Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆಗೆ ಮಾತ್ರವಲ್ಲ, ಕೈಗಳಿಗೂ ಬೇಕು ನಲ್ಮೆಯ ಆರೈಕೆ
ಇತ್ತೀಚಿನ ಬಿಡುವಿಲ್ಲದ ಒತ್ತಡದ ಬದುಕಿನಲ್ಲಿ ತಮ್ಮ ದೇಹ ಸೌಂದರ್ಯದ ಬಗ್ಗೆ ಚಿಂತಿಸಲು ಹೆಚ್ಚಿನವರಿಗೆ ಸಮಯವೇ ಇಲ್ಲ. ಅದರಲ್ಲೂ ನಮ್ಮ ಕೈಗಳು ಹಾಗೂ ಕಾಲುಗಳ ಬಗ್ಗೆ ಕಡೆಗಣಿಸಲು ಸಾಧ್ಯವೇ ಇಲ್ಲ. ಆದರೂ ಸಹ ಮುಡಿಯಿಂದ ಅಡಿಯವರೆಗೆ ಅಂದವಾಗಿ ಕಾಣಬೇಕೆಂಬುದು ಎಲ್ಲರ ಬಯಕೆ. ಕೈಗಳು ಮತ್ತು ಕಾಲುಗಳು ನಮ್ಮ ದೇಹದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಕೈಕಾಲುಗಳ ಚರ್ಮವನ್ನು ಇನ್ನಷ್ಟು ಮೃದುಗೊಳಿಸಲು ಮತ್ತು ನಾಜೂಕುಗೊಳಿಸಲು ಹೆಚ್ಚಿನ ಆರೈಕೆ ಅಗತ್ಯ. ಮಾಯಿಶ್ಚರೈಸರ್‌ಗಳನ್ನು ಬಳಸುವುದೊಂದೇ ಮಾರ್ಗವೆಂದು ಕೆಲವರು ಭಾವಿಸಿದ್ದಾರೆ. ಆದರೆ ಪ್ರಾಕೃತಿಕವಾಗಿಯೂ ಸಹ ಅನೇಕ ವಿಧಾನಗಳು ಕೈಕಾಲುಗಳ ಅಂದವನ್ನು ಹೆಚ್ಚಿಸುತ್ತವೆ. ಸದರಿ ಕೆಲ ಸುಲಭ ವಿಧಾನಗಳನ್ನು ತಮ್ಮ ಉಪಯೋಗಕ್ಕಾಗಿ ನೀಡಲಾಗಿದೆ.
ಕೈಗಳ ಚರ್ಮವನ್ನು ಆಗಿಂದಾಗ್ಗೆ ಸಾಧ್ಯವಾದಷ್ಟು ನಯವಾಗಿ ಸ್ವಚ್ಛಗೊಳಿಸುತ್ತಿರಬೇಕು, ಅಲ್ಲದೆ ಚಳಿಗಾಲದಲ್ಲಿ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಸಾಮಾನ್ಯವಾಗಿ ಇಂತಹ ಸಮಯದಲ್ಲಿ ನಿಮ್ಮ ಸುತ್ತಲಿನ ಹವಾಮಾನ, ರಾಸಾಯನಿಕ ಪೇಸ್ಟ್‌ಗಳ ಬಳಕೆ, ಸಿಹಿ ನೀರನ್ನು ಬಳಸದಿರುವುದು, ಬಿಸಿಲಿಗೆ ಒಡ್ಡುವುದು ಹಾಗೂ ಅನೇಕ ಕಾರಣಗಳಿಂದ ತ್ವಚೆಯು ಒಣಗಿ ಒರಟಾಗಲು ಕಾರಣವಾಗುತ್ತದೆ. ಕೈಗಳು ಹಾಗೂ ಕಾಲುಗಳು ಮಹಿಳೆಯ ಅಂದಕ್ಕೆ ಶೋಭೆಯನ್ನು ನೀಡುತ್ತದೆಂದು ನಾಣ್ಣುಡಿ ಒಂದು ಹೇಳುತ್ತದೆ. ಆದ್ದರಿಂದ ನಿಮ್ಮ ದೇಹದ ಚರ್ಮದ ಅಂದದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸುವ ಸಮಯ ಬಂದಿದೆ. ಹೌದು, ಬೋಲ್ಡ್ ಸ್ಕೈ ನಿಮಗಾಗಿ ಕೆಲವು ಪರಿಣಾಮಕಾರಿಯಾದ ಸರಳ ವಿಧಾನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಮುಂದೆ ಓದಿ...

