Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಸ್ಟ್ರೆಚ್ ಮಾರ್ಕ್ಸ್ ತೆಗೆಯಲು ಸುಲಭವಾದ ಮನೆಮದ್ದುಗಳು
ಸ್ಟ್ರೆಚ್ ಮಾರ್ಕ್ಸ್( ಚರ್ಮ ಎಳೆದ ಕಲೆಗಳು) ಹೆಚ್ಚಾಗಿ ಗರ್ಭಧಾರಣೆಯಾದ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವುದು ಸಹಜ. ಯಾಕೆಂದರೆ ಗರ್ಭಧಾರಣೆ ವೇಳೆ ಮಹಿಳೆಯರ ದೇಹದಲ್ಲಿ ಸಂಪೂರ್ಣ ಬದಲಾವಣೆಗಳು ಆಗುತ್ತದೆ. ಇದರಿಂದಾಗಿ ದೇಹವು ಸಾಮಾನ್ಯಗಿಂತ ಹೆಚ್ಚಿನ ಭಾರ ಹೊರಬೇಕಾಗುತ್ತದೆ. ಹೊಟ್ಟೆ ಕೂಡ ದೊಡ್ಡದಾಗ ಕಾರಣ ಹೆರಿಗೆ ಬಳಿಕ ಈ ಭಾಗದಲ್ಲಿ ಚರ್ಮವು ಎಳೆಯಲ್ಪಟ್ಟಂತಹ ಕಲೆಗಳು ಮೂಡುವುದು ಸಹಜ. ಆದರೆ ಕೆಲವೊಂದು ಸಲ ಹಠಾತ್ ತೂಕ ಹೆಚ್ಚಳ, ಅನುವಂಶೀಯತೆ, ಒತ್ತಡ ಇತ್ಯಾದಿಗಳಿಂದಾಗಿ ಇಂತಹ ಕಲೆಗಳು ಮೂಡುವುದು.
ಚರ್ಮದಲ್ಲಿ ಸ್ಟ್ರೆಚ್ ಮಾರ್ಕ್ ಮೂಡಲು ಕಾರಣವೇನು?
ನಮ್ಮ ಚರ್ಮವು ಹೈಪೊಡರ್ಮಿಸ್(ಒಳಗಿನ ಪದರ), ಡೆರ್ಮಿಸ್(ಮಧ್ಯದ ಪದರ) ಮತ್ತು ಎಪಿಡೆರ್ಮಿಸ್(ಹೊರಗಿನ ಪದರ)ದಿಂದ ನಿರ್ಮಾಣವಾಗಿದೆ. ಡೆರ್ಮಿಸ್ ನಲ್ಲಿ ಕೋಶಗಳು ತಮ್ಮ ಸ್ಥಿತಿಸ್ಥಾಪಕತ್ವಕ್ಕಿಂತ ಹೆಚ್ಚು ಎಳೆಯಲ್ಪಟ್ಟಾಗ ಸ್ಟ್ರೆಚ್ ಮಾರ್ಕ್ ಕಾಣಿಸಿಕೊಳ್ಳುವುದು. ಎಳೆಯಲ್ಪಡುವುದರಿಂದ ಸಾಮಾನ್ಯ ಚಕ್ರಕ್ಕೆ ಅಡ್ಡಿಯಾಗುವುದು. ಇದರಿಂದಾಗಿ ಎರಡನೇ ಪದರದಲ್ಲಿ ಕಲೆಗಳು ಮೂಡುವುದು. ಇದರಿಂದ ಚರ್ಮದ ಮೇಲೆ ಸ್ಟ್ರೆಚ್ ಮಾರ್ಕ್ ಕಾಣಿಸುವುದು. ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡಲು ಕೆಲವು ಮನೆಮದ್ದುಗಳು...

