Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮನೆಯಲ್ಲೇ ತೆಂಗಿನೆಣ್ಣೆ ಬಾಡಿ ಲೋಷನ್ ತಯಾರಿ ಹೇಗೆ?
ಕೆಲವರ ತ್ವಚೆಯು ತುಂಬಾ ಒಣಗಿರುವಂತೆ ಇರುವುದು. ಏನೇ ಮಾಯಿಶ್ಚರೈಸರ್ ಬಳಸಿಕೊಂಡರೂ ಇದು ಕೆಲಸ ಮಾಡಲ್ಲ. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಮಾಯಿಶ್ಚರೈಸರ್ ನ್ನು ಬಳಸಿಕೊಂಡು ಫಲಿತಾಂಶ ಸಿಗದೇ ಇರಬಹುದು. ಆದರೆ ಇಂತಹ ಮಾಯಿಶ್ಚರೈಸರ್ ಗಳಲ್ಲಿ ರಾಸಾಯನಿಕವು ಕಟ್ಟಿಟ್ಟ ಬುತ್ತಿ. ಇದು ತ್ವಚೆಗೆ ಮತ್ತಷ್ಟು ಹಾನಿಯುಂಟು ಮಾಡುವುದು. ಆದರೆ ಈ ಲೇಖನದಲ್ಲಿ ನಾವು ನಿಮಗೆ ನೈಸರ್ಗಿಕವಾಗಿ ಸಿಗುವಂತಹ ತೆಂಗಿನೆಣ್ಣೆಯ ಲೋಷನ್ ಮಾಡಿಕೊಂಡು ಬಳಸುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ.
ಬಾಡಿ ಲೋಷನ್ ಮುಖ್ಯವೇಕೇ?
ನಮ್ಮ ಚರ್ಮಕ್ಕೆ ನಿಯಮಿತವಾಗಿ ಮಾಯಿಶ್ಚರೈಸರ್ ಮತ್ತು ತೇವಾಂಶವು ಬೇಕಾಗುವುದು. ಈ ವೇಳೆ ಬಾಡಿ ಲೋಷನ್ ನಮ್ಮ ನೆರವಿಗೆ ಬರುವುದು. ಚರ್ಮವನ್ನು ಕಠಿಣ ಹವಾಮಾನಕ್ಕೆ ಒಡ್ಡುವುದರಿಂದ ಚರ್ಮವು ತುಂಬಾ ನಿಸ್ತೇಜ ಹಾಗೂ ಒಣಗುವುದು. ಒಣ ಹಾಗೂ ತೊಗಲು ಏಳುವಂತ ಚರ್ಮಕ್ಕೆ ಶಮನ ನೀಡುವುದು ಮಾತ್ರವಲ್ಲದೆ, ಚರ್ಮವನ್ನು ಪುನಶ್ಚೇತನಗೊಳಿಸಿ, ಕಾಂತಿ ನೀಡುವುದು. ಬಾಡಿ ಲೋಷನ್ ಚರ್ಮವನ್ನು ತಾಜಾವಾಗಿಡುವುದು ಮತ್ತು ಇದು ಸುವಾಸನೆಯನ್ನು ಉಂಟು ಮಾಡುವುದು.

ನಿಮಗೆ ಏನು ಬೇಕು
1 ಕಪ್ ಕಚ್ಚಾ ತೆಂಗಿನೆಣ್ಣೆ
1 ಚಮಚ ವಿಟಮಿನ್ ಇ ತೈಲ
ಯಾವುದೇ ಸಾರಭೂತ ತೈಲ(ಲ್ಯಾವೆಂಡರ್, ರೋಸ್ಮೆರಿ ಇತ್ಯಾದಿ)
ತಯಾರಿಸುವುದು ಹೇಗೆ?
1. ತೆಂಗಿನೆಣ್ಣೆಯು ಗಟ್ಟಿಯಾಗಿದ್ದರೆ ಅದನ್ನು ಕರಿಸಿಕೊಳ್ಳಿ. ಇದರಿಂದ ನಿಮಗೆ ಬಳಸಿಕೊಳ್ಳಲು ಸುಲಭವಾಗುವುದು.
2. ವಿಟಮಿನ್ ಇ ಮಾತ್ರೆ ತೆಗೆದುಕೊಂಡು ಅದರಿಂದ ತೈಲ ಹೊರತೆಗೆಯಿರಿ. ವಿಟಮಿನ್ ಇ ತೈಲವಿದ್ದರೆ ಅದು ಕೂಡ ಆಗಬಹುದು.
3. ವಿಟಮಿನ್ ಇ ತೈಲವನ್ನು ತೆಂಗಿನೆಣ್ಣೆಗೆ ಸೇರಿಸಿ ಮತ್ತು ಎರಡು 2-3 ನಿಮಿಷ ಕಾಲ ಸರಿಯಾಗಿ ಮಿಶ್ರಣ ಮಾಡಿ.
4. ಇದನ್ನು ಮೆತ್ತಗೆ ಮಾಡಲು ಎರಡನ್ನು ಮಿಕ್ಸಿಗೆ ಹಾಕಿಕೊಂಡು ರುಬ್ಬಬಹುದು.
