Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಣ್ಣುಗಳ ಹೊಳಪನ್ನು ಹೆಚ್ಚಿಸುವ ನೈಸರ್ಗಿಕ ಮನೆಮದ್ದುಗಳು
ಕಣ್ಣುಗಳು ನಮ್ಮ ಮುಖದ ಸೌಂದರ್ಯ ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಇಂದಿನ ದಿನಗಳಲ್ಲಿ ಕಣ್ಣಿನ ಮೇಕಪ್ ಜನಪ್ರಿಯತೆ ಜತೆಗೆ ಒಂದು ಟ್ರೆಂಡ್ ಆಗುತ್ತಿದೆ. ಪ್ರಸಿದ್ಧ ಸೆಲೆಬ್ರಿಟಿಯಿಂದ ಹಿಡಿದು ಕಾಲೇಜಿಗೆ ಹೋಗುವ ಸಾಮಾನ್ಯ ಹುಡುಗಿಯ ತನಕ ಪ್ರತಿಯೊಬ್ಬರು ತಮ್ಮ ಕಣ್ಣುಗಳು ಬಹುಕಾಂತೀಯವಾಗಿ ಕಾಣಬೇಕೆಂದು ಬಯಸುತ್ತಾರೆ.
ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ದುಬಾರಿ ಬೆಲೆಯ ಸೌಂದರ್ಯವರ್ಧಕ ಸಾಮಾಗ್ರಿಗಳನ್ನು ಬಳಸುವುದರ ಬದಲಿಗೆ ಸರಳವಾದ ಮನೆ ಮದ್ದುಗಳನ್ನು ಬಳಸುವ ಮೂಲಕ ಕಣ್ಣುಗಳಿಗೆ ಮತ್ತಷ್ಟು ಕಾಂತಿಯನ್ನು ನೀಡಬಹುದು. ಕಣ್ಣುಗಳ ಬಗ್ಗೆ ಇರುವ ಮತ್ತೊಂದು ಕುತೂಹಲಕಾರಿಯಾದ ವಿಚಾರವೇನೆಂದರೆ, ಇವುಗಳು ನಾವು ಹುಟ್ಟಿದಾಗ ಎಷ್ಟು ಗಾತ್ರ ಇರುತ್ತವೋ, ಅಷ್ಟೇ ಗಾತ್ರದಲ್ಲಿ ನಾವು ಸಾಯುವ ತನಕ
ಇರುತ್ತವೆ. ಇವುಗಳು ಎಂದಿಗು ಹೆಚ್ಚು ಕಮ್ಮಿ ಆಗುವುದಿಲ್ಲ. ಹಾಗಾಗಿ ಇದರ ಮೇಲೆ ವಯಸ್ಸಿನ ಪ್ರಭಾವವೇ ಬೀರುವುದಿಲ್ಲ. ಮೇಕಪ್ ಕಲಾವಿದರು ಸಹ ಕಣ್ಣುಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿ, ಮೇಕಪ್ ಮಾಡುತ್ತಾರೆ. ಏಕೆಂದರೆ ಕಣ್ಣುಗಳ ಜನರನ್ನು ಆಕರ್ಷಿಸುವ ಮೊದಲ ಅಂಗಗಳಾಗಿರುತ್ತವೆ. ಕಣ್ಣಿನ ಹುಬ್ಬುಗಳನ್ನು ಸುಂದರವಾಗಿರಿಸಲು ಸಲಹೆಗಳು
ಬನ್ನಿ ಇಂದು ನಾವು ನಿಮಗಾಗಿ ಮೇಕಪ್ ಇಲ್ಲದೆ ಸರಳ ಮನೆ ಮದ್ದುಗಳಿಂದ ಹೇಗೆ ಕಣ್ಣುಗಳನ್ನು ಆಕರ್ಷಕಗೊಳಿಸುವುದು ಎಂಬ ಬಗ್ಗೆ ತಿಳಿಸಿಕೊಡುತ್ತೇವೆ. ಈ ಸ್ವಾಭಾವಿಕ ಕಣ್ಣುಗಳ ಸೌಂದರ್ಯರ್ಧಕ ಮನೆ ಮದ್ದುಗಳು, ಕಣ್ಣುಗಳಿಂದ ಕಲ್ಮಶಗಳನ್ನು ಮತ್ತು ಕಣ್ಣು ಕೆಂಪಾಗಿಸುವ ಅಂಶಗಳನ್ನು ತೆಗೆದುಹಾಕಿ, ಅವುಗಳಿಗೆ ಆರಾಮವನ್ನು ಒದಗಿಸುತ್ತವೆ. ಈ ಸ್ವಾಭಾವಿಕ ಕಣ್ಣುಗಳ ಮಾಸ್ಕ್‌ಗಳ ಸಹಾಯದಿಂದ ನಿಮ್ಮ ಮನೆಯಲ್ಲಿಯೇ ಕಣ್ಣುಗಳಿಗೆ ಸೌಂದರ್ಯವನ್ನು ನೀಡಿ. ಬನ್ನಿ ಆ ಮನೆ ಮದ್ದುಗಳು ಯಾವುವು ಮತ್ತು ಅವುಗಳನ್ನು ಹೇಗೆ ಬಳಸಿಕೊಳ್ಳುವುದು ಎಂದು ತಿಳಿದುಕೊಂಡು ಬರೋಣ.

