗೆ ಸೇರಿಸಿ. ಇದನ್ನು ಸರಿಯಾಗಿ ಕಲಸಿಕೊಳ್ಳಿ. ಬಳಿಕ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ. ದಪ್ಪಗಿನ ಪೇಸ್ಟ್ ನ್ನು ಕುತ್ತಿಗೆಗೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ಇದನ್ನು ತೊಳೆಯಿರಿ. ಈಗ ನಿಮಗೆ ಬದಲಾವಣೆ ಕಂಡುಬರುವುದು. ತಿಂಗಳ ಕಾಲ ವಾರದಲ್ಲಿ ಒಂದು ಸಲ ಈ ಪ್ಯಾಕ್ ನ್ನು ಹಚ್ಚಿಕೊಂಡರೆ ಫಲಿತಾಂಶ ಖಚಿತ.

ಮಲಗುವ ಭಂಗಿ ಬದಲಾಯಿಸಿಕೊಳ್ಳಿ

ಮಲಗುವ ಭಂಗಿ ಬದಲಾಯಿಸಿಕೊಳ್ಳಿ

ಮುಖವು ತಲೆದಿಂಬಿಗೆ ಒತ್ತಿಹೋಗುವಂತಹ ಭಂಗಿಯಲ್ಲಿ ನೀವು ಮಲಗಬೇಡಿ. ಇದರಿಂದಾಗಿ ನಿಮ್ಮ ಮುಖ ಹಾಗೂ ಕುತ್ತಿಗೆಯಲ್ಲಿ ನೆರಿಗೆ ಕಾಣಿಸುವುದು. ನೆರಿಗೆ ಬರದಂತೆ ತಡೆಯಲು ಯಾವಾಗಲೂ ಬೆನ್ನ ಮೇಲೆ ಮಲಗಿ.

ನೇರವಾಗಿ ಕುಳಿತುಕೊಳ್ಳಿ

ನೇರವಾಗಿ ಕುಳಿತುಕೊಳ್ಳಿ

ಕುತ್ತಿಗೆಯಲ್ಲಿ ನೆರಿಗೆ ಬರಲು ನಮ್ಮ ದೇಹದ ಭಂಗಿಯು ಪ್ರಮುಖ ಪಾತ್ರ ವಹಿಸುವುದು. ಮೊಬೈಲ್ ಅಥವಾ ಲ್ಯಾಪ್ ಟಾಪ್ ಹಿಡಿದುಕೊಂಡು ಬಗ್ಗಿ ಕುಳಿತು ಕೆಲಸ ಮಾಡಿದರೆ ಆಗ ಚರ್ಮದಲ್ಲಿ ನೆರಿಗೆ ಮೂಡುವುದು ಮಾತ್ರವಲ್ಲದೆ, ಬೆನ್ನು ನೋವು ಕೂಡ ಕಾಣಿಸಿಕೊಳ್ಳುವುದು. ಇದರಿಂದ ಯಾವಾಗಲೂ ನೀವು ನೇರವಾಗಿ ಕುಳಿತುಕೊಳ್ಳಿ ಮತ್ತು ದೇಹಕ್ಕೆ ಒತ್ತಡ ಹಾಕಬೇಡಿ.

ಐಸ್ ಥೆರಪಿ

ಐಸ್ ಥೆರಪಿ

ಐಸ್ ನ್ನು ಕುತ್ತಿಗೆ ಉಜ್ಜಿಕೊಳ್ಳುವುದರಿಂದ ನೆರಿಗೆಗಳು ಕಡಿಮೆಯಾಗುವುದು ಮತ್ತು ಯೌವನಯುತವಾಗಿ ಕಾಣುವುದು. ಯಾಕೆಂದರೆ ಇದು ರಕ್ತಪರಿಚಲನೆ ಹೆಚ್ಚಿಸುವುದು. ಇದು ಚರ್ಮದಲ್ಲಿನ ಉರಿಯೂತವನ್ನು ಕಡಿಮೆ ಮಾಡುವುದರಿಂದ ಚರ್ಮವು ಹೆಚ್ಚು ಸ್ಥಿರವಾಗುವುದು.

English summary

Tips For Wrinkle-free And Young-looking Neck

A wrinkle-free young-looking neck is every woman's dream. Often, we tend to take less care of our neck and we give more importance to our face when it comes to skin care. But taking care of your neck is also equally important in skin care.Neck wrinkles are not necessarily the sign of ageing. It can also be due to over-exposure to the sun, increased lifestyle vices like smoking and drinking, chemical treatments, etc. So even the youth also face this problem of neck wrinkles.