Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಸೂರ್ಯಕಾಂತಿ ಎಣ್ಣೆ: ಅದೇನು ಮಾಯೆ, ಅದೇನು ಜಾದೂ..
ಅಡುಗೆಯಲ್ಲಿ ರುಚಿ ಮತ್ತು ಆರೋಗ್ಯಕಾರಿ ಎಂದು ಮೆಚ್ಚುಗೆ ಗಳಿಸಿಕೊಂಡ ಸೂರ್ಯಕಾಂತಿ ಎಣ್ಣೆ ಚರ್ಮ ಮತ್ತು ಕೂದಲಿಗೂ ಉತ್ತಮ ಎಂದು ಈಗ ಕಂಡುಕೊಳ್ಳಲಾಗಿದೆ. ಬಿಸಿ ಮಾಡಿದಾಗ ಅತಿ ಕಡಿಮೆ ಪ್ರಮಾಣದಲ್ಲಿ ಆವಿಯಾಗುವುದು ಮತ್ತು ತನ್ನ ಪೋಷಕಾಂಶಗಳ ಗುಣಗಳನ್ನು ಉಳಿಸಿಕೊಳ್ಳುವುದು ಇದರ ಹೆಗ್ಗಳಿಕೆಯಾಗಿದೆ. ಇದೇ ಕಾರಣಕ್ಕೆ ಹುರಿಯುವ, ಕರಿಯುವ ಮತ್ತಿತರ ಅಡುಗೆ ಕೆಲಸಗಳಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಬಹಳವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಲಿನೋಲಿಕ್ ಆಮ್ಲ ಮತ್ತು ಪಾಮಿನಿಟಿಕ್ ಆಮ್ಲಗಳೆಂಬ ಎರಡು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಆರೋಗ್ಯಕಾರಿಯಾಗಿವೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿ lecithin, carotenoids, tocopherols ಮತ್ತು ವಿಟಮಿನ್ A, D ಹಾಗೂ E ಗಳ ಆಗರವೂ ಆಗಿದೆ. ಇದರ ಜೊತೆಗೆ ಖನಿಜಗಳಾದ ಮೆಗ್ನೀಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಸತು ಸಹಾ ಲಭ್ಯವಿವೆ. ಆರೋಗ್ಯ ಹೆಚ್ಚಿಸುತ್ತೆ ಸೂರ್ಯಕಾಂತಿ ಎಣ್ಣೆ
ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿದ್ದು ಕೂದಲ ಮತ್ತು ಚರ್ಮದ ಆರೈಕೆಗೂ ಸಲ್ಲುತ್ತದೆ. ಏಕಪ್ರಕಾರವಾದ ಕಾಂತಿಯುಳ್ಳ ತ್ವಚೆ ಮತ್ತು ಹೊಳಪುಳ್ಳ ಕೂದಲಿಗಾಗಿ ಸೂರ್ಯಕಾಂತಿ ಎಣ್ಣೆ ಹೇಳಿ ಮಾಡಿಸಿದಂತಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ಪೋಷಕಾಂಶಗಳು ಹೇರಳವಾಗಿದ್ದರೂ ಇದರ ಸೌಂದರ್ಯವರ್ಧಕ ಗುಣಗಳಿಂದಾಗಿ ಅಡುಗೆಯ ಹೊರತಾಗಿ ಸೌಂದರ್ಯ ಪ್ರಸಾಧನಗಳಲ್ಲೂ ಹಲವು ಸಂಸ್ಥೆಗಳು ಈ ಎಣ್ಣೆಯನ್ನು ಬಳಸುತ್ತಿವೆ. ಅಲ್ಲದೇ ಮೊಡವೆ, ಚರ್ಮರೋಗ ಮತ್ತು ಉರಿಯೂತ ನಿವಾರಣೆಯೂ ಸೂರ್ಯಕಾಂತಿ ಎಣ್ಣೆ ಉಪಯುಕ್ತವಾಗಿದೆ. ಇದು ಚರ್ಮದ ಸೆಳೆತವನ್ನು ಹೆಚ್ಚಿಸಿ ವೃದ್ಧಾಪ್ಯವನ್ನು ದೂರವಿಡುತ್ತದೆ. ಇಂದು ಸೂರ್ಯಕಾಂತಿ ಎಣ್ಣೆ ಕೂದಲ ಮತ್ತು ಚರ್ಮದ ಆರೈಕೆಯಲ್ಲಿ ಯಾವ ಪಾತ್ರ ವಹಿಸುತ್ತದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಮೊಡವೆಗಳನ್ನು ನಿವಾರಿಸುತ್ತದೆ
ಈ ಎಣ್ಣೆಯಲ್ಲಿ ಹೇರಳವಾಗಿರುವ ಆಂಟಿ ಆಕ್ಸಿಡೆಂಟುಗಳ ಕಾರಣ ಇದು ಚರ್ಮಕ್ಕೆ ಒಳಗಿನಿಂದ ಉತ್ತಮ ಪೋಷಣೆ ನೀಡಿ ಮೊಡವೆಗಳಾಗದಂತೆ ರಕ್ಷಿಸುತ್ತದೆ. ಜೊತೆಗೇ ಚರ್ಮಕ್ಕೆ ಆರ್ದ್ರತೆ ನೀಡಿ ಸೂಕ್ಷ್ಮರಂಧ್ರಗಳಿಂದ ಕೊಳೆ ಮತ್ತು ಕಲ್ಮಶಗಳು ಹೊರಹೋಗುವಂತೆ ಮಾಡುತ್ತದೆ. ಪರಿಣಾಮವಾಗಿ ಮೊಡವೆಗಳು ಮೂಡುವ ಸಾಧ್ಯತೆ ಕಡಿಮೆಯಾಗುತ್ತದೆ ಹಾಗೂ ಇತರ ಚರ್ಮದ ವ್ಯಾಧಿಗಳು ಬರುವ ಸಂಭವ ಕಡಿಮೆಯಾಗುತ್ತದೆ. ಚರ್ಮದೊಳಗೆ ಇದು ಸುಲಭವಾಗಿ ಇಳಿಯುವ ಕಾರಣ ತ್ವಚೆ ಸುಲಭವಾಗಿ ಎಣ್ಣೆಯ ಪೋಷಕಾಂಶಗಳನ್ನು ಪಡೆಯುತ್ತದೆ.