ಆಲಿವ್ ತೈಲ ಹಾಗೂ ಸಕ್ಕರೆಯ ಬಳಕೆ
ಆಲಿವ್ ತೈಲ ಹಾಗೂ ಸಕ್ಕರೆಯ ಮಿಶ್ರಣದಿಂದ ನಿಮ್ಮ ಕೈಗಳ ಚರ್ಮದ ಮೇಲೆ ನಯವಾಗಿ ತಿಕ್ಕಿದರೆ, ಅಜೀವ ಕೋಶಗಳನ್ನು ನಾಶಪಡಿಸಿ, ತ್ವಚೆಯನ್ನು ಅಂದಗೊಳಿಸುತ್ತದೆ. ಒಂದು ಚಮಚ ಸಕ್ಕರೆಗೆ ಕೆಲವು ತೊಟ್ಟು ಆಲಿವ್ ತೈಲವನ್ನು ಬೆರೆಸಿ. ಈ ಮಿಶ್ರಣವನ್ನು ನಿಮ್ಮ ಅಂಗೈಯಿಗೆ, ಕೈಕಾಲುಗಳ ತ್ವಚೆಯ ಮೇಲೆ ನಯವಾಗಿ ತಿಕ್ಕಿ. ತ್ವಚೆಯು ಮೃದುವಾಗುವವರೆಗೆ ನಯವಾಗಿ ತಿಕ್ಕಿ. ನಂತರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ಈ ಪ್ರಕ್ರಿಯೆಯನ್ನು ವಾರಕ್ಕೆ ಒಂದು ಬಾರಿಯಂತೆ ಅನುಸರಿಸುತ್ತಾ ಹೋದರೆ ಕೈಕಾಲುಗಳ ಚರ್ಮ ಕೋಮಲತೆಯಿಂದ ಕಂಗೊಳಿಸುತ್ತದೆ. ಕೈಗಳ ಸೌಂದರ್ಯವನ್ನು ಇಮ್ಮಡಿಗೊಳಿಸುವ ತವಕವೇ?
ಆಲಿವ್ ತೈಲ ಮತ್ತು ಓಟ್ ಹಿಟ್ಟು
ಮೊಟ್ಟೆ, ಬಾದಾಮಿ ಮತ್ತು ಜೇನುತುಪ್ಪ
ಮೊಟ್ಟೆಯ ಒಳಗಿನ ಲೋಳೆಯ ಭಂಡಾರ, ಬಾದಾಮಿ ಮತ್ತು ಜೇನುತುಪ್ಪವನ್ನು ಅನುಕ್ರಮವಾಗಿ ಮಿಶ್ರಣ ಮಾಡಿ ನಿಮ್ಮ ಚರ್ಮಕ್ಕೆ ಹಚ್ಚಿದರೆ ಕೈಗಳ ತ್ವಚೆಯು ನಾಜೂಕಾಗಿ ಹೆಚ್ಚು ಮೃದುಗೊಳ್ಳುತ್ತದೆ. ಈ ಮಿಶ್ರಣವನ್ನು ಸಂಜೆ ಸಮಯದಲ್ಲಿ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ನೀರಿನಿಂದ ಸ್ವಚ್ಛಗೊಳಿಸಿದರೆ ಉತ್ತಮ ಫಲಿತಾಂಶ ದೊರಕುವುದು.
ಬೆಣ್ಣೆ ಮತ್ತು ಬಾದಾಮಿ ತೈಲ
ಲಿಂಬೆ ಹಾಗೂ ಸಕ್ಕರೆ
ಲಿಂಬೆಯಲ್ಲಿನ ಆಮ್ಲದ ಸತ್ವ ಬಿಸಿಲಿನ ತಾಪದಿಂದ ಉಂಟಾಗುವ ಸುಕ್ಕುಗಳನ್ನು ತಡೆಯುತ್ತದೆ ಹಾಗೂ ಸಕ್ಕರೆಯು ತ್ವಚೆಯ ಅಂದವನ್ನು ಹೆಚ್ಚಿಸಿ ನಾಜೂಕುಗೊಳಿಸುತ್ತದೆ. ಈ ಮಿಶ್ರಣವನ್ನು ನಯವಾಗಿ ಕೈಗಳ ತ್ವಚೆಗೆ ತಿಕ್ಕಿ, ಸ್ವಲ್ಪ ಸಮಯದ ನಂತರ ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಮಾಡಿದರೆ ಕೈಕಾಲುಗಳ ಸೌಂದರ್ಯ ನೈಜವಾಗಿ ಹೆಚ್ಚುತ್ತದೆ.



Click it and Unblock the Notifications


