ಕಂಕುಳ ಕೆಳಗಿನ ಗುಳ್ಳೆಗಳನ್ನು ನಿವಾರಿಸಲು ನೈಸರ್ಗಿಕ ವಿಧಾನಗಳು

ಕಂಕುಳ ಭಾಗದಲ್ಲಿ ಸಣ್ಣ ಗುಳ್ಳೆಗಳು ಬಹು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಬೆವರು. ಸೂರ್ಯ ಕಿರಣಗಳು ಸೋಕದೆ ಇರುವುದು ಕೂಡ ಒಂದು ಕಾರಣ. ಕಂಕುಳನ್ನು ಶುಭ್ರವಾಗಿ ಇಟ್ಟುಕೊಳ್ಳುವುದು ಹಾಗು ಚೆಂದವಾಗ ಇಟ್ಟುಕೊಳ್ಳುವುದು ಈ ಮಾಡ್ರೆನ್ ಸ್ಲೀವ್ ಲೆಸ್ ಯುಗದಲ್ಲಿ ಮುಖ್ಯ. ಅಷ್ಟೇ ಅಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಒಳ್ಲೆಯದು.

ಕಂಕುಳ ಗುಳ್ಳೆಗಳನ್ನು ನಿವಾರಿಸಲು ಅನೇಕ ಕ್ರೀಮ್ ಹಾಗು ಲೋಶನ್ ಗಳು ಈಗ ಲಭ್ಯವಿದೆ. ಆದರೆ ಅವುಗಳು ಎಷ್ಟು ಪರಿಣಾಮಕಾರಿಯೊ ಗೊತ್ತಿಲ್ಲ. ಕೆಲವೊಮ್ಮೆ ಇವುಗಳಿಂದ ಚರ್ಮದ ಉರಿ ಹಾಗು ದದ್ದುಗಳು ಕೂಡ ಆಗಬಹುದು. ಹಾಗಾದರೆ ಇದಕ್ಕೆ ಉಪಾಯವಿಲ್ಲವೇ? ಗಾಬರಿ ಬೇಡ. ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಕಂಕುಳ ಗುಳ್ಳೆಗಳನ್ನು ಮಾಯ ಮಾಡಲು ಸಾಧ್ಯವಿದೆ. ಇದರಿಂದ ಕಡಿಮೆ ಖರ್ಚಿನಲ್ಲಿ ಬೇರೆ ತೊಂದರೆಗಳು ಆಗದಂತೆ ಕೂಡ ಎಚ್ಚರ ವಹಿಸಬಹುದು. ಕಂಕುಳ ಗುಳ್ಳೆಗಳನ್ನು ನಿವಾರಿಸಲು ಕೆಲವೊಂದು ನೈಸರ್ಗಿಕ ಉಪಾಯಗಳನ್ನು ಈ ಕೆಳಗೆ ವಿವರಿಸಲಾಗಿದೆ. ಪ್ರಯತ್ನಿಸಿ ನೋಡಿ....

 ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್

ಇದು ರೊಗನಿರೋಧಕ ಅಂಶಗಳಿಂದ ಕೂಡಿದೆ. ಟೀ ಟ್ರೀ ಆಯಿಲ್ ಸೌಂದರ್ಯ ಹೆಚ್ಚಿಸುವ ಅನೇಕ ವಿಷಯಗಳಲ್ಲಿ ಉಪಯುಕ್ತ. ಮುಖದಲ್ಲಿನ ಮೊಡವೆಗಳು, ಕೂದಲ ಹೊಟ್ಟು ನಿವಾರಿಸಲು ಬಳಸುತ್ತಾರೆ. ಈಗಿನ ಅನೇಕ ಫಾಸೇವಾಶ್ ಹಾಗೂ ಶಾಂಪೂಗಳಲ್ಲಿ ಇದರ ಬಳಕೆ ಇದೆ. ಇದು ನಮಗೆ ಬರಿಯ ಎಣ್ಣೆಯ ರೂಪದಲ್ಲಿ ಕೂಡ ಅಂಗಡಿಗಳಲ್ಲಿ ಸಿಗುತ್ತದೆ. ಟೀ ಟ್ರೀ ಆಯಿಲ್ ನೇರವಾಗಿ ಕಂಕುಳ ಕೆಳಗೆ ಹಚ್ಚಬಹುದು. ಆದರೆ ಈ ಟೀ ಟ್ರೀ ಆಯಿಲ್ ನ ಜೊತೆ ತೆಂಗಿನ ಎಣ್ಣೆ ಹಾಗೂ ಆಲಿವ್ ಎಣ್ಣೆ ಬೆರೆಸಿ ಹಚ್ಚಿದರೆ ಇನ್ನೂ ಒಳ್ಳೆಯದು. ಇನ್ನೂ ತೆಂಗಿನ ಎಣ್ಣೆ ಹಾಗೂ ಆಲಿವ್ ಎಣ್ಣೆಯ ಗುಣಗಳು ತಿಳಿಯದವರೇ ಇಲ್ಲ. ಮುಖದ ಅಂದ ಹೆಚ್ಚಿಸಲು ಇವು ಕೊಡುವ ಕೊಡುಗೆ ಅಮಿತ.

 ಬೇಕಾಗುವ ಸಾಮಾಗ್ರಿ

ಬೇಕಾಗುವ ಸಾಮಾಗ್ರಿ

ಒಂದು ಚಮಚ ಟೀ ಟ್ರೀ ಆಯಿಲ್

ಒಂದು ಚಮಚ ತೆಂಗಿನ ಎಣ್ಣೆ

ಒಂದು ಚಮಚ ಆಲಿವ್ ಎಣ್ಣೆ

ಮಾಡುವ ವಿಧಾನ

ಒಂದು ಬಟ್ಟಲಿನಲ್ಲಿ ಟೀ ಟ್ರೀ ಆಯಿಲ್ ಹಾಗೂ ಆಲಿವ್ ಆಯಿಲ್ ಎರಡನ್ನೂ ಬೆರೆಸಿ. ಅದಕ್ಕೆ ತೆಂಗಿನ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ ಒಂದು ಹದಕ್ಕೆ ಬರುವಂತೆ ಮಾಡಿಕೊಳ್ಳಿ. ಹತ್ತಿಯ ಚಿಕ್ಕ ಉಂಡೆ ಮಾಡಿಕೊಂಡು ಅದರಿಂದ ಈ ಎಣ್ಣೆಯ ಮಿಶ್ರಮವನ್ನು ಕಂಕುಳ ಕೆಳಗೆ ಹಚ್ಚಿಕೊಳ್ಳಿ. ಸುಮಾರು ಐದರಿಂದ ಹತ್ತು ನಿಮಿಷ ಚೆನ್ನಾಗಿ ಮಸ್ಸಾಜ್ ಮಾಡಿಕೊಂಡು ನಂತರ ಒರೆಸಿಕೊಳ್ಳಿ.

ಜೇನು ತುಪ್ಪ ಮತ್ತು ಚಕ್ಕೆ

ಜೇನು ತುಪ್ಪ ಮತ್ತು ಚಕ್ಕೆ

ಜೇನು ತುಪ್ಪ ಮತ್ತು ಚಕ್ಕೆ ಎರಡೂ ಸಹ ಹೆಚ್ಚು ಆಂಟಿ ಆಕ್ಸಿಡೆಂಟ್ಗಳನ್ನು ಹೊಂದಿದ್ದು, ಮೊಡವೆ ಹಾಗೂ ಗುಳ್ಳೆಗಳಿಗೆ ರಾಮಬಾಣವಾಗಿವೆ. ಇದೆ ಅಲ್ಲದೆ ಈ ಎರಡು ಪದಾರ್ಥಗಳು ಗುಳ್ಳೆಗಳನ್ನು ಉಂಟು ಮಾಡುವ ಬಾಕ್ಟೀರಿಯಾವನ್ನು ನಾಶ ಮಾಡುವ ಗುಣವಿದ್ದು ಉರಿಯೂತ ವನ್ನೂ ತಗ್ಗಿಸುತ್ತವೆ.

