ದೇಹದ ದುರ್ವಾಸನೆ ನಿವಾರಣೆಗೆ ನೈಸರ್ಗಿಕ ರಹಸ್ಯ

By Manu

ನಿಮ್ಮ ದೇಹವು ದುರ್ಗಂಧದಿಂದ ಕೂಡಿದ ಸಂದರ್ಭದಲ್ಲಿ, ಅದರ ದುರ್ವಾಸನೆಯಿಂದ ನಿಮಗೆ ಹೆಚ್ಚು ಕಿರಿಕಿರಿಯುಂಟಾಗಿ ಎಲ್ಲರೆದುರು ಮುಜುಗರವನ್ನುಂಟು ಮಾಡುವ ಸಂದರ್ಭ ಸಂಭವಿಸುತ್ತದೆ. ದೇಹವನ್ನು ಹೆಚ್ಚು ಆಹ್ಲಾದಕರವಾಗಿರಿಸಲು ಮತ್ತು ಸುಗಂಧದಿಂದಿರಿಸಲು ನಾವು ಎಷ್ಟೇ ಕಾಳಜಿ ವಹಿಸಿದರೂ ಕೆಲವೊಂದು ಬಾರಿ ನಾವು ಅನುಸರಿಸುವ ತಪ್ಪು ವಿಧಾನಗಳಿಂದ ದೇಹದ ದುರ್ವಾಸನೆ ಬರಲು ಕಾರಣವಾಗುತ್ತದೆ. ನಿಮಗೆ ಅರಿವಿಲ್ಲದ ಅಪಾಯಕಾರಿ ಸುವಾಸನಾವರ್ಧಕಗಳನ್ನು ಬಳಸುವುದರಿಂದ ತಕ್ಷಣಕ್ಕೆ ಮಾತ್ರ ದುರ್ವಾಸನೆ ನಿವಾರಣೆಯಾಗಲಿದ್ದು, ದೀರ್ಘಾವಧಿಯಲ್ಲಿ ಇದರ ಫಲಿತಾಂಶ ಶೂನ್ಯ. ದೇಹದ ದುರ್ವಾಸನೆಯು ನಿಮ್ಮನ್ನು ಹೆಚ್ಚು ಜರ್ಜರಿತಗೊಳಿಸುತ್ತದೆ. ಎಷ್ಟೇ ಪರ್ಫ್ಯೂಮ್ ಹಾಕಿದರೂ ಬೆವರಿನ ದುರ್ಗಂಧ ನಿಲ್ಲುವುದಿಲ್ಲವೇ?

ದೈಹಿಕ ಶ್ರಮದಿಂದ, ತಕ್ಷಣ ಒತ್ತಡಕ್ಕೆ ಒಳಗಾದಾಗ ಬೆವರು ಬರುವುದು ಸಹಜ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಹಣೆ, ಪಾದ, ತಲೆ, ಕೈಗಳಲ್ಲಿ ಹೆಚ್ಚಾಗಿ ಬೆವರು ಕಂಡುಬರುತ್ತದೆ. ತುಂಬಾ ಬೆವರಿದರೆ ದೇಹದಲ್ಲಿ ವಾಸನೆ ಹೆಚ್ಚಾಗಲು ಕಾರಣವಾಗುತ್ತದೆ. ಇದರಿಂದ ನಮಗೆ ಮಾತ್ರವಲ್ಲ, ನಮ್ಮ ಪಕ್ಕ ನಿಂತವರಿಗೂ ಮುಜುಗರ ಉಂಟಾಗುತ್ತದೆ. ವಿಶೇಷವಾಗಿ ದೈಹಿಕವಾದ ಕೆಲಸಗಳು ಮತ್ತು ದೈಹಿಕ ಒತ್ತಡಗಳು ಹೆಚ್ಚಾದರಂತೂ ಮುಗಿದೇ ಹೋಯಿತು.

ಅದರಲ್ಲೂ ರಾಸಾಯನಿಕ ಸೌಂದರ್ಯವರ್ಧಕಗಳು, ಮದ್ಯ ಮಿಶ್ರಿತ ಸುವಾಸನಾವರ್ಧಕಗಳು ನಿಮ್ಮ ಚರ್ಮಕ್ಕೆ ಹಾನಿಯನ್ನುಂಟು ಮಾಡಿ ದುರ್ವಾಸನೆ ಉಂಟಾಗಲು ನೇರ ಕಾರಣವಾಗುತ್ತವೆ. ಈ ರಾಸಾಯನಿಕ ಉತ್ಪನ್ನಗಳಿಂದ ದೂರವಿರಲು, ಪ್ರಾಕೃತಿಕ ವಿಧಾನಗಳಿಂದ ನಿಮ್ಮ ದೇಹದ ದುರ್ವಾಸನೆಯನ್ನು ಕಡಿಮೆ ಮಾಡುವ ಕೆಲವು ವಿಶಿಷ್ಟ ವಿಚಾರಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಕೆಲವರಿಗಂತೂ ಬೆವರಿನಿಂದಾಗಿ ಬಟ್ಟೆ ಬೇಗನೆ ಒದ್ದೆಯಾಗಿ ಮೈ ವಾಸನೆ ಬರಲಾರಂಭಿಸುತ್ತದೆ. ಅಂತಹವರು ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಮೈ ದುರ್ಗಂಧವನ್ನು ತಡೆಯಬಹುದು.

