Latest Updates
-
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ!
ದೇಹಕ್ಕೆ ಸೂಕ್ತ ಮನೆಯಲ್ಲಿಯೇ ತಯಾರಿಸುವ ಸ್ಕ್ರಬ್!
ನಿಮ್ಮ ದೇಹದ ಕೊಳೆಯನ್ನು,ಸತ್ತ ಚರ್ಮವನ್ನು,ಎಣ್ಣೆ ಎಂಶವನ್ನು ತೆಗೆದುಹಾಕಿ ದೇಹದಲ್ಲಿ ತೇವಾಂಶ ಉಳಿಸಿ ಕಾಂತಿಯನ್ನು ಕಾಪಾಡಲು ಬಾಡಿ ಸ್ಕ್ರಬ್ಸ್ ಉತ್ತಮವಾದುದು.ಬೆಳೆಯುತ್ತಿರುವ ಹಣದುಬ್ಬರದ ಜೊತೆಗೆ ಸೌಂದರ್ಯ ಕಂಪನಿಗಳು ಸ್ಕ್ರಬ್ಸ್ ಮತ್ತಿತರ ಸೌಂದರ್ಯ ಸಾಧನಗಳಿಗೆ ಅಪಾರ ಪ್ರಮಾಣದ ಬೆಲೆ ಕೊಡುವಂತೆ ಮಾಡುತ್ತಿದೆ.
ಸೌಂದರ್ಯ ಕಂಪನಿಗಳು ನೀಡುವ ಅದೇ ರೀತಿಯ ಸ್ಕ್ರಬ್ ಮನೆಯಲ್ಲಿಯೇ ಮಾಡಿದರೆ ಹೇಗೆ?ಖರ್ಚೂ ಕಡಿಮೆ,ಜೊತೆಗೆ ಪರಿಣಾಮ ಕೂಡ ಹೆಚ್ಚಾಗಿರುತ್ತದೆ.ನಿಮ್ಮ ದೇಹದ ಕಾಂತಿಯನ್ನು ಹೆಚ್ಚಿಸುವ ಕೆಲವು ಮನೆಯಲ್ಲಿಯೇ ತಯಾರಿಸಬಹುದಾದ ಸ್ಕ್ರಬ್ ಗಳ ಮಾಹಿತಿ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವ್ಯಾಕ್ಸ್ ನಂತರ ಅನುಸರಿಸಬೇಕಾದ ಸುರಕ್ಷತಾ ಸಲಹೆ

ಕಾಫಿ ಬಾಡಿ ಸ್ಕ್ರಬ್ :
ವೇಕ್ ಅಪ್ ಡ್ರಿಂಕ್ ಆಗಿರುವ ಕಾಫಿ ಸಾಕಷ್ಟು ಉತ್ತಮ ಗುಣಗಳನ್ನು ಕೂಡ ಹೊಂದಿದೆ.ಕಾಫಿಯಲ್ಲಿ ಕೆಫಿನ್ ಎಂಬ ಅಂಶವಿದ್ದು ಇದು ಕಾಂತಿ ನೀಡುವ ಗುಣವನ್ನು ಹೊಂದಿದೆ.ಇದು ಚರ್ಮದ ಹಠಮಾರಿ ಸತ್ತ ಜೀವಕೋಶಗಳನ್ನು ಹೋಗಲಾಡಿಸಿ ತೇವಾಂಶವನ್ನು ಹೆಚ್ಚಿಸುತ್ತದೆ.
ಸ್ಕ್ರಬ್ ತಯಾರಿಸಲು ಬೇಕಾಗುವ ಪದಾರ್ಥಗಳು:
ಅರ್ಧ ಕಪ್ ಕಾಫಿ
ಅರ್ಧ ಕಪ್ ಸಕ್ಕರೆ
ಒಂದು ಚಮಚ ಆಲಿವ್ ಆಯಿಲ್
ಎರಡು ಚಮಚ ತೆಂಗಿನ ಎಣ್ಣೆ
ಒಂದು ಚಮಚ ಉಪ್ಪು
ಕಾಫಿ,ಸಕ್ಕರೆ,ಉಪ್ಪು ಆಲಿವ್ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಒಂದೊಂದೇ ಮಿಶ್ರ ಮಾಡುತ್ತಾ ಬನ್ನಿ.ಈಗ ನಿಮ್ಮ ಬಾಡಿ ಸ್ಕ್ರಬ್ ತಯಾರಾದಂತೆ!

