ಪಾದದ ಸೌಂದರ್ಯಕ್ಕೆ ಕೇವಲ 5 ನಿಮಿಷ ನೀಡಿ ಸಾಕು

By CM Prasad

ಸೌಂದರ್ಯ ಎಂದಾಕ್ಷಣ ಕೇವಲ ಮುಖ ಮತ್ತು ಮೈಭಾಗ ಮಾತ್ರ ಎಂದು ಕೆಲವರು ತಿಳಿದುಕೊಂಡಿರುತ್ತಾರೆ. ಪಾದದ ಸೌಂದರ್ಯಕ್ಕೂ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಪಾದಗಳು ನಮ್ಮ ಇಡೀ ದೇಹವನ್ನು ಹೊತ್ತು ಸದಾ ಸಾಗುತ್ತವೆ. ನಮ್ಮ ಪಾದಗಳ ಆರೈಕೆಯನ್ನು ಹೆಚ್ಚು ಆಲೋಚಿಸದೇ ಕೇವಲ ಮೇಲಿನ ಹೆಚ್ಚು ಕಾಣುವ ಅಂಗಾಂಗಗಳನ್ನು ಆರೈಕೆ ಮಾಡುವುದರಲ್ಲೇ ಸಮಯ ಕಳೆದುಹೋಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಜನರು ಜಾಗೃತಗೊಳ್ಳುತ್ತಿದ್ದು, ಪಾದದ ಸೌಂದರ್ಯದ ಕಡೆ ಗಮನಹರಿಸಲು ಪ್ರಯತ್ನಿಸುತ್ತಿದ್ದಾರೆ. ಹೊಸದಾಗಿ ಕೊಂಡಿರುವ ಆಕರ್ಷಕ ಪಾದರಕ್ಷೆಗಳನ್ನು ಬಳಸಲು ಸಾಧ್ಯವಾಗದೆ ಕಂಗಾಲಾಗಿದ್ದೀರೇ, ನಿಮ್ಮ ಒಡೆದ ಇಮ್ಮಡಿಗಳು ಮತ್ತು ಬಾಡಿದ ಉಗುರುಗಳು ಇದಕ್ಕೆ ಕಾರಣವಿರಬಹುದೇ? ಸುಂದರವಾದ ಪಾದಗಳನ್ನು ಹೊಂದಲು ರಾತ್ರಿ ಪೂರ್ತಿ ಕಷ್ಟಪಡಬೇಕಿಲ್ಲ. ನಿಮ್ಮ ಪಾದಗಳನ್ನು ಸಮಯಾನುಸಾರ ಆರೈಕೆ ಮಾಡಿಕೊಳ್ಳಬೇಕಾಗುವ ಅವಶ್ಯಕತೆ ಇದ್ದು, ಅವುಗಳು ಸುಂದರವಾಗಿರಲು ಮತ್ತು ಮೃದುವಾಗಿರಲು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಕಾಲ್ಬೆರಳಿನ ಉಗುರು ಫಂಗಸ್ ಅನ್ನು ಹೀಗೆ ನಿವಾರಿಸಿ!

Easy 5-minute routine for beautiful feet

ಈ ಬಿಡುವಿಲ್ಲದ ಕೆಲಸದ ಒತ್ತಡದಲ್ಲಿ ಸೌಂದರ್ಯದ ಬಗ್ಗೆ ಕಾಳಜಿ ವಹಿಸಲು ಹೆಚ್ಚಿನವರಿಗೆ ಸಾಧ್ಯವಾಗುತ್ತಿಲ್ಲ. ಹದಿನೈದು ದಿನಕ್ಕೊಮ್ಮೆ ಸೆಲೂನ್ ಅಥವಾ ಪಾದಗಳ ಸ್ಪಾಗೆ ತೆರಳುವುದರಿಂದ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ. ಕೇವಲ ಐದು ನಿಮಿಷಗಳಲ್ಲಿ ನಿಮ್ಮ ಪಾದದ ಆರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವ ಕೆಲ ಸುಲಭವಾದ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಇವನ್ನು ಒಮ್ಮೆ ಪ್ರಯತ್ನಿಸಲೇಬೇಕು. ಈ ವಿಧಾನಗಳನ್ನು ಕ್ರಮವಾಗಿ ಅನುಸರಿಸಿದರೆ ನಿಮ್ಮ ಪಾದಗಳ ಆರೋಗ್ಯ ಸಮಸ್ಯೆ ಸುಲಭವಾಗಿ ನಿವಾರಣೆಯಾಗುತ್ತದೆ.