ಸೌತೆಕಾಯಿ
ಇವು ಆಯಾಸಗೊಂಡ ಕಣ್ಣುಗಳಿಗೆ ಮತ್ತು ಊದಿಕೊಂಡ ಕಣ್ಣುಗಳಿಗೆ ಆರಾಮವನ್ನು ಒದಗಿಸುತ್ತವೆ. ಇವುಗಳಲ್ಲಿ ನೀರಿನ ಅಂಶ ಯಥೇಚ್ಛವಾಗಿರುತ್ತವೆ, ಇವು ಕಣ್ಣುಗಳ ಸುತ್ತಲಿನ ಕುಗ್ಗಿದ ಚರ್ಮವನ್ನು ಮತ್ತೆ ಮೊದಲಿನಂತೆ ಮಾಡುತ್ತವೆ. ಇದಕ್ಕಾಗಿ ಸೌತೆಕಾಯಿಯನ್ನು ಫ್ರಿಡ್ಜ್‌ನಲ್ಲಿಟ್ಟು ಹೊರ ತೆಗೆದು ದುಂಡಗೆ ಕತ್ತರಿಸಿಕೊಳ್ಳಿ. ತಣ್ಣಗಿರುವ ಈ ತುಂಡುಗಳನ್ನು ನಿಮ್ಮ ಕಣ್ಣುಗಳ ಮೇಲೆ 10 ನಿಮಿಷಗಳ ಕಾಲ ಇಡಿ. ಖಂಡಿತವಾಗಿಯೂ ಫಲಪ್ರದ ಫಲಿತಾಂಶವನ್ನು ನೀವು ಕಾಣುವಿರಿ..

ಸೇಬಿನ ರಸ
ದಪ್ಪನಾದ ಹತ್ತಿಯ ಪ್ಯಾಡ್‌ಗಳನ್ನು ಪರಿಶುದ್ಧವಾದ ಸೇಬಿನ ರಸದಲ್ಲಿ ಅದ್ದಿ ಎರಡು ನಿಮಿಷ ಬಿಡಿ. ನಂತರ ಹೊರತೆಗೆದು, ಅವುಗಳನ್ನು ಕಣ್ಣುಗಳ ಮೇಲೆ 10 ನಿಮಿಷ ಇಡಿ. ಇದನ್ನು ಮತ್ತೆ ಐದು-ಹತ್ತು ನಿಮಿಷಗಳ ನಂತರ ಪುನರಾವರ್ತನೆ ಮಾಡಿ. ಸೇಬಿನಲ್ಲಿರುವ ವಿಟಮಿನ್‌ಗಳು ಕಣ್ಣುಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಇವು ನಿಮ್ಮ ಕಣ್ಣುಗಳಿಗೆ ಆರಾಮವನ್ನು ನೀಡುವುದರ ಜೊತೆಗೆ, ಹೊಳಪನ್ನು ಸಹ ನೀಡುತ್ತವೆ. ಕಣ್ಣುಗಳ ಸುತ್ತ ಬರುವ ಸುಕ್ಕುಗಳನ್ನು ಸಹ ಸೇಬುಗಳು ಪರಿಹರಿಸುತ್ತವೆ.

ಹಾಲು
ಕಣ್ಣುಗಳ ಹೊಳಪಿಗಾಗಿ ಹಾಲನ್ನು ಬಳಸುವಾಗ ಅದನ್ನು ಮೊದಲು ಐಸ್ ಕೋಲ್ಡ್ ಆಗುವ ತನಕ ರೆಫ್ರಿಜಿರೇಟರಿನಲ್ಲಿಡಿ. ನಂತರ ಅದರಲ್ಲಿ ಹತ್ತಿಯ ಉಂಡೆಗಳನ್ನು ಇರಿಸಿ. ಆರಾಮವಾಗಿ ಮಲಗಿಕೊಂಡು, ಮುಚ್ಚಿದ ಕಣ್ಣುಗಳ ಮೇಲೆ ಇದನ್ನು ಇರಿಸಿಕೊಳ್ಳಿ. ಇವು ಸಹ ಇಳಿಬಿದ್ದ ಮತ್ತು ಆಯಾಸಗೊಂಡ ಕಣ್ಣುಗಳಿಗೆ ಹೇಳಿ ಮಾಡಿಸಿದ ಪರಿಹಾರವಾಗಿರುತ್ತದೆ.

