Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ದಕ್ಷಿಣ ಭಾರತೀಯ ಮಹಿಳೆಯರ ಸೌಂದರ್ಯದ ಗುಟ್ಟೇನು?
ಭಾರತದ ದಕ್ಷಿಣ ಭಾಗದ ಮಹಿಳೆಯರು ಯಾವಾಗಲೂ ತಮ್ಮ ದೋಷರಹಿತ ಚರ್ಮ, ಹೊಳೆಯುವ ಕೂದಲು ಮತ್ತು ಸುಂದರ, ಕಪ್ಪು ಕಣ್ಣುಗಳಿಗೆ ಹೆಸರುವಾಸಿ. ಅತ್ಯಂತ ಪ್ರಾಚೀನ ಭಾರತೀಯ ಸೌಂದರ್ಯ ಆಚರಣೆಗಳು ಮತ್ತು ಅವರ ಕೂದಲು ಮತ್ತು ತ್ವಚೆಯನ್ನು ಸಾಂಪ್ರದಾಯಿಕ ರೀತಿಯಲ್ಲಿಯೇ ಇರುತ್ತಿತ್ತು.
ಅದರಂತೆ ದಕ್ಷಿಣ ಭಾರತದಲ್ಲಿಯೂ ಕೂಡ ಸೌಂದರ್ಯವನ್ನು ಪಡೆಯುವ ರೀತಿ ಅತ್ಯಂತ ನೈಸರ್ಗಿಕವಾಗಿರುತ್ತದೆ. ಮತ್ತು ಇದು ಅವರ ಪರಿಪೂರ್ಣ ನೋಟದ ಹಿಂದಿರುವ ರಹಸ್ಯ! ಮತ್ತು ಈ ರಹಸ್ಯಗಳನ್ನು ನಿಮಗೆ ಹೇಳುವುದೇ ಈ ಲೇಖನದ ಮುಖ್ಯ ಉದ್ದೇಶ. ಇಲ್ಲಿ ನೀವು ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಲು ಸುಲಭವಾಗಿ ಮಾಡಬಹುದಾದಂತಹ ದಕ್ಷಿಣ ಭಾರತೀಯ ಟಾಪ್ 10 ಸೌಂದರ್ಯ ಸಲಹೆಗಳನ್ನು ನೀಡಲಾಗಿದೆ: ಮೇಕಪ್ ಕಿಟ್ ಅನ್ನು ವ್ಯವಸ್ಥಿತವಾಗಿರಿಸಲು ಟಾಪ್ ಸಲಹೆಗಳು

ತೆಂಗಿನಕಾಯಿಯನ್ನು ಬಳಸುವುದು
ಭಾರತದ ದಕ್ಷಿಣ ರಾಜ್ಯಗಳ ಜನರು ಅವರ ದಿನನಿತ್ಯದ ಆಹಾರದಲ್ಲಿ ಹಾಗೂ ತಮ್ಮ ಸೌಂದರ್ಯವರ್ಧಕಗಳಲ್ಲಿ ತೆಂಗನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಾರೆ. ಎಳನೀರನ್ನು ಆಗಾಗ ಕುಡಿಯುವುದರಿಂದ ನೈಸರ್ಗಿಕವಾಗಿ ಪ್ರಜ್ವಲಿಸುವ ತ್ವಚೆ ನಿಮ್ಮದಾಗುತ್ತದೆ. ತೆಂಗಿನಕಾಯಿಯಲ್ಲಿ, ಫೈಬರ್, ಜೀವಸತ್ವಗಳು, ಪೋಷಕಾಂಶಗಳು ಮತ್ತು ಖನಿಜಗಳು ಅಧಿಕ ಪ್ರಮಾಣದಲ್ಲಿರುತ್ತವೆ. ತೆಂಗಿನ ಕಾಯಿಯಿಂದ ಚಟ್ನಿ, ಕೊಕೊನಟ್ ರೈಸ್ ಮತ್ತು ಉಪ್ಪಿನಕಾಯೆ ವಿವಿಧ ಆಹಾರ ಪದಾರ್ಥವನ್ನು ತಯಾರಿಸುವುದು ಮಾತ್ರವಲ್ಲದೇ, ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ತೈಲವೂ ಕೂಡ ತೆಂಗಿನ ಎಣ್ಣೆಯೇ ಆಗಿರುತ್ತದೆ. ನಿಮ್ಮ ಆಹಾರದಲ್ಲಿ ತೆಂಗಿನ ಕಾಯಿಯನ್ನು ಬಳಸಲು ನಿಮಗೆ ತಿಳಿಯದಿದ್ದಲ್ಲಿ ತೆಂಗಿನ ಕಾಯಿಯನ್ನು ಒಂದು ಹಣ್ಣಿನ ರೂಪದಲ್ಲಿಯೂ ಬಳಸಬಹುದು.

