Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಸೌಂದರ್ಯವನ್ನು ಕಾಪಾಡಿಕೊಳ್ಳಲು 15 ಸುಲಭ ಉಪಾಯಗಳು
ಸೌಂದರ್ಯವನ್ನು ಸದಾ ಕಾಲ ಕಾಪಾಡಿಕೊಳ್ಳಬೇಕು ಎಂದರೆ ನೀವು ಯೌವನದಿಂದ ಕೂಡಿರಬೇಕು ಎಂದು ಭಾವಿಸಬೇಕಾಗಿಲ್ಲ, ಅದಕ್ಕೆ ಬದಲಾಗಿ ನಾವು ಸೇವಿಸುವ ಆಹಾರ ಮತ್ತು ನಮ್ಮನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆ ಎಂಬುದು ಸೌಂದರ್ಯವನ್ನು ಕಾಪಾಡುವ ಅಂಶವಾಗಿ ನಿಲ್ಲುತ್ತದೆ.
ನಮ್ಮ ದೇಹದಲ್ಲಿ ಆಗುವ ಹಾನಿಗಳನ್ನು ರಿಪೇರಿ ಮಾಡಿಕೊಳ್ಳಲು, ಅದಕ್ಕೆ ಪೋಷಕಾಂಶಗಳ ಅಗತ್ಯವಿರುತ್ತದೆ. ಪೋಷಕಾಂಶಗಳು ಕೋಶಗಳನ್ನು ಪುನರ್ನಿರ್ಮಿಸಲು ಮತ್ತು ಅವುಗಳಿಗೆ ಶಕ್ತಿಯನ್ನು ತುಂಬಲು ಅತ್ಯಾವಶ್ಯಕವಾಗಿ ಬೇಕಾಗುತ್ತವೆ.
ಸಂಸ್ಕರಿಸಿದ ಆಹಾರಗಳು, ಮಾನಸಿಕ ಒತ್ತಡ ಮತ್ತು ಕಡಿಮೆ-ಪೋಷಕಾಂಶಗಳನ್ನು ಹೊಂದಿರುವ ಪಥ್ಯವು ನೀವು ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ನಿಮ್ಮನ್ನು ನೀವು ರಾಸಾಯನಿಕಗಳಿಂದ ರಕ್ಷಿಸಿಕೊಳ್ಳುವ ಮೂಲಕ, ಸರಿಯಾಗಿ ನಿದ್ದೆಯನ್ನು ಮಾಡುವ ಮೂಲಕ, ವಿಶ್ರಾಂತಿಯನ್ನು ಪಡೆಯುವ ಮೂಲಕ ಮತ್ತು ಸರಿಯಾಗಿ ವ್ಯಾಯಾಮವನ್ನು ಮಾಡುವ ಮೂಲಕ ನೀವು ಆರೋಗ್ಯಕರವಾದ ಕಾಂತಿಯನ್ನು ಪಡೆಯಬಹುದು.
ತೊಡೆ ಸಂದಿಯಲ್ಲಿ ಕಂಡುಬರುವ ನೋವಿಗೆ ಪರಿಹಾರ

ಸಾಧ್ಯವಾದಷ್ಟು ನೀರನ್ನು ಕುಡಿಯಿರಿ
ದೇಹದಲ್ಲಿ ಸ್ವಲ್ಪ ನೀರು ಕಡಿಮೆಯಾದರು ಸರಿ, ಅದರ ಕಾರ್ಯ ನಿರ್ವಹಣಾ ವಿಧಾನವೇ ಏರು ಪೇರಾಗುತ್ತದೆ. ನೀವು ಎಷ್ಟು ಬೇಗ ನೀರನ್ನು ಸೇವಿಸುತ್ತೀರೋ, ಅಷ್ಟು ಬೇಗ ನಿಮ್ಮ ತ್ವಚೆಯು ಅದರ ಪರಿಣಾಮಗಳನ್ನು ನಿಮ್ಮ ಕಣ್ಣಮುಂದೆ ತೋರಿಸುತ್ತದೆ. ನೀರನ್ನು ಸರಿಯಾಗಿ ಸೇವಿಸದಿದ್ದರೆ, ತ್ವಚೆಯು ಬಣ್ಣ ಗುಂದುತ್ತದೆ, ಸುಕ್ಕು ಸುಕ್ಕಾಗುತ್ತದೆ, ಒಣ ತ್ವಚೆಯಾಗಿ ಅದರ ಆಕರ್ಷಣೆಯೇ ಕಳೆದುಹೋಗುತ್ತದೆ.

ಆಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿರುವ ಆಹಾರವನ್ನು ಸೇವಿಸಿ
ಆಂಟಿ ಆಕ್ಸಿಡೆಂಟ್ ಹೊಂದಿರುವ ಆಹಾರವು ನಿಮಗೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಜೊತೆಗೆ ಇದು ಉರಿಯೂತಗಳನ್ನು ಮತ್ತು ತ್ವಚೆಯ ಮೇಲೆ ಕಂಡು ಬರುವ ದೋಷಗಳನ್ನು ಸಹ ನಿವಾರಿಸುತ್ತದೆ. ಉರಿಯೂತಗಳು ತ್ವಚೆಗಳು ಸುಕ್ಕಾಗುವುದಕ್ಕೆ ಮೂಲ ಕಾರಣವಾಗಿರುತ್ತವೆ. ಆಂಟಿ ಆಕ್ಸಿಡೆಂಟ್‍ಗಳಿರುವ ಆಹಾರವನ್ನು ಸೇವಿಸುವ ಮೂಲಕ ಇವುಗಳನ್ನ್ನು ನಿವಾರಿಸಿಕೊಳ್ಳಬಹುದು.

ನಿಮ್ಮ ತಟ್ಟೆಯಲ್ಲಿ ಬಣ್ಣ ಬಣ್ಣದ ಆಹಾರವನ್ನು ಸೇವಿಸಿ
ಹಾಗೆಂದ ಮಾತ್ರಕ್ಕೆ ಅಂಗಡಿಗಳಲ್ಲಿ ಸಿಗುವ ಬಣ್ಣ ಬಣ್ಣದ ಜಂಕ್ ಫುಡ್‍ಗಳನ್ನು ತಂದು ತಟ್ಟೆಯಲ್ಲಿ ಹಾಕಿಕೊಂಡು ಕೂರಬೇಡಿ. ನಿಮ್ಮ ತಟ್ಟೆಯಲ್ಲಿ ಆಹಾರವಾಗಿ ಬಣ್ಣ ಬಣ್ಣದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ ಎಂದು ನಾವು ಹೇಳುತ್ತಿರುವುದು. ಕಾರಣ, ದೇಹದಲ್ಲಿ ಉತ್ಪತ್ತಿಯಾಗುವ ಫ್ರೀ ರ‍್ಯಾಡಿಕಲ್‍ಗಳು ನಿಮ್ಮ ದೇಹದಲ್ಲಿರುವ ಕೋಶಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ವಿವಿಧ ಬಗೆಯ ಪೋಷಕಾಂಶಗಳು ನಿಮ್ಮ ದೇಹಕ್ಕೆ ಅಗತ್ಯವಿರುವ ಚೈತನ್ಯವನ್ನು ಒದಗಿಸುತ್ತವೆ. ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‍ಗಳನ್ನು ನಿವಾರಿಸಲು ನೀವು ಆಂಟಿ ಆಕ್ಸಿಡೆಂಟ್‍ಗಳು ಅಧಿಕವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇಂದು ನೀವು ಆಹಾರವಾಗಿ ಸೇವಿಸುವಾಗ ಯಾವ ಬಣ್ಣದ ಹಣ್ಣು ಮತ್ತು ತರಕಾರಿಗಳನ್ನು ಬಿಟ್ಟಿದ್ದೀರಿ, ಆಲೋಚಿಸಿ. ಅದನ್ನು ಮುಂದಿನ ಆಹಾರದಲ್ಲಿ ತಪ್ಪದೆ ಸೇವಿಸಿ.

ಸಾವಯವ ಆಹಾರ ಪದಾರ್ಥಗಳನ್ನು ಸೇವಿಸಿ
ವಯಸ್ಸಾದ ಹಾಗೆ ಕಾಣುವಂತೆ ಮಾಡುವ ಟಾಕ್ಸಿನ್‍ಗಳನ್ನು ಇವುಗಳು ನಿವಾರಿಸುತ್ತವೆ.

ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ
ಸ್ವಲ್ಪ ಹೊತ್ತು ಸೂರ್ಯನ ಬೆಳಕಿನಲ್ಲಿ ಓಡಾಡುವುದರಿಂದ ವಿಟಮಿನ್ ಡಿ ನಮಗೆ ದೊರೆಯುತ್ತದೆಯೆಂಬುದು ಎಷ್ಟು ಸತ್ಯವೋ, ಅಧಿಕ ಪ್ರಮಾಣದಲ್ಲಿ ಸೂರ್ಯನ ಬೆಳಕಿನಲ್ಲಿ ಓಡಾಡುವುದರಿಂದ ತ್ವಚೆಗೆ ಹಾನಿಯಾಗುತ್ತದೆಯೆಂಬುದು ಅಷ್ಟೇ ಸತ್ಯ. ಸನ್‍ಗ್ಲಾಸ್ ಧರಿಸುವುದನ್ನು ಮರೆಯಬೇಡಿ. ಸತು ಮತ್ತು ಟೈಟಾನಿಯಂ ಡೈಯಾಕ್ಸೈಡ್‍ಗಳಿರುವ ಸನ್‍ಸ್ಕ್ರೀನ್ ಬಳಸಿ.

