Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಮಳೆಗಾಲದಲ್ಲಿ ನಿಮ್ಮ ಸುಕೋಮಲ ಉಗುರುಗಳ ರಕ್ಷಣೆ ಹೀಗಿರಲಿ
ನಮ್ಮ ದೇಹದ ಅಂಗಗಳು ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ. ನಮ್ಮ ಆರೋಗ್ಯದ ಅಡಿಪಾಯ ನಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಎಲ್ಲಾ ಕಾಲದಲ್ಲೂ ದೇಹದ ಅಂಗಗಳ ರಕ್ಷಣೆ ಮತ್ತು ಅದರ ಕಾಪಾಡುವಿಕೆ ನಮ್ಮನ್ನು ಸೋಂಕು ಹಾಗೂ ಕೆಲವು ಗುರುತರ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ.
ಇನ್ನು ಮಳೆಗಾಲದಲ್ಲಿ ನಮ್ಮ ಅಂಗಗಳ ರಕ್ಷಣೆಗೆ ನಾವು ಹೆಚ್ಚುವರಿ ಮುತುವರ್ಜಿಯನ್ನು ವಹಿಸಬೇಕು. ಈ ಸಮಯದಲ್ಲಿ ಪರಿಸರದಲ್ಲಿನ ಕೊಳಕು ಮತ್ತು ತೇವಾಂಶವು ದೇಹದ ಮೇಲೆ ಕ್ಷಿಪ್ರಕರ ಪರಿಣಾಮವನ್ನು ಉಂಟುಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಸ್ವಚ್ಛತಾ ಕ್ರಮಗಳನ್ನು ನಾವು ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.

ಕಾಲುಗಳು ಮತ್ತು ಉಗುರುಗಳ ಸ್ವಚ್ಛತೆಯನ್ನು ಮಳೆಗಾಲದಲ್ಲಿ ಪ್ರಮುಖವಾಗಿ ಮಾಡಲೇಬೇಕು. ಅದರಲ್ಲೂ ಸೂಕ್ಷ್ಮ ಭಾಗವೆಂದೇ ಪರಗಣಿತವಾಗಿರುವ ಮಳೆಗಾಲದ ಹೆಚ್ಚಿನ ಪರಿಣಾಮ ಈ ಉಗುರುಗಳ ಮೇಲೆಯೇ ನಡೆಯುವಂಥದ್ದಾಗಿದೆ.
ಉಗುರುಗಳಲ್ಲಿ ಹೆಚ್ಚಿನ ಕೊಳೆ ಮಣ್ಣು ತುಂಬಿಕೊಂಡಾಗ ಸಹಿಸಲು ಅಸಾಧ್ಯವಾದ ನೋವು ಕಾಣಿಸಿಕೊಂಡು ನಿಮ್ಮ ಆರೋಗ್ಯದ ಮೇಲೆ ಇದು ಕೆಟ್ಟ ಪರಿಣಾಮವನ್ನು ಬೀರಬಹುದು. ಸೋಂಕಿನ ತೊಂದರೆಯು ತ್ವಚೆಯ ಮೇಲೆ ಅಪಾಯಕಾರಿ ಅಂಶಗಳನ್ನು ತಂದೊಡ್ಡಬಹುದು, ಕೀವು, ಉಗುರುಗಳ ಕೆಟ್ಟ ವಾಸನೆ, ಸಿಡಿತ ಇವೇ ಮುಂತಾದ ಅಪಾಯಕಾರೀ ತೊಂದರೆಗಳಿಗೆ ನೀವು ಬಲಿಯಾಗಬಹುದು.
ಹಾಗಿದ್ದರೆ ಇಂದಿನ ಲೇಖನದಲ್ಲಿ ಉಗುರಿನ ಕಾಳಜಿಯನ್ನು ಸ್ವಚ್ಛಗೊಳಿಸುವ ಪ್ರಕಾರಗಳನ್ನು ಕುರಿತು ತಿಳಿದುಕೊಳ್ಳೋಣ. ಇಲ್ಲಿ ನಾವು ನೀಡಿರುವ ಕೆಲವೊಂದು ಪರಿಣಾಮಕಾರಿ ವಿಧಾನಗಳು ನಿಮ್ಮಲ್ಲಿ ನೋವನ್ನು ಕಡಿಮೆ ಮಾಡಿ ಸೂಕ್ತ ಪರಿಹಾರವನ್ನು ಒದಗಿಸುತ್ತದೆ.