ಯೋಗ
ದಕ್ಷಿಣ ಭಾರತೀಯ ಮಹಿಳೆಯರು ತಮ್ಮ ಬಾಗಿಕೊಂಡಂತಹ ಥಳುಕಿನ ದೇಹ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ಮತ್ತು ಅವರ ಇಂತಹ ಫಿಟ್(ದೇಹಧಾಡ್ಯ) ದೇಹದ ಹಿಂದಿರುವ ದೊಡ್ಡ ರಹಸ್ಯವೆಂದರೆ ಅದು ಯೋಗ! ಯೋಗ ಮನಸ್ಸಿನ ಶಾಂತಿ ನೀಡುವುದರ ಜೊತೆಗೆ ನಿಮ್ಮ ಇಂದ್ರಿಯಗಳ ಬಲಕ್ಕೂ ಒಂದು ಪ್ರಬಲ ಮಾಧ್ಯಮವಾಗಿದೆ. ಸುಂದರವಾದ ತ್ವಚೆ, ಪ್ರಶಾಂತ ಮನಸ್ಸು ಮತ್ತು ಆರೋಗ್ಯಕರ ದೇಹವನ್ನು ಪಡೆಯಲು ಯೋಗ ಅತ್ಯಂತ ಸಹಕಾರಿಯಾಗಿದೆ. ಯೋಗ, ತ್ವಚೆಯಲ್ಲಿನ ಸುಕ್ಕುಗಳು, ಅಕಾಲಿಕ ವಯಸ್ಸಾಗುವಿಕೆ(ಕೂದಲು ಬೆಳ್ಳಗಾಗುವುದು ಇತ್ಯಾದಿ), ಮೊಡವೆ, ಅನುಚಿತ ಜೀರ್ಣಕ್ರಿಯೆ ಮತ್ತು ವಿವಿಧ ಸಮಸ್ಯೆಗಳ ಚಿಹ್ನೆಗಳನ್ನು ತೆಗೆದು ಸಹಾಯಕವಾಗುತ್ತದೆ.

ಆಯುರ್ವೇದ
ಆಯುರ್ವೇದ ಫೇಸ್ ಪ್ಯಾಕ್‌ಗಳು ದಕ್ಷಿಣ ಭಾರತದಲ್ಲಿನ ಎಲ್ಲಾ ಸೌಂದರ್ಯ ಉತ್ಪನ್ನಗಳಲ್ಲಿ ಅತ್ಯಂತ ಸಾಮಾನ್ಯವಾದ ಘಟಕಾಂಶವಾಗಿ ಜನಪ್ರಿಯವಾಗಿದೆ. ಆಯುರ್ವೇದ ಅದರ ಅನೇಕ ಪ್ರಯೋಜನಕಾರಿ ಲಕ್ಷಣಗಳಿಗೆ ಹೆಸರುವಾಸಿಯಾಗಿದೆ, ಮತ್ತು ಅದರ ಮುಖ್ಯ ಪ್ರಯೋಜನಗಳ ಪೈಕಿ ಒಂದೆಂದರೆ, ಇದು ಚರ್ಮಕ್ಕೆ ಯಾವುದೇ ರೀತಿಯ ಹಾನಿಯನ್ನೂ ಮಾಡದೇ ಆರೋಗ್ಯಕರ, ಹೊಳೆಯುವ ಚರ್ಮ ಮತ್ತು ಸ್ಪಷ್ಟ ಮೈಬಣ್ಣವನ್ನು ನೀಡುತ್ತದೆ.

