Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯರೇ ಇಲ್ಲಿದೆ ನೋಡಿ ನಿಮಗೊಂದು ಸಿಹಿ ಸುದ್ದಿ..!
ಸಮಯ ನಿರ್ವಹಣೆ ಎನ್ನುವುದು ಹಲವರಿಗೆ ವರವಾಗಿ, ಇನ್ನುಳಿದವರಿಗೆ ಶಾಪವಾಗಿ ಪರಿಣಮಿಸಿರುವ ಒಂದು ವಿಚಾರ. ಹಲವರು ಆಫೀಸ್ ಗೆ ಸರಿಯಾದ ಸಮಯಕ್ಕೆ ಬರುವ ಪರಿಪಾಠ ಇರಿಸಿಕೊಂಡಿದ್ದರೆ, ಇನ್ನುಳಿದವರು ದಿನವೂ ತಡವಾಗಿ ಬರುವ ಪರಿಪಾಠವನ್ನು ಇರಿಸಿಕೊಂಡಿರುತ್ತಾರೆ. ಒಂದು ವೇಳೆ ನೀವು ಸಹ ಆಫೀಸಿಗೆ ತಡವಗಿ ಹೋಗುವವರಾಗಿದ್ದಲ್ಲಿ, ನಿಮಗೆ ಒಂದು ಸಿಹಿ ಸುದ್ದಿ. ನಿಮ್ಮನ್ನು ಆಫೀಸಿಗೆ ಬೇಗ ಹೋಗುವಂತೆ ಮಾಡುವ ಉಪಾಯ ಇಲ್ಲಿದೆ. ಆಫೀಸಿಗೆ ಹೊರಡುವ ಮುನ್ನ ಬೇಗ ಸಿದ್ಧವಾಗಿ ಇದು ನಿಮ್ಮ ಸಮಯವನ್ನು ಉಳಿಸುತ್ತದೆ.
ನಮ್ಮಲ್ಲಿ ಬಹುತೇಕ ಮಹಿಳೆಯರು ಆಫೀಸಿಗೆ ಹೊರಡುವ ಮುನ್ನ ಗಂಟೆಗಟ್ಟಲೆ ಕನ್ನಡಿಯ ಮುಂದೆ ನಿಲ್ಲುವ ಪರಿಪಾಠವನ್ನು ಇರಿಸಿಕೊಂಡಿರುತ್ತಾರೆ. ಆದರೆ ನಾವು ಇಲ್ಲಿ ನಿಮಗಾಗಿ ಕೇವಲ 10 ನಿಮಿಷದಲ್ಲಿ ಸಿದ್ಧಗೊಳ್ಳುವ ಉಪಾಯಗಳನ್ನು ತಿಳಿಸಿಕೊಡುತ್ತಿದ್ದೇವೆ. ಇದು ನಿಮಗೆ ಗ್ಲಾಮರ್ ಜೊತೆಗೆ ನೀವು ಮತ್ತಷ್ಟು ಸೌಂದರ್ಯವತಿಯರಾಗಿ ಕಾಣುವಂತೆ ಮಾಡುತ್ತದೆ. ನೀವು ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಬೇಕೆಂದರೆ, ಮೇಕಪ್ ಹಾಕಿಕೊಳ್ಳಲೇ ಬೇಕು ಎಂದೇನಿಲ್ಲ. ಬಹುತೇಕ ಮಹಿಳೆಯರು ಮೇಕಪ್ ಇಲ್ಲದೆ ಸಹ ಸುಂದರವಾಗಿ ಕಾಣುವ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಅದಕ್ಕಾಗಿ ನೀವು ಸಹ ಸ್ವಾಭಾವಿಕವಾಗಿ ಕಾಣಿಸಿಕೊಳ್ಳುವ ಮಾರ್ಗವನ್ನು ಹುಡುಕಿಕೊಳ್ಳಿ.

