Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?
ಮಹಿಳೆಯರ ಸೌಂದರ್ಯ ಮತ್ತು ಸ್ವಚ್ಛತಾಪ್ರಜ್ಞೆಯನ್ನು ಅವರ ಉಗುರುಗಳನ್ನು ನೋಡುವ ಮೂಲಕ ಕೂಡಲೇ ಅರಿತುಕೊಳ್ಳಬಹುದು, ಎಂದು ಒಂದು ಸುಭಾಷಿತ ಹೇಳುತ್ತದೆ. ಹೌದು, ನಮ್ಮ ದೇಹದ ಅಂಗಾಂಗಗಳಲ್ಲಿ ಉಗುರಿಗೆ ಕೂಡ ಪ್ರಮುಖ ಮಹತ್ವವಿದ್ದು ಇವುಗಳ ಕಾಳಜಿಯನ್ನು ದೇಹದ ಇತರ ಅಂಗಾಂಗಗಳ ರೀತಿಯಲ್ಲೇ ನಾವು ಮಾಡಬೇಕು. ನಮ್ಮ ದೇಹದಲ್ಲಿ ಉಂಟಾಗುವ ವೈಪರೀತ್ಯಗಳು ಉಗುರಿನ ಪೋಷಣೆಯಲ್ಲಿ ಕೊರತೆಯನ್ನುಂಟು ಮಾಡುತ್ತವೆ, ಉದಾಹರಣೆಗೆ ರಕ್ತದ ಕೊರತೆ, ಬಣ್ಣ ಹಳದಿಯಾಗುವಿಕೆ, ಪೋಷಕಾಂಶದ ಕೊರತೆ ಮೊದಲಾದ ಕೊರತೆಗಳನ್ನು ನಿಮ್ಮ ಉಗುರು ಎದುರಿಸಬಹುದು. ಉಗುರು ತುಂಡಾಗುವಿಕೆಯನ್ನು ತಡೆಯಲು ಏಳು ಸಲಹೆಗಳು
ನಮ್ಮಲ್ಲಿ ಬಹುತೇಕ ಮಂದಿಗೆ ಪರಿಸರ ಮಾಲಿನ್ಯವು ತ್ವಚೆ ಮತ್ತು ಕೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿರುತ್ತದೆ. ಆದರೆ ಅಂತಹವರು ಸಹ ಉಗುರುಗಳ ಆರೋಗ್ಯವನ್ನು ಉದಾಸೀನ ಮಾಡಿರುತ್ತಾರೆ. ಉಗುರುಗಳು ಯಾವಾಗಲು ಸ್ವಚ್ಛವಾಗಿ ಇಟ್ಟಿರಬೇಕು ಮತ್ತು ಅದನ್ನು ನೇಲ್ ಕಟ್ಟರ್ ಮೂಲಕ ಜಾಗರೂಕತೆಯಿಂದ ಕತ್ತರಿಸಿರಬೇಕು. ಉಗುರುಗಳನ್ನು ಆರೋಗ್ಯಕರವಾದ ರೀತಿಯಲ್ಲಿ ಕಾಪಾಡಿಕೊಳ್ಳಲು ಹಲವಾರು ಮಾರ್ಗೋಪಾಯಗಳಿವೆ.
ಇವುಗಳ ಪೈಕಿ, ಮನೆಯಲ್ಲಿಯೇ ಕೈಗೊಳ್ಳಬಹುದಾದ ಪರಿಹಾರೋಪಾಯಗಳು ಹೆಚ್ಚು ಸ್ಥಿರವಾದವುಗಳಾಗಿರುತ್ತವೆ ಹಾಗೂ ವಾಸ್ತವದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಿರುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಉಗುರಿನ ಕಾಳಜಿಯನ್ನು ಹೇಗೆ ಮಾಡಬೇಕು ಹಾಗೂ ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದನ್ನು ನಾವು ವಿವರವಾಗಿ ತಿಳಿಸಲಿರುವೆವು, ಮುಂದೆ ಓದಿ..

ಉಗುರಿನ ಸದೃಢತೆಗಾಗಿ ಲಿಂಬೆ ರಸ
ಸೂಕ್ಷ್ಮವಾದ, ಏನಾದರು ತಾಗಿದರೆ ಮುರಿದು ಹೋಗುವ ಮತ್ತು ಹಳದಿಯಾಗಿರುವ ಉಗುರುಗಳಿಂದ ಬೇಸತ್ತಿದ್ದೀರಾ? ಚಿಂತೆ ಮಾಡಬೇಡಿ. ನಿಮ್ಮ ಬಳಿ ಲಿಂಬೆಹಣ್ಣು ಇದ್ದರೆ ಸಾಕು, ಇದಕ್ಕೆ ಪರಿಹಾರ ಸಿಕ್ಕಂತೆಯೇ!.ಲಿಂಬೆ ರಸದಲ್ಲಿ ಸ್ವಲ್ಪ ಹೊತ್ತು ನಿಮ್ಮ ಉಗುರುಗಳನ್ನು ನೆನೆಸಿ ಅವುಗಳನ್ನು ಸದೃಢಗೊಳಿಸಿ. ಇದು ನಿಮ್ಮ ಉಗುರಿನಲ್ಲಿರುವ ಜಡತ್ವವನ್ನು ಮತ್ತು ಹಳದಿ ಅಂಶವನ್ನು ತೆಗೆದು ಹಾಕುತ್ತದೆ.

