ಬ್ಯೂಟಿ ಹೆಚ್ಚಿಸೋ ಹೈ ಹೀಲ್ಸ್ ಬಗ್ಗೆ ಒಂದಷ್ಟು ಸಿಂಪಲ್ ಟಿಪ್ಸ್..

By Su.Ra

ಕುಳ್ಳಗಿದ್ದೀನಿ.. ಇನ್ನಷ್ಟು ಎತ್ತರ ಕಾಣಬೇಕು ಎನ್ನುವ ಬೆಡಗೀರಿಗೆ ಹೈ ಹೀಲ್ಸ್ ವರದಾನ ಇದ್ದ ಹಾಗೆ.. ಪ್ರತಿದಿನ ಪ್ರತಿಕ್ಷಣ ಸೆಂಟರ್‌ ಆಫ್ ಅಟ್ರಾಕ್ಷನ್‌ ಆಗಿರಬೇಕು ಎನ್ನುವವರಿಗೂ ಇದು ಬೆಸ್ಟ್ ಮಾರ್ಗ.. ಹಾಗೆಂದು ಇದು ಅವ್ರು ಇವ್ರಿಗೆ ಮಾತ್ರ ಸೀಮಿತವಲ್ಲಾ ಎಲ್ಲರೂ ಹೈ ಹೀಲ್ಸ್ ಲವ್ವರ್ಸ್ ಆಗಿದ್ದಾರೆ. ಸದ್ಯದ ಟ್ರೆಂಡ್‌ಗೆ ಸೈ ಅನ್ನದವರು ಯಾರು ? ಬ್ಯೂಟಿ ಸೆನ್ಸ್ ಇರೋ ಎಲ್ಲರಿಗೂ ಹೈ ಹೀಲ್ಸ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಕೆಲವರು ಹೈ ಹೀಲ್ಸ್ ನ ಬಳಸ್ತಾ ಇಲ್ಲ ಯಾಕಂದ್ರೆ ಕುದುರೆ ನಡಿಗೆ ಹೇಗೆ ಅನ್ನೋ ಭಯ.

ಅಂತವರಿಗೆ ನಾವಿವತ್ತು ಒಂದಷ್ಟು ಟಿಪ್ಸ್ ಕೊಡ್ತಾ ಇದ್ದೀವಿ. ಸಿಕ್ಕಾಪಟ್ಟೆ ಯೂಸ್ ಫುಸ್‌... ಹಾಗಂತ ಹೈ ಹೀಲ್ಸ್ ಬಳಕೆ ಎಲ್ಲಾ ರೀತಿಯಲ್ಲೂ ಒಳ್ಳೆದು ಅಂತ ನಾವ್ ಹೇಳ್ತಿಲ್ಲ. ಬದಲಾಗಿ ಹೀಲ್ಸ್ ಫ್ಯಾಷನ್ ಹೀಗಿದೆ ಅಂತ ಹೇಳ್ತೀದ್ದೀವಿ ಅಷ್ಟೇ.. ನೀವು ಹೈ ಹೀಲ್ಸ್ ಹಾಕಿ ಮೊದಲನೇ ಸಲನೇ ನಡಿತಾ ಇರಬಹುದು. ಅಥ್ವಾ ನೂರನೇ ಸಲವೇ ನಡಿತಾ ಇರಬಹುದು. ಆದ್ರೆ ಇಲ್ಲಿದೆ ಹೈ ಹೀಲ್ಸ್ ಬಗೆಗಿನ ಕೆಲವು ಮಾಡಬಹುದಾದ ಮತ್ತು ಮಾಡಬಾರದ ವಿಚಾರಗಳು.. ಮುಂದೆ ಓದಿ..

ಹೈ ಹೀಲ್ಸ್ ಹಾಕಿ ನಡಿಯೋದು ಹೇಗೆ?

ಹೈ ಹೀಲ್ಸ್ ಹಾಕಿ ನಡಿಯೋದು ಹೇಗೆ?

