Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೈಸರ್ಗಿಕವಾಗಿ ಸ್ತನದ ಗಾತ್ರವನ್ನು ಹೆಚ್ಚಿಸುವುದು ಹೇಗೆ?
ಮಹಿಳೆಯರಲ್ಲಿ ಪ್ರೌಢಾವಸ್ಥೆಯ ಸಮಯದಲ್ಲಿ ಲೈಂಗಿಕ ಹಾರ್ಮೋನ್ ಉತ್ಪಾದನೆ ಉಂಟಾಗಿ ಮುಟ್ಟಿನಲ್ಲಿ ಕೊನೆಗೊಳ್ಳುತ್ತದೆ. ಸ್ತನದ ಗಾತ್ರ ದೊಡ್ಡದಾಗುವುದು ಸೇರಿದಂತೆ ಎಲ್ಲಾ ರೀತಿಯ ಲೈಂಗಿಕ ಅಂಶಗಳು ಈ ಮಧ್ಯಂತರದಲ್ಲಿ ಸಂಭವಿಸುತ್ತವೆ.
ಈಸ್ಟ್ರೋಜನ್‌ನ ಕಡಿಮೆ ಉತ್ಪಾದನೆಯಿಂದ ಸ್ತನದ ಗಾತ್ರ ಕಿರದಾಗಿರುತ್ತದೆ. ಈ ದಿನಗಳಲ್ಲಿ ಸ್ತನ ಗಾತ್ರವನ್ನು ಹಿರಿದಾಗಿಸುವ ಹಲವಾರು ತಂತ್ರಜ್ಞಾನಗಳು ನಮ್ಮ ಮುಂದಿವೆ. ಆದರೆ ನೈಸರ್ಗಿಕವಾಗಿ ಈ ಸಮಸ್ಯೆಯನ್ನು ನಿವಾರಿಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಆದ್ದರಿಂದ ಸ್ತನ ಗಾತ್ರವನ್ನು ಹೆಚ್ಚಿಸುವ ನೈಸರ್ಗಿಕ ವಿಧಾನಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ತನ ಗಾತ್ರವನ್ನು ಕಿರಿದುಗೊಳಿಸಲು ಸಲಹೆಗಳು!

ವ್ಯಾಯಾಮ
ನೈಸರ್ಗಿಕವಾಗಿ ಸ್ತನ ಗಾತ್ರವನ್ನು ಹೆಚ್ಚಿಸುವ ಒಂದು ವಿಧಾನ ವ್ಯಾಯಾಮ ಮಾಡುವುದಾಗಿದೆ. ಎದೆಯ ಸ್ನಾಯು ಸಮೂಹವನ್ನು, ನಿಮ್ಮ ಎದೆಯನ್ನು ರಚಿಸುವ ಮುಖ್ಯ ಸ್ನಾಯುವನ್ನು ಹೆಚ್ಚಿಸಲು ವ್ಯಾಯಾಮ ಸಹಾಯ ಮಾಡುತ್ತದೆ. ಪುಶಪ್‌ಗಳು ಸೇರಿದಂತೆ ಕೆಲವು ವ್ಯಾಯಾಮಗಳು ನಿಮ್ಮ ನೆರವಿಗೆ ಬರುತ್ತವೆ.

ಆಹಾರ ಪದ್ಧತಿ
ಉತ್ತಮ ಆಹಾರ ಪದ್ಧತಿ ನೈಸರ್ಗಿಕವಾಗಿ ನಿಮ್ಮ ಸ್ತನದ ಗಾತ್ರವನ್ನು ಹೆಚ್ಚಿಸುತ್ತದೆ. ಸ್ತನದ ಸ್ವಾಭಾವಿಕ ಬೆಳವಣಿಗೆಗೆ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರೋನ್ ಎಂಬ ಎರಡು ಹಾರ್ಮೋನುಗಳು ಕಾರಣವಾಗಿವೆ. ಈಸ್ಟ್ರೋಜನ್‌ನ ಸಾರವಾದ ಸ್ವಾಭಾವಿಕ ಹಾರ್ಮೋನ್ ಮಟ್ಟವನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಫೈಟೋಸ್ಟ್ರೋಜನ್ಸ್ ಕೆಲವು ಸಸ್ಯ ಮೂಲಿಕೆಗಳಲ್ಲಿ, ಹಣ್ಣುಗಳಲ್ಲಿ, ತರಕಾರಿಗಳಲ್ಲಿ ಇರುತ್ತವೆ. ಇದನ್ನು ಒಳಗೊಂಡಿರುವ ಸಸ್ಯ ಮೂಲಿಕೆಗಳು ಮುಂದಿನ ಫೋಟೊವನ್ನು ನೋಡಿ:

ಪ್ಯೂರಿಯಾ ಮಿರಿಫಿಕಾ
ಈ ಸಸ್ಯಮೂಲಿಕೆಯು ಥಾಯ್ಲೆಂಡ್ ಮತ್ತು ಮಯನ್ಮಾರ್‌ನಲ್ಲಿ ಕಾಣಸಿಗುತ್ತವೆ. ಇದು ಸ್ತನ ಗಾತ್ರವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅದರ ನಿರ್ದಿಷ್ಟತೆಗೂ ಸಹಕಾರಿಯಾಗಿದೆ.

ರೆಡ್ ಕ್ಲೋವರ್
ಇದು ನಾಲ್ಕು ರೀತಿಯ ಫೈಟೋಸ್ಟ್ರೋಜನ್ಸ್ ಒಳಗೊಂಡಿರುವ ಸಸ್ಯ ಮೂಲಿಕೆಯಾಗಿದೆ. ಸ್ತನ ಗಾತ್ರವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ಇದು ವಹಿಸುತ್ತದೆ. ಇದು ಹೃದಯ ಕಾಯಿಲೆ ಮತ್ತು ಲಕ್ವವನ್ನು ತಡೆಗಟ್ಟುತ್ತದೆ.

ಸೋಯಾ ಉತ್ಪನ್ನಗಳು
ಟೋಫು, ಸೋಯಾ ಮೊಸರು ಮತ್ತು ಸೋಯಾ ಹಾಲು ಸ್ತನ ಗಾತ್ರವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ನೆರವನ್ನುಂಟು ಮಾಡುತ್ತದೆ.

ತರಕಾರಿಗಳು
ಹೆಚ್ಚಿನ ಹಸಿರು ತರಕಾರಿಗಳಾದ ಪಾಲಾಕ್, ಸೌತೆಕಾಯಿ, ಹೂಕೋಸು, ಬ್ರೊಕೋಲಿ, ಬ್ರುಸೆಲ್ಸ್ ಮತ್ತು ಕ್ಯಾಬೇಜ್ ಹೆಚ್ಚು ಪ್ರಮಾಣದ ಫ್ಲಾವಿನೋಯಿಡ್ಸ್ ಅಂಶಗಳನ್ನು ಹೊಂದಿವೆ. ಇವುಗಳು ಸ್ತನ ಗಾತ್ರವನ್ನು ಹೆಚ್ಚಿಸುತ್ತವೆ ಮತ್ತು ಅವುಗಳನ್ನು ಆರೋಗ್ಯವಾಗಿರಿಸುತ್ತವೆ.

ಹಣ್ಣುಗಳು
ಸೇಬು, ಚೆರ್ರಿ, ಟೊಮೇಟೊ, ದಾಳಿಂಬೆ, ಪ್ಲಮ್ಸ್ ಮುಂತಾದ ಹಣ್ಣುಗಳು ಸ್ತನ ಗಾತ್ರವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತವೆ.



Click it and Unblock the Notifications