Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆ ಆರೈಕೆ: ಬರೀ ಎರಡೇ ಎರಡು ಚಮಚ ಎಣ್ಣೆ ಸಾಕು!
ಸೌಂದರ್ಯದಲ್ಲಿ ದೋಷವಿದ್ದರೆ ಸ್ತ್ರೀಗೆ ಅದು ಕಪ್ಪು ಚುಕ್ಕೆಯಿದ್ದಂತೆ. ಮುಖದ ತುಂಬೆಲ್ಲಾ ಮೊಡವೆ, ಕಪ್ಪು ಕಲೆಗಳು ಹೀಗೆ ತ್ವಚೆಯ ಸಮಸ್ಯೆಗಳು ಸಾಕಷ್ಟಿದ್ದಲ್ಲಿ ಆಕೆಗೂ ಮುಜುಗರ ಮತ್ತು ಆಕೆಯ ಬಗ್ಗೆ ಕನಿಕರವಾಗಿ ಮಾತನಾಡುವವರು ಚುಚ್ಚಿ ನುಡಿಯುವುದೇ ಹೆಚ್ಚು.
ಹಾಗೆಂದು ತ್ವಚೆಯ ಕಾಳಜಿಗಾಗಿ ಸಾಕಷ್ಟು ದುಡ್ಡು ಖರ್ಚು ಮಾಡುವುದು ಇದಕ್ಕೆ ಪರಿಹಾರವಲ್ಲ. ನಿತ್ಯೋಪಯೋಗಿ ವಸ್ತುಗಳಿಂದಲೇ ನೈಸರ್ಗಿಕವಾಗಿ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಕೊಂಡು ಕಾಂತಿಯುಕ್ತ ತ್ವಚೆಯನ್ನು ಪಡೆದುಕೊಳ್ಳಬಹುದು.

ಕೆಲವೊಮ್ಮೆ ತ್ವಚೆಯ ಸಮಸ್ಯೆಗಳಿಗೆ ಅನಾರೋಗ್ಯಕರ ಜೀವನ ಶೈಲಿ, ಆಹಾರದಲ್ಲಿ ಪೋಷಕಾಂಶಗಳ ಕೊರತೆ, ತ್ವಚೆಯ ಆರೋಗ್ಯದಲ್ಲಿ ಉಂಟಾಗುವ ಲೋಪದೋಷ, ಪರಿಸರ ಮಾಲಿನ್ಯಕ್ಕೆ ಚರ್ಮ ಒಡ್ಡಿಕೊಂಡಿರುವುದು, ಹೀಗೆ ತ್ವಚೆಗೆ ಮಾರಕವಾಗಿರುವ ಅಂಶಗಳು ಸಾಕಷ್ಟಿವೆ. ಕಡಲೆ ಹಿಟ್ಟು ಬಳಸಿ, ತ್ವಚೆಯ ಕಾಂತಿ ವೃದ್ಧಿಸಿ
ಅದಕ್ಕೆಂದೇ ಇಂದಿನ ಲೇಖನದಲ್ಲಿ ಒಣ ತ್ವಚೆ ಸಮಸ್ಯೆಯಿಂದ ಹಿಡಿದು ಸರ್ವ ವಿಧ ತ್ವಚೆ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುವ ಪರಿಹಾರಗಳನ್ನು ನೀಡುತ್ತಿದ್ದು ಇದನ್ನು ನಿಮಗೆ ನೀವೇ ಮನೆಯಲ್ಲೇ ತಯಾರಿಸಿ ಕೊಳ್ಳಬಹುದು.
ಸ್ಕಿನ್ ಪ್ಯಾಕ್ ಸಿದ್ಧತೆಗೆ ಬೇಕಾಗುವ ಸಾಮಾಗ್ರಿಗಳು
*ತೆಂಗಿನ ಹಾಲು - 3 ಚಮಚಗಳು
*ಬಾದಾಮಿ ಎಣ್ಣೆ - 2 ಚಮಚಗಳು
ತೆಂಗಿನ ಹಾಲು ತ್ವಚೆಯನ್ನು ಹೈಡ್ರೇಟಿಂಗ್ ಮಾಡುವ ಅಂಶವನ್ನು ಒಳಗೊಂಡಿದ್ದು ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ ಹಾಗೂ ತ್ವಚೆಯನ್ನು ಮೃದು ಮತ್ತು ಕೋಮಲಗೊಳಿಸುತ್ತದೆ.
ಬಾದಾಮಿ ಎಣ್ಣೆಯು, ವಿಟಮಿನ್ ಇ ಅಂಶವನ್ನು ಒಳಗೊಂಡಿದ್ದು ನಿಮ್ಮ ತ್ವಚೆಗೆ ಕಾಂತಿಯನ್ನು ನೀಡುವುದರ ಜೊತೆಗೆ, ಆರೋಗ್ಯವನ್ನೂ ವೃದ್ಧಿಸುತ್ತದೆ. ಬಾದಾಮಿ ಎಣ್ಣೆಯಲ್ಲಿ ಅಡಗಿದೆ ಸರ್ವರೋಗ ನಿವಾರಕ ಶಕ್ತಿ!
ಸಿದ್ಧಪಡಿಸುವ ವಿಧಾನ ಮತ್ತು ಸ್ಕಿನ್ ಪ್ಯಾಕ್ ಬಳಕೆ
*ಪಾತ್ರೆಯಲ್ಲಿ ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಸೇರಿಸಿಕೊಂಡು ಚೆನ್ನಾಗಿ ಕಲಸಿಕೊಂಡು, ನಯವಾಗಿ ದೇಹದ ಎಲ್ಲಾ ಭಾಗಗಳಿಗೆ ಉಜ್ಜಿಕೊಳ್ಳಿ
*ಇನ್ನು ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ
*ಸುಮಾರು 20 ನಿಮಿಷದ ನಂತರ ತ್ವಚೆಯನ್ನು ತಣ್ಣೀರಿನಲ್ಲಿ ತೊಳೆದುಕೊಂಡು, ಮೈಲ್ಡ್ ಬಾಡಿ ವಾಶ್ ಬಳಸಿ.



Click it and Unblock the Notifications


