Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿದೇಶಿ ಮಹಿಳೆಯರ ಸೌಂದರ್ಯ ರಹಸ್ಯ ಯಾವುದು ಗೊತ್ತೇ?
ಸೌಂದರ್ಯ ಎನ್ನುವುದು ಎಲ್ಲಾ ದೇಶದ ಮಹಿಳೆಯರಲ್ಲೂ ಇರುತ್ತದೆ. ಸುಂದರವಾಗಿ ಕಾಣಿಸಲು ಸಾಕಷ್ಟು ಹಣ ಖರ್ಚು ಮಾಡಬೇಕು ಎಂಬುದು ಮುಖ್ಯವಲ್ಲ.ಹಣ ವ್ಯಯಿಸದೇ ಕೂಡ ಮನೆಯಲ್ಲಿರುವ ಅನೇಕ ವಸ್ತುಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಡುಗೆ ಮನೆಯಲ್ಲಿ ದೊರೆಯುವ ಅನೇಕ ಪದಾರ್ಥಗಳು ಆರೋಗ್ಯದ ಜೊತೆಗೆ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತವೆ ಎಂಬುದು ಈಗಿನ ಸಾಕ್ಷಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.
ನಿಮ್ಮ ಅಜ್ಜಿ ಮುಂದಿನ ಬಾರಿ ಹಳೆಯ ಸದ್ಗುಣಗಳ ಬಗ್ಗೆ ಕಿವಿಮಾತು ಹೇಳ ಬಂದರೆ ನಿರ್ಲಕ್ಷಿಸಬೇಡಿ. ಅವರು ಹೇಳುವ ಬುದ್ದಿಮಾತಿನಲ್ಲಿ ಸತ್ವವಿದೆ.ಸುಂದರವಾದ ಚರ್ಮ,ಕೂದಲು ಮತ್ತು ಉಗುರುಗಳು ಕೇವಲ ಹಣ ಮತ್ತು ಸಮಯ ವ್ಯರ್ಥ ಮಾದುವುದರಿಂದ ಮಾತ್ರ ಬರಬೇಕಾಗಿಲ್ಲ. ನಾವು ವಿಶ್ವದ ವಿವಿಧ ಸಂಸ್ಕೃತಿಯ ಅದ್ಬುತ ಸೌಂದರ್ಯ ತಂತ್ರಗಳನ್ನು ನಿಮ್ಮ ಮುಂದಿದುತ್ತಿದ್ದೇವೆ. ಅವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ ಮತ್ತು ನಯವಾದ ಹೊಳೆಯುವ ಚರ್ಮ ಹೊಂದಲು ಎಲ್ಲಾ ದಾರಿಗಳನ್ನು ಹೊಂದಿವೆ.
ಬೇರೆ ಬೇರೆ ದೇಶದ ಜನರು ತಮ್ಮ ಸೌಂದರ್ಯ ಹೆಚ್ಚಿಸಲು ಅವರದೇ ಆದ ವಿಧಾನ ಅನುಸರಿಸುತ್ತಾರೆ.ಇಲ್ಲಿ ನಾವು ವಿವಿಧ ದೇಶದ ಜನರು ಸುಂದರವಾಗಿ ಕಾಣಿಸಲು ಬಳಸುವ ಮನೆಮದ್ದುಗಳನ್ನು ನೀಡಿದ್ದೇವೆ ಓದಿ ನೀವು ಅನುಸರಿಸಿ.ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ.
ಬೇಸಿಗೆಯಲ್ಲೂ ತಂಪಾಗಿರಲು ಸಹಕಾರಿ ಈ 12 ಸಲಹೆಗಳು

