Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶೇವಿಂಗ್ ಮಾಡಬೇಕಾದಾಗ ಕ್ರೀಮ್ ಬಳಸುವ ಅಗತ್ಯವಿದೆಯಾ?
ಮಹಿಳೆಯರ ಸೌಂದರ್ಯಕ್ಕೆ ಕೆಲವೊಂದು ಅನಗತ್ಯ ಕೂದಳು ತೊಂದರೆ ನೀಡುವುದು ಇದೆ. ಇದನ್ನು ತೆಗೆಯಲು ಹಲವಾರು ರೀತಿಯ ವಿಧಾನಗಳು ಇವೆಯಾದರೂ ಹೆಚ್ಚಾಗಿ ಮಹಿಳೆಯರು ಕೂದಲನ್ನು ಶೇವಿಂಗ್ ಮಾಡಿಕೊಳ್ಳಲು ಇಷ್ಟಪಡುವರು. ಇದು ತುಂಬಾ ಸರಳ ಹಾಗೂ ಹೆಚ್ಚು ಸಮಯ ಬೇಕಿಲ್ಲದೆ ಇರುವ ಕಾರಣ ಶೇವಿಂಗ್ ಮಾಡುವುದನ್ನು ಹೆಚ್ಚಿನ ಮಹಿಳೆಯರು ಬಯಸುವರು. ಅದರಲ್ಲೂ ಕೆಲವೊಂದು ಸಲ ಪಾರ್ಟಿ, ಕಚೇರಿ ಅಥವಾ ತಿರುಗಾಡಲು ಹೋಗಬೇಕಾದಾಗ ಕೂದಲನ್ನು
ಬೇಗನೆ ತೆಗೆಯಬೇಕೆಂದರೆ ಶೇವಿಂಗ್ ಮಾಡಬೇಕಾಗುತ್ತದೆ. ಆದರೆ ನೀವು ಸರಿಯಾದ ರೀತಿಯಲ್ಲಿ ಶೇವಿಂಗ್ ಮಾಡುತ್ತೀರಾ ಎನ್ನುವ ಪ್ರಶ್ನೆ ಬರುವುದು. ಎಷ್ಟು ಮಂದಿ ಶೇವಿಂಗ್ ಮಾಡುವ ವೇಳೆ ಕ್ರೀಮ್ ಬಳಸುತ್ತೀರಿ? ಇದು ಎಷ್ಟು ಮುಖ್ಯ ಎಂದು ಈ ಲೇಖನದ ಮೂಲಕ ತಿಳಿಯುವ.

ಇದು ರಕ್ಷಣೆ ನೀಡುವುದು
ಶೇವಿಂಗ್ ಜೆಲ್ ಅಥವಾ ಕ್ರೀಮ್ ಗಳು ನಯವಾಗಿ ಶೇವಿಂಗ್ ಮಾಡಲು ನೆರವಾಗುವುದು ಮಾತ್ರವಲ್ಲದೆ, ಚರ್ಮವನ್ನು ಹಲವಾರು ವಿಧಗಳಿಂದ ರಕ್ಷಿಸುವುದು. ಇದು ಚರ್ಮ ಮತ್ತು ರೇಜರ್ ನ ಬ್ಲೇಡ್ ನಡುವಿನ ಪದರವಾಗಿ ಕೆಲಸ ಮಾಡುವುದು. ಇದರಿಂದ ಯಾವುದೇ ಗಾಯವಾದಂತೆ ತಡೆಯುವುದು.
ತೇವಾಂಶ ನೀಡುವುದು
ಶೇವಿಂಗ್ ಮಾಡುವ ಮೊದಲು ಚರ್ಮ ಮತ್ತು ಕೂದಲಿಗೆ ತೇವಾಂಶ ನೀಡುವುದು ಅಗತ್ಯ. ಇದರಿಂದ ಶೇವಿಂಗ್ ನಯವಾಗಿ ಆಗುವುದು. ಕೇವಲ ಸೋಪ್ ಮತ್ತು ನೀರು ಹಾಕಿದರೆ ಅದರಿಂದ ಕೆಲಸವಾಗದು. ಸೋಪ್ ಚರ್ಮದಲ್ಲಿರುವ ಅತಿಯಾದ ಕೊಳೆ ಮತ್ತು ಎಣ್ಣೆಯನ್ನು ತೆಗೆದುಹಾಕಿದರೂ ಅದರಿಂದ ಚರ್ಮವು ಒಣ ಹಾಗೂ ಗಡುಸಾಗುವುದು. ನೀರು ಸ್ವಲ್ಪ ಸಮಯ ಮಾತ್ರ ತೇವಾಂಶ ನೀಡಬಲ್ಲದು. ಆದರೆ ಶೇವಿಂಗ್ ಕ್ರೀಮ್ ಚರ್ಮ ಮತ್ತು ಕೂದಲಿಗೆ ತೇವಾಂಶ ನೀಡಿ ಶೇವಿಂಗ್ ನಯವಾಗಿ ಆಗುವಂತೆ ನೋಡಿಕೊಳ್ಳುವುದು.
