Latest Updates
-
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ಮಲಗುವ ಮುನ್ನ ಇದನ್ನು ಮಾಡೋದರಿಂದ ನಿಮ್ಮ ಸೌಂದರ್ಯ ಹೆಚ್ಚುತ್ತದೆ
ದಿನವಿಡಿ ದಣಿದಿರುವ ದೇಹವು ರಾತ್ರಿ ವೇಳೆ ಸಂಪೂರ್ಣ ವಿಶ್ರಾಂತಿ ಬಯಸುವ ವೇಳೆ ದೇಹದ ಪ್ರತಿಯೊಂದು ಭಾಗವು ಹಾನಿಗೊಳಗಾಗಿರುವ ಕೋಶಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವುದು. ಇದರಿಂದ ರಾತ್ರಿ ವೇಳೆ ಯಾವುದೇ ರೀತಿಯ ಔಷಧಿ ಸೇವನೆ ಪರಿಣಾಮಕಾರಿಯಾಗಿರುವುದು. ನಿಮ್ಮ ಚರ್ಮ ಕೂಡ ಧೂಳು, ಕಲ್ಮಶ ಹಾಗೂ ಸೂರ್ಯನ ಬಿಸಿಲಿನಿಂದಾಗಿ ಸುಟ್ಟು ಹೋಗಿದ್ದರೂ ರಾತ್ರಿ ವೇಳೆ ಅದು ಮತ್ತೆ ಪುನಶ್ಚೇತನ ಪಡೆದುಕೊಳ್ಳುವುದು. ಇದರಿಂದ ಕಾಂತಿಯುತ ಹಾಗೂ ಸುಂದರ ತ್ವಚೆಯು ನಿಮ್ಮದಾಗುವುದು. ಇದರಿಂದ ರಾತ್ರಿ ವೇಳೆ ಕಣ್ಣಿನ ಕೆಳಗಡೆ ಕ್ರೀಮ್ ಹಚ್ಚಿಕೊಂಡು, ಒಡೆದ ಪಾದಗಳಿಗೆ ಕ್ರೀಮ್ ಹಚ್ಚಿದರೆ ಬೇಗನೆ ಅದು ಗುಣಮುಖವಾಗುವುದು.

ನಿಮಗೆ ಒಳ್ಳೆಯ ನಿದ್ರೆ ಬರುವುದರೊಂದಿಗೆ ದೇಹದಲ್ಲಿನ ಭಾಗಗಳು ಮತ್ತೆ ಹಿಂದಿನ ಶಕ್ತಿ ಪಡೆಯುವುದು. ಅದೇ ರೀತಿಯ ಕೆಲವೊಂದು ಸೌಂದರ್ಯ ಚಿಕಿತ್ಸೆಗಳನ್ನು ರಾತ್ರಿ ವೇಳೆ ಮಾಡಿಕೊಂಡರೆ ಅದರಿಂದ ಹೆಚ್ಚಿನ ಲಾಭ ಪಡೆಯಬಹುದು. ಚರ್ಮದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಿದರೆ ಆಗ ವಯಸ್ಸಾಗುವ ಲಕ್ಷಣಗಳು ಕಂಡುಬರುವ ಸಾಧ್ಯತೆಗಳು ತುಂಬಾ ಕಡಿಮೆ ಇರುವುದು. ನೆರಿಗೆಗಳು ಮುಖದಲ್ಲಿ ಒಂದು ಸಲ ಕಾಣಿಸಿಕೊಂಡರೆ ಅದನ್ನು ಮತ್ತೆ ನಿವಾರಣೆ ಮಾಡುವುದು ತುಂಬಾ ಕಷ್ಟದ ವಿಚಾರ. ಹಿಮ್ಮಡಿ, ಕಣ್ಣಿನ ಕೆಳಗಿನ ಭಾಗ, ತುಟಿಗಳು, ಉಗುರು ಇತ್ಯಾದಿಗಳಿಗೆ ರಾತ್ರಿ ವೇಳೆ ಚಿಕಿತ್ಸೆ ನೀಡಿದರೆ ತುಂಬಾ ಒಳ್ಳೆಯದು.ರಾತ್ರಿ ವೇಳೆ ಪಾಲಿಸಬೇಕಾದ ಕೆಲವೊಂದು ಸೌಂದರ್ಯ ವಿಧಾನಗಳನ್ನು ಇಲ್ಲಿ ಹೇಳಲಾಗಿದೆ. ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ....

