Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪ್ಸರೆಯಂತಹ ತ್ವಚೆಗೆ ಹೇಳಿ ಮಾಡಿಸಿದ ಗಿಡಗಳಿವು ಕಣ್ರೀ!
ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಹಲವರು ತಮ್ಮ ಆರೋಗ್ಯ ಮತ್ತು ತ್ವಚೆಯ ಸಮಸ್ಯೆಗಳಿಗಾಗಿ ಗಿಡಮೂಲಿಕೆಗಳತ್ತ ವಾಲುತ್ತಿದ್ದಾರೆ. ಬೇವು, ಅಲೋವೆರಾ ಮುಂತಾದ ಗಿಡಗಳು ಕೇವಲ ದೇಹದ ಅಂಗಗಳಿಗೆ ಅಷ್ಟೇ ಅಲ್ಲದೆ, ತ್ವಚೆಗು ಸಹ ಉಪಯೋಗಕಾರಿಯಾಗಿರುವುದು ಗೊತ್ತಿರುವ ವಿಚಾರವೇ ಆಗಿದೆ.
ಈಗಿಡಗಳಲ್ಲಿರುವ ಅಂಶಗಳು ನಿಮ್ಮ ತ್ವಚೆಗೆ ವರ್ಷದ ಎಲ್ಲಾ ಕಾಲದಲ್ಲಿ ಸಹ ಉಪಯೋಗಕಾರಿಯಾಗಿರುತ್ತವೆ. ನಿಮ್ಮ ತ್ವಚೆಯನ್ನು ಸುಂದರ ಮಾಡಿಕೊಳ್ಳಲು ಈ ಗಿಡಗಳ ಉಪಯೋಗವನ್ನು ಪಡೆಯಿರಿ.
ಬನ್ನಿ ಇಂದು ನಿಮ್ಮ ತ್ವಚೆಗೆ ಸಹಾಯ ಮಾಡುವ ಗಿಡಗಳ ಕುರಿತು ತಿಳಿದುಕೊಳ್ಳೋಣ. ಇದರಲ್ಲಿರುವ ಮತ್ತೊಂದು ಪ್ರಯೋಜನವೆಂದರೆ, ಇದರಿಂದ ಯಾವುದೇ ಅಡ್ಡ ಪರಿಣಾಮಗಳು ನಿಮ್ಮನ್ನು ಕಾಡುವುದಿಲ್ಲ. ಆದ್ದರಿಂದ ಇವುಗಳ ಬಗ್ಗೆ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬನ್ನಿ ಅಂತಹ ಪ್ರಯೋಜನಕಾರಿಯಾದ ಗಿಡಗಳ ಕುರಿತು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ.

ಅಲೋವೆರಾ
ಲೋಳೆ ಅಥವಾ ಅಲೋವೆರಾವು ತ್ವಚೆಗೆ ಹೇಳಿ ಮಾಡಿಸಿದ ಗಿಡವಾಗಿರುತ್ತದೆ. ಅಲೋವಿರಾದ ಜೆಲ್ ಅನ್ನು ಮೊಡವೆಗಳಿಂದ ಮುಕ್ತಿ ಪಡೆಯಲು ಬಳಸಲಾಗುತ್ತದೆ. ಇದೊಂದು ಔಷಧೀಯ ಅಂಶವಾಗಿರುವ ಗಿಡಮೂಲಿಕೆಯಾಗಿದ್ದು, ಇದು ಸನ್ ಬರ್ನ್ ಅನ್ನು ನಿವಾರಿಸುವುದರ ಜೊತೆಗೆ ಇದರಲ್ಲಿರುವ ತಂಪುಕಾರಿ ಗುಣಗಳು ಬೇಸಿಗೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಲ್ಯಾವೆಂಡರ್
ಈ ಮಧುರವಾದ ಸುವಾಸನೆ ಬೀರುವ ಗಿಡವು ನಿಮ್ಮ ತ್ವಚೆಗೆ ಪ್ರಯೋಜನಕಾರಿಯಾಗಿರುತ್ತದೆ. ಲ್ಯಾವೆಂಡರ್ ನಿಮ್ಮ ತ್ವಚೆಯಲ್ಲಿರುವ ಟಾಕ್ಸಿನ್‍ಗಳನ್ನು ಹೊರಹಾಕುತ್ತದೆ. ಇದರಲ್ಲಿರುವ ಸುಗಂಧವು ನಿಮಗೆ ಅಪ್ಯಾಯಮಾನವಾಗಿರುವುದರ ಜೊತೆಗೆ, ನಿಮ್ಮ ತ್ವಚೆಯನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ.

ಗುಲಾಬಿ
ನಿಮಗೆ ಎಂದಾದರೂ ಬಿಡುವು ದೊರೆತರೆ ಗುಲಾಬಿ ಹೂಗಳತ್ತ ಹೋಗಿ. ಅದರ ಫಕಳೆಗಳನ್ನು ಕಿತ್ತುಕೊಳ್ಳಿ. ಇದಕ್ಕೆ ಈ ಮಧುರವಾದ ಸುವಾಸನೆಯು ಬರಲು ಕಾರಣ, ಅದರಲ್ಲಿರುವ ಅಧಿಕ ನೀರಿನಂಶ. ಈ ಹೂವಿನ ರಸವನ್ನು ಹಿಂಡಿಕೊಂಡು ಮುಖಕ್ಕೆ ಲೇಪಿಸಿ, ಅರ್ಧ ಗಂಟೆ ಬಿಟ್ಟು ನಂತರ ತೊಳೆಯಿರಿ.

ಟೀ ಟ್ರೀ
ಈ ಗಿಡವು ನಿಮ್ಮ ತ್ವಚೆಯಲ್ಲಿ ಕಂಡುಬರುವ ಮೊಡವೆ ಮತ್ತು ರ‍್ಯಾಷಸ್ ಗಳನ್ನು ಗುಣ ಮುಖ ಮಾಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಇದರ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ತ್ವಚೆಯಲ್ಲಿ ಸಮಸ್ಯೆಯಿರುವ ಭಾಗಕ್ಕೆ ಲೇಪಿಸಬೇಕು. ಒಣಗಿದ ಮೇಲೆ ಇದನ್ನು ತೊಳೆಯಿರಿ, ಸಾಕು

ಬೇವು
ಬೇವಿನಲ್ಲಿ ಅದ್ಭುತವಾದ ಆಂಟಿಆಕ್ಸಿಡೆಂಟ್‍ಗಳು ಇರುತ್ತವೆ. ಇದು ತ್ವಚೆಗೆ ಒಳ್ಳೆಯದು. ಬೇವಿನಲ್ಲಿರುವ ಎಣ್ಣೆಯು,ನಿಮ್ಮ ತ್ವಚೆಯನ್ನು ಯೌವನದಿಂದ ಕಂಗೊಳಿಸುವಂತೆ ಮಾಡುತ್ತದೆ. ಜೊತೆಗೆ ತ್ವಚೆಯ ಬಣ್ಣವನ್ನು ಸಹ ಸುಧಾರಿಸುತ್ತದೆ.



Click it and Unblock the Notifications
