ಕೈಯಿಂದ ಮೆಹೆಂದಿ ಬಣ್ಣ ನಿವಾರಿಸಲು-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

By Manu

ಭಾರತೀಯ ಸಂಸ್ಕೃತಿಯಲ್ಲಿ ಮದರಂಗಿಗೆ ಅಥವ ಮೆಹೆಂದಿಗೆ ಮುಖ್ಯವಾದ ಸ್ಥಾನವಿದೆ. ವಿಶೇಷವಾಗಿ ಮದುವೆಯಲ್ಲಿ ಮದುಮಗಳನ್ನು ಮದರಂಗಿಯ ವಿಶೇಷ ವಿನ್ಯಾಸಗಳೊಂದಿಗೆ ಅಲಂಕರಿಸಲಾಗುತ್ತದೆ. ಮದರಂಗಿ ಗಿಡದ ಪುಟ್ಟ ಪುಟ್ಟ ಎಲೆಗಳನ್ನು ಅರೆದು ಅಥವಾ ಒಣಗಿಸಿ ಮಾಡಿದ ಪುಡಿಯಿಂದ ಮದರಂಗಿಯ ಲೇಪನವನ್ನು ತಯಾರಿಸಲಾಗುತ್ತದೆ. ಚರ್ಮದ ಮೇಲೆ ಹಚ್ಚಿಕೊಂಡ ಬಳಿಕ ಇದು ಹೊರಚರ್ಮದಲ್ಲಿ ಹೀರಲ್ಪಡುತ್ತದೆ.

ಇದು ತಾತ್ಕಾಲಿಕವಾಗಿ ಚರ್ಮದ ಬಣ್ಣವನ್ನು ಬದಲಿಸುತ್ತದೆ. ಸಾಮಾನ್ಯವಾಗಿ ಹದಿನಾಲ್ಕು ಹದಿನೈದು ದಿನಗಳವರೆಗೆ ಈ ಬಣ್ಣ ಉಳಿಯುತ್ತದೆ. ನಿರಪಾಯಕಾರಿಯಾಗಿರುವ ಈ ಬಣ್ಣ ಚರ್ಮದ ಕೋಮಲತೆಯನ್ನು ಕಾಪಾಡುವುದರಿಂದ ನೂರಾರು ವರ್ಷಗಳಿಂದ ಹಲವಾರು ದೇಶಗಳಲ್ಲಿ ಸೌಂದರ್ಯವರ್ಧಕವಾಗಿ ಬಳಸಲ್ಪಡುತ್ತಾ ಬಂದಿದೆ.

ಆದರೆ ಕೆಲವು ಸಂದರ್ಭಗಳಲ್ಲಿ ಈ ಬಣ್ಣವನ್ನು ಇದು ನೈಸರ್ಗಿಕವಾಗಿ ಮಾಸುವ ಮುನ್ನವೇ ನಿವಾರಿಸುವ ಅಗತ್ಯ ಎದುರಾಗುತ್ತದೆ. ಆದರೆ ಇದನ್ನು ಅವಧಿಗೂ ನಿವಾರಿಸುವುದು ಹೇಗೆ? ಇದಕ್ಕೂ ಕೆಲವು ಉಪಾಯಗಳಿವೆ. ಕೆಲವು ವಿಧಾನಗಳಿಂದ ಈ ಬಣ್ಣವನ್ನು ಒಂದೇ ದಿನದಲ್ಲಿ ಸುರಕ್ಷಿತವಾಗಿ ನಿವಾರಿಸಲು ಸಾಧ್ಯ. ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿರುವ ವಿಧಾನಗಳು ಸುರಕ್ಷಿತವೂ ಸುಲಭ ಸಾಮಾಗ್ರಿಗಳಿಂದಲೂ ಮಾಡುವಂತಹದ್ದಾಗಿವೆ. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಇತ್ತ ಗಮನಿಸಿ

ಈ ವಿಧಾನಗಳಲ್ಲಿ ಉಪಯೋಗಿಸಿರುವ ವಿಧಾನಗಳು ಎಲ್ಲರಲ್ಲಿಯೂ ಒಂದೇ ರೀತಿಯಾಗಿ ವರ್ತಿಸದ ಕಾರಣ ಕೆಲವರಲ್ಲಿ ಕಡಿಮೆ ಸಮಯದಲ್ಲಿ ಬೀರಿದ ಪರಿಣಾಮ ಇತರರಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ ಒಂದು ದಿನ ಒಂದು ವಿಧಾನವನ್ನು ಪ್ರಯತ್ನಿಸಿ ಮರುದಿನ ಇದರ ಪರಿಣಾಮವನ್ನು ಕಂಡುಕೊಂಡು ಮುಂದಿನ ಕೆಲವು ದಿನಗಳ ಕಾಲ ಮುಂದುವರೆಸಬೇಕು. ಹೆಚ್ಚಿನ ಸಮಯ ತೆಗೆದುಕೊಂಡರೆ ಮುಂದಿನ ಬಾರಿ ಭಿನ್ನವಾದ ಕ್ರಮ ಅನುಸರಿಸಿ. ಬನ್ನಿ, ಈ ವಿಧಾನಗಳು ಯಾವುವು ಎಂಬುದನ್ನು ಈಗ ನೋಡೋಣ:

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಒಂದು ಉತ್ತಮವಾದ ಸಮಸ್ಥಿತಿಸ್ಥಾಪಕವಾಗಿದೆ (emulsifier). ಮದರಂಗಿಯ ಬಣ್ಣವನ್ನು ನಿವಾರಿಸಲೂ ಈ ಗುಣ ನೆರವಾಗುತ್ತದೆ. ಇದಕ್ಕಾಗಿ ಒಂದು ಚಿಕ್ಕ ಬೋಗುಣಿಯಲ್ಲಿ ಕೊಂಚ ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಹತ್ತಿಯುಂಡೆಯೊಂದನ್ನು ಮುಳುಗಿಸಿ ಹಿಂಡಿ. ಈ ಉಂಡೆಯನ್ನು ಮದರಂಗಿ ಹಚ್ಚಿದ್ದ ಜಾಗದಲ್ಲಿ ನಯವಾದ ಮಸಾಜ್ ಮೂಲಕ ಹಚ್ಚುತ್ತಾ ಹೋಗಿ. ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕ್ಲೋರೀನ್

ಕ್ಲೋರೀನ್

ಮಾರುಕಟ್ಟೆಯಲ್ಲಿ ಕ್ಲೋರೀನ್ ದ್ರವದ ರೂಪದಲ್ಲಿ ಅಥವಾ ಮಾತ್ರೆ, ಪುಡಿಯ ರೂಪದಲ್ಲಿ ದೊರಕುತ್ತದೆ. ಇದರಲ್ಲಿ ಯಾವುದಾದರೊಂದನ್ನು ಆಯ್ದು ಕೊಂಚ ಪ್ರಮಾಣವನ್ನು ಉಗುರುಬೆಚ್ಚನೆಯ ನೀರಿನಲ್ಲಿ ಕರಗಿಸಿ. ಈ ನೀರಿನಲ್ಲಿ ಸುಮಾರು ಐದು ನಿಮಿಷಗಳವರೆಗೆ ಮದರಂಗಿ ಹಚ್ಚಿದ ಕೈಗಳನ್ನು ಮುಳುಗಿಸಿ. ಬಳಿಕ ತಣ್ಣೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಒರೆಸಿ. ಈ ಸುಲಭ ವಿಧಾನದಿಂದ ಹೆಚ್ಚಿನವರಲ್ಲಿ ಒಂದೇ ದಿನದಲ್ಲಿ ಮದರಂಗಿಯ ಬಣ್ಣ ಕಾಣೆಯಾಗುತ್ತದೆ.

ಅಡುಗೆ ಸೋಡಾ

ಅಡುಗೆ ಸೋಡಾ

ಮೂರು ದೊಡ್ಡಚಮಚ ಅಡುಗೆ ಸೋಡಾ ಮತ್ತು ಕೆಲವು ಹನಿ ಲಿಂಬೆರಸವನ್ನು ಸೇರಿಸಿ ದಟ್ಟನೆಯ ಲೇಪನ ತಯಾರಿಸಿ. ಈ ಲೇಪನವನ್ನು ಮದರಂಗಿ ಹಚ್ಚಿದ ಸ್ಥಳದಲ್ಲಿ ದಪ್ಪನಾಗಿ ಹಚ್ಚಿ ಹತ್ತು ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಬ್ಲೀಚಿಂಗ್ ಪೌಡರ್

ಬ್ಲೀಚಿಂಗ್ ಪೌಡರ್

ಬಿಳಿಚಿಸಲು ಉಪಯೋಗಿಸುವ ಬ್ಲೀಚಿಂಗ್ ಪೌಡರ್ ಸಹಾ ಮದರಂಗಿಯ ಬಣ್ಣವನ್ನು ನಿವಾರಿಸಲು ಸಮರ್ಥವಾಗಿದೆ. ಇದಕ್ಕಾಗಿ ಬ್ಲೀಚಿಂಗ್ ಪೌಡರ್ ಮತ್ತು ನೀರನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಮದರಂಗಿಯ ಬಣ್ಣದ ಮೇಲೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ನೀರಿನಿಂದ ತೊಳೆದುಕೊಳ್ಳಿ. ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸಿದರೆ ಮದರಂಗಿಯ ಬಣ್ಣ ಪೂರ್ಣವಾಗಿ ನಿವಾರಣೆಯಾಗುತ್ತದೆ.

ಆಲುಗಡ್ಡೆ ಜ್ಯೂಸ್

ಆಲುಗಡ್ಡೆ ಜ್ಯೂಸ್

ಆಲುಗಡ್ಡೆಯ ರಸವೂ ಮದರಂಗಿಯ ಬಣ್ಣವನ್ನು ಒಂದೇ ದಿನದಲ್ಲಿ ನಿವಾರಿಸುವ ಕ್ಷಮತೆ ಹೊಂದಿದೆ. ಇದಕ್ಕಾಗಿ ಒಂದು ಅಥವಾ ಎರಡು ಆಲುಗಡ್ಡೆಗಳನ್ನು ನುಣ್ಣಗೆ ತುರಿದು ಹಿಂಡಿ ರಸ ತೆಗೆಯಿರಿ. ಈ ರಸವನ್ನು ಮದರಂಗಿಯ ಬಣ್ಣವಿರುವ ಚರ್ಮದ ಮೇಲೆ ಸುರಿದು ಒಣಗಲು ಬಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಲುಗಡ್ಡೆ ಜ್ಯೂಸ್

ಆಲುಗಡ್ಡೆ ಜ್ಯೂಸ್

ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಒಂದು ದಿನದ ಅಥವಾ ಎರಡು ದಿನದ ಬಳಿಕ ಈ ವಿಧಾನವನ್ನು ಮತ್ತೊಮ್ಮೆ ಅನುಸರಿಸಿ ಮದರಂಗಿಯ ಬಣ್ಣವನ್ನು ಪೂರ್ಣವಾಗಿ ನಿವಾರಿಸಿಕೊಳ್ಳಿ.

Story first published: Monday, February 15, 2016, 13:10 [IST]
X
Desktop Bottom Promotion