Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಕಿನಿ ವ್ಯಾಕ್ಸ್: ನಿಮ್ಮಲ್ಲಿ ಯಾರೂ ಹೇಳದ ಐದು ಸಂಗತಿಗಳು
ಸೌಂದರ್ಯವನ್ನು ಅತ್ಯುತ್ತಮಗೊಳಿಸುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಮ್ಮ ದೇಹವನ್ನು ಇನ್ನಷ್ಟು ಸುಕೋಮಲಗೊಳಿಸುವ ಹೆಚ್ಚಿನ ವಿಧಾನಗಳನ್ನು ಪ್ರತಿಯೊಬ್ಬರೂ ಅನುಸರಿಸುತ್ತಾರೆ. ಫ್ಯಾಷನ್ ವಿಷಯಕ್ಕೆ ಬಂದಾಗ ಇಂದು ಹೆಚ್ಚಿನ ಆಧುನಿಕ ಉಡುಗೆಗಳಿಗೆ ಸೂಕ್ತವಾಗಿರುವಂತಹ ಅಲಂಕಾರಗಳನ್ನೇ ಮಾಡಿಕೊಳ್ಳಬೇಕು. ಅದರಲ್ಲೂ ಬಿಕಿನಿ ವ್ಯಾಕ್ಸ್ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಎಷ್ಟೋ ವ್ಯಾಕ್ಸ್‌ಗಳನ್ನು ನೀವು ಕೇಳಿರಬಹುದು ಆದರೆ ಬಿಕಿನಿ ವ್ಯಾಕ್ಸ್ ಬಗ್ಗೆ ನೀವೆಷ್ಟು ತಿಳಿದುಕೊಂಡಿದ್ದೀರಿ.
ನೀವು ಈ ವ್ಯಾಕ್ಸ್ ಅನ್ನು ಮಾಡಬೇಕು ಎಂದುಕೊಂಡಲ್ಲಿ ನೀವು ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ವ್ಯಾಕ್ಸ್ ಅನ್ನು ನೀವು ಮಾಡಬೇಕು ಎಂಬ ನಿರ್ಧಾರ ತಾಳಿದಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಇದರಿಂದ ಹಾನಿ ಇದೆಯೇ? ಇದನ್ನು ಸರಿಯಾಗಿ ಮಾಡುವ ವಿಧಾನವೇನು ಎಂಬುದನ್ನು ನೀವು ಅರಿತುಕೊಳ್ಳಬೇಕು. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಬಿಕಿನಿ ವ್ಯಾಕ್ಸ್ ಎಂದರೇನು ಇದರಿಂದ ದೊರೆಯುವ ಪ್ರಯೋಜನವೇನು ಮತ್ತು ದುಷ್ಪರಿಣಾಮವೇನು ಎಂಬುದನ್ನು ತಿಳಿದುಕೊಳ್ಳೋಣ....

ಬಿಕಿನಿ ವ್ಯಾಕ್ಸ್ ಎಂದರೇನು?
ಬ್ರೆಜಿಲಿಯನ್ ವ್ಯಾಕ್ಸ್ ಎಂದು ಕೂಡ ಈ ವ್ಯಾಕ್ಸ್ ಅನ್ನು ಕರೆಯಾಗುತ್ತದೆ. ನಿಮ್ಮ ಗುಪ್ತ ಭಾಗದ ಕೂದಲನ್ನು ತೆಗೆಯುವ ವಿಧಾನವಾಗಿದೆ ಬಿಕಿನಿ ವ್ಯಾಕ್ಸ್. ಕೆಲವರು ಇದನ್ನು ಫ್ಯಾಶನ್ ಅಂಶಕ್ಕಾಗಿ ಮಾಡಿಕೊಂಡರೆ ಇನ್ನು ಕೆಲವರು ಅನಾರೋಗ್ಯದಿಂದ ದೂರವಿರುವುದಕ್ಕಾಗಿ ಅನುಸರಿಸುತ್ತಾರೆ. ಇಂದಿನ ಮಹಿಳಾ ಯುಗದಲ್ಲಿ ಬಿಕಿನಿ ವ್ಯಾಕ್ಸ್ ಹೆಚ್ಚು ಪ್ರಚಲಿತದಲ್ಲಿದೆ. ನೀವು ಈ ವ್ಯಾಕ್ಸ್ ಅನ್ನು ಮಾಡಿಸಿಕೊಳ್ಳಬೇಕು ಎಂದಿದ್ದರೆ ನೀವು ಅನುಸರಿಸಬೇಕಾದ, ಪಾಲಿಸಬೇಕಾದ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಸಾಕಷ್ಟು ಬಿಕಿನಿ ವ್ಯಾಕ್ಸ್‌ಗಳಿವೆ
ನೀವು ಈ ವ್ಯಾಕ್ಸ್ ಅನ್ನು ಮಾಡಿಸಿಕೊಳ್ಳಬೇಕು ಎಂದಿದ್ದರೆ ಹಲವಾರು ಆಯ್ಕೆಗಳಿವೆ. ನೀವು ಸಲೂನ್‌ಗೆ ಹೋಗಿ ಯಾವ ಬಗೆಯ ವ್ಯಾಕ್ಸ್ ಬೇಕು ಎಂಬುದನ್ನು ಆಯ್ದುಕೊಳ್ಳಬಹುದಾಗಿದೆ. ಪಾರ್ಲರ್‌ನಲ್ಲಿ ಬ್ಯೂಟಿಷಿಯನ್ ನಿಮ್ಮ ಗುಪ್ತ ಸ್ಥಳದ ಕೂದಲನ್ನು ಮಾತ್ರ ನಿವಾರಿಸುತ್ತಾರೆ. ಬೇಕಾದರೆ ನಿಮ್ಮ ಬಿಕಿನಿ ನಿಲ್ಲುವ ಆ ಜಾಗದಲ್ಲಿ ಮಾತ್ರವೇ ಸ್ವಲ್ಪ ಕೂದಲನ್ನು ಬಿಟ್ಟುಬಿಡಬಹುದು. ಏನಿದ್ದರೂ ಅವರಿಗೆ ತಿಳಿಸಿ ಹೇಳುವುದು ಮುಖ್ಯವಾಗಿರುತ್ತದೆ.