ಮಳೆಗಾಲದಲ್ಲಿ ನಿಮ್ಮ ಪಾದಗಳ ಆರೈಕೆಗೆ ಸೂಕ್ತ ಸಲಹೆಗಳು
ಉಗುರುಗಳನ್ನು ಒಣಗಿಸಿಡಿ
ಮಳೆಗಾಲದಲ್ಲಿ, ಉಗುರುಗಳನ್ನು ಯಾವಾಗಲೂ ಒಣಗಿಸಿಡುವುದು ತುಸು ಕಷ್ಟದ ಕೆಲಷವೇ. ಅದರಲ್ಲೂ ವಿಶೇಷವಾಗಿ ಈ ಕಾಲದಲ್ಲಿ ನಿಮ್ಮ ಬೆರಳುಗಳಿಗೆ ಹೆಚ್ಚಿನ ಕಾಳಜಿಯನ್ನು ನೀಡಿ. ಈ ಸಮಯದಲ್ಲಿ ಹೆಚ್ಚಿನ ಫಂಗಸ್ ಮತ್ತು ಕ್ರಿಮಿಗಳು ಕಾಲ ಬೆರಳಿನಲ್ಲಿ ಮತ್ತು ಉಗುರುಗಳಲ್ಲಿ ಮನೆಮಾಡಿಕೊಂಡಿರುತ್ತವೆ. ನೀವು ಪ್ರತೀ ದಿನ ಶೂಗಳನ್ನು ಹಾಕಿಕೊಂಡಾಗಲೂ ಈ ಸಮಸ್ಯೆ ಹೆಚ್ಚಾಗಿರುತ್ತದೆ. ನಿಮ್ಮ ಉಗುರುಗಳನ್ನು ಮಳೆಗಾಲದಲ್ಲಿ ರಕ್ಷಿಸಲು ಅನುಸರಿಸುವ ಸುಲಭ ವಿಧಾನವೆಂದರೆ ಶೂಗಳನ್ನು ಧರಿಸದಿರುವುದಾಗಿದೆ. ನೀವು ತೆರೆದ ಶೂಗಳನ್ನು ಈ ಕಾಲದಲ್ಲಿ ಬಳಸುವುದು ಹೆಚ್ಚು ಸೂಕ್ತವಾಗಿದೆ.
ಅವುಗಳನ್ನು ಸೋಂಕಿನಿಂದ ಮುಕ್ತಗೊಳಿಸಿ
ನಿಮ್ಮ ಉಗುರುಗಳನ್ನು ನಿತ್ಯವೂ ಸೋಂಕಿನಿಂದ ರಕ್ಷಿಸುವುದು ಅವುಗಳನ್ನು ಕಾಪಾಡುವ ಒಂದು ಉತ್ತಮ ವಿಧಾನವಾಗಿದೆ. ಒಣಗದೇ ಇರುವ ಕಾಲ್ಬೆರಳು ಮತ್ತು ಉಗುರುಗಳು ವಾಸನೆಯನ್ನು ಉಂಟುಮಾಡುತ್ತವೆ. ಪ್ರತೀ ದಿನ ಉಪ್ಪು ಹಾಕಿದ ಉಗುರು ಬೆಚ್ಚನೆ ನೀರಿನಲ್ಲಿ ಕಾಲುಗಳನ್ನು ನೆನೆಸಿ ಒಣಗಿಸಿಕೊಳ್ಳುವುದು ಮಳೆಗಾಲದಲ್ಲಿ ಉಂಟಾಗುವ ವಾಸನೆಯಿಂದ ಕಾಲನ್ನು ಬೆರಳನ್ನು ಉಗುರನ್ನು ರಕ್ಷಿಸುತ್ತದೆ. ಸೋಂಕಿನಿಂದ ರಕ್ಷಣೆ ಪಡೆಯುವಂತಹ ಪೌಡರ್ ಅನ್ನು ಕೂಡ ಮಳೆಗಾಲದಲ್ಲಿ ನಿಮಗೆ ಬಳಸಬಹುದಾಗಿದೆ. ನಿಮ್ಮ ಬೆರಳುಗಳ ಮಧ್ಯೆ ಈ ಪೌಡರ್ ಅನ್ನು ಬಳಸಿ.
