ಸೌಂದರ್ಯವರ್ಧಕಗಳಿಗೆ ಬದಲಿ ಆಯ್ಕೆಯಾಗಿರುವ ಗಿಡಮೂಲಿಕೆಗಳು

By Super

ಆರೈಕೆಯ ವಿಷಯ ಬಂದಾಗ ಹೆಚ್ಚಿನ ಸಮಯ ಕಬಳಿಸುವ ಮತ್ತು ಹೆಚ್ಚಿನ ಆರೈಕೆ ಬೇಡುವ ಅಂಗಗಳೆಂದರೆ ಮುಖ ಮತ್ತು ಕೇಶ. ಇಂದಿನ ವ್ಯಸ್ತ ಜೀವನದಲ್ಲಿ ಈ ಆರೈಕೆಗೆ ಸಮಯ ನೀಡಲು ಎಲ್ಲರಿಗೂ ಸಾಧ್ಯವಿಲ್ಲ. ಇವರಿಗೆಂದೇ ನಗರದ ತುಂಬಾ ಸಿಂಗಾರ ಮಳಿಗೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಕೇಶದ ಆರೈಕೆಗಾಗಿ ಇಲ್ಲಿ ವಿವಿಧ ರೂಪದ ಸೇವೆಗಳು ಲಭ್ಯವಿವೆ. ಆದರೆ ಇವುಗಳಿಂದ ಅಡ್ಡಪರಿಣಾಮವೇ ಹೊರತು, ಯಾವುದೇ ಲಾಭಗಳಿಲ್ಲ.

ಹಾಗಾಗಿ ಬೋಲ್ಡ್ ಸ್ಕೈ ಇಂದು ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುವ ನೈಸರ್ಗಿಕ ಸೌಂದರ್ಯವರ್ಧಕಗಳ ಪಟ್ಟಿಯನ್ನು ನಿಮಗಾಗಿ ನೀಡಿದ್ದೇವೆ. ಓದಿ ತಿಳಿದುಕೊಳ್ಳಿ, ಬಳಸಲು ಆರಂಭಿಸಿ.

ಅರಿಶಿಣ ಮತ್ತು ಹಣ್ಣುಗಳು - ಆಹ್ಲಾದಕರವಾದ ಫೇಸ್ ಪ್ಯಾಕ್:

ಅರಿಶಿಣ ಮತ್ತು ಹಣ್ಣುಗಳು - ಆಹ್ಲಾದಕರವಾದ ಫೇಸ್ ಪ್ಯಾಕ್:

ಬ್ಯೂಟಿ ಪಾರ್ಲರಿಗೆ ಹೋಗಿ ಫೇಸ್ ಪ್ಯಾಕ್ ಮಾಡಿಸಿಕೊಳ್ಳುವಷ್ಟು ಸಮಯ ನಿಮಗಿಲ್ಲದಿದ್ದಲ್ಲಿ, ಮನೆಯಲ್ಲಿಯೇ ನಿಮ್ಮ ಬಿಡುವಿನ ಅವಧಿಯಲ್ಲಿ ಫೇಸ್ ಪ್ಯಾಕ್ ಮಾಡಿಕೊಳ್ಳುವ ಸುಲಭವಾದ ಮಾರ್ಗಗಳು ಇವೆ. ಅದಕ್ಕೂ ಮೇಲಾಗಿ ಮಾರುಕಟ್ಟೆಯಲ್ಲಿ ದೊರೆಯುವ ಫೇಸ್ ಪ್ಯಾಕ್‍ಗಳಲ್ಲಿ ರಾಸಾಯನಿಕಗಳು ಇರುವ ಕಾರಣ, ಮುಖದ ತ್ವಚೆಯ ಮೇಲೆ ಅಡ್ಡ ಪರಿಣಾಮಗಳಾಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗಲು ಸಾಧ್ಯವಿಲ್ಲ. ಇದಕ್ಕಾಗಿ ಯಾವುದೇ ದುಷ್ಪರಿಣಾಮಗಳಿಲ್ಲದ ನಿಮ್ಮ ಅಡುಗೆ ಮನೆಯಲ್ಲಿಯೇ ದೊರೆಯುವ ವಸ್ತುಗಳನ್ನು ಬಳಸಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದು ಉತ್ತಮವಾದ ಆಲೋಚನೆಯಾಗಿರುತ್ತದೆ.

