Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಸರಿಯಾಗಿ ಕೈ ತೊಳೆದುಕೊಳ್ಳಲು- ಸ್ಟೆಪ್ ಬೈ ಸ್ಟೆಪ್ ಟಿಪ್ಸ್
ಊಟಕ್ಕೂ ಮೊದಲು ಮತ್ತು ಊಟದ ನಂತರ ಕೈ ತೊಳೆದುಕೊಳ್ಳಲೇಬೇಕು ಎಂದು ನಮ್ಮ ಹಿರಿಯರು ಕಲಿಸಿದ್ದನ್ನು ಈಗಲೂ ನಿಮ್ಮ ಅಭ್ಯಾಸದಲ್ಲಿದೆಯೇ? ಈ ಪ್ರಶ್ನೆ ಏಕೆ ಕೇಳಬೇಕಾಯಿತು ಎಂದರೆ ಇತ್ತೀಚಿನ ದಿನಗಳಲ್ಲಿ ಸಿದ್ಧ ಆಹಾರಗಳು ಪ್ರತಿಷ್ಠೆಯ ವಿಷಯವಾಗಿ ದುಬಾರಿ ಬೆಲೆಯಲ್ಲಿ ಸಿಗುತ್ತಿದ್ದಂತೆಯೇ ಕೈ ತೊಳೆಯುವ ವಿಷಯವೂ ಪ್ರತಿಷ್ಠೆಗೆ ಕುಂದು ಎಂದೇ ಪರಿಗಣಿಸಲಾಗುತ್ತಿದೆ.

