Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಆರೋಗ್ಯಕರ ಜೀವನ ಶೈಲಿಗಾಗಿ ಸೂಪರ್ ಸಲಹೆಗಳು
ಸುಂದರವಾಗಿ ಕಾಣಬೇಕೆಂಬ ಹೆಬ್ಬಯಕೆಯು ಸ್ತ್ರೀಯರು ಮತ್ತು ಪುರುಷರು ಇವರೀರ್ವರ ಮನದಲ್ಲಿಯೂ ಚಿರಂತನವಾಗಿರುತ್ತದೆ. ಸೂಕ್ತ ರೀತಿಯ ತ್ವಚೆಯ ಕಾಳಜಿ ಮತ್ತು ಕೇಶರಾಶಿಯ ಕಾಳಜಿಯು ಸರಿಯಾದ ರೀತಿಯಲ್ಲಿ ದೇಹಾರೋಗ್ಯದ ಕಾಳಜಿಯೊಂದಿಗೆ ಮಿಳಿತಗೊಂಡಾಗ ವ್ಯಕ್ತಿಗೆ ಸೌoದರ್ಯ ಮತ್ತು ಉತ್ತಮ ನಿಲುವು, ಬಾಹ್ಯಸೌoದರ್ಯ ದೊರೆಯುತ್ತದೆ.
ಹೆಚ್ಚಿನ ಜನರು ಸುಂದರವಾದ ತ್ವಚೆಗಾಗಿ ಹಣ ಮತ್ತು ಸಮಯವನ್ನು ವಿನಿಯೋಗಿಸುತ್ತಾರೆ. ಕೆಲವರು ಇದರಲ್ಲಿ ಯಶಸ್ವಿಗಳಾದರೂ ಕೂಡ ಕೆಲವರು ವಿಫಲರಾಗುತ್ತಾರೆ. ಕೆಲವೊಂದು ಪ್ರಯೋಗಗಳು ಅನಿಷ್ಟ ಫಲಿತಾoಶಗಳನ್ನೂ ಸಹ ನೀಡಬಲ್ಲವು. ಈ ಎಲ್ಲಾ ಪರಿಣಾಮಗಳನ್ನು ಮತ್ತು ದುಂದುವೆಚ್ಚವನ್ನೂ ತಪ್ಪಿಸಲು, ನಿಮ್ಮ ಶರೀರ ಮತ್ತು ತ್ವಚೆಯ ರಕ್ಷಣೆಗಾಗಿ ಪ್ರಾಕೃತಿಕ ವಿಧಾನಗಳನ್ನು ಅನುಸರಿಸುವುದು ಉತ್ತಮವಾಗಿದೆ. ಈ ಕೆಳಗಿನ ಮಾರ್ಗದರ್ಶಿ ಸೂತ್ರಗಳನ್ನು ಪ್ರಯತ್ನಿಸಿ ಹಾಗೂ ಮತ್ತೊಮ್ಮೆ ಕನ್ನಡಿಯಲ್ಲಿ ಉಂಟಾದ ನಿಮ್ಮದೇ ಪ್ರತಿಬಿಂಬಕ್ಕೆ ಮನಸೋಲಿರಿ.
ಶರೀರವನ್ನು ಚೆನ್ನಾಗಿ ಉಜ್ಜಿಕೊಳ್ಳಿರಿ

ಮೃತ ಜೀವಕೋಶಗಳನ್ನು ನಿವಾರಿಸಲು ಮತ್ತು ನಿಮ್ಮ ತ್ವಚೆಯ ಮೇಲೆ ಜೀವಾಣುಗಳ ಬೆಳವಣಿಗೆಯನ್ನು ತಡೆಗಟ್ಟಲು, ನಿಮ್ಮ ಶರೀರಕ್ಕೆ ನಿಯಮಿತವಾಗಿ ಲೇಪನವನ್ನು ಬಳಸಿರಿ. ಲಭ್ಯವಿರುವ ಅತ್ಯುತ್ತಮವಾದ ಪ್ರಾಕೃತಿಕ ಲೇಪನವೆoದರೆ ಜೇನುತುಪ್ಪ ಮತ್ತು ಸಕ್ಕರೆಗಳ ಮಿಶ್ರಣವಾಗಿದೆ.
ನೀರಿನ ಸೇವನೆಯನ್ನು ಹೆಚ್ಚಿಸಿರಿ
ಪ್ರತಿದಿನವೂ ಕೂಡ ನೀವು ಕನಿಷ್ಟ 8 ರಿಂದ 10 ಲೋಟಗಳಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ಇದು ನಿರ್ಜಲೀಕರಣವನ್ನು ತಡೆಯುತ್ತದೆ ಮತ್ತು ನಿಮ್ಮ ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ.
