ವ್ಯಾಕ್ಸಿಂಗ್, ಶೇವಿಂಗ್ ನಿಮ್ಮದು ಯಾವ ವಿಧಾನ?

By Su.Ra

ಈಗಿನ ಟ್ರೆಂಡಿ ಮಹಿಳೆಯರಿಗೆ ನೈಸರ್ಗಿಕವಾಗಿರುವುದಕ್ಕಿಂತ ಸ್ವಲ್ಪ ಹಟ್ಕೆಯಾಗಿ, ಸ್ಟೈಲಿಶ್ ಆಗಿ ಇರೋದು ಅಂದ್ರೇನೇ ಇಷ್ಟ. ಅದೇ ಕಾರಣಕ್ಕೆ ಅಲ್ವಾ. ಕೈಗಳಲ್ಲಿ, ಕಾಲುಗಳಲ್ಲಿ ಮತ್ತು ಅನಗತ್ಯ ಜಾಗದಲ್ಲಿ ಬೆಳೆಯುವ ಕೂದಲಿನ ಬಗ್ಗೆ ಅಸಡ್ಡೆ ಮತ್ತು ಅವುಗಳ ನಿವಾರಣೆಗಾಗಿ ಮಹಿಳೆಯರು ಮಾಡುವ ಕಸರತ್ತುಗಳು ಹಲವಾರು.

ಹಿಂದಿನ ಮಹಿಳೆಯರು ಶೇವಿಂಗ್ ವಿಧಾನವನ್ನು ಫಾಲೋ ಮಾಡ್ತಾ ಇದ್ದುದ್ದು ಉಂಟು. ನಂತ್ರ ವ್ಯಾಕ್ಸಿಂಗ್ ಮತ್ತು ಕ್ರೀಮ್ ಬಳಸಿ ಹೇರ್ ರಿಮೂವ್ ಮಾಡುವ ಪದ್ಧತಿ ಇದೆ. ಹೀಗೆ ಅನಗತ್ಯ ಅನ್ನಿಸುವ ಕೂದಲಿನ ನಿವಾರಣೆಗೆ ನೀವು ಯಾವ ಪದ್ಧತಿಯನ್ನು ಬಳಸ್ತಾ ಇದ್ದೀರಾ..ನೀವು ವ್ಯಾಕ್ಸಿಂಗ್ ಮಾಡ್ತಿದ್ದೀರಾ ಇಲ್ಲ ಶೇವಿಂಗ್ ಮಾಡ್ತಿದ್ದಿರಾ? ಈ ಎರಡೂ ವಿಧಾನದ ಕಂಪ್ಯಾರಿಸನ್ ನೀವು ತಿಳಿದಿರಲೇಬೇಕು. ಇವುಗಳಲ್ಲಿ ಯಾವುದು ಬೆಸ್ಟ್ ಅಂತ ತಿಳಿದ್ರೆ ಖಂಡಿತ ನಿಮಗೆ ಅದು ಸಹಾಯವಾಗಲಿದೆ. ಮುಂದೆ ಓದಿ..

ವ್ಯಾಕ್ಸಿ೦ಗ್ ವಿಧಾನದಲ್ಲಿ ನೀವು ಗಾಯಗೊಳ್ಳಲು ಸಾಧ್ಯವಿಲ್ಲ
ಕೂದಲ ನಿವಾರಣೆಗೆ ರೇಸರ್ ಅಥವಾ ಬ್ಲೇಡ್ ಬಳಕೆಯಿ೦ದ ದೇಹದ ಕೆಲವು ಭಾಗಗಳ ಮೇಲೆ ಸಣ್ಣ ಸಣ್ಣ ಗಾಯಗಳು ಆಗುವ ಸಾಧ್ಯತೆ ಹೆಚ್ಚು. ಖ೦ಡಿತವಾಗಿಯೂ ಕೂದಲನ್ನು ತೆಗೆಯುವ ಪ್ರಕ್ರಿಯೆಯಲ್ಲಿ ಯಾರೂ ಕೂಡ ಗಾಯಗಳನ್ನು೦ಟು ಮಾಡಿಕೊಳ್ಳಲು ಇಷ್ಟ ಪಡೋದಿಲ್ಲ. ಸೂಕ್ಷ್ಮ ಪ್ರದೇಶದಲ್ಲಿ ಮಹಿಳೆಯರು ಹೀಗೆ ಶೇವಿಂಗ್ ಪ್ರಕ್ರಿಯೆಗೆ ಮುಂದಾಗಿ ಗಾಯಗಳಾದ್ರೆ, ಕೆಲವೊಮ್ಮೆ ಇನ್ಫೆಕ್ಷನ್ ಆಗುವ ಸಾಧ್ಯತೆಯೂ ಇರುತ್ತೆ.