ಸರಿಯಾದ ದಾರಿ ತೋರಿಸುವುದು
ನೀರು ಮತ್ತು ಸೋಪ್ ನಿಂದ ಶೇವಿಂಗ್ ಮಾಡುವುದು ತುಂಬಾ ಕಿರಿಕಿರಿ ಉಂಟು ಮಾಡುವುದು. ಯಾಕೆಂದರೆ ಈಗಾಗಲೇ ಶೇವಿಂಗ್ ಮಾಡಿರುವ ಕಡೆ ಇದು ಸರಿಯಾಗಿ ಕಾರ್ಯನಿರ್ವಹಿಸದು. ಶೇವಿಂಗ್ ಕ್ರೀಮ್ ಅಥವಾ ಜೆಲ್ ಬಳಸಿದರೆ ಆಗ ನಿಮಗೆ ಮೊದಲು ಎಲ್ಲಿ ಶೇವ್ ಮಾಡಿದ್ದೀರಿ ಎಂದು ತಿಳಿಯುವುದು. ಪದೇ ಪದೇ ಒಂದೇ ಜಾಗದಲ್ಲಿ ಶೇವಿಂಗ್ ಮಾಡಿದರೆ ಕಿರಿಕಿರಿ ಮತ್ತು ಚರ್ಮಕ್ಕೆ ಹಾನಿಯಾಗುವುದು.
ಕೂದಲು ಮೇಲೆಬರುವುದು
ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಶೇವಿಂಗ್ ಕ್ರೀಮ್ ನ್ನು ವಿರುದ್ಧ ದಿಕ್ಕಿನಲ್ಲಿ ಹಚ್ಚುವ ಕಾರಣದಿಂದಾಗಿ ಕೂದಲು ಮೇಲೆ ಬರುವುದು. ಇದು ಕೂದಲನ್ನು ಶೇವಿಂಗ್ ಮಾಡಲು ಸುಲಭವಾಗುವುದು ಮತ್ತು ಚರ್ಮಕ್ಕೆ ಅಂಟಿಕೊಂಡಿರುವಂತಹ ಕೂದಲು ಕೂಡ ಹೊರಗೆ ಬರುವುದು.
ಶೇವಿಂಗ್ ಗೆ ಕೆಲವು ಸಲಹೆಗಳು
1. ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಶೇವಿಂಗ್ ಕ್ರೀಮ್ ಬಳಸಿ. ಎಲ್ಲಾ ವಿಧದ ಚರ್ಮಗಳಿಗೆ ಎಲ್ಲಾ ಶೇವಿಂಗ್ಕ್ರೀ ಮ್ ಹೊಂದಿಕೊಳ್ಳಲ್ಲ. ನಿಮ್ಮ ಚರ್ಮವು ತುಂಬಾ ಸೂಕ್ಷ್ಮ, ಒಣ ಅಥವಾ ಸಾಮಾನ್ಯವಾಗಿದ್ದರೆ ಅದಕ್ಕೆ ಹೊಂದಿಕೊಂಡು ಶೇವಿಂಗ್ ಕ್ರೀಮ್ ಬಳಸಿ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
2. ಕೂದಲು ಬೆಳೆಯುವ ವಿರುದ್ಧ ದಿಕ್ಕಿನಲ್ಲಿ ಶೇವ್ ಮಾಡಿ.
3. ಚರ್ಮಕ್ಕೆ ಕಿರಿಕಿರಿಯಾಗದಂತೆ ತಡೆಯಲು ಶೇವಿಂಗ್ ಆದ ಬಳಿಕ ಮೊಶ್ಚಿರೈಸರ್ ಅಥವಾ ಲೋಷನ್ ಹಚ್ಚಿಕೊಳ್ಳಿ. ಚರ್ಮಕ್ಕೆ ಮಾಯಿಶ್ಚರೈಸ್ ಮಾಡಲು ತಾಜಾ ಅಲೋವೆರಾ ಲೋಳೆ ಹಚ್ಚಿಕೊಳ್ಳಬಹುದು.
4. ಶೇವಿಂಗ್ ಆದ ತಕ್ಷಣ ಯಾವುದೇ ಡಿಯೋಡ್ರೆಂಟ್ಸ್ ಅಥವಾ ಬಾಡಿ ಸ್ಪ್ರೇ ಬಳಸಬೇಡಿ. ಇದರಿಂದ ಚರ್ಮಕ್ಕೆ ಕಿರಿಕಿರಿಯಾಗುವುದು.
5. ಪದೇ ಪದೇ ಒಂದೇ ರೇಜರ್ ಬ್ಲೇಡ್ ಬಳಸಬೇಡಿ. ಯಾಕೆಂದರೆ ಬ್ಲೇಡ್ ನ್ನು ಹೊರಗೆ ಇಟ್ಟಾಗ ಅದು ಬೇಗನೆ ಸೋಂಕಿಗೆ ಒಳಗಾಗುವುದು. ನೀವು ಅದೇ ಬ್ಲೇಡ್ ಬಳಸಿದರೆ ಚರ್ಮಕ್ಕೆ ಹಾನಿಯಾಗಬಹುದು. ಇದರಿಂದ ನೀವು ಬ್ಲೇಡ್ ನ್ನು ಬದಲಾಯಿಸುತ್ತಾ ಇರಿ.



Click it and Unblock the Notifications
