Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ದಪ್ಪ ಹುಬ್ಬುಗಳಿಗೆ ಗೃಹೋಪಾಯಗಳು
ಮುಖವನ್ನು ಅಂದಗಾಣಿಸಲು ಯಾವುದು ಮುಖ್ಯ ಯಾವುದು ಅಲ್ಲ ಎಂದು ಕೇಳಿದರೆ ಏನು ಹೇಳಬಹುದು. ಮುಖದ ಎಲ್ಲವನ್ನೂ ಹೆಸರಿಸಬೇಕಾಗಬಹುದು. ಕಣ್ಣು, ಮೂಗು, ಕಿವಿ ಎಲ್ಲವೂ ಸುಂದರವಾಗಿದ್ದರಷ್ಟೇ ಮುಖ ಸುಂದರವಾಗಿ ಕಾಣುತ್ತದೆ.
ಯಾವುದಾರೂ ಒಂದು ಸರಿಯಾಗಿಲ್ಲ ಎಂದಾದರೂ ಮುಖದ ಒಟ್ಟಾರೆ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಇವೆಲ್ಲದವುಗಳ ಜೊತೆಗೆ ಮುಖವನ್ನು ಸುಂದರವನ್ನಾಗಿಸುವ ಇನ್ನೊಂದು ಅಂಶವಿದೆ. ನಿಮ್ಮ ಊಹೆ ಸರಿ ಕಣ್ಣಹುಬ್ಬುಗಳು.
ಮಹಿಳೆಯರ ವಿಷಯದಲ್ಲಂತೂ ಇದು ಬಹಳವೇ ಅಗತ್ಯ. ಒಂದು ವೇಳೆ ಮಹಿಳೆಯರು ತಮ್ಮ ಹುಬ್ಬನ್ನು ಸರಿಯಾದ ಆಕಾರಕ್ಕೆ ತರದೇ ಹೋದರೆ ಹೇಗಾಗಬಹುದು ಎಂದು ಕಲ್ಪನೆ ಮಾಡಿದ್ದೀರಾ? ನಿಮ್ಮ ಸೌಂದರ್ಯದ ಬಗ್ಗೆ ಬಹಳ ಕಾಳಜಿ ವಹಿಸುವುದೇ ಆದಲ್ಲಿ ನಿಮ್ಮ ಹುಬ್ಬುಗಳ ಬಗ್ಗೆ ಬಹಳ ಕಾಳಜಿ ನೀವು ವಹಿಸುವುದು ಸುಳ್ಳಲ್ಲ. ಬೇರೆ ಎಲ್ಲಾ ಸರಿಯಿದ್ದು ಕೇವಲ ಹುಬ್ಬುಗಳ ಆಕಾರದ ಕಾರಣದಿಂದ ಚೆನ್ನಾಗಿ ಕಾಣುತ್ತಿಲ್ಲ ಎಂಬ ಟೀಕೆ ಕೇಳಲು ಯಾರೂ ಸಿದ್ಧರಿರುವುದಿಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲಕ್ಕೆ ಚರ್ಮಕ್ಕೆ ವಿಟಮಿನ್ ಇ ಆಹಾರಗಳು
ಹಾಗಾದರೆ ಇದಕ್ಕಾಗಿ ಏನಾದರೂ ರಾಸಾಯನಿಕ ಚಿಕಿತ್ಸೆಯ ಅಗತ್ಯ ಇದೆಯೇ ಎಂದು ಕೇಳಿದರೆ ಉತ್ತರ ಇಲ್ಲ. ನಿಮ್ಮ ಚರ್ಮದ ಮೇಲೆ ಪ್ರಭಾವ ಬೀರುವ ಇಂತಹ ರಾಸಾಯನಿಕಗಳಿಲ್ಲದೇ ನಿಮ್ಮ ಹುಬ್ಬನ್ನು ಅಂದವಾಗಿ ಕಾಣಿಸಬಹುದು. ಇದಕ್ಕಾಗಿ ಕೆಲವು ಸ್ವಾಭಾವಿಕವಾದ ದಾರಿಗಳಿವೆ. ಇದನ್ನು ನೀವು ಮನೆಯಲ್ಲೇ ಮಾಡಬಹುದು. ಇವು ನಿಮ್ಮ ಹುಬ್ಬಿನ ಅಂದವನ್ನು ಸುಂದರವನ್ನಾಗಿಸುವುದರಲ್ಲಿ ಸಂಶಯವೇ ಇಲ್ಲ.