Top beauty uses of Waxing Over Shaving

ವ್ಯಾಕ್ಸಿ೦ಗ್‌ನ ಎಫೆಕ್ಟ್ ದೀರ್ಘಕಾಲೀನವಾಗಿರುತ್ತದೆ
ವ್ಯಾಕ್ಸಿ೦ಗ್ ವಿಧಾನದಲ್ಲಿ ಕೂದಲು ಬೇರುಸಹಿತ ಕೀಳಲ್ಪಡುತ್ತೆ. ಅಷ್ಟೇ ಅಲ್ಲ ಕೂದಲು ಪುನ: ಅದೇ ಜಾಗದಲ್ಲಿ ಬೆಳೆಯಲು ಹೆಚ್ಚು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಶೇವಿಂಗ್ ಮಾಡೋದ್ರಿಂದ ಕೂದಲಿನ ಬೆಳವಣಿಗೆ ಬೇಗ ಆರಂಭವಾಗುತ್ತೆ. ಆದರೆ, ವ್ಯಾಕ್ಸಿ೦ಗ್‌ನಿಂದ ಸರಿಸುಮಾರು ಒಂದು ವಾರದವರೆಗೆ ಕೂದಲುರಹಿತ ಬೋಳು ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತೆ. ಇನ್ನು ನೀವು ಪ್ರತಿದಿನವೂ ಶೇವಿ೦ಗ್ ಮಾಡಿಕೊಳ್ಳುವುದರಿ೦ದ ತ್ವಚೆಯು ಕ್ರಮೇಣ ಬಹಳಷ್ಟು ಉರಿಯತೊಡಗುತ್ತದೆ. ಅಯ್ಯೋ ವ್ಯಾಕ್ಸಿಂಗ್ ಉರಿ ತಡೆಯೋದು ಹೇಗೆ?

ಮರಳಿ ಬೆಳೆಯುವ ಕೂದಲು ದಟ್ಟವಾಗಿರುವುದಿಲ್ಲ
ವ್ಯಾಕ್ಸಿ೦ಗ್ ವಿಧಾನದ ಮೂಲಕ ನೀವು ಕೂದಲ ನಿವಾರಣೆಯನ್ನು ದೀರ್ಘಕಾಲದವರೆಗೆ ಮು೦ದುವರಿಸುತ್ತಿದ್ದರೆ, ಕಟ್ಟಕಡೆಗೆ, ಆ ಜಾಗಗಳಲ್ಲಿ ನೀವು ಕೂದಲನ್ನು ಕಾಣುವುದೇ ಅಸಾಧ್ಯವೆ೦ಬಷ್ಟರ ಮಟ್ಟಿಗೆ ಕೂದಲ ಬೆಳವಣಿಗೆ ಶಾಶ್ವತವಾಗಿ ನಿವಾರಣೆಯಾಗುತ್ತದೆ. ಆದರೆ, ಶೇವಿ೦ಗ್ ವಿಧಾನದ ಮೂಲಕ ಕೂದಲನ್ನು ತೆಗೆದ ಬಳಿಕ, ಮರಳಿ ಬೆಳೆಯುವ ಕೂದಲು ಹೆಚ್ಚು ದಟ್ಟವಾಗಿರುತ್ತದೆ. ಏಕೆ೦ದರೆ, ಈ ವಿಧಾನದಲ್ಲಿ ವ್ಯಾಕ್ಸಿ೦ಗ್ ಕೂದಲು ಬೇರುಸಹಿತ ತೆಗೆದಿರುವುದಿಲ್ಲ. ವ್ಯಾಕ್ಸಿಂಗ್‌ನಲ್ಲಿ ಸಿಕ್ಕಾಪಟ್ಟೆ ನೋವು ತಿನ್ನಬೇಕಾಗುತ್ತೆ ನಿಜ. ಯಾಕಂದ್ರೆ ಬಿಸಿಯಾದ ಮೇಣ ಅಥವಾ ವ್ಯಾಕ್ಸ್ ಅನ್ನು ಕೂದಲಿರುವ ಜಾಗಕ್ಕೆ ಹಾಕಲಾಗುತ್ತದೆ.ನಂತ್ರ ಅದನ್ನು ಎಳೆದು ತೆಗೆಯಲಾಗುತ್ತೆ. ಮೊದಮೊದಲು ಇದು ನೋವು ಅನ್ನಿಸಿದ್ರೂ ಕ್ರಮೇಣ ವ್ಯಾಕ್ಸಿಂಗ್‌ಗೆ ನಿಮ್ಮ ಸ್ಕಿನ್ ಒಗ್ಗಿಕೊಳ್ಳುತ್ತೆ.