ನೀವು ನಿವಾರಿಸಿಕೊಳ್ಳಬೇಕಾದ ಕೂದಲಿನ ಅಳತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು
ಇದರ ಬಗ್ಗೆ ನೀವು ಸಾಕಷ್ಟು ಅರಿತುಕೊಂಡಿರಬೇಕು. ಬಿಕಿನಿ ವ್ಯಾಕ್ಸ್ ಮಾಡಿಸುವ ಮುನ್ನ ಎಷ್ಟು ಕೂದಲನ್ನು ನೀವು ವ್ಯಾಕ್ಸ್ ಮೂಲಕ ನಿವಾರಿಸಿಕೊಳ್ಳಬೇಕು ಎಂಬುದನ್ನು ಅರಿತುಕೊಂಡಿರಬೇಕು. 1/4 ಇಂಚಿನಷ್ಟು ಉದ್ದಕ್ಕೆ ನೀವು ಇದನ್ನು ಇಟ್ಟುಕೊಳ್ಳಬೇಕು. ಇನ್ನಷ್ಟು ಉದ್ದವಿದೆ ಎಂದಾದಲ್ಲಿ ಅದನ್ನು ಟ್ರಿಮ್ ಮಾಡಿಕೊಳ್ಳಿ.

ವ್ಯಾಕ್ಸ್ ಮಾಡಿಸುವುದಕ್ಕೆ ಇದು ಸೂಕ್ತ ಸಮಯವೇ ಎಂಬುದನ್ನು ಪರಿಶೀಲಿಸಿ
ನಿಮ್ಮ ತಿಂಗಳಿನ ಮುಟ್ಟಿನ ಸಮಯವಾಗಿದ್ದರೆ ಈ ಸಮಯದಲ್ಲಿ ಬಿಕಿನಿ ವ್ಯಾಕ್ಸ್ ಮಾಡಿಸಿಕೊಳ್ಳಬೇಕು. ಇದು ಕಿರಿಕಿರಿಯನ್ನುಂಟು ಮಾಡುತ್ತದೆ ಜೊತೆಗೆ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಮ್ಮ ತ್ವಚೆ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಪಿರಿಯಡ್ಸ್ ಆಗಿ ಎರಡು ದಿನಗಳ ನಂತರ ಬಿಕಿನಿ ವ್ಯಾಕ್ಸ್ ಮಾಡಿಸಿಕೊಳ್ಳಿ. ನಿಮ್ಮ ವ್ಯಾಕ್ಸ್ ಮಾಡಿಸುವ ಮೊದಲು ಸ್ವಚ್ಛವಾಗಿ ಸ್ನಾನ ಮಾಡಿ. ನಿಮ್ಮ ಗುಪ್ತ ಸ್ಥಳಗಳು ಸ್ವಚ್ಛವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸ್ವಲ್ಪ ನೋವು ಸಹಿಸಿಕೊಳ್ಳಿ
ನಿಮಗೆ ಹೆದರಿಸಬೇಕು ಎಂಬುದು ಇದರರ್ಥವಲ್ಲ. ಬಿಕಿನಿ ವ್ಯಾಕ್ಸ್ ಕೊಂಚ ನೋವನ್ನುಂಟು ಮಾಡಬುದು. ನಿಮ್ಮ ದೈನಂದಿನ ಕಾಲು ಕೈಯ ವ್ಯಾಕ್ಸ್ ಮಾಡಿಸುವಷ್ಟೇ ನೋವನ್ನು ಇದು ಉಂಟುಮಾಡುತ್ತದೆ. ಆದರೆ ವ್ಯಾಕ್ಸ್ ಮಾಡಿಸುವ ಮುನ್ನ ವೃತ್ತಿಪರರನ್ನು ಆರಿಸಿಕೊಳ್ಳಿ. ನೀವು ಇದನ್ನು ಮನೆಯಲ್ಲೇ ಮಾಡಿಕೊಳ್ಳಬಹುದು ಅಂತೆಯೇ ನಿಮ್ಮ ಸಮಯ ಮತ್ತು ಹಣವನ್ನು ಉಳಿಸಿಕೊಳ್ಳಬಹುದು.