ಹರಳೆಣ್ಣೆ
ಬಹಳವೇ ಕಡಿಮೆ ಬೆಲೆಯ ದಾರಿ ಇದು. ಆದರೆ ಬಹಳವೇ ಪರಿಣಾಮಕಾರಿ. ಇದು ಬಹುಶಃ ಅತ್ಯಂತ ಹಳೆಯ ಮತ್ತು ಅಷ್ಟೇ ಬಳಕೆಯಲ್ಲಿರುವ ಹುಬ್ಬನ್ನು ದಪ್ಪ ಮಾಡುವ ಸಾಧನ. ನಿಯಮಿತವಾಗಿ ಹುಬ್ಬಿಗೆ ಹರಳೆಣ್ಣೆಯನ್ನು ಹಚ್ಚಿದರೆ ನಿಮ್ಮ ಹುಬ್ಬು ಬಹಳ ಸುಂದರವಾಗಿ ಕಾಣುತ್ತದೆ ಹಾಗೂ ದಪ್ಪನಾಗುತ್ತದೆ. ಹಾಗೂ ಇದು ಖಂಡಿತವಾಗಿ ಪರಿಣಾಮ ಬೀರಬಲ್ಲ ಒಂದು ದಾರಿ.

ಪೆಟ್ರೋಲಿಯಂ ಜೆಲ್ಲಿ
ವ್ಯಾಸಲಿನ್ ಕೇರ್ - ನೀವು ಮುಖಕ್ಕೆ ಹಚ್ಚುವ ವ್ಯಾಸಲಿನ್ ಅನ್ನೇ ಹುಬ್ಬುಗಳಿಗೂ ಸರಿಯಾಗಿ ಹಚ್ಚಿದಲ್ಲಿ ಅದು ನಿಮ್ಮ ಹುಬ್ಬನು ನೇರವಾಗಿ ಮತ್ತು ಬಲಿಷ್ಟವನ್ನಾಗಿಸುತ್ತದೆ. ಸ್ವಲ್ಪವೇ ಪ್ರಮಾಣದ ವ್ಯಾಸಲಿನ್ ಅನ್ನು ದಿನಕ್ಕೆ ಎರಡು ಮೂರು ಬಾರಿ ಹಚ್ಚಿದಲ್ಲಿ ಪರಿಣಾಮ ಖಂಡಿತ ಕಾಣುವಿರಿ.

ಶುದ್ಧ ತೆಂಗಿನ ಎಣ್ಣೆ
ಕೂದಲಿನ ಬೆಳವಣಿಗೆಗೆ ತೆಂಗಿನ ಎಣ್ಣೆ ಬಹಳ ಪರಿಣಾಮಕಾರಿಯಾದ ಔಷಧ. ಇದು ಹುಬ್ಬುಗಳಿಗೂ ಬಹಳ ಸೂಕ್ತವಾಗಿದೆ. ಇದು ದಪ್ಪನೆಯ ಹುಬ್ಬುಗಳನ್ನು ಮಾಡುವುದರ ಜೊತೆಗೆ ಬೆಳವಣಿಗೆಯ ವೇಗವನ್ನೂ ಹೆಚ್ಚಿಸುತ್ತದೆ. ಇದು ಸುಂದರವಾದ ಆಕಾರ ನೀಡಲೂ ನೆರವಾಗುತ್ತದೆ.