ಯಾವಾಗ್ಲೂ ಹೀಲ್ಸ್ ಹಾಕಿದಾಗ ಒಂದು ಪಾದವನ್ನು ಇನ್ನೊಂದು ಪಾದದ ನೇರಕ್ಕೆ ಇಡಬೇಕು.. ಒಂದು ವೇಳೆ ನೇರವಾಗಿ ಇಡದೆ ಓರೆಯಾಗಿ ಇಟ್ರೆ ಅದು ಉತ್ತಮ ನಡಿಗೆ ಅನ್ನಿಸೋದಿಲ್ಲ. ನಿಮ್ಮ ವಾಕ್ ನೋಡೋಕೆ ಚೆನ್ನಾಗಿರಲ್ಲ. ಚೆನ್ನಾಗಿಲ್ಲ ಅಂದ್ರೆ ನೀವು ನಡಿಗೆಯಲ್ಲಿ ಯಡವಟ್ಟು ಮಾಡ್ತಿದ್ದೀರ ಅಂತಲೇ ಅರ್ಥ. ಒಂದು ಪಾದದ ನೇರಕ್ಕೆ ಇನ್ನೊಂದು ಕಾಲಿಟ್ಟಾಗ ನಿಮ್ಮ ಹಿಪ್ಸ್ ಗೂ ಬ್ಯಾಲೆನ್ಸ್ ಸಿಗುತ್ತೆ ಮತ್ತು ಸ್ವಲ್ಪ ಸೆಕ್ಸಿ ಲುಕ್ ಅನ್ನಿಸುತ್ತೆ. ಕಾಲಿಗೂ ಬ್ಯಾನೆಲ್ಸ್ ಇರುತ್ತೆ. ಅದ್ರಲ್ಲೂ ಪಾಯಿಂಟೆಡ್ ಹೀಲ್ಸ್ ನಲ್ಲಿ ನೀವು ಹೀಗೆ ನಡೆದ್ರೆ ಅದ್ರಷ್ಟು ಚೆಂದ ಇನ್ನೊಂದಿಲ್ಲ..

ಮೊದಲ ಸಲ ಹೈ ಹೀಲ್ಸ್ ಹಾಕಿ ಪ್ರಾಕ್ಟೀಸ್ ಮಾಡೋದು ಹೇಗೆ?

ಮೊದಲ ಸಲ ಹೈ ಹೀಲ್ಸ್ ಹಾಕಿ ಪ್ರಾಕ್ಟೀಸ್ ಮಾಡೋದು ಹೇಗೆ?

ನೀವು ಹೈ ಹೀಲ್ಸ್ ಹಾಕಿ ಮೊದಲ ಸಲ ನಡಿಯಲು ಪ್ರಾಕ್ಟೀಸ್ ಮಾಡ್ತಿದ್ದಿರಾದ್ರೆ ಸ್ವಲ್ಪ ಮ್ಯೂಸಿಕ್ ಹಾಕಿಕ್ಕೊಂಡು ಅಭ್ಯಾಸ ಮಾಡಿ. ರ್ಯಾಂಪ್ ವಾಕ್ ಗಳಲ್ಲಿನ ಮ್ಯೂಸಿಕ್ ನೀವು ನೋಡಿರಬಹುದು. ಅಂತಹ ಮ್ಯೂಸಿಕ್ ಗಳು ನೀವು ಹೈ ಹೀಲ್ಸ್ ಹಾಕಿ ನಡಿಯಲು ಅಭ್ಯಾಸ ಮಾಡುವಾಗ ಸಹಾಯ ಆಗುತ್ತೆ. ಅಷ್ಟೇ ಅಲ್ಲ. ಒಂದು ಸ್ಟ್ರೈಟ್ ಲೈನ್ ಡ್ರಾ ಮಾಡ್ಕೊಳ್ಳಿ.. ಇಲ್ಲ ಕಾರ್ನರ್ ನಂತಹ ಸ್ಟ್ರೈಟ್ ಪ್ಲೇಸ್ ನಲ್ಲಿ ನೇರವಾಗಿ ಹೆಜ್ಜೆ ಇಟ್ಟು ನಡಿಯಲು ಪ್ರಾಕ್ಟೀಸ್ ಮಾಡಿ. ಆಗ ನಿಮಗೆ ಹೈ ಹೀಲ್ಸ್ ನಲ್ಲಿ ಬ್ಯಾಲೆನ್ಸ್ ಸಿಗುತ್ತೆ. ನಿಮ್ಮ ನಡಿಗೆ ಬೆಕ್ಕಿನಂತಾಗಲು ಸಹಕಾರಿಯಾಗುತ್ತೆ.

