Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ವಯಸ್ಸಾದರೇನಂತೆ? ಸಂತಸದ ನಗು ಚೆಲ್ಲುತ್ತಾ ಯುವಕರಂತೆ ಕಾಣಿ!
ಏನೇನೋ ಕನಸು ಕಂಡಿರುತ್ತೇವೆ. ಕೆಲವು ನಿಜವಾಗಿರುತ್ತದೆ. ಮತ್ತೆ ಕೆಲವು ಹಾಗೆ ಉಳಿದಿರುತ್ತದೆ. ಹದಿಹರೆಯದಲ್ಲಿ ನಮ್ಮ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುತ್ತೇವೆ. ಆದರೆ 30 ದಾಟಿದ ಬಳಿಕ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ.
ಇದರ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ಯಾಕೆಂದರೆ ಕೆಲವೊಂದು ಸೌಂದರ್ಯದ ಟಿಪ್ಸ್‌ಗಳು ನಿಮ್ಮ ಯೌವನದ ನಗುವನ್ನು ಮರಳಿ ತರಳಿದೆ ಮತ್ತು ನಿಮಗೆ ಮೊದಲಿನ ಸೌಂದರ್ಯವನ್ನು ನೀಡಲಿದೆ. ವಯಸ್ಸಾಗುವುದನ್ನು ಎಷ್ಟೇ ಶ್ರೀಮಂತನಿಂದಲೂ ತಡೆಯಲು ಸಾಧ್ಯವಿಲ್ಲ. ಮುಖದ ನವ ಯೌವನ- ಅದೂ ಕೂಡ ಬರೀ ಒಂದೇ ವಾರದಲ್ಲಿ!
ಆದರೆ ವಯಸ್ಸಾಗುತ್ತಿರುವ ಲಕ್ಷಣಗಳನ್ನು ಮರೆಮಾಚಬಹುದು ಅಷ್ಟೇ. ಯೌವನದ ದಿನಗಳಲ್ಲಿ ನಮ್ಮ ನಗು ಇತರರನ್ನು ನಮ್ಮತ್ತ ಸೆಳೆಯುವಂತೆ ಮಾಡುತ್ತದೆ. ಅದೇ ನಗುವನ್ನು ವಯಸ್ಸಾಗುತ್ತಿರುವ ಸಮಯದಲ್ಲೂ ಉಳಿಸಿಕೊಳ್ಳಲು ಬೇಕಾದಂತಹ ಕೆಲವೊಂದು ಸರಳ ಟಿಪ್ಸ್‌ಗಳು ಇಲ್ಲಿವೆ. ಅದನ್ನು ಪಾಲಿಸಿಕೊಂಡು ಹೋಗಿ.

1. ನಿಮ್ಮ ನಗು ಮತ್ತು ಚರ್ಮವು ಯುವಕರಂತೆ ಕಾಣಬೇಕೆಂದು ನೀವು ಬಯಸುವಿರಾದರೆ ಮೊದಲು ಹಲ್ಲುಗಳನ್ನು ಬಿಳಿಯಾಗಿಸಲು ದಂತವೈದ್ಯರನ್ನು ಭೇಟಿಯಾಗಿ. ತಾತ್ಕಾಲಿಕ ಚಿಕಿತ್ಸೆಯು ನಿಮ್ಮನ್ನು ಯುವಕರಂತೆ ಮಾಡುವುದು.
2. ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ವಯಸ್ಸಾಗುವುದನ್ನು ಮರೆಮಾಚುವ ಕ್ರೀಮ್ ಅನ್ನು ಬಳಸಿ ಅಥವಾ ಮನೆಯಲ್ಲೇ ನೈಸರ್ಗಿಕ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಬಾಯಿ ಸುತ್ತಲು ಇರುವಂತಹ ನೆರಿಗೆಗಳು ಮಾಯವಾಗುವುದು.
3. ನಿಮಗೆ ಸ್ವಲ್ಪ ವಯಸ್ಸಾಗಿ ಹಲ್ಲುಗಳು ಉದುರಿದ್ದರೆ ಆಗ ದಂತವೈದ್ಯರಲ್ಲಿಗೆ ಹೋಗಿ ನಕಲಿ ಹಲ್ಲುಗಳ ಜೋಡಣೆ ಅಥವಾ ಬೇರೆ ಯಾವುದಾದರೂ ವಿಧಾನ ಅನುಸರಿಸಿ. ಇದರಿಂದ ಹೊಳೆಯುವ ಹಲ್ಲುಗಳು ನಿಮ್ಮದಾಗುವುದು. ಮನೆಮದ್ದು ಬಳಸಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಿ
4. ವಯಸ್ಸಾಗಿದೆ ಎಂದು ಸಾರಿ ಹೇಳುವಂತಹ ತುಟಿಗಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ. ಇದಕ್ಕೆ ಪ್ಯಾಕ್ ಬಳಸಿಕೊಂಡರೆ ನೀವು ಯೌವನದ ಸೌಂದರ್ಯವನ್ನು ಮರಳಿ ಪಡೆಯಬಹುದಾಗಿದೆ.
5. ನಿಮಗೆ ಹದಿಹರೆಯದ ನಗು ಮತ್ತು ಯುವಕರಂತೆ ಕಾಣಬೇಕೆಂದರೆ ತುಟಿಗೆ ಲಘುವಾಗಿರುವ ಬಣ್ಣವನ್ನು ಬಳಸಿ. ಇದು ನೆರಿಗೆಯನ್ನು ಮರೆಮಾಚುವುದು. ಗಾಢವಾದ ಬಣ್ಣವು ನೆರಿಗೆಯು ಎದ್ದು ಕಾಣುವಂತೆ ಮಾಡುತ್ತದೆ.



Click it and Unblock the Notifications

