Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಬೇಸಿಗೆಯಲ್ಲೂ ತಂಪಾಗಿರಲು ಸಹಕಾರಿ ಈ 12 ಸಲಹೆಗಳು
ಬೇಸಿಗೆ ಎಂದರೆ ಬೆವರು, ಕಿರಿಕಿರಿ, ಸೆಕೆ. ಬೇಸಿಗೆಯಲ್ಲಿ ನಿಮ್ಮ ಮೇಕಪ್ ಅನ್ನು ತಾಜಾ ಆಗಿ ಇರಿಸುವುದು ತುಸು ತಲೆನೋವಿನ ಕೆಲಸವೇ. ಚಳಿಗಾಲದಲ್ಲಿ ಇರುವಷ್ಟು ಮನಸ್ಸಿನ ಆಹ್ಲಾದ, ದೇಹದ ಹಿತ ಬೇಸಿಗೆಯಲ್ಲಿ ನಮಗೆ ದೊರಕುವುದು ದುರ್ಲಭವಾಗಿದೆ. ಅದರಲ್ಲೂ ನಿಮ್ಮ ಫ್ರೆಶ್‌ನೆಸ್ ಅನ್ನು ದಿನವಿಡೀ ಕಾಪಾಡುವುದು ಸವಾಲಿನ ಕೆಲಸವೇ.
ಬೇಸಿಗೆಯಲ್ಲೂ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ನಿಮಗೆ ತಂಪಾಗಿ ಇರಬಹುದು. ನಿಮ್ಮನ್ನು ಸ್ವಚ್ಛವಾಗಿರಿಸುವುದು ಬೇಸಿಗೆಯಲ್ಲಿ ತುಂಬಾ ಅತ್ಯವಶ್ಯಕ. ಬಿಸಿ ನೀರ ಸ್ನಾನಕ್ಕಿಂತ ಉಗುರು ಬೆಚ್ಚನೆಯ ಸ್ನಾನ ಮನಸ್ಸಿಗೆ ದೇಹಕ್ಕೆ ಮುದ ನೀಡುತ್ತದೆ.
ಬೇಸಿಗೆಯಲ್ಲಿ ತಂಪಾಗಿ ಇರುವುದು ಹೇಗೆ ಎಂಬುದರ ಕುರಿತು ಕೆಲವು ವಿಧಾನಗಳನ್ನು ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಆ ಸಲಹೆಗಳನ್ನು ಅನುಸರಿಸಿ ಬೇಸಿಗೆಯಲ್ಲೂ ತಾಜಾ ಆಗಿ ಇರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕಾಲ್ಬೆರಳಿನ ಉಗುರು ಫಂಗಸ್ ಅನ್ನು ಹೀಗೆ ನಿವಾರಿಸಿ!

ಬೆಳಗ್ಗಿನ ಸ್ನಾನ:
ಬೇಸಿಗೆಯಲ್ಲಿ ಬೆಳಗ್ಗೆ ಸ್ನಾನ ಮಾಡುವುದು ಹಿತಕಾರಿಯಾಗಿರುತ್ತದೆ. ರಾತ್ರಿ ಪೂರ್ತಿ ನೀವು ಬೆವರಿನಿಂದ ತೊಯ್ದು ಹೋಗಿದ್ದರೆ ಬೆಳಗ್ಗೆ ಎದ್ದು ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಸ್ನಾನ ಮಾಡುವುದಾಗಿದೆ. ಸ್ನಾನವು ನಿಮ್ಮ ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಿದೆ.

ಸುಗಂಧಭರಿತ ಸೋಪುಗಳು:
ಬೇಸಿಗೆಯಲ್ಲಿ ಸುಗಂಧಭರಿತ ಸೋಪುಗಳನ್ನು ನಿಮಗೆ ಬಳಸಬಹುದು. ಇದರಿಂದ ನಿಮ್ಮ ದೇಹ ಒಣಗುವುದು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಆದರೆ ಸೋಪುಗಳ ಮತ್ತು ಜೆಲ್‌ಗಳನ್ನು ಬಳಸುವಾಗ ಅವುಗಳ ಬ್ರಾಂಡ್‌ಗಳ ಕಡೆಗೂ ಗಮನ ನೀಡಿ.