ಮಸಾಜ್
ದಕ್ಷಿಣ ಭಾರತದ ಮಸಾಜ್ ಚಿಕಿತ್ಸೆಗಳು ಕೇವಲ ಸ್ಥಳೀಯ ನಿವಾಸಿಗಳೊಂದಿಗೆ ಜನಪ್ರಿಯವಾಗಿರದೆ, ದೇಶದ ಇತರ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿಯೂ ಸಹ ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಸಾಂಪ್ರದಾಯಿಕ ದಕ್ಷಿಣ ಭಾರತೀಯ ಮಸಾಜ್ ಚರ್ಮ ಮತ್ತು ಕೂದಲಿಗೆ ಮಾತ್ರವಲ್ಲ ನಿಮ್ಮ ದೇಹದ ಜೀರ್ಣಕ್ರಿಯೆ ಮೊದಲಾದ ವ್ಯವಸ್ಥೆಯನ್ನು ಶುದ್ಧೀಕರಿಸುವ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನೀವು ಮಸಾಜ್ ಮಾಡಿಸಿಕೊಳ್ಳಲು ಹೊರಗೆಲ್ಲೂ ಹೋಗದಿದ್ದರೆ, ನಿಮ್ಮ ಮನೆಯಲ್ಲಿಯೇ ಬಹಳ ಸುಲಭವಾಗಿ ಅದನ್ನು ಮಾಡಿಕೊಳ್ಳಬಹುದು. ನೀವು ದಿನವೂ ರಾತ್ರಿ ಮಲಗುವ ನಿಮ್ಮ ದೇಹಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇದು ರಕ್ತ ಪರಿಚಲನೆಯನ್ನು ಸುಧಾರಿಸಲು ಮತ್ತು ಮೃದು, ಹೊಳೆಯುವ ಚರ್ಮ ನೀಡಲು ಸಹಾಯಕಾರಿ.

ಕಣ್ಣುಗಳು
ದಕ್ಷಿಣ ಭಾರತದ ಮಹಿಳೆಯರು ಕಡು ಕಪ್ಪು ಕಣ್ಣುಗಳನ್ನು ಹೊಂದಿರುತ್ತರೆ. ಜೊತೆಗೆ ಮತ್ತಷ್ಟು ಕಾಡಿಗೆಯನ್ನು ಕಣ್ಣುಗಳಿಗೆ ಅನ್ವಯಿಸಿ ಕಣ್ಣುಗಳು ಇನ್ನಷ್ಟು ಎದ್ದುಕಾಣುವಂತೆ ಮಾಡುತ್ತಾರೆ. ಅವರು ಪ್ರಕಾಶಮಾನವಾದ ಸುಂದರ ಕಣ್ಣುಗಳನ್ನು ಪಡೆಯಲು ನೈಸರ್ಗಿಕ ವಿಧಾನಗಳನ್ನು ಬಳಸುತ್ತಾರೆ. ಅದರಲ್ಲಿ ಮುಖ್ಯವಾಗಿ ಎಳ್ಳಿನ ಎಣ್ಣೆಯನ್ನು ಕಣ್ಣುಗಳ ಕೆಳಭಾಗಕ್ಕೆ ಹಚ್ಚುತ್ತಾರೆ.

