Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆಯ ಸೌಂದರ್ಯಕ್ಕೆ 'ಕೋಕೋ ಬೆಣ್ಣೆಯ' ಮ್ಯಾಜಿಕ್ ಚಿಕಿತ್ಸೆ!
ಚರ್ಮದ ಆರೈಕೆ ಮಾಡಲು ಹಿಂದಿನಿಂದಲೂ ಹಲವಾರು ರೀತಿಯ ಮನೆಮದ್ದನ್ನು ಬಳಸುತ್ತಾ ಇದ್ದರು. ಈಗಲೂ ಕೆಲವೊಂದು ಮದ್ದುಗಳು ಚಾಲ್ತಿಯಲ್ಲಿದೆ. ಅದರಲ್ಲೂ ಹಾಲಿನ ಕೆಲವೊಂದು ಉತ್ಪನ್ನಗಳು ಹಾಗೂ ಸಾಂಬಾರ ಪದಾರ್ಥಗಳಿಂದ ಚರ್ಮದ ಆರೈಕೆಯನ್ನು ಮಾಡಿಕೊಳ್ಳಲಾಗುತ್ತದೆ.
ಹಾಲಿನ ಬೆಣ್ಣೆಯನ್ನು ಚರ್ಮದ ಆರೈಕೆಯಲ್ಲಿ ಬಳಸುವುದನ್ನು ನಾವು ಕೇಳಿದ್ದೇವೆ. ಅದೇ ಕೋಕೋ ಬೆಣ್ಣೆಯನ್ನು ಕೂಡ ಚರ್ಮದ ಆರೈಕೆ ಮಾಡಲು ಬಳಸಿಕೊಳ್ಳಬಹುದು. ಮೊಶ್ಚಿರೈಸರ್‌ನಿಂದ ಸಮೃದ್ಧವಾಗಿರುವಂತಹ ಕೋಕೋ ಬೆಣ್ಣೆಯು (ಕೋಕೋ ಬಟರ್) ಚರ್ಮದ ಆರೈಕೆಯಲ್ಲಿ ಅದ್ಭುತವಾದ ಕೆಲಸ ಮಾಡಲಿದೆ. ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!
ಒಳ್ಳೆಯ ಸುವಾಸನೆ ಹೊಂದಿರುವ ಕೋಕೋ ಬೆಣ್ಣೆಯನ್ನು ಮೈಗೆ ಹಚ್ಚಿಕೊಳ್ಳುವುದನ್ನು ನೀವು ಇಷ್ಟಪಡಲಿದ್ದೀರಿ. ಕೋಕೋ ಬೆಣ್ಣೆಯಿಂದ ಯಾವ ರೀತಿಯ ಲಾಭಗಳು ಇದೆ ಎಂದು ಚರ್ಮದ ತಜ್ಞರು ತಿಳಿಸಿದ್ದಾರೆ. ಅದನ್ನು ತಿಳಿಯಲು ಲೇಖನವನ್ನು ಓದುತ್ತಾ ಹೋಗಿ...

ಚರ್ಮಕ್ಕೆ ತೇವಾಂಶ
ದಿನಾಲೂ ನೀವು ಯಾವುದಾದರೂ ಮೊಶ್ಚಿರೈಸರ್ ಬಳಸುತ್ತಾ ಇದ್ದರೆ ಅದರ ಬದಲಿಗೆ ಕೋಕೋ ಬೆಣ್ಣೆಯನ್ನು ಬಳಸಿ. ಇದು ಚರ್ಮದ ರಚನೆಗೆ ತೇವಾಂಶ ನೀಡಿ ಚರ್ಮವು ಮೃಧುವಾಗುಂತೆ ಮಾಡುವುದು. ಸಾಮಾನ್ಯದಿಂದ ಒಣ ಚರ್ಮದ ತನಕ ಪ್ರತಿಯೊಂದು ರೀತಿಯ ಚರ್ಮದವರೂ ಕೋಕೋ ಬೆಣ್ಣೆಯನ್ನು ಬಳಸಬಹುದು. ಇದರಲ್ಲಿನ ಕೊಬ್ಬಿನ ಆಮ್ಲವು ಚರ್ಮವು ತೇವಾಂಶ ಉಳಿಸಿಕೊಳ್ಳುವಂತೆ ಮಾಡುವುದು. ಮೊಣಕೈ, ಗಂಟು ಮತ್ತು ಹಿಂಗಾಲಿನ ತೇವಾಂಶವನ್ನು ಉಳಿಸಿಕೊಳ್ಳುಲು ಇದು ತುಂಬಾ ನೆರವಾಗುವುದು.