ಟ್ಯಾನ್ ತೆಗೆಯಲು ನಿಂಬೆ ಮತ್ತು ಸಕ್ಕರೆ ಸ್ಕ್ರಬ್:
ನಾವು ನಮ್ಮ ಚರ್ಮವನ್ನು ಎಷ್ಟೇ ಕಾಳಜಿಯಿಂದ ಕಾಪಾಡಲು ಪ್ರಯತ್ನಿಸಿದರೂ ಸೂರ್ಯನ ಕಡು ಬಿಸಿಲು ಅಥವಾ ಯು ವಿ ಕಿರಣಗಳು ನಮ್ಮ ಚರ್ಮವನ್ನು ಸುಟ್ಟು ಹಾನಿಗೊಳಪಡಿಸಿಬಿಡುತ್ತವೆ.ಸನ್ ಸ್ಕ್ರೀನ್ ಲೋಶನ್ ಬಳಸುವುದರಿಂದ ಮೇಲಿನ ಹಾನಿಯನ್ನು ತಡೆದಂತೆ ಎನ್ನಿಸಿದರೂ ಕೂಡ ಒಳಗಾದ ಪರಿಣಾಮವನ್ನು ತಡೆಯಲು ಸಾಧ್ಯವಾಗುವುದಿಲ್ಲ.ನಿಂಬು ಮತ್ತು ಸಕ್ಕರೆ ಸ್ಕ್ರಬ್ ಬಳಕೆಯಿಂದ ಟ್ಯಾನ್ ಆಗಿರುವುದನ್ನು ಹೋಗಲಾಡಿಸಿ ತ್ವಚೆ ಹೊಳೆಯುವಂತೆ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
೫ ಕಪ್ ಹರಳು ಸಕ್ಕರೆ
೨ ಕಪ್ ಆಲಿವ್ ಆಯಿಲ್
೨ ನಿಂಬೆಹಣ್ಣು
೩ ಚಮಚ ಜೇನುತುಪ್ಪ
ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರ ಮಾಡಿ.ಇದಕ್ಕೆ ನಿಂಬು ಮತ್ತು ಜೇನುತುಪ್ಪ ಹಾಕಿ.ಇದನ್ನು ಸರಿಯಾಗಿ ಮಿಶ್ರಮಾಡಿ ಸ್ನಾನ ಮಾಡಿದ ನಂತರ ಟ್ಯಾನ್ ಆದ ಚರ್ಮಕ್ಕೆ ಹಚ್ಚಿ.ನಿದಾನವಾಗಿ ತಿಕ್ಕಿ ಜೋರಾಗಿ ಒತ್ತಿ ತಿಕ್ಕುವುದರಿಂದ ಚರ್ಮ ಹಾನಿಗೊಳಗಾಳುವ ಸಾಧ್ಯತೆ ಇರುತ್ತದೆ.ಇದರಲ್ಲಿ ಬಳಸಲಾಗಿರುವ ಜೇನುತುಪ್ಪ ತೇವಾಂಶವನ್ನು ಕಾಪಾಡುತ್ತದೆ ಇದರಿಂದ ಇದನ್ನು ಹಚ್ಚಿ ತೊಳೆದ ನಂತರ ಮುಖ ಒಣಗಿ ಒರಟಾಗಿ ಕಾಣುವುದಿಲ್ಲ.