ಮೊದಲ ಸಲ ಹೈ ಹೀಲ್ಸ್ ಹಾಕಿ ಪ್ರಾಕ್ಟೀಸ್ ಮಾಡೋದು ಹೇಗೆ?

ಮೊದಲ ಸಲ ಹೈ ಹೀಲ್ಸ್ ಹಾಕಿ ಪ್ರಾಕ್ಟೀಸ್ ಮಾಡೋದು ಹೇಗೆ?

ಟೈಲ್ಸ್ ಗಳಲ್ಲಿರುವ ನೇರ ಗೆರೆಗಳ ಜಾಯಿಂಟ್ ನಲ್ಲೇ ನಡಿಬೇಕು ಅಂತ ನಡಿಗೆಯನ್ನು ಮುಂದುವರಿಸಿದ್ರೂ ಕೂಡ ಸಹಾಯವಾಗುತ್ತೆ. ಕಲಿಯೋ ತನ್ಕ ಛೀ ಛೀ ಹೈ ಹೀಲ್ಸ್ ನಡಿಯೋದು ಕಷ್ಟ.. ಬ್ಯಾನೆಲ್ಸ್ ಮಾಡೋಕೆ ಆಗಲ್ವಲ್ಲ ಅಂತ ಅನ್ನಿಸ್ಬಹುದು. ಒಂದೊಂದು ಹೆಜ್ಜೆಗೂ ನೀವು ಕಷ್ಟ ಪಡೋ ಹಾಗೆ ಆಗ್ಬಹುದು. ಅಬ್ಬಾ, ಈ ಹೀರೋಯಿನ್ಸ್ ಗಳು, ರ್ಯಾಂಪ್ ವಾಕ್ ಮಾಡೋ ಮಾಡೆಲ್ ಗಳು ಹೇಗೆ ಆ ಹೈ ಹೀಲ್ಸ್ ಹಾಕಿ ನಡಿತಾರಪ್ಪ ಅಂತ ಕೇವಲ ಆಶ್ಚರ್ಯ ಪಡೋ ನೀವು, ಈಸಿಯಾಗಿ ಅವ್ರ ತರಹನೇ ನಡಿಯೋದನ್ನು ಕಲಿತು ಬಿಡಬಹುದು. ಅದೇನು ಕಷ್ಟದ ಕೆಲಸವಲ್ಲ.

ಮೊದಲ ಸಲ ಹೈ ಹೀಲ್ಸ್ ಹೈಟ್ ಎಷ್ಟಿರಬೇಕು?

ಮೊದಲ ಸಲ ಹೈ ಹೀಲ್ಸ್ ಹೈಟ್ ಎಷ್ಟಿರಬೇಕು?

ಮೊದಮೊದಲು ಬ್ರಹ್ಮವಿದ್ಯೆ ಅನ್ನಿಸೋ ಹೈ ಹೀಲ್ಸ್ ವಾಕಿಂಗ್, ಕಲಿತ ಮೇಲೆ ಕೋತಿ ವಿದ್ಯೆ ಅನ್ನಿಸುತ್ತೆ. ಆದ್ರೆ ಕಲಿಯುವ ಹಂತದಲ್ಲಿ 2 ರಿಂದ 3 ಇಂಚಿನ ಹೀಲ್ಸ್ ಬಳಸಿ ಪ್ರಾಕ್ಟೀಸ್ ಮಾಡಿ.. ಪ್ರಾಕ್ಟೀಸ್ ಇಲ್ಲದ ನಿಮ್ಗೆ ಕಲಿಯುವ ಹಂತದಲ್ಲೇ 5 ರಿಂದ 6 ಇಂಚಿನ ಪಾಯಿಂಟೆಡ್ ಹೀಲ್ಸ್ ಬಳಸಿದ್ರೆ ಲೈಫ್ ನಲ್ಲಿ ಹೈ ಹೀಲ್ಸ್ ಸಹವಾಸ ಬೇಡ ಅಂತ ಅನ್ನಿಸಬಹುದು. ಯಾಕಂದ್ರೆ ಹುಟ್ಟಿದ ಕೂಡ್ಲೆ ಮಗು ನಡಿಯಲು ಆರಂಭಿಸಲ್ಲ ಅಲ್ವಾ.. ಒಮ್ಮೆ ನೀವು ನಡೆಯುವ ವೇಗ ಹೆಚ್ಚಾದ ಮೇಲೆ, ಆರಾಮಾಗಿ 5 ರಿಂದ 6 ಇಂಚಿನ ಹೈ ಹೀಲ್ಸ್ ಗಳನ್ನು ಬಳಸಿ ಕೂಡ ನಡಿಯುವಂತಾಗಬಹುದು