ಹೆಚ್ಚಿನ ಆಹಾರಗಳ ಜೊತೆಗೆ ಸ್ವಚ್ಛಗೊಳಿಸುವ ಟಿಶ್ಯೂ ಕಾಗದ ಜೊತೆಯಲ್ಲಿಯೇ ಬರುವುದರಿಂದ ಹೆಚ್ಚಿನವರು ಇದರಲ್ಲಿ ಕೈ ಒರೆಸಿಕೊಂಡು ಊಟ ಪ್ರಾರಂಭಿಸುತ್ತಾರೆ. ಆದರೆ ನೀರಿನಿಂದ ಮತ್ತು ಸೋಪು ಹಚ್ಚಿ ತೊಳೆದುಕೊಂಡ ಹೊರತು ಕೈಗಳ ಮೇಲಿರುವ ಸೂಕ್ಷ್ಮಜೀವಿಗಳು ಕಾಗದದಿಂದ ಒರೆಸಿಕೊಂಡ ಮಾತ್ರಕ್ಕೆ ಹೋಗುವುದು ಸಾಧ್ಯವೇ ಇಲ್ಲ.
ಆದ್ದರಿಂದ ಪ್ರತಿಷ್ಠೆ ಎಷ್ಟೇ ಇರಲಿ, ಸ್ವಚ್ಛತೆಯ ವಿಷಯ ಬಂದಾಗ ನೀರು ಮತ್ತು ಸೋಪಿನಿಂದ ಕೈ ತೊಳೆದುಕೊಳ್ಳದೇ ಆಹಾರವನ್ನು ಮುಟ್ಟುವುದೂ ಸಲ್ಲದು. ಸಿದ್ಧ ಆಹಾರ ಮಳಿಗೆಗಳಲ್ಲಿ ಕೈ ತೊಳೆದುಕೊಳ್ಳಲು ಕೊಂಚ ದೂರದಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ಇದೂ ದೊಡ್ಡಸ್ತಿಕೆಯ ಪ್ರದರ್ಶನವೇ! ಹಸ್ತಗಳ ನಲ್ಮೆಯ ಆರೈಕೆಗೆ ಈ ಮನೆಮದ್ದೇ ಸಾಕು
ಆದರೆ ನಿಮಗೆ ಆರೋಗ್ಯದ ಬಗ್ಗೆ ಕಾಳಜಿ ಇರುವುದೇ ಆದಲ್ಲಿ ಎಷ್ಟೇ ದೂರವಿದ್ದರೂ ಸರಿ, ಹೋಗಿ ಕೈ ತೊಳೆದುಕೊಂಡು ಬರುವುದೇ ಆರೋಗ್ಯವಂತ ಮತ್ತು ಜಾಣತನದ ಲಕ್ಷಣ. ಇದರಿಂದ ಹಲವಾರು ರೋಗಗಳನ್ನು ಬರದಂತೆ ತಡೆಯಬಹುದು. ವಿಶೇಷವಾಗಿ ಕಾಲರಾ, ಟೈಫಾಯ್ಡ್, ಗ್ಯಾಸ್ಟ್ರೋಎಂಟ್ರೈಟಿಸ್, ಶೀತ, ಕೆಮ್ಮು, ಚರ್ಮದ ಸೋಂಕು ಮೊದಲಾದ ರೋಗಗಳು ಚರ್ಮದ ಸೂಕ್ಷ್ಮಜೀವಿಗಳಿಂದಲೇ ಹರಡುತ್ತವೆ.
ಇಷ್ಟು ಹೇಳಿಯೂ ಕೈ ತೊಳೆಯಲು ಬಾರದವರನ್ನು ಬಿಟ್ಟು ಉಳಿದ ಜಾಣರಿಗೆ ಕೇಳುವ ಪ್ರಶ್ನೆ ಎಂದರೆ ಕೇವಲ ಸೋಪಿನಿಂದ ಕೊಂಚ ನೊರೆ ಬರುವಂತೆ ಎರಡೂ ಹಸ್ತಗಳನ್ನು ತಿಕ್ಕಿ ನೀರಿನಿಂದ ತೊಳೆದುಕೊಂಡರೆ ಸಾಕೇ? ಈ ಬಗ್ಗೆ ಥಟ್ಟನೇ ಉತ್ತರ ನೀಡಲು ಜಾಣರಿಗೆ ಸಾಧ್ಯವಾಗದಿದ್ದರೂ ತಜ್ಞರಿಗೆ ಸಾಧ್ಯ.
ವಿಶ್ವ ಆರೋಗ್ಯ ಸಂಸ್ಥೆ (WHO)ಯ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಎರಡೂ ಕೈಗಳನ್ನು ಸುಮಾರು ನಲವತ್ತರಿಂದ ಅರವತ್ತು ಸೆಕೆಂಡುಗಳ ಕಾಲ ಸೋಪಿನಿಂದ ತೊಳೆದುಕೊಂಡಾಗ ಮಾತ್ರ ಪೂರ್ಣಪ್ರಮಾಣದ ಸ್ವಚ್ಛತೆ ಲಭಿಸುತ್ತದೆ. ಅದೂ ಸರಿಯಾದ ಕ್ರಮದಲ್ಲಿ ತೊಳೆದುಕೊಂಡಾಗ ಮಾತ್ರ. ಸರಿಯಾದ ಕ್ರಮ ಎಂದರೆ? ತಲೆ ತುರಿಸಿಕೊಳ್ಳುವಂತಾಯಿತೇ? ಈ ತಜ್ಞರು ಸರಿಯಾದ ಕ್ರಮವನ್ನು ಹೇಗೆ ಅನುಸರಿಸಬೇಕು ಎಂದು ಹೇಳಿದ್ದಾರೆ ಎಂಬುದನ್ನು ಮುಂದೆ ಓದಿ....

ಹಂತ 1
ಮೊದಲಿಗೆ ಎರಡೂ ಕೈಗಳನ್ನು ಸುಮಾರು ಅರ್ಧ ಮೊಣಕೈಗಳವರೆಗೂ ನೆನೆಯುವಂತೆ ತೋಯಿಸಿಕೊಳ್ಳಬೇಕು. ಕೊಂಚ ಸೋಪು ಅಥವಾ ಸೋಪಿನ ದ್ರಾವಣವನ್ನು ಒಂದು ಹಸ್ತದ ನಡುವೆ ಸುರಿದು ಎರಡೂ ಹಸ್ತಗಳಿಂದ ಚೆನ್ನಾಗಿ ಉಜ್ಜಿ ನೊರೆನೊರೆಯಾಗುವಂತೆ ಮಾಡಬೇಕು.

