ಬಾಯ್‌ಫ್ರೆಂಡ್‌ನನ್ನು ತೆಕ್ಕೆಗೆ ಬೀಳಿಸಲು 10 ಸಲಹೆಗಳು

By Deepak M

ನಿಮ್ಮ ಕನಸಲ್ಲು ಕಾಡುವಂತಹ ಹುಡುಗ ಎದುರಿಗೆ ಸಿಕ್ಕರೆ ನಿಮ್ಮನ್ನು ಕಡೆಗಣ್ಣಿನಲ್ಲಿ ನೋಡಿ ಮುಂದೆ ಸಾಗುತ್ತಿದ್ದಾನೆ ಎಂಬ ಕೊರಗು ನಿಮ್ಮದೇ? ಅಥವಾ ನಿಮ್ಮ ಪ್ರಿಯತಮ ನಿಮ್ಮ ಸೌಂದರ್ಯವನ್ನು ಹೊಗಳುವುದನ್ನು ಬಿಟ್ಟು ಬಿಟ್ಟಿದ್ದಾನೆಯೇ? ಚಿಂತೆ ಬಿಡಿ, ನಿಮ್ಮ ಸಂಬಂಧವನ್ನು ಒಂದಷ್ಟು ರಸವತ್ತಾಗಿಸುವ ಕಾಲ ಈಗ ಬಂದಿದೆ. ಆತನ ಕಣ್ಗಳನ್ನು ನಿಮ್ಮತ್ತ ಸೆಳೆಯುವ 10 ಸೌಂದರ್ಯ ಸಲಹೆಗಳನ್ನು ನೀಡುತ್ತಿದ್ದೇವೆ ಓದಿ ಅಳವಡಿಸಿಕೊಳ್ಳಿ.

ಬಾಲಿವುಡ್‍ನ ಸೈಫ್ ಅಲಿಖಾನ್ ಸಹ ಒಂದು ಸಂದರ್ಶನದಲ್ಲಿ ಖುರ್ಬಾನಿ ಚಿತ್ರದ ಸಂದರ್ಭದಲ್ಲಿ ಕರೀನಾಳ ಸ್ಮೋಕಿ ಐಯ್ಸ್‌ನ ಮಾಧಕತೆಗೆ ನಾನು ಕ್ಲೀನ್ ಬೋಲ್ಡ್ ಆದೆ ಎಂದು ಹೇಳಿಕೊಂಡಿದ್ದ. ಹಾಗಾಗಿ ನಿಮ್ಮ ಪ್ರಿಯತಮನನ್ನು ಕೂಡ ನಿಮ್ಮ ಸೌಂದರ್ಯದ ಮೂಲಕ ತೆಕ್ಕೆಗೆ ಬೀಳಿಸಲು ಬಯಸುವಿರಾದರೆ ಈ ಲೇಖನವನ್ನು ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಿಪ್ಪೆಸುಲಿಯುವ ಬೆರಳುಗಳನ್ನು ತೊಡೆದುಹಾಕಲು:9 ಸಲಹೆಗಳು

ಸ್ಮೋಕಿ ಕಣ್ಣು ;

ಸ್ಮೋಕಿ ಕಣ್ಣು ;