ಏಕೆಂದರೆ ಈ ಸ್ವಾಭಾವಿಕ ಸೌಂದರ್ಯವರ್ಧಕಗಳು ನಿಮ್ಮ ತ್ವಚೆಯ ಮೇಲೆ ಅಡ್ಡಪರಿಣಾಮವನ್ನು ಬೀರುವುದಿಲ್ಲ. ಆದ್ದರಿಂದ ಅಂಗಡಿಯಲ್ಲಿ ಸಿಕ್ಕುವ ರಾಸಾಯನಿಕಗಳಿಂದ ಕೂಡಿದ ಸೌಂದರ್ಯ ವರ್ಧಕಗಳಿಗೆ ಗುಡ್ ಬೈ ಹೇಳಿ. ಒಂದು ವಿಚಾರ ಮರೆಯಬೇಡಿ, ತ್ವಚೆಯ ರಕ್ಷಣೆಯು ನಿಮ್ಮ ನಿತ್ಯ ಜೀವನದ ಒಂದು ಭಾಗ ಎಂಬುದನ್ನು ಮರೆಯಬೇಡಿ. ಬನ್ನಿ 10 ನಿಮಿಷದಲ್ಲಿ ಹೇಗೆ ಸಿದ್ಧವಾಗುವುದು ಎಂಬುದನ್ನು ತಿಳಿದುಕೊಳ್ಳೋಣ:
ನಿಮ್ಮ ಕೂದಲಿಗೆ ಸ್ಟೈಲ್ ನೀಡುವ ಫ್ಯಾನ್ಸಿ ಮಾರ್ಗಗಳು
ನೀವು ನಿಮ್ಮ ಕೂದಲಿಗೆ ಇನ್ನಷ್ಟು ಸುಂದರವಾದ ಫ್ಯಾನ್ಸಿ ಸ್ಟೈಲ್‌ಗಳನ್ನು ನೀಡಬಹುದು. ಆದರೆ ನಿಮಗೆ ಸಮಯಾವಕಾಶದ ಕೊರತೆ ಇದ್ದಾಗ, ನಿಮ್ಮ ಕೂದಲನ್ನು ಬನ್ ಶೈಲಿಯಲ್ಲಿ ಕಟ್ಟಿಕೊಳ್ಳುವುದು ಉತ್ತಮ. ನಿಮ್ಮ ಬೆರಳುಗಳ ಸಹಾಯದಿಂದ ಕೂದಲನ್ನು ಸುತ್ತಿಕೊಂಡು, ಅದನ್ನು ನಿಮ್ಮ ತಲೆಯ ಮೇಲೆ ಕಿರೀಟದಂತೆ ಇರಿಸಿಕೊಳ್ಳಿ. ಒಂದು ವೇಳೆ ನಿಮಗೆ ಬನ್ ಶೈಲಿ ಸೂಕ್ತವಾಗಿ ಕಾಣದಿದ್ದಲ್ಲಿ, ಕೂದಲನ್ನು ಹಾಗೆಯೇ ಇಳಿಬಿಡಿ.
ನಿಮ್ಮ ತುಟಿಗಳಿಗೆ ಪೆನ್ಸಿಲ್ ಲೇಪಿಸಿ
ಮೊದಲು ನಿಮ್ಮ ತುಟಿಗಳಿಗೆ ಪೆನ್ಸಿಲ್ ಲೇಪಿಸಿ, ನಂತರ ಬೋಲ್ಡ್ ಶೇಡಿನ ಲಿಪ್‌ಸ್ಟಿಕ್ ಲೇಪಿಸಿ. ಒಂದು ವೇಳೆ ನಿಮಗೆ ಬಣ್ಣಗಳು ಇಷ್ಟವಾದಲ್ಲಿ, ಪಾಪ್ ಕಲರ್ ಮೂಲಕ ನಿಮ್ಮ ತುಟಿಗಳಿಗೆ ಮತ್ತಷ್ಟು ರಂಗನ್ನು ತುಂಬಿ. ಚಳಿಗಾಲದಲ್ಲಿ ಬುರ್ಗುಂಡಿ, ಕೆಂಪು ಮತ್ತು ಕಡು ಗೆಂಪು ಬಣ್ಣದ ಲಿಪ್‌ಸ್ಟಿಕ್ ಬಳಸಿ.
ಕಪ್ಪುತಲೆಗಳನ್ನು ಶೀಘ್ರವಾಗಿ ನಿವಾರಿಸಿಕೊಳ್ಳಿ
ಎಣ್ಣೆ ತ್ವಚೆಗೆ ಪರಿಹಾರ
ಎಣ್ಣೆ ತ್ವಚೆಯು ನೀವು ಹೊಂದಿರುವ ತ್ವಚೆಯ ಸಮಸ್ಯೆಗಳಲ್ಲಿ ಅತ್ಯಂತ ಕೆಟ್ಟದ್ದು. 10 ನಿಮಿಷದಲ್ಲಿ ನೀವು ಆಫೀಸಿಗೆ ಹೋಗಲು ಸಿದ್ಧರಾಗಲು, ಮೊದಲು ಎಣ್ಣೆ ತ್ವಚೆಯನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನೀವು ಮೊದಲು ನಿಮ್ಮ ಮುಖವನ್ನು ತಂಪಾದ ನೀರಿನಿಂದ ತೊಳೆದುಕೊಳ್ಳಿ. ಇದಕ್ಕಾಗಿ ನೀವು ಮನೆಯಲ್ಲಿಯೇ ತಯಾರಿಸಲಾದ ಜಿಡ್ಡು ನಿವಾರಕ ಫೇಸ್‌ವಾಶ್ ಅನ್ನು ಬಳಸಬಹುದು. ಆನಂತರ ನಿಮ್ಮ ಮುಖಕ್ಕೆ ಮೊಸರು ಮತ್ತು ಲಿಂಬೆರಸದಿಂದ ಮಸಾಜ್ ಮಾಡಿ. ಈ ಮಿಶ್ರಣವು ನಿಮ್ಮ ಮುಖದಲ್ಲಿ ಎಣ್ಣೆಯಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.



Click it and Unblock the Notifications