ಪುದೀನಾ ಮತ್ತು ದಾಳಿಂಬೆ ಸ್ಕ್ರಬ್ :
ಪುದೀನಾ ಮತ್ತು ದಾಳಿಂಬೆ ಈ ಸ್ಕ್ರಬ್ ನಲ್ಲಿರುವುದರಿಂದ ಇದು ತಾಜಾತನ ನೀಡುವುದು ಖಂಡಿತ.ಇದರಲ್ಲಿರುವ ಪುದೀನ ನೀಡುವ ಸುವಾಸನೆ ಒಂದು ರೀತಿಯ ಉತ್ಸಾಹ ನೀಡಬಲ್ಲದು.
ಬೇಕಾಗುವ ಪದಾರ್ಥಗಳು:
ಎರಡು ಕಪ್ ಹರಳು ಸಕ್ಕರೆ
ಕಾಲು ಕಪ್ ತೆಂಗಿನ ಎಣ್ಣೆ
ಕೆಲವು ಹನಿ ಪುದೀನ ಎಣ್ಣೆ
ದಾಳಿಂಬೆ ಜ್ಯೂಸ್ (ದಾಳಿಂಬೆ ಅಲರ್ಜಿ ಇದ್ದಲ್ಲಿ ಇದರ ಬದಲು ರಾಸ್ಪ್ ಬೆರ್ರಿ ಹಣ್ಣನ್ನು ಬಳಸಬಹುದು)
ಸಕ್ಕರೆಗೆ ತೆಂಗಿನ ಎಣ್ಣೆಯನ್ನು ಹಾಕಿ.ಇದಕ್ಕೆ ಕೆಲವು ಹನಿ ಪುದೀನ ಎಣ್ಣೆ ಹಾಕಿ.ಇದಕ್ಕೆ ಬಣ್ಣ ನೀಡಲು ದಾಳಿಂಬೆ ಅಥವಾ ರಾಸ್ಪ್ಬೇರ್ರಿ ಹಣ್ಣಿನ ಜ್ಯೂಸ್ ಬಳಸಿ.ಇದಕ್ಕೆ ಯಾವುದೇ ರೀತಿಯ ಕೃತಕ ಬಣ್ಣ ಬಳಸಬೇಡಿ.ನೈಸರ್ಗಿಕವಾಗಿ ದೊರಕುವ ಸಾಮಗ್ರಿಗಳನ್ನು ಬಳಸುವುದರಿಂದ ಕಾಂತಿ ಹೆಚ್ಚಿಸಬಹುದು.

ವೆನಿಲ್ಲಾ ಸಕ್ಕರೆ ಸ್ಕ್ರಬ್ :
ನಿಮಗೆ ಹೆಚ್ಚು ಸುವಾಸನೆ ಹೊಂದಿದ ಸ್ಕ್ರಬ್ ಗಳು ಇಷ್ಟವಾಗದಿದ್ದಲ್ಲಿ ಈ ಸ್ಕ್ರಬ್ ಉತ್ತಮವಾದುದು.
ಎರಡೂವರೆ ಕಪ್ ಸಕ್ಕರೆ
ಮುಕ್ಕಾಲು ಕಪ್ ಹರಳು ಸಕ್ಕರೆ
ನಾಲ್ಕು - ಐದು ಚಮಚ ವೆನಿಲ್ಲಾ ರಸ
ಕಾಲು ಕಪ್ ಬಾದಾಮಿ ಎಣ್ಣೆ
ಸಕ್ಕರೆ ಮತ್ತು ಹರಳು ಸಕ್ಕರೆ ಬೆರೆಸಿ.ಅದಕ್ಕೆ ವೆನಿಲ್ಲಾ ಹನಿ ಮತ್ತು ಬಾದಾಮಿ ಎಣ್ಣೆ ಬೆರೆಸಿ.ಇದನ್ನು ದೇಹಕ್ಕೆ ಹಚ್ಚಿ ಸ್ಕ್ರಬ್ ಮಾಡುವ ಮೊದಲು ಸರಿಯಾಗಿ ಮಿಶ್ರ ಮಾಡಿ.

ವೆನಿಲ್ಲಾ ತೆಂಗಿನಕಾಯಿ ಸ್ಕ್ರಬ್ :
ಇದು ತೆಂಗಿನಕಾಯಿ ಮತ್ತು ವೆನಿಲ್ಲಾ ಪರಿಮಳ ಸೇರಿ ತಯಾರಿಸುವ ಇನ್ನೊಂದು ಸ್ಕ್ರಬ್.ಇದು ಚಳಿಗಾಲದಲ್ಲಿ ಹೆಚ್ಚು ಅನುಕೂಲಕರವಾಗಿರುತ್ತದೆ.ಇದು ಚರ್ಮದ ತೇವಾಂಶವನ್ನು ಕಾಪಾಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಅರ್ಧ ಕಪ್ ತೆಂಗಿನ ಎಣ್ಣೆ
ಅರ್ಧ ಕಪ್ ಬ್ರೌನ್ ಶುಗರ್
ಅರ್ಧ ಚಮಚ ವೆನಿಲ್ಲಾ
ಈ ಮೇಲೆ ತಿಳಿಸಿದ ಎಲ್ಲವನ್ನು ಸರಿಯಾಗಿ ಮಿಶ್ರ ಮಾಡಿ ಇದನ್ನು ಸ್ನಾನ ಮಾಡುವಾಗ ದೇಹಕ್ಕೆ ವೃತ್ತಾಕಾರದಲ್ಲಿ ಹಚ್ಚಿ.ಇದರಿಂದ ನೀವು ಮೃದುವಾದ,ಸುಂದರವಾದ ಕಾಂತಿಯುತವಾದ ಚರ್ಮವನ್ನು ಪಡೆದುಕೊಳ್ಳುತ್ತೀರಿ.