ನಿಮ್ಮ ತ್ವಚೆಗೆ ಕಾಂತಿ ಮತ್ತು ಆಹ್ಲಾದಕತೆಯನ್ನು ತರಲು ಹೀಗೆ ಮಾಡಿ. ಸ್ವಲ್ಪ ಅರಿಶಿಣವನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಮೊಸರನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಂತರ ಮುಖಕ್ಕೆ ಲೇಪಿಸಿ. ಅಥವಾ ಪರಂಗಿ ಹಣ್ಣನ್ನು ಸ್ವಲ್ಪ ರುಬ್ಬಿ, ಪೇಸ್ಟ್ ತರ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಲೇಪಿಸಿ, ಇದರಿಂದಾಗಿ ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳು ಮಾಯವಾಗಿ ತ್ವಚೆಯು ಕಾಂತಿಯಿಂದ ಮಿನುಗುತ್ತದೆ.

ಲೋಳೆ - ಒಣ ತ್ವಚೆಯ ಮೊಯಿಶ್ಚರೈಸರ್:

ಲೋಳೆ - ಒಣ ತ್ವಚೆಯ ಮೊಯಿಶ್ಚರೈಸರ್:

ಮಾರುಕಟ್ಟೆಯಲ್ಲಿ ದೊರೆಯುವ ಮೊಯಿಶ್ಚರೈಸಿಂಗ್ ಕ್ರೀಮ್‍ಗಳಲ್ಲಿ ಪೆಟ್ರೊಲೇಟಮ್ ಎಂಬ ಹಾನಿಕಾರಕ ರಾಸಾಯನಿಕ ಪದಾರ್ಥವಿರುತ್ತದೆ. ಇವುಗಳು ನಮ್ಮ ತ್ವಚೆಗೆ ಅಷ್ಟೇ ಅಲ್ಲದೆ ದೇಹಕ್ಕು ಸಹ ಒಳ್ಳೆಯದಲ್ಲ. ಇದರ ಬದಲಿಗೆ ಲೋಳೆ ಅಥವಾ ಅಲೋವಿರಾದಂತಹ ಪ್ರಾಕೃತಿಕ ಮೊಯಿಶ್ಚರೈಸರನ್ನು ಬಳಸಲು ಆರಂಭಿಸಿ. ಇದು ತ್ವಚೆಗು ಉತ್ತಮ, ಹಣವು ಸಹ ಕಡಿಮೆ. ಇದಕ್ಕಾಗಿ ತುಂಬಾ ಶ್ರಮವನ್ನು ಪಡುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿ ಬೆಳೆದಿರುವ ಲೋಳೆಯ ಎಲೆಯನ್ನು ಕತ್ತರಿಸಿ, ಅದರಲ್ಲಿರುವ ರಸವನ್ನು ಹಿಂಡಿ. ಅದನ್ನೇ ತ್ವಚೆಗೆ ಲೇಪಿಸಿ ಸಾಕು. ಅದೇ ಮೊಯಿಶ್ಚರೈಸರಿನಂತೆ ಕಾರ್ಯ ನಿರ್ವಹಿಸುತ್ತದೆ.

ಬೆಳ್ಳುಳ್ಳಿ ಮತ್ತು ಗಂಧ (ಚಂದನ) - ಮೊಡವೆ ನಿರೋಧಕ ಗುಣಗಳು:

ಬೆಳ್ಳುಳ್ಳಿ ಮತ್ತು ಗಂಧ (ಚಂದನ) - ಮೊಡವೆ ನಿರೋಧಕ ಗುಣಗಳು:

ಆಂಟಿ ಆಕ್ಸಿಡೆಂಟ್‍ಗಳ ಪ್ರಾಕೃತಿಕ ಗಣಿಯಾಗಿರುವ ಬೆಳ್ಳುಳ್ಳಿಯು ನಮ್ಮ ರಕ್ತವನ್ನು ಶುದ್ಧಿಗೊಳಿಸಲು ಸಹಾಯ ಮಾಡುವುದರ ಜೊತೆಗೆ, ತ್ವಚೆಗೆ ಹೊಳಪನ್ನು ಸಹ ನೀಡುತ್ತದೆ. ಇದಲ್ಲದೆ ಮೊಡವೆಗಳಿಂದ ತಕ್ಷಣ ಉಪಶಮನವನ್ನು ಪಡೆಯಲು ಇದನ್ನು ನೇರವಾಗಿ ಸಹ ಲೇಪಿಸಬಹುದು. ಇದಕ್ಕಾಗಿ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿದು, ಅದನ್ನು ಮೊಡವೆಗಳಿರುವ ಜಾಗದಲ್ಲಿ ಉಜ್ಜಿ.

