Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಕಾಲ್ಬೆರಳ ಉಗುರು ಸ್ವಚ್ಛತೆಗೆ 5 ಸಲಹೆಗಳು
ಮೇಕಪ್ ಅಂದರೆ ಅದು ಮುಖಕ್ಕೆ ಮಾತ್ರ ಸೀಮಿತವಾಗಿರಬಾರದು. ನಿಮ್ಮ ದೇಹದ ಪ್ರತಿಯೊಂದು ಭಾಗವೂ ನಿಮ್ಮ ಸೌಂದರ್ಯವನ್ನು ಎದ್ದುಗಾಣಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತಲೆಯಿಂದ ಹಿಡಿದು ಕಾಲ್ಬರೆಳವರೆಗೂ ಸೌಂದರ್ಯದ ಮಹತ್ವ ಅತಿಮುಖ್ಯವಾದುದು.
ಕಾಲ್ಬೆರಳ ಸ್ವಚ್ಛತೆಯಲ್ಲಿ ನಾವು ನಿರ್ಲಕ್ಷ್ಯದಿಂದಿರುವುದು ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಿದ್ದಂತೆ. ನಿಮ್ಮ ಕಾಲ್ಬೆರಳು ಧೂಳು ಮತ್ತು ಕೊಳೆಗೆ ಒಳಗಾದಲ್ಲಿ ಬೆರಳ ಸೋಂಕಿಗೆ ನೀವು ಒಳಗಾಗಬಹುದು. ಕಾಲ್ಬೆರಳಿನ ಅಸ್ವಚ್ಛತೆಯು ಮೈಕ್ರೋಗ್ಯಾನಿಸಮ್ಸ್ ಎಂಬ ಸೋಂಕಿಗೆ ಕಾರಣವಾಗುತ್ತದೆ.\

ನೀವು ನಿಮ್ಮ ಕಾಲುಗಳಿಗೆ ಹಾಕುವ ಸೋಕ್ಸ್ ಕೂಡ ಅತಿ ಬೆವರನ್ನು ಉಂಟುಮಾಡುವುದರಿಂದ ಕಾಲ್ಬರೆಳ ಸೋಂಕಿಗೆ ಮುಖ್ಯ ಹೊಣೆಗಾರರಾಗಿರುತ್ತವೆ. ನಿಮ್ಮ ಪಾಸಗಳು ಸೌಂದರ್ಯದ ಕಲಶಗಳಂತೆ ಪ್ರವರ್ತಿಸುತ್ತವೆ ಆದ್ದರಿಂದಲೇ ಅವುಗಳ ಮುತುವರ್ಜಿಯನ್ನು ನಾವು ಚೆನ್ನಾಗಿ ಮಾಡಬೇಕು. ಹಾಗಿದ್ದರೆ ನಿಮ್ಮ ಕಾಲ್ಬೆರಳ ಸ್ವಚ್ಛತೆಯನ್ನು ಇನ್ನಷ್ಟು ಚೆನ್ನಾಗಿ ಮಾಡುವುದು ಹೇಗೆ ಮತ್ತು ಅವುಗಳನ್ನು ಶುದ್ಧವಾಗಿ ಇರಿಸುವುದು ಹೇಗೆಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಗಾಯದ ಕಲೆಯಿಂದ ಮುಜುಗರವೇ? ಇಲ್ಲಿದೆ ಪರಿಹಾರ
1. ನಿತ್ಯವೂ ತೊಳೆಯಿರಿ
ನಿಮ್ಮ ಕಾಲುಗಳನ್ನು ನಿತ್ಯವೂ ಚೆನ್ನಾಗಿ ತೊಳೆಯುತ್ತಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಮಲಗುವುದಕ್ಕೆ ಮುಂಚೆ ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಗಡುಸಾದ ಸೋಪು ಅಥವಾ ಡಿಟರ್ಜೆಂಟ್ ಅನ್ನು ನಿಮ್ಮ ಕಾಲುಗಳನ್ನು ತೊಳೆಯಲು ಬಳಸದಿರಿ. ಇದು ನಿಮ್ಮ ತ್ವಚೆಗೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.