ಹರಳೆಣ್ಣೆ
ಬಳಸುವ ವಿಧಾನ
*ಕೆಲವು ಹನಿ ಹರಳೆಣ್ಣೆಯನ್ನು ಅಂಗೈಗೆ ಹಾಕಿಕೊಂಡು ಬೆರಳಿನಿಂದ ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆಗೆ ಹಚ್ಚಿ.
* ವೃತ್ತಾಕಾರದಲ್ಲಿ ಸುಮಾರು 5-10 ನಿಮಿಷ ಕಾಲ ಮಸಾಜ್ ಮಾಡಿ.
*ಈ ಪ್ರದೇಶಕ್ಕೆ ಬಿಸಿ ನೀರಿನ ಶಾಖ ಕೊಡಿ. ನೇರವಾಗಿ ಹೀಗೆ ಮಾಡಬೇಡಿ. ಹತ್ತಿ ಬಟ್ಟೆ ಇಟ್ಟುಕೊಳ್ಳಿ.
* 30 ದಿನ ಹೀಗೆ ಮಾಡಿಕೊಂಡರೆ ಫಲಿತಾಂಶ ಬರುವುದು.

ಆಲಿವ್ ತೈಲ
ಬಳಸುವ ವಿಧಾನ
*ಬೇಕಿರುವಷ್ಟು ಆಲಿವ್ ತೈಲವನ್ನು ಮೈಕ್ರೊವೇವ್ ನಲ್ಲಿ ಬಿಸಿ ಮಾಡಿ.
* ಉಗುರುಬೆಚ್ಚಗಿನ ಆಲಿವ್ ತೈಲವನ್ನು ಅಂಗೈಗೆ ಹಾಕಿಕೊಂಡು ಅದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಹಚ್ಚಿ.
* 5-10 ನಿಮಿಷ ಕಾಲ ಹಾಗೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ.
*ಇದನ್ನು ತೊಳೆಯಬೇಡಿ ಅಥವಾ ಒರೆಸಬೇಡಿ. ಚರ್ಮದಲ್ಲಿ ಹಾಗೆ ಇರಲಿ.
* ಪರಿಣಾಮಕಾರಿಯಾಗಲು ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಅಲೋವೆರಾ
ಬಳಸುವ ವಿಧಾನ
*ನೇರವಾಗಿ ಅಲೋವೆರಾದ ಎಲೆ ತೆಗೆದು ಅದರಿಂದ ಲೋಳೆ ಪಡೆಯಿರಿ.
*ಇದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಹಚ್ಚಿ ಮತ್ತು 15 ನಿಮಿಷ ಒರೆಸಬೇಡಿ.
* ಪ್ರತಿನಿತ್ಯ ಇದನ್ನು ಬಳಸಿದರೆ ಪರಿಣಾಮಕಾರಿ ಫಲಿತಾಂಶ ಪಡೆಯಿರಿ.

ಕೋಕಾ ಬೆಣ್ಣೆ
ಬೇಕಾಗುವ ಸಾಮಗ್ರಿಗಳು
*ಕೋಕಾ ಬೆಣ್ಣೆ-1/2 ಕಪ್
*ಜೇನುಮೇಣ-2 ಚಮಚ
*ಗೋಧಿ ಮೊಳಕೆ ತೈಲ-1 ಚಮಚ
*ವಿಟಮಿನ್ ಇ-1 ಚಮಚ
*ಏಪ್ರಿಕಾಟ್-1 ಚಮಚ
* ಕರ್ನಲ್ ತೈಲ-1 ಚಮಚ
ಬಳಸುವ ವಿಧಾನ
*ಎಲ್ಲವನ್ನು ಜತೆಯಾಗಿ ಬಿಸಿ ಮಾಡಿ. ಜೇನಿನ ಮೇಣ ಕರಗುವ ತನಕ ಬಿಸಿ ಮಾಡಿ.
*ಇದನ್ನು ತಣ್ಣಗಾಗಿಸಿ, ಬಳಿಕ ಸ್ಟ್ರೆಚ್ ಮಾರ್ಕ್ಸ್ ಮೇಲೆ ಹಚ್ಚಿ ಮತ್ತು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಹೀರಿಕೊಳ್ಳುವ ತನಕ ಹೀಗೆ ಮಾಡಿ.
* ದಿನದಲ್ಲಿ ಎರಡು ಅಥವಾ ಮೂರು ಸಲ ಇದನ್ನು ಬಳಸಿ.