ಯಾವಾಗಲು ಪ್ರಾಕೃತಿಕವಾದ ಸ್ಕಿನ್‍ಕೇರ್ ಉತ್ಪನ್ನಗಳನ್ನು ಬಳಸಿ
ಹಲವಾರು ಸ್ಕಿನ್‍ಕೇರ್ ಉತ್ಪನ್ನಗಳು ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಮೊಯಿಶ್ಚರೈಸರ್, ಮೇಕಪ್ ಮುಂತಾದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅವುಗಳು ಸುರಕ್ಷಿತವೇ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಂಡು ನಂತರ ಅದನ್ನು ಬಳಸಿ.

ಯಾವಾಗಲು ನಾನ್-ಟಾಕ್ಸಿಕ್ ಕ್ಲೀನಿಂಗ್ ಉತ್ಪನ್ನಗಳನ್ನೆ ಬಳಸಿ
ತ್ವಚೆಗೆ ಯಾವಾಗಲು ಟಾಕ್ಸಿನ್‍ಗಳಿರುವ ಉತ್ಪನ್ನಗಳನ್ನೆ ಬಳಸುವುದನ್ನು ಕಡಿಮೆ ಮಾಡಿ. ಏಕೆಂದರೆ ಅವುಗಳನ್ನು ತ್ವಚೆಯು ಹೀರಿಕೊಳ್ಳುವ ಸಂಭವವಿರುತ್ತದೆ.

ಗಿಡಗಳನ್ನು ಬೆಳೆಸಿ
ನೀವು ಎಲ್ಲಿ ಕೆಲಸ ಮಾಡುವಿರೋ ಅಲ್ಲಿ ಮತ್ತು ಮನೆಯಲ್ಲಿ ಗಿಡಗಳನ್ನು ಹೆಚ್ಚಾಗಿ ಬೆಳೆಸಿ. ಇದರಿಂದ ವಾಯು ಮಾಲಿನ್ಯವು ಕಡಿಮೆಯಾಗುತ್ತದೆ. ಗಿಡಗಳು ಸ್ವಾಭಾವಿಕವಾಗಿ ಗಾಳಿಯು ಫಿಲ್ಟರ್ ಆಗುತ್ತದೆ.

ಆದಷ್ಟು ವಿಟಮಿನ್ ಸಿಯನ್ನು ಸೇವಿಸಿ
ವಿಟಮಿನ್ ಸಿಯು ನಿಮಗೆ ಬರುವ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ ವಿಟಮಿನ್ ಸಿಗೆ ಅಧಿಕವಾಗಿ ಒಡ್ಡಿಕೊಳ್ಳುವ ತ್ವಚೆಯು ಇತರ ತ್ವಚೆಗಳಿಗಿಂತ ಎಂಟು ಪಟ್ಟಿನಷ್ಟು ಕೊಲ್ಲಜೆನ್ ಬಿಡುಗಡೆ ಮಾಡುತ್ತದೆಯಂತೆ!

ಸಕ್ಕರೆಯನ್ನು ನಿಯಂತ್ರಿಸಿ
ಏಕೆಂದರೆ ಇದು ಕೊಲ್ಲಜೆನ್ ಮತ್ತು ಎಲಾಸ್ಟಿನ್‍ಗಳನ್ನು ಹಾನಿ ಮಾಡುತ್ತದೆ. ಮುಂದೆ ಇದು ಸುಕ್ಕುಗಳಿಗೆ ದಾರಿ ಮಾಡಿಕೊಡುತ್ತದೆ.

ಯಾವಾಗಲು ಆರೋಗ್ಯಕಾರಿಯಾದ ಕೊಬ್ಬನ್ನೆ ಸೇವಿಸಿ
ಅವೊಕ್ಯಾಡೊಗಳು, ಆಲಿವ್ ಆಯಿಲ್, ಫ್ಲಾಕ್ಸ್ ಬೀಜಗಳು, ಒಣ ಹಣ್ಣುಗಳು ಮತ್ತು ಮೀನು ಮುಂತಾದ ಉತ್ತಮವಾದ ಆಹಾರವನ್ನೆ ಸೇವಿಸಿ. ಇವುಗಳಲ್ಲಿರುವ ಕೊಬ್ಬಿನ ಆಮ್ಲಗಳು ತ್ವಚೆಗೆ ಕಾಂತಿಯನ್ನು ನೀಡಿ, ನಿಮ್ಮನ್ನು ಯೌವನದಿಂದ ತೋರಿಸುತ್ತವೆ.