2. ಪೆಡಿಕ್ಯೂರ್ ಮಾಡಿಸಿ
ನಿಮ್ಮ ಬ್ಯೂಟಿ ಸಲೂನ್‌ಗಳಲ್ಲಿ ನೀವು ಮಾಡಿಸಬಹುದಾದ ಉತ್ತಮ ಸೌಂದರ್ಯ ಚಿಕಿತ್ಸೆಯಾಗಿದೆ ಪೆಡಿಕ್ಯೂರ್. ನಿಮ್ಮ ಕಾಲುಗಳನ್ನು ಪಾರ್ಲರ್‌ನಲ್ಲಿ ಹೇಗೆ ಸ್ವಚ್ಛಗೊಳಿಸುತ್ತಾರೆ ಎಂಬುದು ನಿಮಗೆ ತಿಳಿದಿದ್ದರೆ ಮನೆಯಲ್ಲೇ ಈ ಚಿಕಿತ್ಸೆಯನ್ನು ನಿಮಗೆ ಮಾಡಿಸಬಹುದು. ಉಗುರು ಬೆಚ್ಚಗಿನ ನೀರಿನಲ್ಲಿ ಎಣ್ಣೆಯನ್ನು ಬಳಸಿ ಉಗುರುಗಳ ಸ್ವಚ್ಚತೆಯ ಚಿಕಿತ್ಸೆಯನ್ನು ಪೆಡಿಕ್ಯೂರ್ ಮಾಡುತ್ತದೆ.
3. ಸರಿಯಾಗಿ ಕತ್ತರಿಸಿ
ನಿಮ್ಮ ಉಗುರುಗಳನ್ನು ಸರಿಯಾಗಿ ಕತ್ತರಿಸಿಕೊಳ್ಳದಿರುವುದು ಉಗುರಿನ ಇನ್‌ಫೆಕ್ಷನ್‌ಗೆ ಪ್ರಮುಖ ಕಾರಣವಾಗಿದೆ. ಬೆಳವಣಿಗೆಯಾಗದ ಉಗುರುಗಳ ಮೇಲೆ ಬೀರುವ ಪ್ರಭಾವ ಸರಿಯಿಲ್ಲದ ಕತ್ತರಿಸುವಿಕೆಯಿಂದ ಉಂಟಾಗಿರುವುದಾಗಿದೆ.
4. ಸರಿಯಾದ ಉಗುರು ಉತ್ಪನ್ನಗಳು
ನಿಮ್ಮ ಉಗುರುಗಳಿಗೆ ಕೇವಲ ಉತ್ತಮ ದರ್ಜೆಯ ಉತ್ಪನ್ನಗಳನ್ನು ಮಾತ್ರ ಬಳಸಿ. ಆಲ್ಕೋಹಾಲ್ ಇಲ್ಲದ ನೇಲ್ ರಿಮೂವರ್‌ಗಳನ್ನು ಬಳಸುವುದರಿಂದ ಉಗುರಿನ ತೊಂದರೆಗಳು ನಿಮ್ಮಲ್ಲಿ ಕಾಣಿಸಿಕೊಳ್ಳುವುದಿಲ್ಲ
ಪುರುಷರೇ, ಸ್ಟೈಲಿಶ್ ಲುಕ್ ನಿಮ್ಮದಾಗಬೇಕೆ?
5. ದೈನಂದಿನ ಚಟುವಟಿಕೆಯಾಗಿಸಿಕೊಳ್ಳಿ
ನಿಮ್ಮ ಉಗುರುಗಳನ್ನು ಚೆನ್ನಾಗಿ ಆರೈಕೆ ಮಾಡುವುದು ಹೇಗೆಂಬುದು ನಿಮಗೆ ತಿಳಿಯದಿದ್ದಲ್ಲಿ, ನಿಮಗೆ ಇಲ್ಲೊಂದು ಉತ್ತಮ ಸಲಹೆ ಇದೆ. ಉಗುರಿನ ಸ್ವಚ್ಛತೆಯನ್ನು ನಿಮ್ಮ ದೇಹದ ಪ್ರಮುಖ ಭಾಗವನ್ನಾಗಿಸಿ. ಇದು ನಿಮ್ಮ ಉಗುರುಗಳಲ್ಲಿ ಬೆಳೆಯುವ ದುರ್ಮಾಂಸ ಅಥವಾ ಇತರ ಸೋಂಕು ನಿವಾರಣೆಯಾಗುತ್ತದೆ.
ಇಲ್ಲಿ ನಾವು ನೀಡಿರುವ 5 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಉಗುರುಗಳ ಸ್ವಚ್ಛತೆಯನ್ನು ಮಾಡಿಕೊಳ್ಳಿ. ನೀವು ಸ್ವಚ್ಛವಾದ, ಆರೋಗ್ಯಕರವಾದ ಮತ್ತು ಸುಂದರ ಪಾದಗಳ ಒಡತಿಯಾಗುವುದು ಖಂಡಿತ.



Click it and Unblock the Notifications