1.ಸ್ಲೀಪಿಂಗ್ ಮಾಸ್ಕ್
ಚರ್ಮವು ಹಗಲಿನಲ್ಲಿ ಹೆಚ್ಚಿನ ಮೊಯಿಶ್ಚರೈಸರ್ ಕಳಕೊಂಡಿರುವುದು. ಇದಕ್ಕೆ ಒಳ್ಳೆಯ ಪರಿಣಾಮವೆಂದರೆ ರಾತ್ರಿ ವೇಳೆ ಮಾಸ್ಕ್ ಹಾಕುವುದು. ಹಲವಾರು ರೀತಿಯ ಸ್ಲೀಪಿಂಗ್ ಮಾಸ್ಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಮನೆಯಲ್ಲೇ ಇದನ್ನು ತಯಾರಿಸಿದರೆ ತುಂಬಾ ಒಳ್ಳೆಯದು. ಮಲಗುವ ಮೊದಲು ಮುಖಕ್ಕೆ ಕ್ರೀಮ್ ನ ದಪ್ಪಗಿನ ಪದರ ಹಾಕಿಕೊಳ್ಳಿ. ಕ್ರೀಮ್ ನ್ನು ಚರ್ಮ ಹೀರಿಕೊಳ್ಳುವುದು. ಇದರಿಂದ ಚರ್ಮಕ್ಕೆ ಶಮನ ಮತ್ತು ಪುನಶ್ಚೇತನಗೊಳಿಸುವುದು. ಚರ್ಮವು ಮೊಯಿಶ್ಚರೈಸ್ ಆಗಿದ್ದರೆ ಆಗ ನೆರಿಗೆ ಬರುವುದು ಕಡಿಮೆಯಾಗುವುದು.

2.ಉಗುರಿನ ಹೊರಪೊರೆಗಳು
ಹೊರಪೊರೆಗಳು ಒಣಗಿದ್ದರೆ ಆಗ ನಿಮ್ಮ ಸೌಂದರ್ಯವು ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುವುದು. ರಾತ್ರಿ ವೇಳೆ ಒಣ ಹೊರಪೊರೆಗಳಿಗೆ ಚಿಕಿತ್ಸೆ ನೀಡುವುದು ಅತೀ ಅಗತ್ಯವಾಗಿದೆ. ಉಗುರಿನ ಹೊರಪೊರೆಗಳಿದ್ದರೆ ರಾತ್ರಿ ಮಲಗುವ ಮೊದಲು ಪೆಟ್ರೋಲಿಯಂ ಜೆಲ್ ಬಳಸಿ. ಬೆಳಗ್ಗೆ ಎದ್ದಾಗ ತುಂಬಾ ಸುಂದರ ಉಗುರುಗಳು ನಿಮ್ಮದಾಗುವುದು.