ಯಾವ ಹೀಲ್ಸ್ ಎಲ್ಲಿಗೆ ಸೂಕ್ತ?

ಯಾವ ಹೀಲ್ಸ್ ಎಲ್ಲಿಗೆ ಸೂಕ್ತ?

ಕೆಲವು ಹೈ ಹೀಲ್ಸ್ ಗಳು ಹೆವಿ ಆಗಿರುತ್ತೆ. ಅದ್ರ ಭಾರದ ಪರಿಣಾಮವಾಗಿ ನೀವು ನಡಿಯುವಾಗ ಶಬ್ದ ಕೂಡ ಆಗುತ್ತೆ. ಆ ಟಕ್ ಟಕ್ ಶಬ್ದ ಆಫೀಸ್, ಸ್ಕೂಲ್ , ಹಾಸ್ಪಿಟಲ್ ನಂತಹ ಪ್ಲೇಸ್ ನಲ್ಲಿ ಕಿರಿಕಿರಿ ಉಂಟು ಮಾಡುತ್ತೆ. ನೀವು ಯಾವಾಗ್ಲೂ ಹೈ ಹೀಲ್ಸ್ ಹಾಕುವವರಾದ್ರೆ ಇಂತಹ ಜಾಗಗಳಿಗೆ ಹೋಗುವಾಗ ಹೆವಿ ಹೀಲ್ಸ್ ಮತ್ತು ನಡೆದಾಗ ಶಬ್ದ ಮಾಡುವ ಹೀಲ್ಸ್ ಗಳನ್ನು ಬಳಸದೇ ಇರೋದು ಸೂಕ್ತ .

ಹೈ ಹೀಲ್ಸ್ ಹಾಕಿ ಮೆಟ್ಟಿಲಿನಲ್ಲಿ ನಡಿಯೋದು ಹೇಗೆ?

ಹೈ ಹೀಲ್ಸ್ ಹಾಕಿ ಮೆಟ್ಟಿಲಿನಲ್ಲಿ ನಡಿಯೋದು ಹೇಗೆ?