ಡಿಯೋ ಚಿಮುಕಿಸಿ:
ನಿಮ್ಮ ತ್ವಚೆಯ ರಂಧ್ರಗಳನ್ನು ಬ್ಲಾಕ್ ಮಾಡಿ ನಿಮ್ಮನ್ನು ಬೆವರಲು ಬಿಡದಂತೆ ಡಿಯೋಡ್ರೆಂಟ್ ಮಾಡುತ್ತದೆ. ಆದರೆ ಇದು ನಿಮ್ಮ ತಾಜಾತನವನ್ನು ದೂರಮಾಡುತ್ತದೆ. ಆದರೆ ಪರಿಮಳಕ್ಕಾಗಿ ಪರ್‌ಫ್ಯೂಮ್‌ಗಳನ್ನು ಬಳಸಿ.

ಟಾಲ್ಕಂ ಪೌಡರ್ ಬಳಸಿ:
ಬೇಸಿಗೆಯಲ್ಲಿ ತಾಜಾ ಮತ್ತು ಫ್ರೆಶ್ ಆಗಿರಲು ಟಾಲ್ಕಂ ಪೌಡರ್ ಅನ್ನು ಬಳಸಿ. ಇದು ನಿಮ್ಮ ತ್ವಚೆಯ ರಂಧ್ರಗಳನ್ನು ಮುಚ್ಚುವುದಿಲ್ಲ ಆದರೆ ಬೆವರಿನಿಂದ ಸಂರಕ್ಷಿಸುತ್ತದೆ.

ಸಂಜೆ ಸ್ನಾನ:
ನಿಜವಾಗಿಯೂ ಬೇಸಿಗೆಯ ಧಗೆ ನಿಮ್ಮನ್ನು ಸುಡುತ್ತಿದ್ದರೆ, ದಿನದಲ್ಲಿ ಎರಡು ಸಲ ಸ್ನಾನ ಮಾಡುವುದು ಒಳಿತು. ಸಂಜೆ ಸಮಯದಲ್ಲಿ ಸ್ನಾನ ಮಾಡುವುದು ರಾತ್ರಿ ನೀವು ಬೆವರುವುದನ್ನು ತಡೆಗಟ್ಟಿ ಸುಖ ನಿದ್ರೆಯನ್ನು ಒದಗಿಸುತ್ತದೆ.

ಕೋಲ್ಡ್ ಶವರ್ ಬಳಸಿ:
ನಿಮ್ಮ ಕೊಠಡಿಯ ತಾಪಮಾನಕ್ಕನುಗುಣವಾಗಿ ಬೇಸಿಗೆಯಲ್ಲಿ ನೀರನ್ನು ಸ್ನಾನಕ್ಕೆ ಬಳಸಿ. ಬಿಸಿ ನೀರ ಸ್ನಾನ ನಿಮಗೆ ಆರಾಮವನ್ನುನೀಡುತ್ತದೆ ಆದರೆ ನಿಮ್ಮ ದೇಹದ ತಾಪಾಮಾನವನ್ನು ಕೆಳಕ್ಕೆ ಇಳಿಸುತ್ತದೆ.

ನಿಮ್ಮ ಕೂದಲನ್ನು ಪ್ರತೀ ದಿನ ತೊಳೆದುಕೊಳ್ಳಿ:
ಬೇಸಿಗೆಯಲ್ಲಿ ಪ್ರತೀ ದಿನ ಕೂದಲನ್ನು ತೊಳೆದುಕೊಳ್ಳುವುದು ಅತ್ಯವಶ್ಯಕ. ನಿಮ್ಮ ಕೂದಲನ್ನು ತೊಳೆದಾಗ ಮಾತ್ರವೇ ನಿಮ್ಮ ಕುತ್ತಿಗೆಯ ಹಿಂಭಾಗ ತಂಪಾಗಿ ನಿಮಗೆ ಹಿತಕಾರಿಯಾಗುತ್ತದೆ.