ಆರೈಕೆ ಹೇಗೆ?
*ಸ್ನಾನ ಮಾಡುವಾಗ ದೇಹದ ಸ್ಕ್ರಬ್ ಅಥವಾ ಪಾದದ ಸ್ಕ್ರಬ್ ಬಳಸಿ ನಿಮ್ಮ ಪಾದಗಳನ್ನು ವೃತ್ತಾಕಾರದಲ್ಲಿ ಚೆನ್ನಾಗಿ ತಿಕ್ಕಿ. ಇದನ್ನು ಪ್ರತಿ ಪರ್ಯಾಯ ದಿನಗಳಂತೆ ಅನುಸರಿಸಿ.
*ಪಾದವನ್ನು ಒರಟಾದ ಕಲ್ಲಿನಿಂದ ಉಜ್ಜಿಕೊಳ್ಳಿ. ವಿಶೇಷವಾಗಿ ಇಮ್ಮಡಿ, ಕಣಕಾಲು ಮತ್ತು ಪಾದದಡಿಯನ್ನು ತಿಕ್ಕಿಕೊಳ್ಳಿ. ಉಗುರಿನ ಬ್ರಶ್ ಸಹಾಯದಿಂದ ಉಗುರಿನ ಮೇಲಿರುವ ಧೂಳನ್ನು ಮತ್ತು ಕ್ರಿಮಿಗಳನ್ನು ಹೊರಹಾಕಿ. ಏಕೆಂದರೆ ಧೂಳು ಉಗುರಿನ ಅಂದವನ್ನು ಹಾಳುಮಾಡುತ್ತದೆ. ಇದು ನಿಮಗೆ 1 ರಿಂದ 2 ನಿಮಿಷಗಳಿಗಿಂತ ಹೆಚ್ಚಿಗೆ ಸಮಯ ತೆಗೆದುಕೊಳ್ಳುವುದಿಲ್ಲ. ಬಿರುಕುಬಿಟ್ಟ ಪಾದಗಳು: ಪುರುಷರಿಗೆ ಮನೆಮದ್ದುಗಳು
*ಇನ್ನು ಸ್ನಾನವಾದ ನಂತರ ನಿಮ್ಮ ಪಾದವನ್ನು ಚೆನ್ನಾಗಿ ಒಣಗಿಸಿ. ನಂತರ ಪಾದದ ಕ್ರೀಮ್ ಅನ್ನು ನಯವಾಗಿ ಹಚ್ಚಿ ತಿಕ್ಕಿಕೊಳ್ಳಿ. ಇದಕ್ಕೆ ಕೇವಲ ಒಂದು ನಿಮಿಷ ಸಾಕು.


*ಕೆಲಸ ಅಥವಾ ಕಾಲೇಜ್ ನಿಂದ ಬಂದ ತಕ್ಷಣ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿ ಒಣಗಿಸಿ. ನಂತರ ಮಲಗುವ ಮುನ್ನ ಪಾದದ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಇದರಿಂದ ಪಾದದ ಚರ್ಮದ ಭಾಗಕ್ಕೆ ಒಳಗಿನಿಂದ ತೇವಾಂಶ ನೀಡಿ ಮೃದುಗೊಳಿಸಲು ನೆರವಾಗುತ್ತದೆ.
*ಉಗುರುಗಳನ್ನು ಅಗತ್ಯಕ್ಕೆ ತಕ್ಕಷ್ಟು ಕತ್ತರಿಸಿಕೊಂಡು ಉಗುರಿನ ಮೇಲ್ಪದರವನ್ನು ಒತ್ತಿ ಶುಚಿಗೊಳಿಸಿಕೊಳ್ಳಿ. ಇದನ್ನು ಕ್ರಮವಾಗಿ ಅನುಸರಿಸಿದರೆ ಉತ್ತಮ ಫಲಿತಾಂಶ ನೀಡುತ್ತದೆ. ಉಗುರುಗಳನ್ನು ಸರಿಯಾಗಿ ಕತ್ತರಿಸುವ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ.
*ನೇಯಿಲ್ ಬಫ್ಫರ್ ನಿಜಕ್ಕೂ ಉಪಯುಕ್ತವಾಗಿದ್ದು, ಉಗುರಿನ ಮೇಲಿನ ಹಳದಿ ಬಣ್ಣವನ್ನು ಹೊರಹಾಕಿ ಉಗುರು ಮಿರಮಿರನೆ ಮಿಂಚುವಂತೆ ಮಾಡುತ್ತದೆ. ಈ ವಿಧಾನಗಳು ನಿಮ್ಮ ಹಳದಿ ಉಗುರಿನ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಮೇಲಿನ ಕ್ರಮಗಳನ್ನು ಅನುಸರಿಸಲು ನಿಮಗೆ ಕೇವಲ ನಿಮ್ಮ 5 ನಿಮಿಷ ವ್ಯಯಿಸಿದರೆ ಸಾಕಾಗುತ್ತದೆ ಆದರೆ ಫಲಿತಾಂಶ ಮಾತ್ರ ನಿಮ್ಮನ್ನು ದಿನಪೂರ್ತಿ ಖುಷಿಯಾಗಿಡುವುದು ಖಂಡಿತ.

Story first published: Thursday, January 14, 2016, 13:28 [IST]
X
Desktop Bottom Promotion