ನೀವು ಹೈ ಹೀಲ್ಸ್ ಹಾಕಿ ಎಲ್ಲಗೋ ಹೋದಾಗ ಅಲ್ಲಿ ಮೆಟ್ಟಿಲುಗಳಿರಬಹುದು. ಅಲ್ಲಿ 5 ರಿಂದ 6 ಇಂಚಿನ ಹೈ ಹೀಲ್ಸ್ ಹಾಕಿದಾಗ ನಡಿಯೋದು ಅಷ್ಟು ಸುಲಭವಲ್ಲ. ಅದಕ್ಕೂ ಪ್ರಾಕ್ಟೀಸ್ ಇರಲೇಬೇಕು. ಹಾಗಾಗಿ ಮೆಟ್ಟಿಲು ಇಳಿಯುವ ಮತ್ತು ಹತ್ತುವ ಅಭ್ಯಾಸ ಮಾಡಬೇಕು.. ಅದು ಹೇಗೆ? ಹೈ ಹೀಲ್ಸ್ ಹಾಕಿ ಮೆಟ್ಟಿಲು ಇಳಿಯೋದು, ಹತ್ತೋದು ಹೇಗೆ ಅನ್ನೋದಕ್ಕೂ ನಾವು ಟಿಪ್ಸ್ ಕೊಡ್ತೀವಿ ನೋಡಿ. ಎಷ್ಟೋ ಸಲ ಹೈ ಹೀಲ್ಸ್ ಹಾಕಿ ಮೆಟ್ಟಿಲು ಇಳಿಯುವಾಗ ಬ್ಯಾಲೆನ್ಸ್ ತಪ್ಪಿ ಬಿದ್ದಿರೋದಿದೆ. ಅಂತಹ ಸನ್ನಿವೇಶಕ್ಕೆ ಅವಕಾಶ ಮಾಡಿಕೊಡಬಾರದು.ಮೆಟ್ಟಿಲು ಹತ್ತುವಾಗ ನಿಮ್ಮ ನಡಿಗೆಯ ವೇಗ ಕಡಿಮೆ ಮಾಡಿ. ಒಂದೊಂದೆ ಮೆಟ್ಟಿಲುಗಳನ್ನು ನೋಡ್ತಾ ಹೆಜ್ಜೆ ಇಡಿ. ನೇರ ಹೆಜ್ಜೆಗಳೇ ಆಗಿದ್ರೂ ಅವುಗಳನ್ನು ಒಂದು ಮೆಟ್ಟಿಲಿನಿಂದ ಇನ್ನೊಂದು ಮೆಟ್ಟಿಲಿಗೆ ಇಡುವಾಗ ಕೇರ್ ಫುಲ್ ಆಗಿರಿ. ಮತ್ತು ಮೆಟ್ಟಿಲು ಇಳಿಯಲು , ಹತ್ತಲು ಸಹಕಾರಿಯಾಗಿರುವಂತೆ ಇರುವ ಕಂಬಿಗಳನ್ನು ಕೈಯಲ್ಲಿ ಹಿಡಿದು ಬ್ಯಾನೆಲ್ಸ್ ಮಾಡಿಕೊಳ್ಳಿ.

 ಹೈ ಹೀಲ್ಸ್ ಹಾಕಿ ಫುಟ್ ಪಾತ್ ನಲ್ಲಿ ನಡಿಯೋದು ಹೇಗೆ?

ಹೈ ಹೀಲ್ಸ್ ಹಾಕಿ ಫುಟ್ ಪಾತ್ ನಲ್ಲಿ ನಡಿಯೋದು ಹೇಗೆ?

ನಮ್ಮ ಬೀದಿಗಳಲ್ಲಿ ಹೊಂಡಕಂಡಿ ಮಾಮೂಲಿ. ಇನ್ನು ಕೆಲವು ಕಡೆ ಕಾಬಲ್ ಸ್ಟೋನ್ಸ್ ಹಾಕಿ ಫುಟ್ ಪಾತ್ ರೆಡಿ ಮಾಡ್ತಿರ್ತಾರೆ. ಅಲ್ಲೆಲ್ಲ ನಡೆಯುವಾಗ ಸ್ವಲ್ಪ ಹೆಜ್ಜೆಗಳು ಸ್ಮೂತ್ ಮತ್ತು ಕೇರ್ ಫುಲ್ ಆಗಿರಲಿ. ಪ್ರತಿ ಹೆಜ್ಜೆ ಇಡುವಾಗಲೂ ರಸ್ತೆಯಲ್ಲಿ ನಿಮ್ಮ ಹೀಲ್ಸ್ ನ ಪಾಯಿಂಟ್ ಅಥ್ವಾ ನಿಮ್ಮ ಸ್ಪೆಪ್ ಎಲ್ಲಿ ಪ್ಲೇಸ್ ಆಗುತ್ತೆ ಅನ್ನೋ ಸಣ್ಣ ಅರಿವು ನಿಮಗೆ ಇರಲೇಬೇಕಾಗುತ್ತೆ. ಹೀಲ್ಸ್ ನ ಥಿಕ್ ನೆಸ್ ಜಾಸ್ತಿ ಇದ್ದಾಗ ಇಂತಹ ಪ್ಲೇಸ್ ನಲ್ಲಿ ಬ್ಯಾನೆಲ್ಸ್ ಜಾಸ್ತಿ ಇರುತ್ತೆ. ಪಾಯಿಂಟೆಡ್ ನಲ್ಲಿ ಕಷ್ಟ. ಹಾಗಾಗಿ ಫುಟ್ ಪಾತ್ ಓಡಾಟಕ್ಕೆ ಥಿಕ್ಕರ್ ಹೀಲ್ಸ್ ಗಳನ್ನು ಬಳಸೋದು ಒಳಿತು.