ಬೇಕಾಗುವ ಸಾಮಗ್ರಿ

ಬೇಕಾಗುವ ಸಾಮಗ್ರಿ

*2 ಚಮಚ ಜೇನುತುಪ್ಪ

*1 ಚಮಚ ಚಕ್ಕೆ ಪುಡಿ

ಮಾಡುವ ವಿಧಾನ:

ಒಂದು ಸಣ್ಣ ಬಟ್ಟಲಿನಲ್ಲಿ ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಇದನ್ನು ಪೇಸ್ಟಿನಂತೆ ಮಾಡಿಕೊಂಡು ಕಂಕುಳ ಕೆಳಗೆ ಹಚ್ಚಿ ಐದು ನಿಮಿಷ ಚೆನ್ನಾಗಿ ಮಸ್ಸಾಜ್ ಮಾಡಿಕೊಳ್ಳಿ. ನಂತರ ಇನ್ನೂ ಹತ್ತು ನಿಮಿಷ ಹಾಗೆಯೇ ಇರಲು ಬಿಡಿ. ಆಮೇಲೆ ತಣ್ಣೀರು ಬಳಸಿ ತೊಳೆದುಕೊಳ್ಳಿ. ದಿನಕ್ಕೆ ಎರಡು ಸಲ ಈ ರೀತಿ ಮಾಡಿದಲ್ಲಿ ಬಹಳ ಪ್ರಭಾವ ಇರುತ್ತದೆ. ಇದರ ಜೊತೆ ಅರ್ಧ ಚಮಚ ನಿಂಬೆ ರಸವನ್ನು ಕೂಡ ಬೆರೆಸಬಹುದು.

ಗ್ರೀನ್ ಟೀ

ಗ್ರೀನ್ ಟೀ

ಚೀನಾದಲ್ಲಿ ಮೊದಲಾದ ಗ್ರೀನ್ ಟೀ ಉಪಯೋಗ ಈಗ ಪ್ರಪಂಚದಾದ್ಯಂತ ವಿಸ್ತರಿಸಿದೆ. ಗ್ರೀನ್ ಟೀಯನ್ನು ಬಹಳ ಜನ ಸಣ್ಣಗಾಗಲು ಕುಡಿಯುತ್ತಾರೆ. ಆದರೆ ಗ್ರೀನ್ ಟೀ ಉಪಯೋಗ ಅದೊಂದೇ ಅಲ್ಲ. ಎಲ್ಲರಿಗೂ ತಿಳಿದಂತೆ ಗ್ರೀನ್ ಟೀನಲ್ಲಿನ ಆಂಟಿ ಆಕ್ಸಿಡೆಂಟ್ಸ್ ನಮ್ಮ ಚರ್ಮದ ಕೊಶಗಳ್ಳನ್ನು ಹಾನಿಯಾಗದಂತೆ ತಡೆಯುತ್ತದೆ. ಹಾಗೆಯೇ ಇದರಲ್ಲಿರುವ ಇತರ ಅನೇಕ ಅಂಶಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಗುಳ್ಳೆಗಳು ಮತ್ತೆ ಮತ್ತೆ ಬರದಂತೆ ತಡೆಯುತ್ತವೆ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಒಂದು ಗ್ರೀನ್ ಟೀ ಪ್ಯಾಕ್