ಉಗುರಿನ ಬಣ್ಣ ಹಳದಿಯಾಗಿದ್ದರೆ
ಉತ್ತಮ ಗುಣಮಟ್ಟದ ಅಡುಗೆ ಸೋಡ ಮತ್ತು ಲಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ ಕೊಂಡು, ದಿನನಿತ್ಯ ಉಗುರುಗಳಿಗೆ ಹಚ್ಚಿ. ಇದು ಸಂಪೂರ್ಣವಾಗಿ ಹಳದಿ ಉಗುರುಗಳನ್ನು ಹೋಗಲಾಡಿಸಲು ಸಹಾಯಮಾಡುತ್ತದೆ.

ಆಲಿವ್ ಎಣ್ಣೆ
ಆಲಿವ್ ಎಣ್ಣೆಯ ಆರ್ದ್ರತೆ ನೀಡುವ ಗುಣ ಉಗುರು ಮತ್ತು ಉಗುರಿನ ಹಿಂಭಾಗದ ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಉಗುರ ಬುಡಕ್ಕೆ ಉತ್ತಮ ಪೋಷಣೆ ನೀಡುವುದರ ಜೊತೆಗೆ, ಉಗುರಿನ ಹೊಳಪಿಗೆ ನೆರವಾಗುತ್ತದೆ. ಇದಕ್ಕಾಗಿ ಬೆರಳ ತುದಿಗಳಿಗೆ ಕೊಂಚ ಆಲಿವ್ ಎಣ್ಣೆ ಹಚ್ಚಿ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಂದೊಂದಾಗಿ ಎಲ್ಲಾ ಬೆರಳುಗಳಿಗೆ ಮಸಾಜ್ ಮಾಡಿ. ಇದಕ್ಕೆ ಪ್ರತ್ಯೇಕವಾದ ಸಮಯದ ಅಗತ್ಯವಿಲ್ಲ. ಆರಾಮವಾಗಿ ಕುಳಿತಿದ್ದಾಗ ಅಥವಾ ಟೀವಿ ನೋಡುತ್ತಿದ್ದಾಗಲೂ ಅನುಸರಿಸಬಹುದು. ನಿಯಮಿತವಾಗಿ ಮಾಡುವ ಮಸಾಜ್‌ನಿಂದ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಮನಗಾಣುವಿರಿ.

ಉಗುರಿಗೆ ಬೆಣ್ಣೆ ಮಸಾಜ್
ಮನೆಯಲ್ಲಿಯೇ ಕಡೆದ ಬೆಣ್ಣೆ ಇದ್ದರೆ ಇದನ್ನೂ ಕೊಂಚಪ್ರಮಾಣದಲ್ಲಿ ಬೆರಳುಗಳಿಂದ ಮಸಾಜ್ ಮಾಡಬಹುದು. ಸುಮಾರು ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರನ್ನು ಬಳಸಿ ತೊಳೆದುಕೊಳ್ಳಿ. ಪ್ರತಿದಿನದ ಮಸಾಜ್ ಉತ್ತಮ ಪರಿಣಾಮ ನೀಡುತ್ತದೆ.

ಹಸಿರು ಬಣ್ಣದ ಎಲೆಗಳನ್ನು ಹೆಚ್ಚು ಸೇವಿಸಿ
ಉಗುರುಗಳ ಆರೈಕೆಗೆ ವಿಟಮಿನ್ ಎ, ಬಿ ಮತ್ತು ಸಿ ಗಳ ಅಗತ್ಯವಿದೆ. ಇವು ಗಾಢ ಹಸಿರು ಬಣ್ಣದ ಎಲೆಗಳಾದ ಬಸಲೆ, ಹರಿವೆಸೊಪ್ಪು, ಪಾಲಕ್ ಮೊದಲಾದ ಸೊಪ್ಪುಗಳಲ್ಲಿ ಹೇರಳವಾಗಿರುತ್ತವೆ. ಈ ಸೊಪ್ಪುಗಳನ್ನು ಬೇಯಿಸಿ ತಯಾರಿಸಿದ ಖಾದ್ಯವನ್ನು ಸೇವಿಸುವ ಮೂಲಕ ಉಗುರು ಮತ್ತು ಕೂದಲಿಗೆ ಉತ್ತಮ ಆರೈಕೆ ನೀಡಬಹುದು. ವಿಟಮಿನ್ ಸಿ ಸೇವನೆಯಿಂದ ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಕಬ್ಬಿಣ ಉಗುರುಗಳ ಬುಡ ಮತ್ತು ತಲೆಗೂದಲ ಬುಡವನ್ನು ಸದೃಢಗೊಳಿಸುತ್ತದೆ.

ಉಗುರಿನ ಕೊಳೆ ತೆಗೆಯುವ ಮುನ್ನ
ಉಗುರುಗಳ ಕೆಳಭಾಗದ ಕೊಳೆಯನ್ನು ತೆಗೆಯುವ ಮುನ್ನ ಬೆರಳುಗಳನ್ನು ಲಿಂಬೆ ಹಣ್ಣಿನ ರಸ ಸೇರಿಸಿದ ನೀರಿನಲ್ಲಿ ಅಥವಾ ಉಗುರುಬೆಚ್ಚನೆಯ ನೀರಿನಲ್ಲಿ, ಕೊಂಚಕಾಲ ಮುಳುಗಿಸಿ, ಬಳಿಕ ನಿಧಾನವಾಗಿ ತೆಗೆಯಿರಿ. ಈ ಕಾರ್ಯಕ್ಕೆ ಸೂಕ್ತವಾದ ಸಾಧನ ಬಳಸಿ, ಟೂಥ್ ಪಿಕ್ ಬೇಡ.



Click it and Unblock the Notifications