ಕಣ್ಣು ಕುಕ್ಕುವಂತಹ ಸೌಂದರ್ಯ! ಎನ್ನುವ ವಾಕ್ಯವನ್ನು ಸಾರ್ಥಕ ಪಡಿಸಿಕೊಳ್ಳುವಂತಹ ಉಪಾಯವಿದು. ಬಾಲಿವುಡ್‍ನ ಸೈಫ್ ಅಲಿಖಾನ್ ಸಹ ಒಂದು ಸಂದರ್ಶನದಲ್ಲಿ ಖುರ್ಬಾನಿ ಚಿತ್ರದ ಸಂದರ್ಭದಲ್ಲಿ ಕರೀನಾಳ ಸ್ಮೋಕಿ ಐಯ್ಸ್‌ನ ಮಾಧಕತೆಗೆ ನಾನು ಕ್ಲೀನ್ ಬೋಲ್ಡ್ ಆದೆ ಎಂದು ಹೇಳಿಕೊಂಡಿದ್ದ. ನಿಮಗು ಸಹ ಅಂತಹ ಸ್ಮೋಕಿ ಎಫೆಕ್ಟ್ ಬೇಕಾದಲ್ಲಿ ನಿಮ್ಮ ಬಳಿ ಒಂದು ಉತ್ತಮ ದರ್ಜೆಯ ಕಾಡಿಗೆ ಪೆನ್ಸಿಲ್ ಮತ್ತು ಮಸ್ಕರ ಇರಬೇಕಾಗುತ್ತದೆ. ಕಾಡಿಗೆ ಲೇಪಿಸುವ ಮೊದಲು ಆ ಪೆನ್ಸಿಲನ್ನು ನೀರಿನಲ್ಲಿ ಅದ್ದಿ, ನಂತರ ಇದನ್ನು ಕಣ್ಣಿನ ಒದ್ದೆಯಾದ ಭಾಗದಲ್ಲಿ ಲೇಪಿಸಿ. ಈಗ ಇದು ನಿಮ್ಮ ಕಂಗಳಿಗೆ ಒಂದು ರೀತಿಯ ಹೊಳಪನ್ನು ತಂದು ನೀಡುತ್ತದೆ. ಇದನ್ನು ಮಾಡಿದ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಮಸ್ಕರವನ್ನು ಲೇಪಿಸಿ. ಆದರೆ ಒಂದು ವಿಚಾರವನ್ನು ನೆನಪಿಡಿ!, ಇದು ನಿಮಗೆ ಒಪ್ಪುತ್ತದೆಯೋ, ಇಲ್ಲವೊ? ಎಂಬುದನ್ನು ಮೊದಲು ಪರೀಕ್ಷಿಸಿ. ಏಕೆಂದರೆ ಕಣ್ಣಿನ ಸುತ್ತ ಕಪ್ಪು ವೃತ್ತಗಳಿರುವವರಿಗೆ ಇದು ಸೂಕ್ತವಾಗುವುದಿಲ್ಲ. ಅದಕ್ಕಾಗಿ ಮುಂಜಾಗೂರಕತೆ ಕ್ರಮವಾಗಿ ಪರೀಕ್ಷಿಸಿ, ನಂತರ ಆತನ ಮುಂದೆ ಹೋಗಿ. ಆಗ ನೋಡಿ ನಿಮ್ಮ ಹುಡುಗ " ಕೆಣಕುತಿದೆ,,,,,,,, ನಿನ್ನ ಕಣ್ಣೋಟ!!" ಎಂದು ಹಾಡಲು ಶುರು ಮಾಡುತ್ತಾನೆ.

ಜ್ಯೂಸಿ ಲಿಪ್ಸ್;

ಜ್ಯೂಸಿ ಲಿಪ್ಸ್;

ಹೆಣ್ಣಿನಲ್ಲಿ ಗಂಡು ಮೊದಲು ಆಕರ್ಷಿತನಾಗುವುದು ತುಟಿಗಳಿಗೆ!. ನೋಡಲು ಮುದ್ದಾಗಿರುವ ತುಟಿಗಳ ಒಡತಿಗೆ ಮರುಳಾಗದವನು ಅದೆಂಥಹ ಗಂಡಸು. ಅದಕ್ಕಾಗಿ ನಿಮ್ಮ ತುಟಿಗಳಿಗೆ ಒಪ್ಪುವಂತಹ ಲಿಪ್ ಕಲರ್ ಲೇಪಿಸಿ ಅಥವಾ ನಿಮ್ಮ ತ್ವಚೆಗೆ ಹೊಂದುವಂತಹ ಗ್ಲೊಸ್ ಶೇಡ್ ಲೇಪಿಸಿ. ಒಟ್ಟಿನಲ್ಲಿ ನಿಮ್ಮ ತುಟಿಗಳು ಹೊಳೆಯಬೇಕು. ಹಾಗೆಂದು ಇಲ್ಲ ಸಲ್ಲದ ವರ್ಣಗಳನ್ನು ಹಾಯ್ದುಕೊಳ್ಳಬೇಡಿ. ನೋಡಲು ಆಕರ್ಷಕವಾಗಿರುವುದಕ್ಕೆ ಮನ್ನಣೆ ಇರಲಿ, ಆಗ ನೋಡಿ ನಿಮ್ಮವರು " ತೊಂಡೆ ಹಣ್ಣು ತುಟಿಯಲಿ, ದಾಳಿಂಬೆ ಕಾಳು ಬಾಯಲಿ" ಎಂದು ಹಾಡುತ್ತಾರೆ.