ಸ್ಪಾನಿಶ್ ವೃತ್ತಗಳು :
ನೀವು ನಿಮ್ಮ ಕಣ್ಣ ಸುತ್ತಲು ಆಗಿರುವ ಕಪ್ಪು ವೃತ್ತಗಳನ್ನು ತಡೆಯಲು ಸೌತೆಕಾಯಿ ಹೋಳು ಮಾಡಿ ಬಳಸಿರಬಹುದು.ಕೆಲವು ಕ್ರೀಂಗಳು ಕೂಡ ಕಣ್ಣಿನ ಸುತ್ತ ಆಗಿರುವ ಕಪ್ಪು ವೃತ್ತವನ್ನು ತಡೆಯಲು ಸಹಕರಿಸಬಹುದು.ಆದರೆ ನೀವು ಕಣ್ಣಿನ ಸುತ್ತ ಸ್ಪಾನಿಶ್ ಮಹಿಳೆ ಮಾಡುವಂತೆ ತೆಳುವಾದ ಆಲೂಗಡ್ಡೆ ಭಾಗವನ್ನು 10 ನಿಮಿಷ ಇಡಿ ಮತ್ತು ನಿಮ್ಮ ಕಣ್ಣಿನ ಸುತ್ತ ಆಗಿರುವ ಕಪ್ಪು ಸ್ವಲ್ಪ ಮಟ್ಟಿಗೆ ಕಡಿಮೆ ಆಗುವುದನ್ನು ನೀವು ಗಮನಿಸಬಹುದು.

ಬ್ರೆಜಿಲಿಯನ್ ರೀತಿಯಲ್ಲಿ ಸೇಲ್ಯುಲೈಟ್ ಗೆ ಗುಡ್ ಬಾಯ್ ಹೇಳಿ!
ಸೇಲ್ಯುಲೈಟ್ ಎನ್ನುವುದು ಪ್ರತಿ ಮಹಿಳೆಯ ಹತಾಶೆ ಮತ್ತು ಅದನ್ನು ಸರಿ ಹೋಗಿಸಲು ಸಾಕಷ್ಟು ಪರದಾಡಬೇಕಾಗುತ್ತದೆ.ಬ್ರಜಿಲಿಯನ್ ಮಹಿಳೆ ಇದನ್ನು ಹೋಗಲಾಡಿಸಲು ಮರಳನ್ನು ತನ್ನ ದೇಹಕ್ಕೆ ಹಾಕಿ ತಿಕ್ಕಿಕೊಳ್ಳುತ್ತಾರೆ.ಸೆಲ್ಯುಲೈಟ್ ಗೆ ಉತ್ತಮ ವಿಧಾನವೆಂದರೆ ದೇಹದ ಮೇಲೆ ಬ್ರಷ್ ಮಾಡಿ ಹೋಗಲಾಡಿಸುವುದು.ಮರಳನ್ನು ಉಪಯೋಗಿಸಿ ಸೆಲ್ಯುಲೈಟ್ ಹೋಗಲಾಡಿಸಿ.

ತುಟಿಗಳಿಗೆ ಗ್ರೀಕ್ ಮದ್ದು!
ತುಟಿ ಬಹಳ ಮುಖ್ಯ ಆಕರ್ಷಣೆ.ನಮ್ಮ ಅಡುಗೆ ಮನೆಗಳಲ್ಲಿ ತುಟಿಗಳ ಅಂದ ಹೆಚ್ಚಿಸುವ ಸಾಧನಗಳು ಇವೆ. ಗ್ರೀಕ್ ಮತ್ತು ಇಟಾಲಿಯನ್ ಮಹಿಳೆಯರು ತುಟಿಗಳು ಒಡೆಯುವುದನ್ನು ತಡೆಯಲು ಮತ್ತು ನುಣುಪಾಗಿ ಇರಲು ಓಲಿವ್ ಆಯಿಲ್ ಉಪಯೋಗಿಸುತ್ತಾರೆ.ಒಣಗಿದ ಮತ್ತು ಒಡೆದ ಚರ್ಮ ಸರಿಹೋಗಿಸಲು ಇದು ಸೂಕ್ತ ಮದ್ದು.ಇದು ಚರ್ಮ ಮತ್ತು ತುಟಿಗೆ ಕಂಡಿಶನ್ ನಂತೆ ಕೆಲಸ ಮಾಡಿ ನುಣುಪಾಗಿಸುತ್ತದೆ.