ಸಕ್ಕರೆ ಸ್ಕ್ರಬ್
ಬೇಕಾಗುವ ಸಾಮಗ್ರಿಗಳು
ಬಾದಾಮಿ ಎಣ್ಣೆ-ಕೆಲವು ಹನಿಗಳು
ಸಕ್ಕರೆ-1 ಚಮಚ
ಲಿಂಬೆರಸ-ಕೆಲವು ಹನಿ
ಬಳಸುವ ವಿಧಾನ
*ಎಲ್ಲವನ್ನು ಮಿಶ್ರಣ ಮಾಡಿಕೊಂಡು ಒಂದು ಪೇಸ್ಟ್ ರೂಪಕ್ಕೆ ತನ್ನಿ.
*ಸ್ಟ್ರೆಚ್ ಮಾರ್ಕ್ಸ್ ಮೇಲೆ ಇದನ್ನು ಹಚ್ಚಿಕೊಂಡು 8-10 ನಿಮಿಷ ಮಸಾಜ್ ಮಾಡಿ.
* ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
* ಮೊಶ್ಚಿರೈಸರ್ ಹಚ್ಚಿಕೊಳ್ಳಿ.
* ದಿನದಲ್ಲಿ ಒಂದು ಅಥವಾ ಎರಡು ಸಲ ಇದನ್ನು ಬಳಸಿ.

ಬೇಬಿ ತೈಲ
ಬಳಸುವ ವಿಧಾನ
*ಸ್ಟ್ರೆಚ್ ಮಾರ್ಕ್ಸ್ ಗೇ ನೇರವಾಗಿ ಇದನ್ನು ಹಚ್ಚಿ.
*ಚರ್ಮವು ಹೀರಿಕೊಳ್ಳುವ ತನಕ ಮಸಾಜ್ ಮಾಡಿಕೊಳ್ಳಿ.
*ಪ್ರತಿನಿತ್ಯ ಬಳಸಿದರೆ ನಿಮಗೆ ಫಲಿತಾಂಶ ಸಿಗುವುದು.

ಅಡುಗೆ ಸೋಡಾ
ಬೇಕಾಗುವ ಸಾಮಗ್ರಿಗಳು
*ಕ್ಲಿಂಗ್ ವ್ರ್ಯಾಪ್
*ಲಿಂಬೆರಸ-ಕೆಲವು ಹನಿ
*ಅಡುಗೆ ಸೋಡಾ-1 ಚಮಚ
ಬಳಸುವ ವಿಧಾನ
*ಲಿಂಬೆರಸ ಮತ್ತು ಅಡುಗೆ ಸೋಡಾವನ್ನು ಜತೆ ಸೇರಿಸಿ ಪೇಸ್ಟ್ ಮಾಡಿ.
*ಇದನ್ನು ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿಕೊಳ್ಳಿ.
*ಕ್ಲಿಂಗ್ ವ್ರ್ಯಾಪ್ ಸುತ್ತಿಕೊಂಡು 20-30 ನಿಮಿಷ ಹಾಗೆ ಬಿಡಿ.
*ಮಿಶ್ರಣ ಮತ್ತು ವ್ರ್ಯಾಪ್ ತೆಗೆಯಿರಿ ಮತ್ತು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಪರಿಣಾಮಕಾರಿ ಫಲಿತಾಂಶಕ್ಕಾಗಿ ಪ್ರತಿನಿತ್ಯ ಇದನ್ನು ಬಳಸಿ.

ಚಹಾ ಮರದ ತೈಲ
ಬೇಕಾಗುವ ಸಾಮಗ್ರಿಗಳು
*ಚಹಾ ಮರದ ತೈಲ-ಕೆಲವು ಹನಿಗಳು
*ತೆಂಗಿನೆಣ್ಣೆ ಅಥವಾ ಆಲಿವ್ ತೈಲ-ಕ್ರಮವಾಗಿ 1 ಮತ್ತು1/2 ಚಮಚ
ಬಳಸುವ ವಿಧಾನ
*ಪ್ಲಾಸ್ಟಿಕ್ ಪಿಂಗಾಣಿಯಲ್ಲಿ ಎಣ್ಣೆಗಳನ್ನು ಮಿಶ್ರಣ ಮಾಡಿ.
*ಇದನ್ನು ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಚರ್ಮವು ಹೀರಿಕೊಳ್ಳುವ ತನಕ ಮಸಾಜ್ ಮಾಡಿ.
*ಪರಿಣಾಮಕಾರಿ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಸಲ ಬಳಸಿ.