ಗುಲಾಬಿಯಂತಹ ಕೆನ್ನೆಗಳು;

ಗುಲಾಬಿಯಂತಹ ಕೆನ್ನೆಗಳು;

"ತುಟಿಯ ಮೇಲೆ ತುಂಟ ಕಿರುನಗೆ, ಕೆನ್ನೆ ತುಂಬಾ ಕೆಂಡ ಸಂಪಿಗೆ" ಈ ಎವರ್ ಗ್ರೀನ್ ಹಾಡು ಕೇಳದವರು ಯಾರು? ಅಂದಿನಿಂದ ಇಂದಿನವರೆಗು ಗುಲಾಬಿಯಂತಹ ಕೆನ್ನೆಗಳನ್ನು ಹೊಂದಿರುವ ಹೆಣ್ಣಿಗೆ ಮನಸೋಲದವರು ಯಾರು? ಕೆಂಡ ಸಂಪಿಗೆಯನ್ನು ಹೊಗಳಿದರು, ಗುಲಾಬಿ ಬಣ್ಣಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಾರೆ ಹೆಂಗಳೆಯರು, ಏಕೆಂದರೆ ಇದು ಸುರಕ್ಷಿತವು ಹೌದು. ಇದನ್ನು ಲೇಪಿಸುವಾಗ ಕನ್ಸೀಲರ್‌ನಿಂದ ನಿಮ್ಮ ತ್ವಚೆಯ ಗೆರೆಗಳನ್ನು ಮುಚ್ಚುವಂತೆ ಒಂದು ಫೌಂಡೇಶನ್ ಟಚ್ ಅಪ್ ಕೊಡಿ. ನಂತರ ರೋಸ್ ಪೌಡರನ್ನು ನಿಮ್ಮ ಕೆನ್ನೆಗಳ ಮೇಲೆ ಉದುರಿಸಿ. ಆದರೆ ನೆನಪಿರಲಿ ಈ ಟಚ್ ಅಪ್ ಆದಷ್ಟು ಕಡಿಮೆಯಿದ್ದಷ್ಟು ಒಳ್ಳೆಯದು!

ಸುಂದರವಾದ ಕೇಶರಾಶಿ:

ಸುಂದರವಾದ ಕೇಶರಾಶಿ:

ಯಾವ ಹೆಣ್ಣು ಸಹ ತನ್ನ ಜಡೆಯ ಜೊತೆಗೆ ಆಟವಾಡುವ ಪ್ರೇಮಿಯನ್ನು ಇಷ್ಟಪಡುವುದಿಲ್ಲ? ನಿಮಗೂ ಆ ಬಯಕೆ ಇಲ್ಲವೇ? ಆದರೆ ಈ ಆಸೆ ತೀರಬೇಕೆಂದರೆ ನಿಮಗು ಸಹ ಸುಂದರವಾದ, ಮೃದುವಾದ ಮತ್ತು ನೀಳವಾದ ಕೂದಲಿರಬೇಕಾದುದು ಅಗತ್ಯ. ಜಿಡ್ಡು, ಜಿಡ್ಡಾದ, ಒರಟಾದ, ಒಡೆದ ಕೂದಲುಗಳನ್ನು ಯಾರು ಇಷ್ಟಪಡುವುದಿಲ್ಲ. ಅದಕ್ಕಾಗಿ ನಿಮ್ಮ ಕೂದಲಿಗೆ ಅಗತ್ಯ ಆರೈಕೆಯನ್ನು ನೀಡಿ. ಒಳ್ಳೆಯ ಶಾಂಪೂ ಮತ್ತು ಕಂಡೀಶನರ್ ಬಳಸಿ ಕೂದಲನ್ನು ತೊಳೆಯಿರಿ. ನಿಮ್ಮ ಕೂದಲನ್ನು ನೋಡಿದ ಕೂಡಲೇ ನಿಮ್ಮ ಹುಡುಗ " ಪರವಶನಾದೆನು , ಅರಿಯುವ ಮುನ್ನವೇ" ಎನ್ನಬೇಕು. ಹಾಗಿರಬೇಕು ನಿಮ್ಮ ಕೂದಲು!