*ಅರ್ಧ ಬಟ್ಟಲು ನೀರು

*ಕೆಲವು ಹನಿ ನಿಂಬೆ ರಸ

ಮಾಡುವ ವಿಧಾನ

ಅರ್ಧ ಬಟ್ಟಲು ನೀರನ್ನು ಚೆನ್ನಾಗಿ ಕೂಡಿಸಿ. ನೀರು ಕುಡಿಯುವಾಗ ಗ್ರೀನ್ ಟೀ ಪೊಟ್ಟಣ ವನ್ನು ನೀರಲ್ಲಿ ನೆನೆಸಿ. ನೀರಲ್ಲಿ ಟೀ ಚೆನ್ನಾಗಿ ಬೆರೆಯಲಿ. ನಂತರ ತಣ್ಣಗಾಗಲಿ. ಆ ತಣ್ಣಗಾದ ನೀರಲ್ಲಿ ನಿಂಬೆ ರಸ ಬೆರೆಸಿ. ಕಂಕುಳ ಕೆಳಗೆ ಹಚ್ಚಿ ಐದು ನಿಮಿಷ ಚೆನ್ನಾಗಿ ಮಸ್ಸಾಜ್ ಮಾಡಿಕೊಳ್ಳಿ. ನಂತರ ಇನ್ನೂ ಹತ್ತು ನಿಮಿಷ ಹಾಗೆಯೇ ಇರಲು ಬಿಡಿ. ಆಮೇಲೆ ತಣ್ಣೀರು ಬಳಸಿ ತೊಳೆದುಕೊಳ್ಳಿ. ಬೇಕಾದರೆ ನಿಂಬೆ ರಸವನ್ನು ಹೆಚ್ಚಾಗಿ ಬಳಸಿಕೊಳ್ಳಬಹುದು.

ಅಲೋವೆರಾ ಮತ್ತು ರೋಸ್ ವಾಟರ್

ಅಲೋವೆರಾ ಮತ್ತು ರೋಸ್ ವಾಟರ್

ಅಲೊವೆರ ಹೆಣ್ಣು ಮಕ್ಕಳ ನೆಚ್ಚಿನ ಗೆಳತಿ. ಎಷ್ಟೋ ತೊಂದರೆಗಳಿಗೆ ಅಲೊವೆರದಲ್ಲಿರುವ ಅನೇಕ ಪೋಷಕಾಂಶಗಳು ಮಂತ್ರದಂತೆ ಕೆಲಸ ಮಾಡುತ್ತದೆ. ಇದರಲ್ಲಿ ಇರುವ ಸಾಲಿಸಲಿಕ್ ಆಸಿಡ್ ಹಾಗೂ ಸಲ್ಫರ್ ಗುಳ್ಳೆಗಳು ಹಾಗೂ ಮೊಡವೆಗಳನ್ನು ತಕ್ಷಣ ನಿವಾರಿಸಿ ಮತ್ತೆ ಬರದಂತೆ ತಡೆಯುತ್ತದೆ. ನೂರಾರು ವರ್ಷಗಳಿಂದ ರೋಸ್ ವಾಟರ್ ಅನ್ನು ಹೆಂಗಸರು ಬಳಸುತ್ತಿದ್ದಾರೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಹಾಗೂ ಆಂಟಿ ಇನ್ಫ್ಲಮಟಾರೀ ಗುಣಗಳು ಚರ್ಮದ ಉರಿಯೂತಕ್ಕೆ ಒಳ್ಳೆಯ ಔಷದ.

ಬೇಕಾಗುವ ಪದಾರ್ಥಗಳು

ಬೇಕಾಗುವ ಪದಾರ್ಥಗಳು

*2 ಚಮಚ ಅಲೊವೆರ ರಸ

*1 ಚಮಚ ರೋಸ್ ವಾಟರ್

ಮಾಡುವ ವಿಧಾನ

ಅಲೊವೆರ ಎಲೆಯನ್ನು ಸೀಳಿ ಅದರಿಂದ ರಸವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ರೋಸ್ ವಾಟರ್ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಕಂಕುಳ ಕೆಳಗೆ ಹಚ್ಚಿ ಐದು ನಿಮಿಷ ಚೆನ್ನಾಗಿ ಮಸ್ಸಾಜ್ ಮಾಡಿಕೊಳ್ಳಿ. ನಂತರ ಇನ್ನೂ ಹತ್ತು ನಿಮಿಷ ಹಾಗೆಯೇ ಇರಲು ಬಿಡಿ. ನಂತರ ಒಂದು ಬಟ್ಟೆಯನ್ನು ನೀರಲ್ಲಿ ನೆನೆಸಿ ಆ ಬಟ್ಟೆಯಿಂದ ಒರೆಸಿ.