ಮೊಟ್ಟೆಯ ಬಿಳಿಭಾಗ
ಬಳಸುವ ವಿಧಾನ
*ಎರಡು ಮೊಟ್ಟೆಯ ಬಿಳಿ ಭಾಗ ತೆಗೆಯಿರಿ.
*ಸೋಪ್ ಮತ್ತು ನೀರಿನಿಂದ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗ ತೊಳೆಯಿರಿ.
*ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆಗೆ ಮೊಟ್ಟೆಯ ಬಿಳಿ ಲೋಳೆ ಹಚ್ಚಿಕೊಳ್ಳಿ.
*ಇದು ಹಾಗೆ ಅಲ್ಲಿಯೇ ಒಣಗಲಿ.
*ತಣ್ಣೀರಿನಿಂದ ತೊಳೆಯಿರಿ.
*ಆಲಿವ್ ತೈಲದಿಂದ ಮೊಶ್ಚಿರೈಸ್ ಮಾಡಿ.
*ಪ್ರತಿನಿತ್ಯ ಇದನ್ನು ಬಳಸಿದರೆ ಫಲಿತಾಂಶ ಸಿಗುವುದು.

ಲಿಂಬೆರಸ
ಬಳಸುವ ವಿಧಾನ
*ಪಿಂಗಾಣಿಗೆ ಲಿಂಬೆರಸ ಹಾಕಿಕೊಳ್ಳಿ.
*ಇದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಹಚ್ಚಿ ಮತ್ತು ವೃತ್ತಾಕಾರದಲ್ಲಿ ಮಸಾಜ್ ಮಾಡಿ.
* ಹತ್ತು ನಿಮಿಷ ಕಾಲ ಹಾಗೆ ಬಿಡಿ.
* ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
* ಇದರ ಬಳಿಕ ಮೊಶ್ಚಿರೈಸರ್ ಮಾಡಿ.
* ಪರಿಣಾಮಕಾರಿ ಫಲಿತಾಂಶಕ್ಕಾಗಿ ದಿನದಲ್ಲಿ ಒಂದು ಸಲ ಇದನ್ನು ಬಳಸಿ.

ಅರಿಶಿನ
ಬೇಕಾಗುವ ಸಾಮಗ್ರಿಗಳು
ಮೊಸರು-1 ಚಮಚ
ಅರಿಶಿನ-1 ಚಮಚ
ಬಳಸುವ ವಿಧಾನ
*ಪ್ಲಾಸ್ಟಿಕ್ ಪಿಂಗಾಣಿಯಲ್ಲಿ ಮೊಸರು ಮತ್ತು ಅರಶಿನ ಮಿಶ್ರಣ ಮಾಡಿ.
*ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಇದನ್ನು ಹಚ್ಚಿ ಮತ್ತು 10-15 ನಿಮಿಷ ಹಾಗೆ ಬಿಡಿ.
*ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಇದರ ಬಳಿಕ ಮೊಶ್ಚಿರೈಸರ್ ಹಚ್ಚಿ
*ಪರಿಣಾಮಕಾರಿ ಫಲಿತಾಂಶ ಪಡೆಯಲು ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಆ್ಯಪಲ್ ಸೀಡರ್ ವಿನೇಗರ್
ಬೇಕಾಗುವ ಸಾಮಗ್ರಿಗಳು
*ಸ್ಪ್ರೇ ಬಾಟಲಿ
*ಆ್ಯಪಲ್ ಸೀಡರ್ ವಿನೇಗರ್-1 ಕಪ್
ಬಳಸುವ ವಿಧಾನ
*ಆ್ಯಪಲ್ ಸೀಡರ್ ವಿನೇಗರ್ ನ್ನು ಸ್ಪ್ರೇ ಬಾಟಲಿಗೆ ಹಾಕಿ.
*ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಇದನ್ನು ಸ್ಪ್ರೇ ಮಾಡಿ ಮಾಡಿ ಮತ್ತು ಒಣಗಲು ಬಿಡಿ.
*ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಇದರ ಬಳಿಕ ಮೊಶ್ಚಿರೈಸರ್ ಹಚ್ಚಿ.
*ಪರಿಣಾಮಕಾರಿಯಾಗಲು ಪ್ರತಿನಿತ್ಯ ಬಳಸಿ.