ಆರೋಗ್ಯಕರವಾದ ಉಗುರುಗಳು:

ಆರೋಗ್ಯಕರವಾದ ಉಗುರುಗಳು:

" ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡ ಹಾಗಾಯ್ತು" ಎನ್ನುವ ಗಾದೆ ಮಾತು ಯಾರು ಕೇಳಿಲ್ಲ? ನಮ್ಮ ಪ್ರೀತಿ ವಿಚಾರದಲ್ಲು ಈ ಮಾತು ಅನ್ವಯವಾಗುತ್ತೆ. ಭಾಂದವ್ಯ ಬೆಸೆಯುವಲ್ಲಿ ಕೈಗಳ ಪಾತ್ರ ದೊಡ್ಡದು. ಎರಡು ಕೈಗಳು ಬೆಸೆದುಕೊಂಡಾಗಲೆ ಪ್ರೀತಿ ಮಧುರವಾಗುವುದು. ಆಗ ಬೆಸೆದು ಕೊಂಡ ಕೈಗಳಲ್ಲಿ ಸೌಂದರ್ಯವು ಉಕ್ಕಲು ಉಗುರಿಗೆ ನೈಲ್ ಪಾಲಿಷ್ ಇರಬೇಡವೇ? ಅದಕ್ಕೆಂದು ನೀವು ಮೆನಿಕ್ಯೂರ್ ಇತ್ಯಾದಿ ಎಂದು ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬೇಡಿ. ನಿಮ್ಮ ತ್ವಚೆಯ ಬಣ್ಣಕ್ಕೆ ಒಪ್ಪುವ ನೈಪ್ ಪಾಲಿಷನ್ನು ನೀವೇ ಖರೀದಿಸಿ, ನಿಮಗೆ ಮತ್ತು ನಿಮ್ಮ ಉಡುಗೆ- ತೊಡುಗೆಗಳಿಗೆ ಒಪ್ಪುವಂತಹ ಬಣ್ಣಗಳಿದ್ದರೆ ನಿಮ್ಮ ಹುಡುಗನು ಖಂಡಿತ ಅದನ್ನು ಇಷ್ಟಪಡುತ್ತಾನೆ. ಯಾರಿಗೆ ಗೊತ್ತು ಆ ಉಗುರುಗಳ ಸೌಂದರ್ಯಕ್ಕೆ ಮಾರುಹೋಗಿ, ಆ ಬೆರಳಿಗೆ ಉಂಗುರ ತೊಡಿಸಬಹುದು!!

ಮೃದುವಾದ ತ್ವಚೆ;

ಮೃದುವಾದ ತ್ವಚೆ;

ಸ್ಪರ್ಷವೊಂದೆ ಸಾಕು! ಮಾತುಗಳೇಕೆ. ಪ್ರೇಮಿಗಳ ನಡುವೆ ಸ್ಪರ್ಷಕ್ಕೆ ಸಾವಿರಾರು ಭಾವಗಳನ್ನು ಕೆರಳಿಸುವಂತಹ ಶಕ್ತಿಯಿದೆ. ಆ ಸ್ಪರ್ಷವನ್ನು ಮತ್ತಷ್ಟು ಮಧುರವಾಗಿಸಲು ನಿಮ್ಮ ತ್ವಚೆ ಮೃದುವಾಗಿರಬೇಕು. ಕಾಫಿ ನೀಡುವಾಗಲೋ, ಜೊತೆಯಲ್ಲಿ ನಡೆಯುವಾಗಲೋ, ಸುಮ್ಮನೆ ಸೋಕುವ ನಿಮ್ಮ ತ್ವಚೆಯು ಮಂಜುಗಡ್ಡೆ ಸೋಕಿದಂತ ಅನುಭವವನ್ನು ಆತನಿಗೆ ನೀಡಬೇಕು. ಆಗ ನೋಡಿ " ಈ ಟಚ್ಚಲಿ ಏನೋ ಇದೆ! ಕಣ್ಣಂಚಲಿ ಸುಳಿ ಮಿಂಚಿದೆ" ಹಾಡು ಹುಟ್ಟುತ್ತೆ!!.

ತಾಜಾ ಉಸಿರು:

ತಾಜಾ ಉಸಿರು:

ತಂಬಾಕಿನ ಗಬ್ಬು ವಾಸನೆಯನ್ನು ಬಾಯಿ ತುಂಬಾ ಇಟ್ಟು ಕೊಂಡಿರುವ ವ್ಯಕ್ತಿಗೆ ಮುತ್ತು ನೀಡಲು ನೀವೆಷ್ಟು ಅಸಹ್ಯ ಪಟ್ಟುಕೊಳ್ಳುತ್ತಿರೋ? ಅಷ್ಟೇ ಅಸಹ್ಯವನ್ನು ನಿಮ್ಮ ಬಾಯಿಯ ದುರ್ವಾಸನೆಗೆ ಹುಡುಗರು ಪಟ್ಟುಕೊಳ್ಳುತ್ತಾರೆ ಎಂಬುದನ್ನು ಮರೆಯದಿರಿ. ನಿಮ್ಮವರು ನೀವು ಮಧ್ಯಾಹ್ನ ಏನೇನು ತಿಂದಿರಿ ಎಂದು ತಿಳಿಯಲು ಬಯಸುವುದಿಲ್ಲ, ಅದರಲ್ಲು ನಿಮ್ಮನ್ನು ಮುದ್ದಿಸುವಾಗ ಇದು ಬೇಡದಿರುವ ವಿಚಾರ. ಆದರೆ ಈ ಬಾಯಿಯ ದುರ್ವಾಸನೆಯು ಬಿಡಬೇಕಲ್ಲ, ಒಳ್ಳೆಯ ಸಂದರ್ಭದಲ್ಲಿ ರಸಭಂಗ ಮಾಡಲು ಕಾಯುತ್ತ ಕುಳಿತಿರುತ್ತದೆ. ಅದಕ್ಕಾಗಿ ನಿಮ್ಮ ಬಳಿ ಒಂದು ಪೆಪ್ಪರ್‌ಮಿಂಟ್ ಸ್ಪ್ರೇ ಮತ್ತು ಟೂಥ್‍ಪಿಕ್‍ಗಳನ್ನು ಯಾವಾಗಲು ಇಟ್ಟುಕೊಂಡಿರಿ. ನಿಮ್ಮ ಹಲ್ಲುಗಳಲ್ಲಿ ಆಹಾರದ ತುಣುಕುಗಳು ಉಳಿಯದಂತೆ ಎಚ್ಚರವಹಿಸಿ. ಚೆನ್ನಾಗಿ ನೀರು ಕುಡಿಯಿರಿ, ಇದರಿಂದ ಬಾಯಿ ಒಣಗುವುದಿಲ್ಲ. ಬಾಯಿ ಒಣಗಿದಷ್ಟು ದುರ್ವಾಸನೆ ಹುಟ್ಟುತ್ತೆ ಎಂಬುದನ್ನು ಮರೆಯದಿರಿ. ಜೊತೆಗೆ ಪ್ರತಿದಿನ ಬೆಳಗ್ಗೆ ಚೆನ್ನಾಗಿ ಮೌತ್‍ವಾಷ್‍ನಿಂದ ಬಾಯಿ ಮುಕ್ಕಳಿಸಿ.

ನಿಮಗೆ ಒಪ್ಪುವಂತಹ ಒಡವೆಗಳಿಗೆ ಆಧ್ಯತೆ ನೀಡಿ;

ನಿಮಗೆ ಒಪ್ಪುವಂತಹ ಒಡವೆಗಳಿಗೆ ಆಧ್ಯತೆ ನೀಡಿ;

ಒಡವೆಗಳು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಕವಿವಾಣಿಯು ಹೆಣ್ಣನ್ನು " ಬಂಗಾರದ ಒಡವೆಗಳ ಬಯಸಿಲ್ಲ, ಬಂಗಾರದಂತಹ ಹುಡುಗಿ, ನನ್ನೊಡವೆ ನನ್ನ ಬೆಡಗಿ" ಎಂದು ಹಾಡಿ ಹೊಗಳಿದೆ. ಒಡವೆ ಹಾಕಿ, ಆದರೆ ಅದು ನಿಮಗೆ ಒಪ್ಪುವಂತಿರಬೇಕು. ಅದು ಬಂಗಾರ, ಬೆಳ್ಳಿ ಅಥವಾ ಇನ್ಯಾವುದೋ ಜಂಕ್ ಜ್ಯುವೆಲ್ಲರಿಯಾಗಿರಲಿ ಪರವಾಗಿಲ್ಲ. ಆದರೆ ನೋಡಲು ಆಕರ್ಷಕವಾಗಿರುವುದಕ್ಕೆ ಮನ್ನಣೆ ನೀಡಿ. ನಿಮ್ಮ ವ್ಯಕ್ತಿತ್ವಕ್ಕೆ ಮೆರಗು ನೀಡುವಂತಹ ಒಡವೆಗೆ ಹೆಚ್ಚಿನ ಮನ್ನಣೆ ನೀಡಿ. ಉಡುಗೆ- ತೊಡುಗೆಗೆ ಒಪ್ಪುವಂತಹ ಒಡವೆಗಳನ್ನು ಧರಿಸಿ.