ಈರುಳ್ಳಿ ರಸ
ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಸಲ್ಫರ್ ಅಂಶ ಇರುತ್ತದೆ. ಇದರಿಂದಾಗಿ ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತದೆ. ಇದೇ ಈರುಳ್ಳಿ ರಸವನ್ನು ಹುಬ್ಬುಗಳಿಗೆ ಹಚ್ಚಿದರೆ ರಕ್ತ ಪರಿಚಲನೆಯೂ ಚೆನ್ನಾಗಿ ನಡೆಯುತ್ತದೆ ಮತ್ತು ದಪ್ಪನೆಯ ಹುಬ್ಬು ಕೂಡ ಬರುತ್ತದೆ.

ನೀರು
ನೀರು ನಮ್ಮ ದೇಹಕ್ಕೆ ಬಹಳ ಅಗತ್ಯವಾದ ಅಂಶ. ದಿನಕ್ಕೆ ಸುಮಾರು ಆರರಿಂದ ಎಂಟು ಲೀಟರ್ ಗಳಷ್ಟು ನೀರು ಕುಡಿದರೆ ದೇಹದ ಇತರ ಭಾಗಗಳಂತೆ ಹುಬ್ಬಿನ ಬೆಳವಣಿಗೆಗೂ ಪೂರಕ.

ಆಲೀವ್ ಎಣ್ಣೆ
ಆಲೀವ್ ಎಣ್ಣೆಯಲ್ಲೂ ಇಂತಹುದೇ ಗುಣ ಇದೆ. ಇದು ಹುಬ್ಬುಗಳ ಬೆಳವಣಿಗೆ ಮತ್ತು ಅವುಗಳ ಸುಂದರ ಆಕಾರಕ್ಕೆ ಬಹಳ ಸಹಕಾರಿ.

ಆಲೋ ವೆರಾ
ನಮ್ಮ ದೇಹದ ಎಲ್ಲಾ ಸಮಸ್ಯೆಗಳಿಗೂ ಆಲೋ ವೆರಾ ಒಂದು ಉಪಶಮನ ಎಂದರೆ ತಪ್ಪಲ್ಲ. ಅದರಲ್ಲೂ ಚರ್ಮದ ವಿಷಯ ಬಂದಾಗ ಇದು ಒಂದು ರೀತಿಯ ರಾಮಬಾಣದಂತೆ. ಅದೇ ಕೆಲಸವನ್ನು ಇದು ಹುಬ್ಬುಗಳ ಮೇಲೂ ಮಾಡುತ್ತದೆ. ನಿಯಮಿತವಾಗಿ ಹಚ್ಚಬೇಕಷ್ಟೇ.

ಮೊಟ್ಟೆ
ಮೊಟ್ಟೆಯೊಳಗಿನ ಸತ್ವಗಳು ಹೀಗೆಯೇ ಪರಿಣಾಮಕಾರಿ. ಮೊಟ್ಟೆಯ ಒಳಗಿನ ಹಳದಿ ಲೋಳೆಯನ್ನು ಹತ್ತಿಯೊಂದಿಗೆ ನಿಮ್ಮ ಹುಬ್ಬುಗಳಿಗೆ ಹಚ್ಚಿಕೊಳ್ಳಿ. ಇದನ್ನು 15- 20 ನಿಮಿಷಗಳ ತನಕ ಹಾಗೆಯೇ ಬಿಡಿ. ಇವುಗಳಲ್ಲಿರುವ ಪ್ರೊಟೀನ್ ನ ಸತ್ವಗಳು ಹುಬ್ಬಿನ ಬೆಳವಣಿಗೆ ಮತ್ತು ಆರೈಕೆಗೆ ಬಹಳ ಅಗತ್ಯ.

ಲಿಂಬೆ ಹಣ್ಣು
ಲಿಂಬೆ ಹಣ್ಣನ್ನು ಕತ್ತರಿಸಿ ಅದನ್ನು ಹುಬ್ಬುಗಳಿಗೆ ಹಚ್ಚಿದಾಗಲೂ ಬಹಳ ಪರಿಣಾಮಕಾರಿಯಾದ ಪ್ರಭಾವವನ್ನು ನೀವು ಕಾಣುವಿರಿ.



Click it and Unblock the Notifications