ಒಡೆದ ತುಟಿಗಳಿಗೆ
ಸಾಮಾನ್ಯವಾಗಿ ಕೋಕೋ ಬೆಣ್ಣೆಯನ್ನು ಒಡೆದ ತುಟಿಗಳಿಗೆ ಬಳಸುತ್ತಾರೆ. ಇದು ಮೃಧುಕಾರಿ ಮತ್ತು ತುಟಿಗಳಿಗೆ ತೇವಾಂಶವಿರುವ ರಕ್ಷಣಾತ್ಮಕ ಪದರವನ್ನು ಒದಗಿಸಿಕೊಡುತ್ತದೆ. ಒಡೆದ ತುಟಿಗಳ ನಿವಾರಣೆ ಮಾಡಲು ಕೋಕೋ ಬೆಣ್ಣೆಯನ್ನು ದ್ರಾಕ್ಷಿ, ಪುದೀನಾ ಅಥವಾ ಕಿತ್ತಳೆಯ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳಬೇಕು.

ನೆರಿಗೆ ನಿವಾರಣೆ
ಅಕಾಲಿಕ ವಯಸ್ಸಾಗುವುದನ್ನು ತಡೆಯುವಂತಹ ಶಕ್ತಿ ಕೋಕೋ ಬೆಣ್ಣೆಗೆ ಇದೆ. ಕೋಕೋ ಬೆಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್, ಒಮೆಗಾ3 ಮತ್ತು ಒಮೆಗಾ6 ಇದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಣೆ ಮಾಡುವುದು. ಇದು ಫ್ರೀ ರ್ಯಾಡಿಕಲ್ ನ್ನು ನಿವಾರಣೆ ಮಾಡಿಕೊಂಡು ಚರ್ಮಕ್ಕೆ ತೇವಾಂಶ ನೀಡಲು ನೆರವಾಗುವುದು. ಕೋಕೋ ಬೆಣ್ಣೆಯ ಸ್ಕ್ರಬ್ ಮಾಡಿಕೊಂಡರೆ ನೀವು ಯುವಕರಂತೆ ಕಾಣಬಹುದಾಗಿದೆ.

ಸುಟ್ಟ ಗಾಯಗಳ ಶಮನ
ಸುಟ್ಟು ಹೋಗಿರುವ ಚರ್ಮವನ್ನು ಮತ್ತೆ ಪುನರುಜ್ಜೀವನಗೊಳಿಸಲು ಕೋಕೋ ಬೆಣ್ಣೆಯು ನೆರವಾಗುವುದು. ಚರ್ಮದ ಗಾಯ ಶಮನ ಮಾಡಿಕೊಳ್ಳಲು ಸಣ್ಣ ತುಂಡು ಕೋಕೋ ಬೆಣ್ಣೆಯನ್ನು ಚರ್ಮಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಕೋಕೋ ಬೆಣ್ಣೆಗೆ ಆಲ್ಕೋಹಾಲ್ ಅಥವಾ ಇತರ ಸುಗಂಧಿತ ದ್ರವ್ಯ ಹಾಕಿರಬಾರದು. ಇದು ಸುಟ್ಟ ಗಾಯವನ್ನು ಒಳ್ಳೆಯ ರೀತಿಯಲ್ಲಿ ನಿವಾರಣೆ ಮಾಡಿ ಚರ್ಮಕ್ಕೆ ಕಾಂತಿ ನೀಡುವುದು.

ಇಸಬು ಮತ್ತು ಚರ್ಮದ ಉರಿಯೂತ ಚಿಕಿತ್ಸೆಗೆ
ಕೋಕೋ ಬೆಣ್ಣೆಯ ಪ್ರಮುಖವಾದ ಉಪಯೋಗವೆಂದರೆ ಇದನ್ನು ಇಸಬು ನಿವಾರಣೆಗೆ ಪ್ರಮುಖವಾಗಿ ಬಳಸಲಾಗುತ್ತದೆ. ಕೋಕೋ ಬೆಣ್ಣೆಯಲ್ಲಿರುವ ಫಾಲಿಪೆನಾಲ್(ಸಿಎಂಪಿ) ಎನ್ನುವ ಅಂಶವು ಚರ್ಮದ ತುರಿಕೆ ಮತ್ತು ಉರಿಯೂತ ಕಡಿಮೆ ಮಾಡುವುದು. ಭಾದಿತ ಪ್ರದೇಶಕ್ಕೆ ಸ್ವಲ್ಪ ಕೋಕೋ ಬೆಣ್ಣೆಯಲ್ಲಿ ಹಚ್ಚಿಕೊಂಡು ಸ್ಕ್ರಬ್ ಮಾಡಿಕೊಳ್ಳಿ.



Click it and Unblock the Notifications