ಅರೋಮಾಥೆರಪಿ ಫೇಶಿಯಲ್ಗಳು
ಅರೋಮಾಥೆರಪಿ ಫೇಶಿಯಲ್ಗಳು ದಕ್ಷಿಣ ಭಾರತೀಯ ಸುಂದರಿಯರ ನಡುವೆ ಸಾಮಾನ್ಯ ವಾಡಿಕೆಯಾಗಿವೆ! ಸುಗಂಧ ಪೂರಿತ ತೈಲವನ್ನು ತ್ವಚೆಯ ಶುದ್ಧೀಕರಣ, ಹೈಡ್ರೇಟ್ ಮತ್ತು ಚರ್ಮವನ್ನು ಮೃದುವಾಗಿಸಲು ಬಳಸಲಾಗುತ್ತದೆ. ಈ ಫೇಶಿಯಲ್ ಗಳು ಹೊರಗಿನಿಂದ ಚರ್ಮಕ್ಕೆ ಚಿಕಿತ್ಸೆ ನೀಡುವುದು ಮಾತ್ರವಲ್ಲ, ಜೊತೆಗೆ ಶಾಂತಗೊಳಿಸುವ ಮತ್ತು ಉತ್ಕರ್ಷಣ ನಿರೋಧಕ ಪ್ರಯೋಜನಗಳನ್ನು ಸಹ ಒದಗಿಸುತ್ತವೆ. ಪ್ರಚೋದನಕಾರಿಯಾದ ಈ ಫೇಶಿಯಲ್ ಗಳು ತ್ವಚೆಯಲ್ಲಿನ ಸುಕ್ಕುಗಳನ್ನು ಹೋಗಲಾಡಿಸಲು, ಚರ್ಮವನ್ನು ಬಿಗಿಗೊಳಿಸಲು, ಮತ್ತು ಈ ಮೂಲಕ ಉಜ್ವಲವಾದ ಮೈಬಣ್ಣವನ್ನು ಪಡೆಯಲು ಸಹಾಯಮಾಡುತ್ತವೆ.

ಶಿಸ್ತಿನ ಜೀವನ
ಶಿಸ್ತುಬದ್ಧ ಜೀವನ ಉತ್ತಮ ಆರೋಗ್ಯಕ್ಕೆ ಕೀಲಿಯಾಗಿದೆ. ಕನಿಷ್ಠ 6-8 ಗಂಟೆಗಳ ಕಾಲ ಸಾಮಾನ್ಯ ನಿದ್ರೆ, ಮುಂಜಾನೆಯೇ ಎಚ್ಚರಗೊಡು ಹೊರಗೆ ನಡೆದಾಡುವುದು ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದು ದೇಹದ ಒಳಗಿನ ಹಾಗೂ ಹೊರಗಿನ ಆರೋಗ್ಯಕರ ಮತ್ತು ಸುಂದರ ತ್ವಚೆಯ ರಹಸ್ಯಗಳು!