ಅಡುಗೆ ಸೋಡ ಅಥವಾ ಲಿಂಬೆ ರಸದ ಪೇಸ್ಟ್

ಅಡುಗೆ ಸೋಡ ಅಥವಾ ಲಿಂಬೆ ರಸದ ಪೇಸ್ಟ್

ದೇಹದ ದುರ್ವಾಸನೆಯ ನಿವಾರಣೆಗೆ ಅಡುಗೆ ಸೋಡಾ ನಿಜಕ್ಕೂ ಹೆಚ್ಚು ಪರಿಣಾಮಕಾರಿ. ಇದು ಚರ್ಮದ ತೇವವನ್ನು ಹೀರಿಕೊಂಡು ವಾಸನೆ ಬರಿಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಅಡುಗೆ ಸೋಡ ಮತ್ತು ಲಿಂಬೆ ರಸದ ಮಿಶ್ರಣದ ಬಳಕೆ ನಿಜಕ್ಕೂ ನಿಮ್ಮ ದೇಹವನ್ನು ಉಲ್ಲಸಿತಗೊಳಿಸಿ ತಾಜಾ ಇರುವಂತೆ ನೋಡಿಕೊಳ್ಳುತ್ತದೆ. ಅದನ್ನು ಉಪಯೋಗಿಸುವ ವಿಧಾನವನ್ನು ನಿಮಗಾಗಿ ನೀಡಲಾಗಿದೆ.

ಮಾಡುವ ವಿಧಾನ

ಮಾಡುವ ವಿಧಾನ

ಅರ್ಧ ಲಿಂಬೆ ಹೋಳನ್ನು ಚೆನ್ನಾಗಿ ಹಿಸುಕಿ, ಅದರಿಂದ ಬರುವ ರಸವನ್ನು ಸ್ವಲ್ಪ ಅಡುಗೆ ಸೋಡಾಗೆ ಬೆರೆಸಿಕೊಳ್ಳಿ. ಈ ಮಿಶ್ರಣವು ಪೇಸ್ಟ್ ರೂಪ ಪಡೆದುಕೊಳ್ಳುವವರೆಗೆ ಚೆನ್ನಾಗಿ ಕಲಸಿ.ಈ ಮಿಶ್ರಣವನ್ನು ನಿಮ್ಮ ಕಂಕುಳಿಗೆ ಹಚ್ಚಿ ಸುಮಾರು 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ.

ಆಪಲ್ ಸೈಡರ್ ವಿನೆಗರ್ ನ ಬಳಕೆ

ಆಪಲ್ ಸೈಡರ್ ವಿನೆಗರ್ ನ ಬಳಕೆ

ದೇಹದ ದುರ್ವಾಸನೆಯನ್ನು ಸುಲಭವಾಗಿ ನಿವಾರಿಸುವ ಮತ್ತೊಂದು ಉತ್ತಮ ವಿಧಾನವೆಂದರೆ ಆಪಲ್ ಸೈಡರ್ ವಿನೆಗರ್ ನ ಬಳಕೆ. ಹೌದು, ಇದು ನಿಮ್ಮ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನದಲ್ಲಿಡಲು ಹೆಚ್ಚು ಉಪಯುಕ್ತವಾಗಿದ್ದು, ಬೆವರು ಉತ್ಪತ್ತಿಯನ್ನು ನಿಯಂತ್ರಿಸುತ್ತದೆ. ಬಿಡುವಿಲ್ಲದ ಸಂದರ್ಭಗಳಲ್ಲಿ ಹತ್ತಿಯ ಉಂಡೆಯಿಂದ ಆಪಲ್ ಸೈಡರ್ ವಿನೆಗರ್ ಅನ್ನು ಹಚ್ಚಿಕೊಳ್ಳಿ. ಸಮಯವಿದ್ದರೆ ಆಪಲ್ ಸೈಡರ್ ವಿನಿಗರ್ ನಿಂದ ಅದ್ದಿದ ಬಟ್ಟೆಯಿಂದ ಸ್ನಾನವಾದ ನಂತರ ಒರೆಸಿಕೊಳ್ಳಿ. ಇದು ಹೆಚ್ಚು ಪರಿಣಾಮಕಾರಿಯಾಗಿದ್ದು, ಇದರಿಂದ ನಿಮ್ಮ ದೇಹದ ದುರ್ವಾಸನೆ ದೂರವಾಗಿ ಆಹ್ಲಾದಕರ ಅನುಭವ ನೀಡುತ್ತದೆ. ಇದನ್ನು ಉಪಯೋಗಿಸುವ ವಿಧಾನವನ್ನು ನಿಮಗಾಗಿ ನೀಡಲಾಗಿದೆ.