ಹಂತ 2
ಈಗ ಬಲಹಸ್ತದ ಮುಂಭಾಗದಿಂದ ಎಡಹಸ್ತದ ಹಿಂಭಾಗಕ್ಕೂ, ಎಡಹಸ್ತದ ಮುಂಭಾಗದಿಂದ ಬಲಹಸ್ತದ ಹಿಂಭಾಗಕ್ಕೂ ನೊರೆ ಹಚ್ಚಬೇಕು. ಬೆರಳುಗಳನ್ನು ಕೆಳಗಿನ ಹಸ್ತದ ಬೆರಳುಗಳ ನಡುವೆ ಓಡಾಡಿಸಿ ಸಂದುಗಳಲ್ಲಿಯೂ ನೊರೆ ತುಂಬಿಕೊಳ್ಳುವಂತೆ ಮಾಡಬೇಕು. ಸಾಮಾನ್ಯವಾಗಿ ಬೆರಳುಗಳ ಸಂದುಗಳನ್ನು ನಾವು ಸರಿಯಾಗಿ ತೊಳೆದುಕೊಳ್ಳುವುದೇ ಇಲ್ಲ. ಈ ಕ್ರಮದ ಮೂಲಕ ಸಂದುಗಳು ಪೂರ್ಣವಾಗಿ ಸ್ವಚ್ಛಗೊಳ್ಳುತ್ತವೆ.

ಹಂತ 3
ಈಗ ಎರಡೂ ಹಸ್ತಗಳನ್ನು ಒಂದಕ್ಕೊಂದು ತಾಕಿಸಿ ಬೆರಳುಗಳನ್ನು ಒಂದರ ಒಳಗೊಂದು ಬರುವಂತೆ ಕೊಂಚ ಒತ್ತಡದಿಂದ ಉಜ್ಜಿಕೊಳ್ಳಿ.

ಹಂತ 4
ಈ ಹಂತದಲ್ಲಿ ಎರಡೂ ಹಸ್ತದ ಬೆರಳುಗಳನ್ನು ಕೊಕ್ಕೆಯಂತೆ ಅರ್ಧ ಮಡಚಿ ಎರಡೂ ಕೊಕ್ಕೆಗಳನ್ನು ಒಂದಕ್ಕೊಂದು ಸಿಕ್ಕಿಸಿ. ಅಂದರೆ ಕಿರುಬೆರಳಿಗೆ ತೋರು ಬೆರಳು, ತೋರು ಬೆರಳಿಗೆ ಕಿರುಬೆರಳು ಬರುವಂತೆ. ಈಗ ಎರಡು ಹಸ್ತಗಳನ್ನು ಅಡ್ಡಲಾಗಿ ಉಜ್ಜಿ.ಈ ವಿಧಾನದಿಂದ ಬೆರಳುಗಳು ಮಡಚುವಲ್ಲಿನ ಗೆರೆಗಳ ಸೂಕ್ಷ್ಮ ಬಿರುಕಿನಲ್ಲಿದ್ದ ಕೊಳೆ ನೇರವಾಗಿ ಉಜ್ಜಿಕೊಳ್ಳದಿದ್ದಾಗ ಹೋಗದಿದ್ದುದು ಈಗ ಹೋಗುತ್ತದೆ.

ಹಂತ 5
ಬಳಿಕ ಎಡ ಹೆಬ್ಬರಳನ್ನು ಬಲಗೈಯ ಉಳಿದ ನಾಲ್ಕೂ ಬೆರಳುಗಳು ಸುತ್ತುವರೆಯುವಂತೆ ಹಿಡಿದು ಎಡಮುಖ ಮತ್ತು ಬಲಮುಖವಾಗಿ ತಿರುಗಿಸಿ. ಇದೇ ವಿಧಾನವನ್ನು ಬಲಗೈ ಹೆಬ್ಬರಳಿಗೂ ಪುನರವರ್ತಿಸಿ.