ಕೂದಲಿನ ಪೋಷಣೆ
ದಕ್ಷಿಣ ಭಾರತದ ಮಹಿಳೆಯರು ಹೆಚ್ಚಾಗಿ ನೈಸರ್ಗಿಕ, ದಪ್ಪ ಕಪ್ಪು ಕೂದಲನ್ನು ಹೊಂದಿರುತ್ತಾರೆ. ನಿಮ್ಮ ಕೂದಲಿನ ಆರೋಗ್ಯ ಹೆಚ್ಚಿಸಲು, ನೀವು ಕೂದಲಿಗೆ ಪರಿಪೂರ್ಣ ನಿಯಮಿತ ವಿಧಾನವನ್ನು ಪಾಲಿಸಬೇಕು.
1. ರಕ್ತ ಪರಿಚಲನೆಯನ್ನು ಉತ್ತೇಜಿಸಲು ನಿಯಮಿತ ತೆಂಗಿನ ಎಣ್ಣೆ ಮಸಾಜ್ ಅನುಸರಿಸಿ
2. ನಿಯಮಿತವಾಗಿ ಕೂದಲನ್ನು ನೀರಿನಿಂದ ತೊಳೆಯಿರಿ ಮತ್ತು ವಾರದಲ್ಲಿ ಕೇವಲ ಎರಡು ಬಾರಿ ಶಾಂಪೂವನ್ನು ಬಳಸಿ
3. ಬ್ರಾಹ್ಮೀ ಮತ್ತು ಅಮ್ಲಗಳಿರುವ, ಸೌಮ್ಯ ಮತ್ತು ನೈಸರ್ಗಿಕ ಶ್ಯಾಂಪೂಗಳನ್ನು ಬಳಸಿ ಮತ್ತು ಕಠಿಣ ರಾಸಾಯನಿಕಗಳಿರುವ ಶಾಂಪೂಗಳನ್ನು ಬಳಸದಿರಿ

ಕೂದಲಿನ ಪೋಷಣೆಗೆ ಮನೆಮದ್ದುಗಳು
ನಿಮ್ಮ ಮಂದ ಕೂದಲಿನಿಂದ ಕಷ್ಟ ಪಡುತ್ತಿದ್ದರೆ, ನಿಮ್ಮ ಅಡುಗೆಯನೆಯಲ್ಲಿರುವ ಸಾಮಗ್ರಿಗಳನ್ನು ಪರಿಶೀಲಿಸಿದರೆ ಸುಂದರ ಕೂದಲು ಪಡೆಯಲು ಅದ್ಭುತ ಅಂಶಗಳನ್ನು ಕಾಣಬಹುದು. ಇಂತಹ ಕೆಲವು ಸರಳ ಪರಿಹಾರಗಳು ಇಲ್ಲಿವೆ:
1. ನಿಮ್ಮ ಕೂದಲಿಗೆ ಮೊಸರನ್ನು ಹಚ್ಚಿ ಕೆಲವು ನಿಮಿಷಗಳ ನಂತರ ತೊಳೆಯಿರಿ. ಇದು ದಪ್ಪ, ಹೊಳೆಯುವ ಕೂದಲನ್ನು ಪಡೆಯಲು ಒಂದು ಉತ್ತಮ ದಾರಿ.
2. ನೆತ್ತಿಗೆ ನಿಂಬೆ ರಸವನ್ನು ಹಚ್ಚಿ ಮಸಾಜ್ ಮಾಡಿ. ಇದು ತಲೆಯ ಹೊಟ್ಟನ್ನು ಹೋಗಲಾಡಿಸಿ ನೆತ್ತಿಯನ್ನು ಶುದ್ಧೀಕರಿಸುವ ಒಂದು ಉಪಾಯ.

ನೀರನ್ನು ಕುಡಿಯಿರಿ
ನೀರು, ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕಾಗಿ ಬಳಸಬಹುದಾದ ಅತ್ಯಂತ ಅನುಕೂಲಕರ ಉತ್ಪನ್ನಗಳಲ್ಲಿ ಒಂದು. ನಿಮ್ಮ ದೇಹದ ವ್ಯವಸ್ಥೆಯನ್ನ ಶುದ್ಧೀಕರಿಸಿ ಜೀವಾಣುಗಳನ್ನು ಹೋಗಲಾಡಿಸಲು ಮತ್ತು ಅತ್ಯುತ್ತಮ ಚರ್ಮವನ್ನು ಪಡೆಯಲು ಪ್ರತಿ ದಿನ ಕನಿಷ್ಠ 8 ಲೋಟ ನೀರನ್ನು ಕುಡಿಯಿರಿ. ಇದು ನಿಮ್ಮ ಕೂದಲಿಗೂ ತುಂಬಾ ಒಳ್ಳೆಯದು.



Click it and Unblock the Notifications