ಹೊಳೆಯುವ ಉಗುರುಗಳು
ಮಳೆಗಾಲದಲ್ಲಿ ನಿಮ್ಮ ಉಗುರುಗಳನ್ನು ಹೊಳೆಯುವಂತೆ ಇರಿಸುವುದು ನೀವು ಮಾಡಬೇಕಾದ ಮುಖ್ಯ ಕೆಲಸವಾಗಿದೆ. ಅವುಗಳನ್ನು ಚೆನ್ನಾಗಿ ಕತ್ತರಿಸಿ ಕೊಂಚ ದೊರಗುಗೊಳಿಸುವುದು ಮಳೆಗಾಲವು ನಿಮ್ಮ ಬೆರಳುಗಳಲ್ಲಿ ಉಗುರುಗಳಲ್ಲಿ ಉಂಟು ಮಾಡುವ ಸಮಸ್ಯೆಯಾಗಿದೆ. ಇದು ನಿಮ್ಮ ಉಗುರುಗಳಲ್ಲಿ ಕೀವನ್ನು ಕೊಳಕನ್ನು ನೋವನ್ನು ಉಂಟುಮಾಡಬಹುದು. ಆದ್ದರಿಂದ ಉಗುರುಗಳಿಗೆ ಸೂಕ್ತ ಆರೈಕೆಯನ್ನು ಮಾಡಿ.
ಉಗುರುಗಳನ್ನು ಚೆನ್ನಾಗಿ ಕತ್ತರಿಸಿ
ಉದ್ದನೆಯ ಉಗುರುಗಳು ಈಗಿನ ಫ್ಯಾಶನ್ ಆಗಿರಬಹುದು ಆದರೆ ಅವುಗಳನ್ನು ನಿರ್ವಹಿಸುವ ಚಾಕಚಕ್ಯತೆ ನಿಮ್ಮಲ್ಲಿರಬೇಕು. ಆದ್ದರಿಂದ ಮಳೆಗದಾಲಲ್ಲಿ ಹೆಚ್ಚು ಫ್ಯಾಶನ್ ಗಮನ ನೀಡದೇ ನಿಮ್ಮ ಆರೋಗ್ಯಕ್ಕೆ ಗಮನ ನೀಡಿ. ಉಗುರುಗಳನ್ನು ಆದಷ್ಟು ಚಿಕ್ಕದಾಗಿರಿಸಿಕೊಳ್ಳಿ.
ಮೆನಿಕ್ಯೂರ್ ಮತ್ತು ಪೆಡಿಕ್ಯೂರ್
ನಿಮ್ಮ ಮನೆಯಲ್ಲಿನ ಅನುಕೂಲಕ್ಕೆ ತಕ್ಕಂತೆ ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಅನ್ನು ನಿಮಗೆ ಮಾಡಿಸಬಹುದು. ಇದನ್ನು ಮಾಡಲು ಸರಿಯಾದ ವಿಧಾನಗಳನ್ನು ನೀವು ಅನುಸರಿಸಬೇಕು ಹಾಗೂ ಇದಕ್ಕೆ ಬೇಕಾದ ಸಲಕರಣೆಗಳು ಇರುವಂತೆ ನೋಡಿಕೊಳ್ಳಬೇಕು. ಪಾದ ತೊಳೆಯುವ ಸ್ಕ್ರಬ್ಬರ್ ಮತ್ತು ಸ್ಕ್ರೇಪರ್ ಇದನ್ನು ಹೊಂದಿರಬೇಕು ಇಲ್ಲವೆಂದಲ್ಲಿ ಸೌಂದರ್ಯ ತಜ್ಞರ ಸಲಹೆಗಳನ್ನು ಕೂಡ ಇದಕ್ಕೆ ನೀವು ಬಳಸಬಹುದು.



Click it and Unblock the Notifications