ಮನೆಯಲ್ಲೇ ವ್ಯಾಕ್ಸ್ ಮಾಡಿಸಿಕೊಳ್ಳುವ ವಿಧಾನ
ಮನೆಯಲ್ಲೇ ಬಿಕಿನಿ ವ್ಯಾಕ್ಸ್ ಮಾಡಿಸುವುದು ಸರಳವಾಗಿದೆ. ನಿಮಗೆ ಕೆಲವೊಂದು ಪರಿಕರಗಳು ಬೇಕು. ಇಲ್ಲಿದೆ ನಿಮಗೆ ಬೇಕಾಗಿರುವ ಪರಿಕರಗಳು.
* ಹಾಟ್ ವ್ಯಾಕ್ಸ್
*ವ್ಯಾಕ್ಸ್ ಟ್ರಿಪ್ಸ್
*ಮಾಯಿಶ್ಚರೈಸಿಂಗ್ ಲೋಶನ್
*ಸಟ್ಟುಗ ಅಥವಾ ವ್ಯಾಕ್ಸ್ ಹಚ್ಚಿಕೊಳ್ಳುವ ಸಾಧನ
*ತಣ್ಣೀರಿನಲ್ಲಿ ಮುಳುಗಿಸಿದ ಸ್ವಚ್ಛ ಒದ್ದೆ ಬಟ್ಟೆ

ಮನೆಯಲ್ಲೇ ವ್ಯಾಕ್ಸ್ ಮಾಡಿಸಿಕೊಳ್ಳುವ ವಿಧಾನ
* ಎಲ್ಲಾ ಪರಿಕರಗಳನ್ನು ನಿಮ್ಮ ಪಕ್ಕ ಇಟ್ಟುಕೊಳ್ಳಿ ನಿಮ್ಮ ತೊಡೆಗಳನ್ನು ಬಗ್ಗಿಸಿ, ಇದು ಛಾವಣಿಯನ್ನು ನೋಡುತ್ತಿರಲಿ ಮತ್ತು ನಿಮ್ಮ ಕಾಲುಗಳು ಸ್ವಲ್ಪ ಮುಂದಕ್ಕೆ ದೂಡಿದಂತಿರಲಿ.
* ನೀವು ಆರಂಭಿಸುವ ಮುನ್ನ ವ್ಯಾಕ್ಸ್ ತುಂಬಾ ಬಿಸಿಯಾಗಿಲ್ಲ ಮತ್ತು ಬಿಸಿಯನ್ನು ತಡೆದುಕೊಳ್ಳಬುದು ಎಂಬುದನ್ನು ಖಚಿತಪಡಿಸಿಕೊಳ್ಳಿ.
*ಸಣ್ಣ ಸಣ್ಣ ಕೂದಲಿರುವ ನಿಮ್ಮ ಗುಪ್ತ ಜಾಗದಲ್ಲಿ ಈ ವ್ಯಾಕ್ಸ್ ಹಚ್ಚಿ
* ನೀವು ವ್ಯಾಕ್ಸ್ ಹಚ್ಚಿರುವಲ್ಲಿ ವ್ಯಾಕ್ಸ್ ಸ್ಟ್ರಿಪ್ ಅನ್ನು ಇಟ್ಟುಕೊಳ್ಳಿ ಮತ್ತು ಅದರ ಮೇಲೆ ತಟ್ಟಿ ಹಾಗೂ ಎಳೆಯಿರಿ.
* ಕೂದಲಿನ ವಿರುದ್ಧ ದಿಕ್ಕಿಗೆ ಇದನ್ನು ಎಳೆಯಿರಿ
* ನಿಮ್ಮ ತ್ವಚೆ ಉರಿಯುತ್ತಿದೆ ಅಥವಾ ತುರಿಕೆ ಇದೆ ಎಂದಾದಲ್ಲಿ ನಿಮ್ಮ ಬೆರಳುಗಳ ಸಹಾಯದಿಂದ ಅದರ ಮೇಲೆ ಕೈಯಿಟ್ಟು ತ್ವಚೆಯನ್ನು ಶಾಂತಗೊಳಿಸಿ.
* ಸಂಪೂರ್ಣ ಕೂದಲು ಹೋಗುವವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.
* ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಮತ್ತು ಈ ಜಾಗವನ್ನು ಒರೆಸಿಕೊಳ್ಳಿ ಮತ್ತು ಉಳಿದ ವ್ಯಾಕ್ಸ್ ಅನ್ನು ತೆಗೆಯಿರಿ.
* ಮಾಯಿಶ್ಚರೈಸಿಂಗ್ ಲೋಶನ್ ಹಚ್ಚಿ ಮತ್ತು ಲೈಟಾಗಿ ಮಸಾಜ್ ಮಾಡಿ.



Click it and Unblock the Notifications