ಮೇಕಪ್:
ನಿಮ್ಮ ತ್ವಚೆಯ ರಂಧ್ರಗಳನ್ನು ಮುಚ್ಚಿ ನಿಮ್ಮನ್ನು ಬೇಗೆಯಿಂದ ಬಳಲುವಂತೆ ಮೇಕಪ್ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ರಾಸಾಯನಿಕಗಳು ಮುಖದಲ್ಲಿ ಮೊಡವೆ ಉತ್ಪಾದನೆಗೊಳ್ಳಲು ಸಹಕಾರಿ. ಆದ್ದರಿಂದ ಬೇಸಿಗೆಯಲ್ಲಿ ಸ್ವಾಭಾವಿಕವಾಗಿರಿ.

ಹತ್ತಿ ಬಟ್ಟೆಗಳನ್ನು ಬಳಸಿ:
ಭಾರತೀಯ ಬೇಸಿಗೆ ಕಾಲವನ್ನು ಎದುರಿಸಲು ಅತಿ ಸೂಕ್ತ ಧಿರಿಸೆಂದರೆ ಹತ್ತಿ ಬಟ್ಟೆಯಾಗಿದೆ. ಬೇಸಿಗೆಯಲ್ಲಿ ರೇಶ್ಮೆ ಅಥವಾ ಸಿಂಥೆಟಿಕ್ ಧಿರಿಸುಗಳನ್ನು ಧರಿಸದಿರಿ.

ಧರಿಸುವ ಚಪ್ಪಲಿ ಆರಾಮದಾಯಕವಾಗಿರಲಿ:
ಹೈ ಹೀಲ್ಡ್ ಚಪ್ಪಲಿಗಳನ್ನು ಧರಿಸುವುದು ಬೇಸಿಗೆಯಲ್ಲಿ ಅಷ್ಟೊಂದು ಆರಾಮದಾಯಕವಾಗಿರುವುದಿಲ್ಲ. ನೀವು ಧರಿಸುವ ಚಪ್ಪಲಿ ಗಾಳಿಯಾಡುವಂತಿರಲಿ ಹಾಗೂ ನಿಮ್ಮ ಕಾಲಿನ ಚರ್ಮವನ್ನು ಬಿಗಿಯದೆ ಸ್ವತಂತ್ರವಾಗಿರಿಸಲಿ.

ತಾಜಾ ಗಾಳಿ ಪಡೆಯಿರಿ:
ಯಾವಾಗಲೂ ಏರ್‌ಕಂಡೀಷನ್ ಅಡಿಯಲ್ಲಿ ಇರುವುದು ನಿಮ್ಮ ತ್ವಚೆಯ ನೈಸರ್ಗಿಕ ಎಣ್ಣೆಯನ್ನು ಡ್ರೈ ಮಾಡಿ ನಿಮ್ಮನ್ನು ಡಲ್ ಮಾಡುತ್ತದೆ. ಆದ್ದರಿಂದ ತಾಜಾ ಗಾಳಿ ಪಡೆಯಿರಿ.

ಬೇಸಿಗೆ ಪರಿಕರಗಳು:
ಸನ್ ಶೇಡ್‌ಗಳು, ಹ್ಯಾಟ್ ಮತ್ತು ಸ್ಕಾಫ್‌ಗಳನ್ನು ಬೇಸಿಗೆಯಲ್ಲಿ ಹೊರಹೋಗುವಾಗ ಮರೆಯದೆ ಧರಿಸಿಕೊಳ್ಳಿ. ಸನ್ ಸ್ಕ್ರೀನ್ ಲೋಶನ್ ಬಳಕೆಯನ್ನು ಮಾಡಿ.



Click it and Unblock the Notifications