ನಿಮ್ಮ ದೇಹವನ್ನು ಶುದ್ಧಗೊಳಿಸಿ
ನೀರು, ಗಾಳಿ ಮತ್ತು ಆಹಾರದಲ್ಲಿರುವ ಟಾಕ್ಸಿನ್‍ಗಳು ನಿಮ್ಮ ದೇಹಕ್ಕೆ ವಯಸ್ಸಾದಂತೆ ಕಾಣುವಂತೆ ಮಾಡುತ್ತವೆ. ಯಾವುದಾದರು ಜ್ಯೂಸ್‍ನಿಂದ ಇವುಗಳನ್ನು ಡಿಟಾಕ್ಸಿನ್ ಮಾಡುವುದು ಒಳ್ಳೆಯದು. ಇದರಿಂದ ದೇಹದಲ್ಲಿ ಶಕ್ತಿ ಸಂಚಯನಗೊಳ್ಳುತ್ತದೆ ಮತ್ತು ಟಾಕ್ಸಿನ್‍ಗಳು ಹೊರ ಹಾಕಲ್ಪಡುತ್ತವೆ. ಸ್ವಲ್ಪ ನೀರಿನಲ್ಲಿ ನಿಂಬೆರಸವನ್ನು ಹಿಂಡಿಕೊಂಡು ಬೆಳಗ್ಗೆಯೇ ಸೇವಿಸುವುದರಿಂದ ಈ ಶುದ್ಧೀಕರಣವನ್ನು ನೀವು ಮಾಡಿಕೊಳ್ಳಬಹುದು.

ಮಾನಸಿಕ ಒತ್ತಡವನ್ನು ನಿವಾರಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
ಅಧಿಕ ಪ್ರಮಾಣದ ಮಾನಸಿಕ ಒತ್ತಡವು ನಿಮ್ಮ ತ್ವಚೆಗೆ ಹಾನಿ ಮಾಡುತ್ತವೆ. ಯೋಗ ಮತ್ತು ಧ್ಯಾನವನ್ನು ಮಾಡುವುದನ್ನು ರೂಢಿಸಿಕೊಳ್ಳಿ. ನಿಮ್ಮ ಜೀವನದಲ್ಲಿ ತಲೆನೋವನ್ನುಂಟು ಮಾಡುವಂತಹ ಜನರನ್ನು ಮತ್ತು ಚಟುವಟಿಕೆಗಳನ್ನು ನಿಯಂತ್ರಿಸಿ. ನಿಮ್ಮ ಸ್ನೇಹಿತರ ಜೊತೆಗೆ ನಿಮ್ಮ ಸಮಸ್ಯೆಗಳನ್ನು ಮತ್ತು ಕಷ್ಟ-ಸುಖಗಳನ್ನು ಹಂಚಿಕೊಳ್ಳಿ.

ನಿದ್ದೆ
ನಿದ್ದೆ ಮಾಡುವಾಗ ನಿಮ್ಮ ತ್ವಚೆಯು ತನ್ನಷ್ಟಕ್ಕೆ ತಾನೇ ರಿಪೇರಿಯನ್ನು ಮಾಡಿಕೊಳ್ಳುತ್ತದೆ ಮತ್ತು ಹೊಸತನವನ್ನು ಸಹ ಪಡೆಯುತ್ತ ಇರುತ್ತದೆ. ಆದ್ದರಿಂದ ದಿನಕ್ಕೆ ಎಂಟು ಗಂಟೆಗಳ ನಿರ್ವಿಘ್ನವಾದ ನಿದ್ದೆಯನ್ನು ಮಾಡುವುದನ್ನು ಮರೆಯಬೇಡಿ. ಒಳ್ಳೆಯ ನಿದ್ದೆಯಿಂದ ಒಳ್ಳೆಯ ತ್ವಚೆ ಎಂಬುದನ್ನು ನೆನಪಿಡಿ.

ವ್ಯಾಯಾಮ
ಇದು ನಿಮ್ಮ ದೇಹಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ ಹಾಗು ಟಾಕ್ಸಿನ್‍ಗಳನ್ನು ಬೆವರಿನ ರೂಪದಲ್ಲಿ ಹೊರ ಹಾಕುತ್ತದೆ. ವ್ಯಾಯಾಮ ಮಾಡುವುದರಿಂದ ನಿಮಗೆ ಸ್ವಚ್ಛವಾದ , ಹೊಳಪಿನಿಂದ ಕೂಡಿದ ತ್ವಚೆ ನಿಮ್ಮದಾಗುತ್ತದೆ. ನಗುವುದನ್ನು ಮಾತ್ರ ಮರೆಯಬೇಡಿ. ಏಕೆಂದರೆ ನಗುವು ಮುಖಕ್ಕೆ ನೀವು ನೀಡುವ ವ್ಯಾಯಾಮವಾಗಿರುತ್ತದೆ.



Click it and Unblock the Notifications