ಹೈ ಹೀಲ್ಸ್ ನಲ್ಲಿ ಟೈಲ್ಸ್ ನಲ್ಲಿ ನಡಿಯೋದು ಹೇಗೆ?

ಹೈ ಹೀಲ್ಸ್ ನಲ್ಲಿ ಟೈಲ್ಸ್ ನಲ್ಲಿ ನಡಿಯೋದು ಹೇಗೆ?

ಈಗಂತೂ ಆಫೀಸ್ , ರೆಸ್ಟೋರೆಂಟ್ ಎಲ್ಲಾ ಕಡೆ ಸ್ಮೂತ್ ಟೈಲ್ಸ್ ಇದ್ದೇ ಇರುತ್ತೆ. ಹೈ ಹೀಲ್ಸ್ ಗಳು ಅಲ್ಲಿ ಬ್ಯಾಲೆನ್ಸ್ ಆಗೋದು ಇಂಪಾರ್ಟೆಂಟ್.. ಸ್ಮೂತ್ ಜಾಗದಲ್ಲಿ ಕಾಲು ಜಾರೋದು ಮಾಮೂಲಿ. ಆದ್ರೆ ಅಂತಹ ಜಾಗದಲ್ಲಿ ಹೈ ಹೀಲ್ಸ್ ಹಾಕಿ ನಡಿಯೋದು ಹೇಗೆ ಅನ್ನೋದು ಗೊತ್ತಿರಬೇಕು. ಇಂತಹ ಪ್ಲೇಸ್ ನಲ್ಲಿ ನಿಮ್ಮ ಸ್ಟೆಪ್ಸ್ ಸಿಕ್ಕದಾಗಿರಲಿ.. ಲಾಂಗ್ ಸ್ಟೆಪ್ ಇಟ್ರೆ ಕಾಲು ಜಾರೋ ಸಾಧ್ಯತೆಗಳು ಅಧಿಕ. ಹಾಗಾಗಿ ಬಿ ಕೇರ್ ಫುಲ್..

ಹುಲ್ಲಿನ ಮೇಲೆ ಹೈ ಹೀಲ್ಸ್ ಬ್ಯಾಲೆನ್ಸ್ ಹೇಗೆ?

ಹುಲ್ಲಿನ ಮೇಲೆ ಹೈ ಹೀಲ್ಸ್ ಬ್ಯಾಲೆನ್ಸ್ ಹೇಗೆ?

ಎಷ್ಟೋ ಸಲ ಹೈ ಹೀಲ್ಸ್ ಹಾಕಿ ಹುಲ್ಲಿನ ಮೇಲೆ ನಡಿಯುವ ಪರಿಸ್ಥಿತಿ ಬರಬಹುದು. ಅಲ್ಲಿ ನಡಿಯೋದಕ್ಕೂ ಒಂದಷ್ಟು ಟಿಪ್ಸ್ ಇದೆ. ಹುಲ್ಲಿನ ಜಾಗದಲ್ಲಿ ಪಾಯಿಟೆಂಡ್ ಹೀಲ್ಸ್ ಮಣ್ಣಿನಲ್ಲಿ ಬ್ಯಾನೆಲ್ಸ್ ತಪ್ಪಿದ್ರೆ ಹುದುಗಿ ಬಿಡಬಹುದು. ಅದಕ್ಕಾಗಿ ನೀವು ಇಂತಹ ಜಾಗದಲ್ಲಿ ಅಗಲವಾಗಿ, ಎತ್ತರವಾಗಿರುವ ಚಪ್ಪಲಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಮಣ್ಣು ಹೇಗೆ ಇದ್ರೂ, ಹುಲ್ಲಿನ ಜಾಗ ಹೇಗೆ ಅದ್ರೂ ಆರಾಮದಾಯಕ ನಡಿಗೆ ನಿಮ್ಮದಾಗುತ್ತೆ.