3.ಕೂದಲಿನ ತುದಿ ಛಿದ್ರ
ಉದ್ದ ಕೂದಲು ಇರುವಂತಹ ಪ್ರತಿಯೊಬ್ಬ ಮಹಿಳೆ ಕೂಡ ಇಂತಹ ಸಮಸ್ಯೆಗೆ ಗುರಿಯಾಗುವಳು. ಎಷ್ಟೇ ಸಲ ಕೂದಲು ಕತ್ತರಿಸಿಕೊಂಡರೂ ಸಹಿತ ಇಂತಹ ಸಮಸ್ಯೆ ಮಾತ್ರ ಪದೇ ಪದೇ ಕಾಣಿಸಿಕೊಳ್ಳುವುದು. ರಾತ್ರಿ ಮಲಗುವ ಮೊದಲು ನೀವು ಕೂದಲಿನ ತುದಿ ಭಾಗಕ್ಕೆ ಆಲಿವ್ ತೈಲ ಅಥವಾ ಇನ್ನಿತರ ಯಾವುದೇ ತೈಲ ಹಚ್ಚಿಕೊಳ್ಳಿ. ಇದರಿಂದ ಕೂದಲಿಗೆ ತುದಿಗಳಿಗೆ ಮೊಶ್ಚಿರೈಸರ್ ಸಿಗುವುದು. ಕೂದಲಿನ ತುದಿ ಭಾಗವು ಇತರ ಭಾಗಕ್ಕಿಂತ ಹೆಚ್ಚು ಒಣಗಿರುವುದು. ಇದರಿಂದ ಎಲ್ಲಾ ಸಮಯದಲ್ಲಿ ಮೊಯಿಶ್ಚರೈಸರ್ ಆಗಿರುವುದು ಅತೀ ಅಗತ್ಯ.

4.ಕಣ್ಣಿನ ಕೆಳಭಾಗದ ವೃತ್ತಗಳು
ಕಣ್ಣಿನ ಕೆಳಭಾಗದ ವೃತ್ತಗಳು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುವುದು. ರಾತ್ರಿ ವೇಳೆ ಕ್ರೀಮ್ ಹಚ್ಚಿಕೊಂಡು ಮಲಗಿದರೆ ಬೆಳಗ್ಗೆ ಈ ಸಮಸ್ಯೆ ಕಾಣಿಸದು. ಉಂಗುರ ಬೆರಳನ್ನು ಬಳಸಿಕೊಂಡು ತುಂಬಾ ನಯವಾಗಿ ಕಣ್ಣಿನ ಕೆಳಭಾಗಕ್ಕೆ ಮಸಾಜ್ ಮಾಡಿ. ಹೆಚ್ಚು ಒತ್ತಡ ಹಾಕಬೇಡಿ.

5.ಒಡೆದ ಹಿಮ್ಮಡಿ
ಒಡೆದ ಹಿಮ್ಮಡಿಗಳಿದ್ದರೆ ಅದು ನೋಡಲು ತುಂಬಾ ಕೆಟ್ಟದಾಗಿರುವುದು ಮಾತ್ರವಲ್ಲದೆ ನಡೆದಾಡಲು ತುಂಬಾ ಕಷ್ಟಪಡಬೇಕಾಗುತ್ತದೆ. ಪೆಟ್ರೋಲಿಯಂ ಜೆಲ್ ಅಥವಾ ತೆಂಗಿನ ಎಣ್ಣೆಯು ನಿಮ್ಮ ಸಮಸ್ಯೆ ನಿವಾರಿಸುವುದು. ನಿಮ್ಮ ಪಾದಗಳಿಗೆ ಇದರಲ್ಲಿ ಯಾವುದಾದರೂ ಒಂದನ್ನು ದಪ್ಪಗೆ ಹಚ್ಚಿಕೊಳ್ಳಿ. ಅದರಲ್ಲೂ ಹಿಮ್ಮಡಿ ಭಾಗಗಳಿಗೆ ಹೆಚ್ಚಿನ ಗಮನಹರಿಸಿ. ಇದರ ಬಳಿಕ ಸಾಕ್ಸ್ ಹಾಕಿ ಮಲಗಿ. ನೀವು ಬೆಳಗ್ಗೆ ಎದ್ದಾಗ ಒಡೆದ ಹಿಮ್ಮಡಿ ಮಾಯವಾಗಿರುವುದು.