ಧೂಳಿನಿಂದ ದೂರವಿರಿ
ನೀವು ಅತಿಯಾಗಿ ಬೆವರುತ್ತೀರಾದರೆ, ನೀವು ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದನ್ನು ಖಚಿತಪಡಿಸಿಕೊಳ್ಳಿರಿ. ಒಂದು ಉತ್ತಮವಾದ ಸ್ನಾನವು ನಿಮ್ಮನ್ನು ತಂಪಾಗಿರಿಸಲು ಸಹಕರಿಸುತ್ತದೆ ಮತ್ತು ನಿಮ್ಮ ಸ್ವಚ್ಚತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಸ್ನಾನದ ಬಳಿಕ, ನಿಮ್ಮ ತ್ವಚೆಯು ಉಸಿರಾಡಲು ಸಹಕಾರಿಯಾಗುವಂತೆ, ಸಡಿಲವಾದ ಹತ್ತಿಯ ಬಟ್ಟೆಗಳನ್ನು ಆರಿಸಿಕೊಳ್ಳಿರಿ.
ಕೇಶರಾಶಿಯ ಬಗ್ಗೆ ನಿಗಾ ಇರಲಿ
ಏರುತ್ತಿರುವ ಉಷ್ಣತೆ ಮತ್ತು ಮಾಲಿನ್ಯವು ನಿಮ್ಮ ಕೇಶರಾಶಿಯ ಆರೋಗ್ಯದ ಮೇಲೂ ಕೂಡ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಉತ್ತಮ ಕೇಶರಾಶಿಯನ್ನು ಕಾಪಿಟ್ಟುಕೊಳ್ಳಲು, ನಿಮ್ಮ ಅನುಕೂಲಕ್ಕೆ ತಕ್ಕಂತೆ, ಕೂದಲಿಗೆ ಶಾಂಪೂವನ್ನು ಬಳಸಿ. ಕೂದಲಿನಲ್ಲಿರಬಹುದಾದ ಧೂಳು ಮತ್ತು ಕೊಳೆಯನ್ನು ನಿವಾರಿಸಲು, ನಿಮ್ಮ ಕೂದಲಿಗೆ ಶಾoಪೂವನ್ನು ಬಳಸುವಾಗ, ಅದಕ್ಕೆ ಒಂದು ಚಿಟಿಕೆಯಷ್ಟು ಅಡುಗೆ ಸೋಡಾವನ್ನು ಸೇರಿಸಿರಿ.
ನಿಮ್ಮ ಕಾಲ್ಬೆರಳುಗಳ ಉಸಿರಾಟದತ್ತವೂ ಗಮನವಿರಲಿ
ಯಾವಾಗಲೂ ತೆರೆದ ಬೂಟುಗಳನ್ನೇ ಧರಿಸಿರಿ. ಇದು ನಿಮ್ಮ ಪಾದಗಳಿಗೆ ಸರಿಯಾದ ವಾಯು ಸಂಚಾರವನ್ನು ಅನುವು ಮಾಡಿಕೊಡುತ್ತದೆ ಮತ್ತು ನಿಮ್ಮ ಪಾದಗಳಿಂದ ಬರಬಹುದಾದ ದುರ್ವಾಸನೆಯನ್ನು ಹಾಗೂ ಫಂಗಸ್ ನ ಸೋಂಕುಗಳನ್ನು ತಡೆಯುತ್ತದೆ.
ಮೊಸರನ್ನು ನಿಮ್ಮ ಹೊಸ ಆಪ್ತಮಿತ್ರನನ್ನಾಗಿಸಿಕೊಳ್ಳಿರಿ
ನಿಮ್ಮ ಮೊಸರು ಸೇವನೆಯ ಪ್ರಮಾಣವನ್ನು ಹೆಚ್ಚಿಸಿರಿ. ಯಾಕೆಂದರೆ, ಇದು ಕೇವಲ ನಿಮ್ಮ ತ್ವಚೆಗೆ ಮರುಜೀವವನ್ನು ನೀಡುವುದು ಮಾತ್ರವೇ ಅಲ್ಲದೇ, ವಯಸ್ಸಾಗುವ ಪ್ರಕ್ರಿಯೆಯನ್ನೂ ಕೂಡ ನಿಧಾನಿಸುತ್ತದೆ. ಮೊಸರನ್ನು ನೀವು ತ್ವಚೆಯ ಅಥವಾ ಕೂದಲ ಪ್ಯಾಕ್ (ಲೇಪ) ನ ರೂಪದಲ್ಲಿಯೂ ಬಳಸಬಹುದು. ಇದು ಸೂರ್ಯನಿಂದ ಆಗುವ ಹಾನಿಯನ್ನು ಕಡಿಮೆ ಮಾಡುತ್ತದೆ.



Click it and Unblock the Notifications
