 ಹೈ ಹೀಲ್ಸ್ ಕೊಂಡುಕೊಳ್ಳುವ ಮುನ್ನ

ಹೈ ಹೀಲ್ಸ್ ಕೊಂಡುಕೊಳ್ಳುವ ಮುನ್ನ

ಹೈ ಹೀಲ್ಸ್ ಗಳನ್ನು ಶಾಪ್ ಮಾಡುವಾಗ ಒಂದಷ್ಟು ಅಂಶಗಳನ್ನು ನೀವು ಗಮನಿಸಲೇಬೇಕು. ಅಂಗಡಿಗೆ ಹೋಗಿ ಶಾಪ್ ಮಾಡ್ತಾ ಇದ್ರೆ ನೀವು ಆಯ್ಕೆ ಮಾಡ್ಕೊಂಡ ಚಪ್ಪಲಿಯನ್ನು ಹಾಕಿ ಎಷ್ಟು ಸಲ ಸಾಧ್ಯವೋ ಅಷ್ಟು ಸಲ ನಡೆದು ಪ್ರಾಕ್ಟೀಸ್ ಮಾಡಿ ನೋಡಿ,. ನಿಮಗೆ ಸೈಜ್, ಹೀಲ್ಸ್ ಕಂಫರ್ಟ್ ಆಗಿದ್ಯಾ, ಡಿಸೈನ್ ಇಷ್ಟ ಆಯ್ತಾ.. ನಿಮ್ಮ ಕಾಲಿನ ಸೈಜ್ ಗೆ ಅದು ಸ್ಯೂಟ್ ಆಗ್ತಿದ್ಯಾ ಈ ಎಲ್ಲಾ ಅಂಶಗಳನ್ನು ಗಮನಿಸಿ. ಮತ್ತು ನೀವು ಆಯ್ಕೆ ಮಾಡಿದ ಚಪ್ಪಲಿಯನ್ನು ಯಾವ ಜಾಗದಲ್ಲಿ ಹಾಕಲು ಬಳಸ್ತೀರಾ ಅನ್ನೋದನ್ನೂ ಡಿಸೈಡ್ ಮಾಡ್ಕೊಂಡ್ರೆ ಒಳಿತು..