ಹಂತ 6
ಬಳಿಕ ಬಲಗೈಯ ಐದೂ ಬೆರಳುಗಳ ತುದಿ ಒಂದೆಡೆ ಬರುವಂತೆ ಮುಚ್ಚಿ ಈ ತುದಿಗಳಿಂದ ಎಡಹಸ್ತದ ನಡುಭಾಗದಲ್ಲಿ ಕೊಂಚವೇ ಒತ್ತಡದಿಂದ ವೃತ್ತಾಕಾರದಲ್ಲಿ ತಿರುಗಿಸಿ. ಇದೇ ರೀತಿ ಎಡಗೈಗೂ ಪುನರಾವರ್ತಿಸಿ. ಇದರಿಂದ ಹಸ್ತದ ಸೂಕ್ಷಗೆರೆಗಳಲ್ಲಿರುವ ಕೊಳೆ ಇಲ್ಲವಾಗುತ್ತದೆ.

ಹಂತ 7
ನಂತರ ಎಡಗೈಯ ಮಣಿಕಟ್ಟನ್ನು ಬಲಗೈಯ ಹೆಬ್ಬರಳು ಮತ್ತು ಉಳಿದ ಬೆರಳುಗಳಿಂದ ಹಿಡಿದುಕೊಂಡು ವೃತ್ತಾಕಾರದಲ್ಲಿ ಬಲಕ್ಕೂ, ಎಡಕ್ಕೂ ಉಜ್ಜಿಕೊಳ್ಳಿ. ಇದೇ ವಿಧಾನವನ್ನು ಬಲಗೈಗೂ ಅನುಸರಿಸಿ.

ಹಂತ 7
ಬಳಿಕ ತಣ್ಣೀರಿನಿಂದ ಸೋಪಿನಿಂದ ಆವರಿಸಿರುವ ಅಷ್ಟೂ ಭಾಗವನ್ನು ಸ್ವಚ್ಛಗೊಳಿಸಿ ಬಳಿಕ ಸ್ವಚ್ಛವಾಗ ಟವೆಲ್ ಅಥವಾ ಟಿಶ್ಯೂ ಪೇಪರ್ ನಿಂದ ಪೂರ್ಣವಾಗಿ ಒಣಗುವಂತೆ ಒರೆಸಿಕೊಳ್ಳಿ.

ಸ್ವಚ್ಛತೆಗಾಗಿ ಕೆಲವು ಟಿಪ್ಸ್
* ಕೈ ತೊಳೆದುಕೊಂಡ ಬಳಿಕ ನಲ್ಲಿಯ ತಿರುಗಣೆಯನ್ನು ಬರೆಯ ಕೈಗಳಿಂದ ಮುಟ್ಟಬೇಡಿ. ಬದಲಿಗೆ ಟಿಶ್ಯೂ ಪೇಪರ್ ಒಂದರ ಸಹಾಯದಿಂದ ಮುಟ್ಟಿ ಬಂದ್ ಮಾಡಿ.
* ಕೈ ತೊಳೆದುಕೊಂಡ ಬಳಿಕ ನಿಮ್ಮ ಕರ್ಚೀಫ್ ಅಥವಾ ಟಿಶ್ಯೂ ಕಾಗದದಿಮ್ದ ಒರೆಸಿ ಒಣಗಿಸಿಕೊಳ್ಳುವುದು ಅವಶ್ಯ, ಹಾಗೇ ಒಣಗಲು ಬಿಡಬಾರದು.

ಸ್ವಚ್ಛತೆಗಾಗಿ ಕೆಲವು ಟಿಪ್ಸ್
* ಹಿಂದಿನ ಕಾಲದಲ್ಲಿದ್ದಂತೆ ಒಂದೇ ಟವೆಲ್ಲಿನಿಂದ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಕೈ ಒರೆಸಿಕೊಳ್ಳಬಾರದು. ಸಾಧ್ಯವಾದಷ್ಟು ಪ್ರತ್ಯೇಕವಾದ ಟವೆಲ್ಲುಗಳನ್ನೇ ಉಪಯೋಗಿಸಬೇಕು.
* ಸಾರ್ವಜನಿಕ ಶೌಚಾಲಯದ ಬಾಗಿಲ ಹಿಡಿಕೆಗಳನ್ನು ಮುಟ್ಟಿದ ಬಳಿಕವೂ ಇದೇ ರೀತಿ ಕೈ ತೊಳೆದುಕೊಳ್ಳುವುದು ಅವಶ್ಯ.



Click it and Unblock the Notifications