ತಾರುಣ್ಯ ಕಾಪಾಡಲು ಚೈನೀಸ್ ವಿಧಾನ
ನಿಮ್ಮ ಚರ್ಮ ತಾರುಣ್ಯದಿಂದ ಕೂಡಿರಬೇಕೆ? ಚೈನಾದವರು ಮಾಡುವಂತೆ ವೈಟ್ ಟೀ ಕುಡಿಯಿರಿ.ಇದು ನಿಮ್ಮ ತಾರುಣ್ಯ ಹೆಚ್ಚಿಸುತ್ತದೆ.

ತಲೆ ಹೊಟ್ಟು ಹೋಗಲಾಡಿಸಲು ಆಸ್ಟ್ರೇಲಿಯನ್ ವಿಧಾನ
ತಲೆಹೊಟ್ಟು ಸಮಸ್ಯೆ ಅನುಭವಿಸುತ್ತೀದ್ದೀರ? ನಿಮ್ಮ ಶಾಂಪೂವಿಗೆ ಕೆಲವು ಹನಿ ನೀಲಗಿರಿಯನ್ನು ಬಳಸಿ. ತಲೆ ಹೊಟ್ಟಿನಿಂದ ಮುಕ್ತಿ ಪಡೆಯಲು ಇದು ಸುಲಭವಾದ ಮಾರ್ಗ.ಆದರೆ ಇದನ್ನು ಬಳಸುವಾಗ ಎಚ್ಚರಿಕೆ ಅಗತ್ಯ ಬಳಸುವ ಮೊದಲು ನಿಮ್ಮ ನೆತ್ತಿಗೆ ಸ್ವಲ್ಪ ಹಾಕಿ ಪರಿಣಾಮವನ್ನು ಗಮನಿಸಿ.

ಸ್ಕ್ಯಾಂಡಿನೇವಿಯನ್ ರ ಚರ್ಮದ ರಕ್ಷಣೆ ವಿಧಾನ
ಅವರನ್ನು ಸುಮ್ಮನೇ ಸುಂದರತಿಯರು ಎಂದು ಕರ್ಯುವುದಿಲ್ಲ.ಸ್ಕ್ಯಾಂಡಿನೇವಿಯನ್ ಮಹಿಳೆಯರು ತಾರುಣ್ಯ ಕಾಪಾಡಲು ಚರ್ಮವನ್ನು ನುಣುಪಾಗಿ ಇಡಲು ನೀರನ್ನು ಹೆಚ್ಚು ಬಳಸುವುದು ಕಾರಣ.ಸಾಕಷ್ಟು ನೀರು ಕುಡಿಯುವುದು ಮತ್ತು ನೀರನ್ನು ತಮ್ಮ ಮುಖಕ್ಕೆ ಬಳಸುವುದು ಇವರ ಸೌಂದರ್ಯಕ್ಕೆ ಕಾರಣ.ಸ್ಟೀಮಿಂಗ್ ಕೂಡ ಮುಖದ ಸೌಂದರ್ಯ ಹೆಚ್ಚುವಂತೆ ಮಾಡುತ್ತದೆ.ನೀವು ನಿಮ್ಮ ಮುಖವನ್ನು ಟವೆಲ್ ನಿಂದ ಮುಚ್ಚಿಕೊಂಡು ಕೂಡ ಸ್ಟೀಮಿಂಗ್ ಮಾಡಿಕೊಳ್ಳಬಹುದು.ನಂತರ ತಣ್ಣೀರು ಅಥವಾ ಐಸ್ ನಲ್ಲಿ ಮುಖ ತೊಳೆಯಿರಿ.ತಣ್ಣೀರು ರಂದ್ರಗಳನ್ನು ಹೋಗಲಾಡಿಸುತ್ತದೆ.ಜೊತೆಗೆ ಇದು ಮುಖದಲ್ಲಿ ಬೊಜ್ಜನ್ನು ಹೋಗಲಾಡಿಸುತ್ತದೆ.



Click it and Unblock the Notifications