 ಹೈ ಹೀಲ್ಸ್ ಕೊಂಡುಕೊಳ್ಳುವ ಮುನ್ನ

ಹೈ ಹೀಲ್ಸ್ ಕೊಂಡುಕೊಳ್ಳುವ ಮುನ್ನ

ನಿಮ್ಮ ಆಯ್ಕೆ ನಿಮ್ಮ ಮನ್ ಪಸಂದ್ ಗೆ ಬಿಟ್ಟಿದ್ದಾದ್ರೂ, ಸ್ವಲ್ಪ ಕೇರ್ ಫುಲ್ ಆಗಿರೋದು ತುಂಬಾ ಮುಖ್ಯ. ನೀವು ಆಯ್ಕೆ ಮಾಡುವ ಹೀಲ್ಸ್ ನಿಮ್ಮ ನಡಿಗೆಯನ್ನು ಚೆಂದಗಾಣಿಸಬೇಕು. ನಿಮ್ಮನ್ನೂ ಚೆಂದಗಾಣಿಸಬೇಕು. ಅಷ್ಟೇ ಅಲ್ಲ, ಯಾವುದೇ ಪ್ಲೇಸ್ ಗೂ ಸ್ಯೂಟ್ ಆಗುವಂತಿದ್ದರೆ ಅದ್ರಷ್ಟು ಬೆಸ್ಟ್ ಯಾವುದೂ ಇಲ್ಲ. ಇನ್ನು ಹೈ ಹೀಲ್ಸ್ ಡಿಸೈನ್ ನಲ್ಲೂ ವೆರೈಟಿಗಳಿವೆ. ಪ್ಯಾಟರ್ನ್ ಗಳಿವೆ. ಸ್ಟೋನ್ ಗಳಿರುವ ಹೈ ಹೀಲ್ಸ್ ಗಳು ತೀರಾ ಅಕೇಷನ್ಸ್ ಗಳಿಗೆ ಮಾತ್ರ ಸ್ಯೂಟ್ ಆಗುತ್ತೆ. ಲೇಸರ್ ಕಟ್ ಔಟ್, ಲೇಸ್ ಅಪ್ ಹೀಲ್ಸ್, ಸಿಂಗಲ್ ಸೋಲ್, ಸ್ನೀಕರ್ಸ್, ಗ್ಲಾಡಿಯೇಟರ್ ಹೀಗೆ ಬೇರೆಬೇರೆ ವೆರೈಟಿಯ ಹೈ ಹೀಲ್ಸ್ ಗಳಿವೆ. ಅವುಗಳೆಲ್ಲವೂ ನಿಮ್ಗೆ ಕಂಫರ್ಟ್ ಆಗಿರಬೇಕೆಂದೇನೂ ಇಲ್ಲ. ನಿಮ್ಮ ನಡಿಗೆಯಲ್ಲಿ ಮಾಡಿಫೈ ಮಾಡಿಕೊಂಡಾಗ ಮಾತ್ರ ಇವು ಸೂಪರ್ ಅನ್ನಿಸೋದಕ್ಕೆ ಸಾಧ್ಯ.

 ಹೈ ಹೀಲ್ಸ್ ಕೊಂಡುಕೊಳ್ಳುವ ಮುನ್ನ

ಹೈ ಹೀಲ್ಸ್ ಕೊಂಡುಕೊಳ್ಳುವ ಮುನ್ನ

ಸೋ ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಫರ್ಫೆಕ್ಟ್ ಅನ್ನೋ ಹಾಗೆ ಸ್ವಲ್ಪ ಪ್ರಾಕ್ಟೀಸ್ ನ ಅವಶ್ಯಕತೆ ಹೈ ಹೀಲ್ಸ್ ನಡಿಗೆಗೂ ಬೇಕಾಗುತ್ತೆ.ಅಷ್ಟೇ ಅಲ್ಲ. ನಾಳೆ ಯವುದೋ ಜಾಗಕ್ಕೆ ಫಸ್ಟ್ ಟೈಂ ಹೈ ಹೀಲ್ಸ್ ಹಾಕ್ಕೊಂಡು ಹೋಗ್ತೀರಾ ಅಂದ್ರೆ, ಹಿಂದಿನ ದಿನವೇ ಸ್ವಲ್ಪ ಪ್ರಾಕ್ಟೀಸ್ ಮಾಡಿ. ನೀವು ಹೋಗುವ ಜಾಗ ಎಂತದ್ದು ಅಂತ ನಿಮ್ಗೆ ತಿಳಿದಿದ್ರೆ ಒಳಿತು. ಹೊರಡುವಾಗ ಒಂದು ಜೊತೆ ಪ್ಲಾಟ್ ಚಪ್ಪಲಿಯನ್ನು ಬ್ಯಾಗ್ ನಲ್ಲಿ ಇಟ್ಕೊಂಡಿರಿ. ಯಾಕಂದ್ರೆ ಹೈ ಹೀಲ್ಸ್ ನಲ್ಲಿ ತುಂಬಾ ಹೊತ್ತು ನಡೆದು ಸುಸ್ತಾಯ್ತು ಅಂದ್ರೆ ಅಟ್ ಲೀಸ್ಟ್ ಬ್ಯಾಗ್ ನಲ್ಲಿನ ಚಪ್ಪಲಿ ನಿಮ್ಗೆ ಸಹಾಯವಾಗುತ್ತೆ. ಎನಿ ವೇ ಲೇಡಿಸ್ ಹ್ಯಾವ್ ಎ ನೈಸ್ ವಾಕ್..

Story first published: Tuesday, January 12, 2016, 18:44 [IST]
X
Desktop Bottom Promotion