ವೃದ್ಧಾಪ್ಯವನ್ನು ದೂರವಿರಿಸುತ್ತದೆ
ಆಗಾಗ ಸೂರ್ಯಕಾಂತಿ ಎಣ್ಣೆಯಿಂದ ಚರ್ಮವನ್ನು ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳುವುದರಿಂದ ಚರ್ಮದ ಸೆಳೆತ ಉತ್ತಮಗೊಂಡು ಕಾಂತಿಯುಕ್ತವಾಗುತ್ತದೆ. ಇದು ಕಾಲನ ಹೊಡೆತಕ್ಕೆ ಸಿಕ್ಕಿದ ಚರ್ಮದಲ್ಲಿ ಮೂಡುವ ನೆರಿಗೆಗಳನ್ನು ತಡವಾಗಿಸಲು ನೆರವಾಗುತ್ತದೆ. ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೆಳೆತ ಹೆಚ್ಚಿಸಲು ನೆರವಾಗಿ ನೆರಿಗೆ, ಸೂಕ್ಷ್ಮ ಗೆರೆಗಳು ಮತ್ತು ಕಲೆಗಳು ಮೂಡದಂತೆ ತಡೆಯುತ್ತದೆ.

ಚರ್ಮವನ್ನು ಆರೋಗ್ಯಕರವಾಗಿಸುತ್ತದೆ
ಸೂರ್ಯಕಾಂತಿ ಎಣ್ಣೆಯಲ್ಲಿರುವ ಪೋಷಕಾಂಶಗಳು ಚರ್ಮಕ್ಕೆದುರಾಗುವ ಬ್ಯಾಕ್ಟೀರಿಯಾ ಮತ್ತು ಇತರ ಹಾನಿಕಾರಕ ರಾಸಾಯನಿಕಗಳ ಪ್ರಭಾವಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧಗೊಳಿಸುತ್ತದೆ. ಈ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡ ಬಳಿಕ ಚರ್ಮ ಇದನ್ನು ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ, ತನ್ಮೂಲಕ ಚರ್ಮದ ಹೊಸ ಜೀವಕೋಶಗಳು ಬೆಳೆಯಲು ನೆರವಾಗುತ್ತದೆ. ಇದು ಇತರ ಎಣ್ಣೆಗಳಿಗಿಂತ ಕಡಿಮೆ ಜಿಡ್ಡಿನಂಶ ಹೊಂದಿದ್ದು ನೀರಿಗಿಂತ ಕೊಂಚವೆ ಗಾಢವಾಗಿರುವುದರಿಂದ ಹಚ್ಚಿಕೊಳ್ಳಲೂ ಸುಲಭವಾಗಿದೆ.

ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ
ಸೂರ್ಯಕಾಂತಿ ಎಣ್ಣೆಯನ್ನು ತೆಳುವಾಗಿ ಮುಖ ಮತ್ತು ದೇಹದ ಬಿಸಿಲಿಗೆ ಒಡ್ಡುವ ಇತರ ಭಾಗಗಳಿಗೆ ನಯವಾಗಿ ಹಚ್ಚಿಕೊಳ್ಳುವ ಮೂಲಕ ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್ ಇ ಸೂರ್ಯನ ಕಿರಣಗಳನ್ನು ಹೀರಿಕೊಳ್ಳಲು ನಿರಾಕರಿಸಿ ಹಾನಿಯಾಗುವುದರಿಂದ ರಕ್ಷಿಸುತ್ತದೆ.

ಕೂದಲ ಹೊಳಪನ್ನು ಹೆಚ್ಚಿಸುತ್ತದೆ
ಇದರಲ್ಲಿ ಉತ್ತಮ ಪ್ರಮಾಣದ ಕೊಬ್ಬಿನ ತೈಲ ಹಾಗೂ ಆಂಟಿ ಆಕ್ಸಿಡೆಂಟುಗಳಿರುವುದರ ಕಾರಣ ಕೂದಲು ಸಹಾ ಉತ್ತಮ ಪೋಷಣೆ ಪಡೆದು ಸೌಮ್ಯ ಹಾಗೂ ಹೊಳಪುಳ್ಳದ್ದಾಗುತ್ತದೆ. ನಿಯಮಿತವಾಗಿ ಕೂದಲಿಗೆ ಸೂರ್ಯಕಾಂತಿ ಎಣ್ಣೆಯಿಂದ ನಯವಾಗಿ ಮಸಾಜ್ ಮಾಡುವ ಮೂಲಕ ಕೂದಲು ಕಾಂತಿಯುಕ್ತ ಹಾಗೂ ಸಿಕ್ಕುರಹಿತವಾಗುತ್ತದೆ.

ಕೂದಲು ತುಂಡಾಗುವುದರಿಂದ ರಕ್ಷಿಸುತ್ತದೆ
ಕೂದಲಿನಲ್ಲಿ ಕೆಲವು ಕಣಗಳ ಕೊರತೆಯಿಂದ ಕೂದಲು ಸುಲಭವಾಗಿ ತುಂಡಾಗುತ್ತದೆ. ಇದಕ್ಕೆ ಒಣ ಕೂದಲು ಪ್ರಮುಖ ಕಾರಣವಾಗಿದೆ. ಕೂದಲಿಗೆ ಸೂರ್ಯಕಾಂತಿ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೂದಲಿಗೆ ಆರ್ದ್ರತೆ ನೀಡುತ್ತದೆ, ಆಳವಾಗಿ ಕೂದಲನ್ನು ಒಳಗಿನಿಂದ ಪೋಷಣೆ ನೀಡುತ್ತದೆ, ತನ್ಮೂಲಕ ಕೂದಲು ತುಂಡಾಗುವುದು, ತುದಿ ಸೀಳುವುದು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ.

ಕೂದಲು ತೆಳುವಾಗುವುದರಿಂದ ರಕ್ಷಿಸುತ್ತದೆ
ಇದರಲ್ಲಿರುವ ಲಿನೋಲಿಕ್ ಆಮ್ಲ ಕೂದಲು ಉದುರುವುದರಿಂದ ರಕ್ಷಣೆ ನೀಡಲು ಸಮರ್ಥವಾಗಿರುವುದರಿಂದ ಕೂದಲು ಉದುರುವ ಪ್ರಮಾಣ ಕಡಿಮೆಯಾಗಿ ಸೊಂಪಾಗಿ ಬೆಳೆಯಲು ನೆರವಾಗುತ್ತದೆ. ಸೂಕ್ತ ವಯಸ್ಸಿನಲ್ಲಿ ಸೂರ್ಯಕಾಂತಿ ಎಣ್ಣೆಯ ಮಸಾಜ್ ಮಾಡುವ ಮೂಲಕ ಬಕ್ಕತಲೆಯಾಗುವ ಸಂಭವವನ್ನು ಸಾಕಷ್ಟು ಮುಂದೂಡಬಹುದು. ಇದರಲ್ಲಿರುವ ವಿಟಮಿನ್ನುಗಳು ಮತ್ತು ಇತರ ಪೋಷಕಾಂಶಗಳು ಕೂದಲು ಮತ್ತು ಚರ್ಮಕ್ಕೆ ಬಹುಪಯುಕ್ತವಾಗಿವೆ.



Click it and Unblock the Notifications