5. ಇದು ಬಿಳಿ, ಮೆತ್ತಗೆ ಮತ್ತು ನೊರೆ ಬರುವ ತನಕ ರುಬ್ಬಿ.
6. ಮೆತ್ತಗಿನ ಪೇಸ್ಟ್ ತಯಾರಾದ ಬಳಿಕ ನೀವು ಇದಕ್ಕೆ ಕೆಲವು ಹನಿ ಸಾರಭೂತ ತೈಲ ಹಾಕಿಕೊಳ್ಳಿ. ಇದರಿಂದ ಒಳ್ಳೆಯ ಸುವಾಸನೆ ಬರುವುದು.
7. ಈ ಲೋಷನ್ ನ್ನು ಗಾಜಿನ ಡಬ್ಬಕ್ಕೆ ಹಾಕಿ ಮುಚ್ಚಳ ಬಿಗಿಯಾಗಿ ಮುಚ್ಚಿ ಮತ್ತು ಇದನ್ನು ನೀವು ಶೌಚಾಲಯ ಅಥವಾ ನಿಮಗೆ ಬೇಕಾದಲ್ಲಿ ಇದನ್ನು ಇಡಬಹುದು.
8. ಸ್ನಾನ ಮಾಡಿಕೊಂಡ ಬಳಿಕ ಈ ಲೋಷನ್ ಹಚ್ಚಿಕೊಳ್ಳಿ ಮತ್ತು ವೃತ್ತಾಕಾರದಲ್ಲಿ ಮಸಾಜ್ ಮಾಡಿ.
9. ನಿಮಗೆ ಇಷ್ಟವಿದ್ದರೆ ಮಲಗುವ ಮೊದಲು ನೀವು ಇದನ್ನು ಬಳಸಿಕೊಳ್ಳಬಹುದು ಮತ್ತು ರಾತ್ರಿಯಿಡಿ ಹಾಗೆ ಬಿಡಿ.
ತೆಂಗಿನೆಣ್ಣೆಯ ಲಾಭಗಳು
ತೆಂಗಿನೆಣ್ಣೆಯು ಶತಮಾನಗಳಿಂದಲೂ ಹಲವಾರು ರೀತಿಯ ತ್ವಚೆಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತಲಿದೆ. ಇದರಿಂದಾಗಿ ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಇದನ್ನು ಬಳಸಲಾಗುತ್ತದೆ. ತೆಂಗಿನೆಣ್ಣೆಯಲ್ಲಿ ವಿಟಮಿನ್ ಎ, ಇ ಮತ್ತು ಡಿ ಇದ್ದು, ಇತರ ಪ್ರಮುಖ ಅಮಿನೋ ಆಮ್ಲಗಳು ಚರ್ಮಕ್ಕೆ ಲಾಭವಾಗುವುದು. ತೆಂಗಿನೆಣ್ಣೆಯಲ್ಲಿ ಲಾರಿಕ್ ಮತ್ತು ಮೈರಿಸ್ಟಿಕ್ ಎನ್ನುವ ಎರಡು ಕೊಬ್ಬಿನಾಮ್ಲಗಳಿವೆ. ಇದು ತ್ವಚೆಯ ಆರೈಕೆಗೆ ತುಂಬಾ ಪರಿಣಾಮಕಾರಿ. ಒಣಚರ್ಮ, ತೊಗಲು ಎದ್ದು ಬರುವ ಚರ್ಮಕ್ಕೆ ಪರಿಹಾರ ನೀಡಿ, ಮೊಶ್ಚಿರೈಸ್ ನೀಡುವುದು.
ವಿಟಮಿನ್ ಇ ತೈಲದ ಲಾಭಗಳು
ದೈನಂದಿನ ಸೌಂದರ್ಯವರ್ಧಕದಲ್ಲಿ ವಿಟಮಿನ್ ಇ' ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ವಿಟಮಿನ್ ಇ' ಯನ್ನು ಕೂದಲಿನ ಆರೈಕೆ ಮತ್ತು ಸೌಂದರ್ಯವರ್ಧಕವಾಗಿ ಮಾಸ್ಕ್ ಮತ್ತು ಲೋಷನ್ ಗಳಲ್ಲಿ ಬಳಸಲಾಗುತ್ತದೆ. ವಿಟಮಿನ್ ಇ' ಯಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಚರ್ಮವನ್ನು ಪುನಶ್ಚೇತನಗೊಳಿಸುವುದು ಮತ್ತು ತೇವಾಂಶ ಕಾಪಾಡುವುದು. ಮೊಶ್ಚಿರೈಸ್ ಇರುವಂತೆ ನೋಡಿಕೊಂಡು ನಿಸ್ತೇಜ ಮತ್ತು ಹಾನಿಗೀಡಾದ ಚರ್ಮಕ್ಕೆ ನೆರವಾಗುವುದು. ವಿಟಮಿನ್ ಇ' ತೈಲವನ್ನು ಹಾಗೆ ಅಥವಾ ಕ್ಯಾಪ್ಸೂಲ್ ನಿಂದ ಪಡೆಯಬಹುದು.



Click it and Unblock the Notifications