ಗಂಧವು ಸಹ ಮೊಡವೆ ನಿರೋಧಕ ಗುಣಗಳನ್ನು ಹೊಂದಿರುವ ಪ್ರಾಕೃತಿಕ ಗಿಡಮೂಲಿಕೆಯಾಗಿದೆ. ಇದು ಮೊಡವೆಗಳನ್ನು ನಿವಾರಿಸುವುದರ ಜೊತೆಗೆ ಉತ್ತಮ ಮೊಯಿಶ್ಚರೈಸಿಂಗ್ ಒದಗಿಸುವ ಗುಣಗಳನ್ನು ಸಹ ತನ್ನೊಳಗೆ ಒಳಗೊಂಡಿದೆ. ಇದಕ್ಕಾಗಿ ಆಲೀವ್ ಎಣ್ಣೆಯನ್ನು ಸ್ವಲ್ಪ ಮಾತ್ರ ತೆಗೆದುಕೊಂಡು ಅದರಲ್ಲಿ ಗಂಧವನ್ನು ಮಿಶ್ರಣ ಮಾಡಿ ತ್ವಚೆಗೆ ಲೇಪಿಸಿ. ಅಥವಾ ಕುದಿಯುವ ನೀರಿಗೆ ಕೆಲ ತೊಟ್ಟು ಎಣ್ಣೆಯನ್ನು ಸೇರಿಸಿ, ಹಬೆಯನ್ನು ಸೇವಿಸಿ.

ಒಂದು ಕಪ್ ಮೊಸರು, ಅರ್ಧ ಟೀ ಸ್ಪೂನ್ ಅರಿಶಿಣ, ಒಂದು ಚಿಟಿಕೆ ಗಂಧದ ಪುಡಿ ಮತ್ತು ಒಂದು ಚಮಚ ಸಕ್ಕರೆಯನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ವೃತ್ತಾಕಾರವಾಗಿ ಮೃದುವಾಗಿ ಮಸಾಜ್ ಮಾಡಿ ಒಣಗಲು ಬಿಡಿ. ಅರ್ಧ ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

ಅಂಟುವಾಳ (ರೀತಾ) ಮತ್ತು ಸೀಗೆ ಕಾಯಿ - ಪರಿಪೂರ್ಣವಾದ ಶಾಂಪೂ

ಅಂಟುವಾಳ (ರೀತಾ) ಮತ್ತು ಸೀಗೆ ಕಾಯಿ - ಪರಿಪೂರ್ಣವಾದ ಶಾಂಪೂ

ಮಾರುಕಟ್ಟೆಯಲ್ಲಿ ದೊರೆಯುವ ಶಾಂಪೂಗಳಲ್ಲಿ ಸೋಡಿಯಂ ಲೌರೈಲ್ ಸಲ್ಫೇಟ್ ಎಂಬ ಅಂಶವು ಇರುತ್ತದೆ. ಈ ರಾಸಾಯನಿಕವು ಶಾಂಪೂವಿನಲ್ಲಿ ನೊರೆಯನ್ನು ಉಕ್ಕಿಸುವುದರ ಜೊತೆಗೆ ಕೂದಲಿನಲ್ಲಿರುವ ಕೊಳೆ ಮತ್ತು ಜಿಡ್ಡನ್ನು ಸಹ ತೆಗೆದು ಹಾಕುತ್ತದೆ. ಆದರೆ ಈ ಕಾರ್ಯ ಮಾಡುವಾಗ ಎಲ್ಲಾ ಶಾಂಪೂಗಳು ಒಂದು ಪ್ರಮಾದವನ್ನು ಮಾಡುತ್ತವೆ, ಅದೇನೆಂದರೆ ಕೂದಲಿನ ಬುಡದಲ್ಲಿರುವ ಎಣ್ಣೆಯನ್ನು ಹೊರ ಹಾಕಿಬಿಡುವುದು. ಹೌದು ಕೂದಲಿನ ಬುಡದಲ್ಲಿ ಪ್ರಾಕೃತಿಕವಾಗಿ ಎಣ್ಣೆಯಂಶವಿರುತ್ತದೆ.

ಇದು ಕೂದಲಿಗೆ ಅತ್ಯಗತ್ಯವಾಗಿ ಬೇಕಾದ ಅಂಶವಾಗಿರುತ್ತದೆ. ಆದರೆ ಶಾಂಪೂಗಳಿಂದ ಇದು ನಾಶವಾಗುತ್ತದೆ. ಅದಕ್ಕಾಗಿ ಅಂಟುವಾಳ ಮತ್ತು ಸೀಗೆಕಾಯಿಯ ಮಿಶ್ರಣವನ್ನು ಬಳಸುವುದರಿಂದ ಈ ಪ್ರಮಾದವನ್ನು ತಪ್ಪಿಸಬಹುದು. ಇದಕ್ಕಾಗಿ ಅಂಟುವಾಳ ಮತ್ತು ಸೀಗೆಕಾಯಿ ಪುಡಿಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಬೆಚ್ಚಗಿನ ನೀರಿನಲ್ಲಿ ಒಂದು ಪೇಸ್ಟ್ ತಯಾರಿಸಿಕೊಳ್ಳಿ. ಇದರಿಂದ ನಿಮ್ಮ ಕೂದಲನ್ನು ತೊಳೆಯಿರಿ. ಒಂದು ವೇಳೆ ಈ 1:1 ಪ್ರಮಾಣ ಸ್ವಲ್ಪ ಗಟ್ಟಿಯೆಂದು ನಿಮಗನಿಸಿದಲ್ಲಿ, ಅಂಟುವಾಳ ಪುಡಿಯನ್ನು ಸ್ವಲ್ಪ ಕಡಿಮೆ ಮಾಡಿ ಮಿಶ್ರಣ ತಯಾರಿಸಿಕೊಳ್ಳಿ. ಯಾವುದಕ್ಕು ಮಿತ ಪ್ರಮಾಣದಲ್ಲಿ ಇದನ್ನು ಬಳಸಿ ಪರೀಕ್ಷಿಸಿ.