ಆಲೂಗಡ್ಡೆ ತುಂಡುಗಳು
ಕತ್ತರಿಸಿದ ಆಲೂಗಡ್ಡೆ ತುಂಡುಗಳನ್ನು ನಿಮ್ಮ ಮುಚ್ಚಿದ ಕಣ್ಣುಗಳ ಮೇಲೆ ಇರಿಸಿ. ಆಲೂಗಡ್ಡೆಗಳು ಕೇವಲ ಕಣ್ಣುಗಳ ಸುತ್ತ ಇರುವ ಕಪ್ಪು ವೃತ್ತಗಳನ್ನು ಮಾತ್ರ ನಿವಾರಿಸುವುದಿಲ್ಲ. ಜೊತೆಗೆ ಇವು ಕಣ್ಣುಗಳಿಗೆ ಅಗತ್ಯವಾಗಿರುವ ನೀರಿನಂಶವನ್ನು ಸಹ ನೀಡುತ್ತವೆ ಮತ್ತು ಊತವನ್ನು ನಿವಾರಿಸುತ್ತವೆ. ಆಲೂಗಡ್ಡೆಯಲ್ಲಿರುವ ಪೋಷಕಾಂಶಗಳನ್ನು ಕಣ್ಣಿನ ಕೆಳಗೆ ಇರುವ ತ್ವಚೆಯು ಹೀರಿಕೊಳ್ಳುತ್ತದೆ ಮತ್ತು ಅದರಿಂದ ಕಣ್ಣುಗಳು ಆರೋಗ್ಯಕರವಾಗಿ ಮತ್ತು ಹೊಳಪಿನಿಂದ ಕಂಗೊಳಿಸುತ್ತವೆ.

ರೋಸ್ ವಾಟರ್
ಮೊದಲು ನಿಮ್ಮ ಕಣ್ಣುಗಳ ಸುತ್ತ ಮತ್ತು ಮೇಲೆ ಹರಳೆಣ್ಣೆಯಿಂದ ಮೃದುವಾಗಿ ಮಸಾಜ್ ಮಾಡಿ. ನಂತರ ರೋಸ್ ವಾಟರಿನಲ್ಲಿ ನೆನೆಸಿದ ಹತ್ತಿ ಉಂಡೆಗಳನ್ನು ಕಣ್ಣುಗಳ ಮೇಲೆ ಇಡಿ. ಆದರೆ ಯಾವುದೇ ಕಾರಣಕ್ಕು ಇವುಗಳನ್ನು ಹಿಂಡಬೇಡಿ. ಇವುಗಳು ನಿಮ್ಮ ಕಣ್ಣುಗಳಿಗೆ ಹೊಳಪನ್ನು ನೀಡುವುದರ ಜೊತೆಗೆ, ಇಳಿ ಬೀಳುವಿಕೆಯನ್ನು ತಡೆಯುತ್ತವೆ.

ನೆಲ್ಲಿಕಾಯಿ
ಆಮ್ಲ ಅಥವಾ ಬೆಟ್ಟದ ನೆಲ್ಲಿಕಾಯಿಯನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಇದರ ಸಹಾಯದಿಂದ ಕಣ್ಣುಗಳನ್ನು ತೊಳೆಯಿರಿ. ನಿಮಗೆ ಬೇಕಾದಲ್ಲಿ ಈ ನೀರಿನಲ್ಲಿ ಹತ್ತಿಯ ಉಂಡೆಗಳನ್ನು ನೆನೆಸಿ, ಅದನ್ನು ನಿಮ್ಮ ಕಣ್ಣುಗಳ ಮೇಲೆ ಐದು ನಿಮಿಷಗಳ ಕಾಲ ಇರಿಸಿಕೊಳ್ಳಿ. ಇದರಲ್ಲಿರುವ ವಿಟಮಿನ್ ಸಿಯು ಊತ ಬಂದ ಮತ್ತು ಆಯಾಸಗೊಂಡ ಕಣ್ಣುಗಳಿಗೆ ಆರಾಮವನ್ನು ನೀಡುತ್ತದೆ. ಇದು ಸಹ ಕಣ್ಣುಗಳನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡಲು ಉತ್ತಮವಾದ ಮಾರ್ಗವಾಗಿರುತ್ತದೆ.



Click it and Unblock the Notifications