ವಿಚ್ ಹೆಜ಼ೆಲ್

ವಿಚ್ ಹೆಜ಼ೆಲ್

ವಿಚ್ ಹೆಜ಼ೆಲ್ ಅನ್ನುವುದು ಒಂದು ವೈದ್ಯಕೀಯ ಗುಣಗಳು ಇರುವ ಗಿಡಮೂಲಿಕೆ. ಉತ್ತರ ಅಮೇರಿಕದಲ್ಲಿ ಬೆಳೆಯುವ ವಿಚ್ ಹೆಜ಼ಲ್ ಗಿಡದ ಎಲೆ ಹಾಗೂ ತೊಗಟೆ ಆಂಟಿ ಇನ್ಫ್ಲಮೆಟರಿ ಹಾಗೂ ಆಂಟಿ ಬ್ಯಾಕ್ಟೇರಿಯ ಗುಣಗಳನ್ನು ಹೊಂದಿದೆ. ಇದನ್ನು ಎಷ್ಟೋ ಚರ್ಮದ ಖಾಯಿಲೆಗಳಿಗೆ ಬಳಸುತ್ತಾರೆ. ಇದನ್ನು ಕಂಕುಳ ಕೆಳಗಿನ ಗುಳ್ಳೆಗಳನ್ನು ನಿವಾರಿಸಲು ಬಳಸಬಹುದು.

ಬೇಕಾಗುವ ಸಾಮಗ್ರಿ

*ಒಂದು ಚಮಚ ವಿಚ್ ಹೆಜ಼ಲ್ನ ತೊಗಟೆ

*ಒಂದು ಬಟ್ಟಲು ನೀರು.

ಮಾಡುವ ವಿಧಾನ

ಮಾಡುವ ವಿಧಾನ

ವಿಚ್ ಹೆಜ಼ಲ್ನ ತೊಗಟೆಯನ್ನು ಒಂದು ಬಟ್ಟಲು ನೀರಿನಲ್ಲಿ ಮೂವತ್ತು ನಿಮಿಷ ನೆನೆಸಿ. ಈ ವಿಚ್ ಹೆಜ಼ಲ್ ನೆನೆಸಿದ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಕಾಯಲು ಇಡಿ. ಒಂದು ಕುದಿ ಬಂದ ನಂತರ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಇಡಿ. ನಂತರ ಈ ನೀರನ್ನು ತಣ್ಣಗಾಗಲು ಬಿಡಿ. ಇದನ್ನು ಶೋಧಿಸಿ ತೆಗೆದಿಟ್ಟುಕೊಳ್ಳಿ. ಹತ್ತಿಯ ಚಿಕ್ಕ ಉಂಡೆ ಮಾಡಿಕೊಂಡು ಅದರಿಂದ ಈ ಎಣ್ಣೆಯ ಮಿಶ್ರಮವನ್ನು ಕಂಕುಳ ಕೆಳಗೆ ಹಚ್ಚಿಕೊಳ್ಳಿ. ಸುಮಾರು ಐದರಿಂದ ಹತ್ತು ನಿಮಿಷ ಚೆನ್ನಾಗಿ ಮಸ್ಸಾಜ್ ಮಾಡಿಕೊಂಡು ನಂತರ ಒರೆಸಿಕೊಳ್ಳಿ.