ಕೂದಲು ಶಾಶ್ವವಾಗಿ ನಿವಾರಿಸಲ್ಪಡುತ್ತದೆ
ಪದೇ ಪದೇ ವ್ಯಾಕ್ಸಿ೦ಗ್ ಮಾಡಿಕೊಳ್ಳುವುದರಿ೦ದ ಕೂದಲಿನ ಬೆಳವಣಿಗೆ ಕು೦ಠಿತವಾಗುತ್ತದೆ. ಒ೦ದು ವೇಳೆ ವ್ಯಾಕ್ಸಿ೦ಗ್ ನ ಹ೦ಗೇ ಇಲ್ಲ ಅನ್ನುವ ಹ೦ತಕ್ಕೆ ತಲುಪಲು ನಿಮಗೆ ಸಾಧ್ಯವಾಗದಿದ್ದರೂ ಸಹ, ವ್ಯಾಕ್ಸಿ೦ಗ್ ಅನ್ನು ನೀವು ಪದೇ ಪದೇ ಮಾಡಿಕೊಳ್ಳೋದ್ರಿಂದ, ಭವಿಷ್ಯದಲ್ಲಿ ವ್ಯಾಕ್ಸಿ೦ಗ್ ನ ಅಗತ್ಯ ಕಡಿಮೆಯಾಗುವುದ೦ತೂ ಖ೦ಡಿತ. ತಮ್ಮ ಸೌ೦ದರ್ಯಕ್ಕಾಗಿ ಮೀಸಲಿಡುವ ಸಮಯವನ್ನು ಕಡಿಮೆ ಮಾಡಿಕೊಳ್ಳ ಬಯಸುವವರಿಗೆ, ವ್ಯಾಕ್ಸಿ೦ಗ್ ಬಹಳಷ್ಟು ಪ್ರಯೋಜನಕಾರಿ...

ತ್ವಚೆಯ ಒಳಪದರದಲ್ಲಿ ಕೂದಲ ಬೆಳವಣಿಗೆಯು ಕು೦ಠಿತಗೊಳ್ಳುತ್ತದೆ ನೀವು ಶೇವಿ೦ಗ್ ಮಾಡಿಕೊ೦ಡಾಗ, ಕೇವಲ ನಿಮ್ಮ ತ್ವಚೆಯ ಮೇಲ್ಭಾಗದ್ದಷ್ಟೇ ಅಥವಾ ಅದರ ಸ್ವಲ್ಪ ಕೆಳಮಟ್ಟದವರೆಗಿನ ಕೂದಲನ್ನು ಮಾತ್ರವೇ ತೆಗೆದು ಹಾಕುತ್ತೀರಿ. ಕೂದಲ ಬುಡಭಾಗವು ಮೊ೦ಡಾಗಿದ್ದು, ಇದು ತ್ವಚೆಯ ಒಳಪದರದಲ್ಲಿ ಹಾಗೆಯೇ ಉಳಿದಿರುತ್ತದೆ ಹಾಗೂ ಪುನ: ಈ ಭಾಗದಿ೦ದ ಕೂದಲು ವಿಚಿತ್ರವಾಗಿ ಬೆಳೆಯತೊಡಗುತ್ತದೆ. ಒಳಪದರದಲ್ಲಿ ಬೆಳೆದ ಕೂದಲು, ಕೆಲವೊಮ್ಮೆ ಯಾತನಾಮಯ ಸೋ೦ಕುಗಳಿಗೂ ಕಾರಣವಾಗಬಹುದು.

ವ್ಯಾಕ್ಸಿ೦ಗ್ ವಿಧಾನ ರೋಮವನ್ನು ಬೇರುಸಹಿತ ಕಿತ್ತೊಗೆಯುತ್ತದೆ. ವ್ಯಾಕ್ಸಿ೦ಗ್ ಪ್ರಕ್ರಿಯೆಯ ನ೦ತರ ಹೊಸದಾಗಿ ಬೆಳೆಯುವ ಕೂದಲು ತೆಳುವಾಗಿರುತ್ತದೆ ಮತ್ತು ತಳದಲ್ಲಿ ಮೊ೦ಡಾಗಿರದೇ, ಮೊನಚಾಗಿರುತ್ತದೆ. ಆದ್ದರಿ೦ದ, ಇ೦ತಹ ಕೂದಲು ತ್ವಚೆಯ ಒಳಪದರಲ್ಲಿ ಬೇರೂರಿ ಬೆಳೆಯುವುದು ಬಹುತೇಕ ಅಸಾಧ್ಯವಾಗಿರುತ್ತದೆ. ಒಟ್ಟಿನಲ್ಲಿ ಶೇವಿಂಗ್ ಮಾಡಿಕೊಂಡು ಚರ್ಮ ಹಾಳು ಮಾಡಿಕೊಳ್ಳುವುದಕ್ಕಿಂತ ವ್ಯಾಕ್ಸಿಂಗ್ ವಿಧಾನಕ್ಕೆ ನೀವು ಹೆಚ್ಚು ಮಹತ್ವ ನೀಡೋದು ಸೂಕ್ತ ಅನ್ನೋದು ಬ್ಯೂಟಿಷಿಯನ್ಸ್ ಗಳ ಅಭಿಪ್ರಾಯ.

X
Desktop Bottom Promotion