ಮಾಡುವ ವಿಧಾನ

ಮಾಡುವ ವಿಧಾನ

ಒಂದು ಕಪ್ ಆಪಲ್ ಸೈಡರ್ ವಿನೆಗರ್ ಅನ್ನು ನೀವು ಸ್ನಾನ ಮಾಡುವ ನೀರಿಗೆ ಬೆರೆಸಿಕೊಳ್ಳಿ. ಮತ್ತೊಂದು ವಿಧಾನವೆಂದರೆ ಸ್ನಾನದ ನಂತರ ಆಪಲ್ ಸೈಡರ್ ವಿನೆಗರ್ ಮತ್ತು ನೀರಿನ ಮಿಶ್ರಣಕ್ಕೆ ಅದ್ದಿದ ವಸ್ತ್ರವನ್ನು ನಿಮ್ಮ ದೇಹವನ್ನು ಒರೆಸಲು ಬಳಸಿ. ಇದು ನಿಮ್ಮ ದೇಹಕ್ಕೆ ಹೆಚ್ಚು ಉತ್ತಮವಾಗಿದ್ದು, ದೇಹದ ದುರ್ವಾಸನೆಯಿಂದ ಮುಕ್ತರಾಗುತ್ತೀರಿ.

ಟೀ ಟ್ರೀ ತೈಲವನ್ನು ಸುವಾಸನಾವರ್ಧಕವಾಗಿ ಬಳಸುವಿಕೆ

ಟೀ ಟ್ರೀ ತೈಲವನ್ನು ಸುವಾಸನಾವರ್ಧಕವಾಗಿ ಬಳಸುವಿಕೆ

ಟೀ ಟ್ರೀ ತೈಲವು ನಿಮ್ಮ ಚರ್ಮವನ್ನು ತಾಜಾವಾಗಿರಿಸಲು ಹೆಚ್ಚು ಸಹಕಾರಿಯಾಗಿದೆ. ಇದರಲ್ಲಿ ಔಷಾಧೀಯ, ಸೌಂದರ್ಯವರ್ಧಕ ಮತ್ತು ಗುಣಪಡಿಸುವ ಗುಣವೈಶಿಷ್ಠಗಳು ಹೊಂದಿದೆ. ಈ ತೈಲವು ನಿಮ್ಮ ದೇಹದ ದುರ್ವಾಸನೆಯನ್ನು ನಿವಾರಿಸಿ, ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ. ಹೆಚ್ಚುವರಿಯಾಗಿ ಈ ತೈಲವು ನಿಮಗೆ ಸುವಾಸನೆಯನ್ನು ನೀಡಿ, ಸುವಾಸನಾ ವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಉಪಯೋಗಿಸುವ ವಿಧಾನವನ್ನು ನಿಮಗಾಗಿ ನೀಡಲಾಗಿದೆ.

ಮಾಡುವ ವಿಧಾನ

ಮಾಡುವ ವಿಧಾನ

ಎರಡು ಚಮಚ ನೀರಿಗೆ ಎರಡು ಹನಿ ಟೀ ಟ್ರೀ ತೈಲವನ್ನು ಬೆರೆಸಿಕೊಳ್ಳಿ.

ಇದನ್ನು ಮಿಶ್ರಣ ಮಾಡಿಕೊಂಡ ನಂತರ, ಈ ಮಿಶ್ರಣವನ್ನು ನಯವಾಗಿ ನಿಮ್ಮ ಕಂಕುಳ ಜಾಗಕ್ಕೆ ತಿಕ್ಕಿಕೊಳ್ಳಿ. ಇನ್ದು ನಿಜಕ್ಕೂ ಹೆಚ್ಚು ಪರಿಣಾಮಕಾರಿ ವಿಧಾನ.

Story first published: Tuesday, January 19, 2016, 9:07 [IST]
X
Desktop Bottom Promotion