ದಾಳಿಂಬೆ ಬೀಜಗಳು - ಪ್ರಾಕೃತಿಕ ಲಿಪ್ ಕಲರ್

ದಾಳಿಂಬೆ ಬೀಜಗಳು - ಪ್ರಾಕೃತಿಕ ಲಿಪ್ ಕಲರ್

ಸೂರ್ಯನ ಬೆಳಕು, ಧೂಮಪಾನ, ನಿರ್ಜಲೀಕರಣ ಮತ್ತು ಅಧಿಕ ಪ್ರಮಾಣದ ಕೆಫೀನ್ ಸೇವನೆಗಳು ನಿಮ್ಮ ತುಟಿಯನ್ನು ಕಪ್ಪಗೆ ಮಾಡುತ್ತವೆ. ಈ ಕಪ್ಪು ತುಟಿಗಳ ದೆಸೆಯಿಂದ ಲಿಪ್‍ಸ್ಟಿಕ್ಕನ್ನು ದೀರ್ಘಕಾಲ ಬಳಸಬೇಕಾದ ಪ್ರಮೇಯ ಒದಗಿಬರುತ್ತದೆ. ತುಟಿಯ ಕಪ್ಪು ಹೆಚ್ಚಿದ್ದರೆ, ಅದನ್ನು ಮರೆಮಾಚಲು ಅಧಿಕ ಲಿಪ್‍ಸ್ಟಿಕ್ ಅವಶ್ಯಕತೆಯಿರುತ್ತದೆ. ಹೀಗೆ ಲಿಪ್‍ಸ್ಟಿಕ್‍ನಲ್ಲಿರುವ ರಾಸಾಯನಿಕಗಳು ನಿಮ್ಮ ತುಟಿಗೆ ನಿರಂತರವಾಗಿ ಹಾನಿ ಮಾಡುತ್ತಿರುತ್ತವೆ. ಅದಕ್ಕಾಗಿ ಈ ಕ್ರಮವನ್ನೆ ಬಿಟ್ಟುಬಿಡಿ.

ದಾಳಿಂಬೆ ಬೀಜಗಳಿಂದ ನಿಮ್ಮ ತುಟಿಯನ್ನು ಸ್ಕ್ರಬ್ ಮಾಡಿ ಸಾಕು ಪ್ರಾಕೃತಿಕವಾಗಿ ಹೊಳೆಯುವ ಗುಲಾಬಿ ಬಣ್ಣದ ತುಟಿಗಳು ನಿಮ್ಮದಾಗುತ್ತವೆ. ಇದಕ್ಕಾಗಿ ಸ್ವಲ್ಪ ದಾಳಿಂಬೆ ಬೀಜಗಳನ್ನು ತೆಗೆದುಕೊಂಡು ಅದನ್ನು ಹಾಲಿನಲ್ಲಿ ಮಿಶ್ರಣ ಮಾಡಿ ರುಬ್ಬಿ. ನಂತರ ಇದನ್ನು ತುಟಿಗಳಿಗೆ ಪ್ರತಿದಿನ ಹಚ್ಚಿ. ಕೆಲ ದಿನದ ನಂತರ ನಿಮ್ಮ ತುಟಿಗಳು ಸ್ವಾಭಾವಿಕವಾಗಿ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ನಿಮಗೆ ಸಾಧ್ಯವಾದಲ್ಲಿ ದಾಳಿಂಬೆ ಕಾಳುಗಳನ್ನು ಸಕ್ಕರೆ ಮತ್ತು ಆಲೀವ್ ಎಣ್ಣೆಯ ಜೊತೆಗು ಸಹ ಮಿಶ್ರಣ ಮಾಡಿ ತುಟಿಗಳ ಮೇಲೆ ಮೃದುವಾಗಿ ಲೇಪಿಸಬಹುದು. ಇದರಿಂದಲೂ ಸಹ ಉತ್ತಮವಾದ ಫಲಿತಾಂಶ ದೊರೆಯುತ್ತದೆ.

X
Desktop Bottom Promotion