ಕಾಫಿ ಸ್ಕ್ರಬ್
ಬೇಕಾಗುವ ಸಾಮಗ್ರಿಗಳು
*ನೀರು
*ಕಾಫಿ ಗ್ರೌಂಡ್ಸ್
ಬಳಸುವ ವಿಧಾನ
*ನೀರು ಮತ್ತು ಕಾಫಿ ಗ್ರೌಂಡ್ಸ್ ನ್ನು ಪ್ಲಾಸ್ಟಿಕ್ ಪಿಂಗಾಣಿಯಲ್ಲಿ ಮಿಶ್ರಣ ಮಾಡಿ.
*ಇದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಹಚ್ಚಿ.
*3-5 ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ.
*ಇದರ ಬಳಿಕ ಮೊಶ್ಚಿರೈಸರ್ ಮಾಡಿ.
*ಪರಿಣಾಮಕಾರಿಯಾಗಲು ಪ್ರತಿನಿತ್ಯ ಬಳಸಿ.

ಆಲೂಗಡ್ಡೆ ಜ್ಯೂಸ್
ಬಳಸುವ ವಿಧಾನ
*ಆಲೂಗಡ್ಡೆ ದಪ್ಪ ತುಂಡುಗಳನ್ನಾಗಿ ಕತ್ತರಿಸಿ.
*ಇದನ್ನು ತೆಗೆದುಕೊಂಡು ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಹಚ್ಚಿಕೊಳ್ಳಿ.
*ಕೆಲವು ನಿಮಿಷ ಹಾಗೆ ಒಣಗಲಿ.
*ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಒಳ್ಳೆಯ ಫಲಿತಾಂಶಕ್ಕಾಗಿ ಪ್ರತಿನಿತ್ಯ ಹೀಗೆ ಮಾಡಿ.

ಬಾದಾಮಿ ಎಣ್ಣೆ
ಬೇಕಾಗುವ ಸಾಮಗ್ರಿಗಳು
ಸಾರಭೂತ ತೈಲ-ಕೆಲವು ಹನಿಗಳು
ಬಾದಾಮಿ ತೈಲ-1 ಚಮಚ
ಬಳಸುವ ವಿಧಾನ
*ಸಾರಭೂತ ತೈಲ ಮತ್ತು ಬಾದಾಮಿ ತೈಲವನ್ನು ಒಂದು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ ಬಳಿಕ ಬಿಸಿ ಮಾಡಿ.
*ಇದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಹಚ್ಚಿ ಮತ್ತು ವೃತ್ತಾಕಾರದಲ್ಲಿ ಮಸಾಜ್ ಮಾಡಿ.
*ಚರ್ಮವು ಇದನ್ನು ಹೀರಿಕೊಳ್ಳಲು ಬಿಡಿ.
*ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಸಲ ಬಳಸಿ.

ಜೊಜೊಬಾ ತೈಲ
ಬಳಸುವ ವಿಧಾನ
*ಕೆಲವು ಹನಿ ಜೊಜೊಬಾ ತೈಲವನ್ನು ಅಂಗೈಗೆ ಹಾಕಿಕೊಂಡು ಅದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಹಚ್ಚಿ.
*ವೃತ್ತಾಕಾರದಲ್ಲಿ ಇದನ್ನು ಮಸಾಜ್ ಮಾಡಿ ಮತ್ತು ಚರ್ಮವು ಹೀರಿಕೊಳ್ಳಲು ಬಿಡಿ.
*ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಮೂರು ಸಲ ಇದನ್ನು ಬಳಸಿ.
ದೇಹದಲ್ಲಿ ಕಾಣುವಂತಹ ಸ್ಟ್ರೆಚ್ ಮಾರ್ಕ್ಸ್ ಗಳು ಇದ್ದರೆ ಅದು ತುಂಬಾ ಕಿರಿಕಿರಿ. ಕೆಲವೊಂದು ಸಲ ಕಂಕುಲಿನಲ್ಲಿ ಇಂತಹ ಕಲೆಗಳು ಇರುವುದು. ಆದರೆ ಇದಕ್ಕೆ ಚಿಕಿತ್ಸೆ ಕಷ್ಟವೇನಿಲ್ಲ. ಮನೆಮದ್ದನ್ನು ಬಳಸಿಕೊಂಡೇ ಇದನ್ನು ನೀವು ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದು.



Click it and Unblock the Notifications