 ಆಪಲ್ ಸಿಡಾರ್ ವಿನಿಗರ್

ಆಪಲ್ ಸಿಡಾರ್ ವಿನಿಗರ್

ಆಪಲ್ ಸಿಡಾರ್ ವಿನಿಗರ್ ಅನೇಕ ಬ್ಯಾಕ್ಟೇರಿಯ ಹಾಗೂ ವೈರಸ್ ಗಳ ವಿರುದ್ದ ಹೋರಾಡುತ್ತದೆ ಎಂದು ಹೇಳಲಾಗಿದೆ. ಈ ಆಪಿಲ್ ಸಿಡಾರ್ ವಿನಿಗರ್ ನೈಸರ್ಗಿಕ ಆರೋಗ್ಯ ಸಮುದಾಯದಲ್ಲಿ ಬಹಳ ಜನಪ್ರಿಯವಾಗಿದೆ. ಸೇಬಿನ ರಸವನ್ನು ಹುಗಿಸಿ ತಯಾರಿಸುವ ಈ ಆಪಿಲ್ ಸಿಡಾರ್ ವಿನಿಗರ್, ಬಹಳ ಉಪಯುಕ್ತವಾಗಿದೆ. ಮೊಡವೆ ಹಾಗೂ ಗುಳ್ಳೆಗಳನ್ನು ನಿವಾರಿಸುವುದೇ ಅಲ್ಲದೆ ಅದರ ಕಲೆಗಳನ್ನು ಕೂಡ ಹೋಗಲಾಡಿಸುತ್ತದೆ ಎಂದು ಪ್ರತೀತಿ. ಆದರೆ ಸೂಕ್ಷ್ಮ ಚರ್ಮದವರು ಬಳಸುವ ಮುನ್ನ ಒಂದು ಬಾರಿ ಸಣ್ಣದಾಗಿ ಬಳಸಿ ಪರಿಶೀಲಿಸಿಕೊಳ್ಳುವುದು ಉತ್ತಮ.

ಬೇಕಾಗುವ ಸಾಮಗ್ರಿ

ಒಂದು ಚಮಚ ಆಪಿಲ್ ಸಿಡಾರ್ ವಿನಿಗರ್

2 ಚಮಚ ನೀರು. (ನೀರಿನ ಪ್ರಮಾಣವನ್ನು ಸೂಕ್ಷ್ಮ ಚರ್ಮದವರು ಹೆಚ್ಚಾಗಿ ಬಳಸಿ)

ಮಾಡುವ ವಿಧಾನ

ಒಂದು ಸಣ್ಣ ಬಟ್ಟಲಿನಲ್ಲಿ ಆಪಿಲ್ ಸಿಡಾರ್ ವಿನಿಗರ್ ಹಾಗೂ ನೀರನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಇದನ್ನು ಪೇಸ್ಟಿನಂತೆ ಮಾಡಿಕೊಂಡು ಕಂಕುಳ ಕೆಳಗೆ ಹಚ್ಚಿ ಹತ್ತು ನಿಮಿಷ ಹಾಗೆಯೇ ಇರಲು ಬಿಡಿ. ಆಮೇಲೆ ತಣ್ಣೀರು ಬಳಸಿ ತೊಳೆದುಕೊಳ್ಳಿ.

ವಿಶೇಷ ಸೂಚನೆ: ಆಪೀಲ್ ಸಿಡಾರ್ ವಿನಿಗರ್ ಕೆಲವರಿಗೆ ಹಚ್ಚಿದ ಕಡೆ ಉರಿಯುವಂತೆ ಮಾಡುತ್ತದೆ. ಆದ್ದರಿಂದ ನೀರನ್ನು ಬಳಸಿ ತೆಳ್ಳಗೆ ಮಾಡಿ ಹಚ್ಚಿಕೊಳ್ಳಬೇಕು.

English summary

Natural Ways To Treat Underarm boils

Underarm pimples are very common. Although there are several store-bought creams and products that can help you to get rid of them, they are not always recommended as they can cause skin irritation or rashes, especially to those who have sensitive skin. So, what do you do then? Fret not, it is possible to get rid of underarm pimples easily. And by that, we mean using some really cool and amazing natural ingredients that are readily available in your kitchen. Listed below are some natural ways to treat underarm pimples.
X
Desktop Bottom Promotion