ಸೆಕ್ಸಿ ಹೀಲ್ಸ್;

ಸೆಕ್ಸಿ ಹೀಲ್ಸ್;

ಹೀಲ್ಸ್ ಇಷ್ಟಪಡದವರು ಯಾರು? ಜೊತೆಗೆ ಹೀಲ್ಸ್ ನಿಮ್ಮ ಸೌಂದರ್ಯಕ್ಕೆ ಮತ್ತಷ್ಟು ಮೆರಗನ್ನು ತರುತ್ತದೆ. ಅಸಲು ವಿಚಾರವೇನೆಂದರೆ ಹೀಲ್ಸ್‌ಗಳು ನಿಮ್ಮ ಕಾಲುಗಳನ್ನು ಉದ್ದವಾಗಿ ಕಾಣುವಂತೆ ಮಾಡುತ್ತವೆ. ಆಗ ನಿಮ್ಮ ಎತ್ತರವು ಸಹಜವಾಗಿ ಹುಡುಗರ ಎದೆಗೆ ಕನ್ನ ಹಾಕುತ್ತದೆ. ಜೊತೆಗೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಹೀಲ್ಸ್ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವಂತೆ. ಇನ್ನೇಕೆ ತಡ ನಿಮ್ಮ ಹುಡುಗನ ಜೊತೆಗೆ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಆತ್ಮವಿಶ್ವಾಸ ಹೀಲ್ಸ್ ಹಾಕುವುದರಿಂದ ಉಚಿತವಾಗಿ ದೊರೆಯುತ್ತದೆಯಂತೆ!.

ಪರಿಮಳವನ್ನು ಚೆಲ್ಲಿ:

ಪರಿಮಳವನ್ನು ಚೆಲ್ಲಿ:

ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ ಸುಸ್ತಾಗಿದ್ದೀರಾ? ಮಗುವನು ಆಡಿಸುತ್ತಿದ್ದಿರ? ಮತ್ತೊಂದು ಮಗದೊಂದು ಕೆಲಸದಲ್ಲಿ ಮಗ್ನರಾಗಿದ್ದಿರಾ? ಇವೆಲ್ಲ ನಿಮ್ಮವರು ನಿಮ್ಮ ಬಳಿ ಕೇಳುವುದಿಲ್ಲ. ಯಾವುದೇ ಗಂಡಸು ಪಕ್ಕದಲ್ಲಿ ತನ್ನ ಪ್ರೀತಿ ಪಾತ್ರ ಹೆಣ್ಣು ಬಂದರೆ ಮನಸೂರೆಗೊಳ್ಳುವ ಪರಿಮಳವನ್ನು ಅಪೇಕ್ಷಿಸುತ್ತಾನೆ, ಅದಕ್ಕಾಗಿ ಒಂದು ಒಳ್ಳೆಯ ಡಿಯೊಡ್ರೆಂಟ್ ನಿಮ್ಮ ಬಳಿ ಇರಲಿ. ಅದರಲ್ಲು ಭಾರತದಂತಹ ದೇಶದಲ್ಲಿನ ಹವಾಮಾನಕ್ಕೆ ಸರಿಹೊಂದುವ ಒಂದು ಅಂಟಿ ಪರ್ಸ್ಪಿರೆಂಟ್ ಇದ್ದರೆ ಉತ್ತಮ. ಪರಿಮಳ ಬೀರಿ ಎಂದ ಕೂಡಲೆ ,ಮೈಲಿ ದೂರದಿಂದಲೆ ನೀವಿರುವುದನ್ನು ತಿಳಿಯುವಷ್ಟು ಘಮಘಮಿಸಬೇಡಿ. ಎಲ್ಲದರಲ್ಲು ಹಿತ-ಮಿತ ಇದ್ದರೆ ಉತ್ತಮ. ಪಕ್ಕದಲ್ಲಿ ಸುಳಿದರೆ, ಮಾದಕ ಸುವಾಸನೆ ಚೆಲ್ಲಬೇಕು ಹಾಗಿರಬೇಕು ನೀವು ಮತ್ತು ನಿಮ್ಮ ಪರ್ಫ್ಯೂಮ್.

Story first published: Sunday, March 2, 2014, 11:02 [IST]
X
Desktop Bottom Promotion