6.ನಯವಾದ ತುಟಿಗಳಿಗೆ
ಒಡೆದ ತುಟಿಗಳು ನಿಮ್ಮ ಸೌಂದರ್ಯ ಕೆಡಿಸುವುದು ಮಾತ್ರವಲ್ಲದೆ ನೋವು ಉಂಟು ಮಾಡುವುದು. ಅದರಲ್ಲೂ ಮರುದಿನ ಲಿಪ್ ಸ್ಟಿಕ್ ಬಳಸಿದರೆ ಖಂಡಿತವಾಗಿಯೂ ಅದು ಎದ್ದು ಕಾಣುವಂತೆ ಮಾಡುವುದು. ಇದಕ್ಕೆ ನೀವು ಪೆಟ್ರೋಲಿಯಂ ಜೆಲ್ ಮತ್ತು ಹಲ್ಲುಜ್ಜುವ ಬ್ರಶ್ ಬೇಕು. ಪೆಟ್ರೋಲಿಯಂ ಜೆಲ್ ನ್ನು ತುಟಿಗಳಿಗೆ ಹೆಚ್ಚಿಕೊಂಡು, ಬ್ರಶ್ ನಿಂದ ತುಟಿಗಳಿಗೆ ಸ್ಕ್ರಬ್ ಮಾಡಿ. ಇದರಂದ ಸತ್ತ ಚರ್ಮದ ಕೋಶಗಳು ಎದ್ದು ಬರುವುದು ಮತ್ತು ತುಟಿಗಳು ನಯವಾಗುವುದು. ಮಲಗುವ ಮೊದಲು ತುಟಿಗಳಿಗೆ ದಪ್ಪಗಿನ ಲಿಪ್ ಮಲಾಮ್ ಹಚ್ಚಿ. ಇದರಿಂದ ಬೆಳಗ್ಗೆ ನಯವಾದ ತುಟಿಗಳು ನಿಮ್ಮದಾಗುವುದು.

7.ಹುಬ್ಬುಗಳಿಗೆ
ಹುಬ್ಬುಗಳು ತುಂಬಾ ದಪ್ಪಗೆ ಆಗಿ ಹೆಚ್ಚಾಗುತ್ತಲಿದೆ. ಆದರೆ ಜನರು ತೆಳು ಹಾಗೂ ಸುಂದರ ಹುಬ್ಬುಗಳನ್ನು ಬಯಸುವರು. ಕ್ಯೂ ಟಿಪ್ ಬಳಸಿಕೊಂಡು ರಾತ್ರಿ ವೇಳೆ ಹುಬ್ಬುಗಳಿಗೆ ಹರಳೆಣ್ಣೆ ಹಚ್ಚಿಕೊಳ್ಳಿ. ಪ್ರತಿನಿತ್ಯ ಹೀಗೆ ಮಾಡಿ ಮತ್ತು ಕೆಲವೇ ದಿನಗಳಲ್ಲಿ ಹುಬ್ಬುಗಳು ದಪ್ಪಗೆ ಆಗುವುದು.

8.ಮೊಡವೆಗಳಿಗೆ…
ಮೊಡವೆಗಳು ಹದಿಹರೆಯದವರಲ್ಲಿ ಮಾತ್ರ ಕಾಣಿಸಿಕೊಳ್ಳುವುದು ಎಂದು ಹೇಳಿದವರು ಯಾರು? ವಯಸ್ಕರಲ್ಲೂ ಇದು ಕಾಣಿಸುವುದು. ಮೊಡವೆಗಳ ನಿವಾರಣೆ ಮಾಡಲು ನೀವು ರಾತ್ರಿ ವೇಳೆ ಚಾ ಮರದ ಎಣ್ಣೆ ಬಳಸಿ. ನೈಸರ್ಗಿಕವಾಗಿ ಸೋಂಕು ನಿವಾರಿಸುವ ಗುಣ ಹೊಂದಿರುವ ಚಾ ಮರದ ಎಣ್ಣೆಯು ಬ್ಯಾಕ್ಟೀರಿಯಾ ಕೊಂದು ಹಾಕಿ, ಅದರಿಂದ ಉಂಟಾಗುವ ಮೊಡವೆಗಳನ್ನು ನಿವಾರಿಸುವುದು. ಒಂದು ವಾರ ಕಾಲ ಹೀಗೆ ಮಾಡಿದರೆ ನಿಮಗೆ ಫಲಿತಾಂಶ ಸಿಗುವುದು. ಇದರಿಂದ ಮೊಡವೆಗಳ ಗಾತ್ರ ಕೂಡ ಕುಗ್ಗುವುದು.



Click it and Unblock the Notifications