ಸಿಟ್ರಸ್ ಸ್ಕ್ರಬ್:
ಟ್ಯಾನ್ ಹೋಗಲಾಡಿಸಲು ಸಿಟ್ರಸ್ ಸ್ಕ್ರಬ್ ಇನ್ನೊಂದು ಸೂಕ್ತ ಸ್ಕ್ರಬ್.ನಿಮ್ಮ ದೇಹದಲ್ಲಾದ ಟ್ಯಾನ್ ಅನ್ನು ತೆಗೆಯುವುದರ ಜೊತೆಗೆ ಇದರಲ್ಲಿರುವ ತೆಂಗಿನ ಎಣ್ಣೆ ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ಸಮುದ್ರ ಉಪ್ಪು
ಅರ್ಧ ಕಪ್ ಸಕ್ಕರೆ
ಅರ್ಧ ಕಪ್ ತೆಂಗಿನ ಎಣ್ಣೆ
ಕೆಲವು ಹನಿ ದ್ರಾಕ್ಷಿ ಎಣ್ಣೆ
ಕೆಲವು ಹನಿ ಸಿಹಿ ನಿಂಬೆ ಎಣ್ಣೆ
ಕೆಲವು ಹನಿ ನಿಂಬೆ ಎಣ್ಣೆ
ಸಕ್ಕರೆ ಮತ್ತು ಉಪ್ಪನ್ನು ಸರಿಯಾಗಿ ಮಿಶ್ರ ಮಾಡಿ.ಈಗ ಎಲ್ಲಾ ಎಣ್ಣೆಗಳನ್ನೂ ತೆಂಗಿನ ಎಣ್ಣೆಗೆ ಮಿಶ್ರಮಾಡಿ.ನಂತರ ಇದನ್ನು ಸಕ್ಕರೆ ಮತ್ತು ಉಪ್ಪಿನ ಮಿಶ್ರಣಕ್ಕೆ ಬೆರೆಸಿ.ಇದನ್ನು ದೇಹಕ್ಕೆ ಸರಿಯಾಗಿ ಹಚ್ಚಿ.ಐದು ಹತ್ತು ನಿಮಿಷಗಳ ಕಾಲ ವೃತ್ತಾಕಾರವಾಗಿ ಮಸಾಜ್ ಮಾಡಿ.ನಂತರ ತೊಳೆಯಿರಿ.

ಚಾಕಲೇಟ್ ಸ್ಕ್ರಬ್:
ಚಾಕೊಲೇಟ್ ಹೆಸರು ಕೇಳಿದರೆ ಯಮ್ಮಿ ಎಂದೆನಿಸುತ್ತದೆ ಹಾಗೆಯೇ ಇದು ನಿಮ್ಮ ದೇಹಕ್ಕೂ ಕೂಡ ಯಮ್ಮಿ ಎಂಬುದನ್ನು ಮರೆಯಬೇಡಿ.ಚಾಕೊಲೇಟ್ ತೇವಾಂಶವನ್ನು ಕಾಪಾಡುವುದರ ಜೊತೆಗೆ ದೇಹಕ್ಕೆ ಹೊಳಪನ್ನು ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಅರ್ಧ ಕಪ್ ಸಕ್ಕರೆ
ಅರ್ಧ ಕಪ್ ಬ್ರೌನ್ ಸಕ್ಕರೆ
ಅರ್ಧ ಕಪ್ ಕ್ಯನೋಲ ಎಣ್ಣೆ
ಅರ್ಧ ಕಪ್ ಕೋಕ ಪುಡಿ
ಕ್ಯನೋಲ ಎಣ್ಣೆ ಬಿಟ್ಟು ಉಳಿದವುಗಳನ್ನು ಸರಿಯಾಗಿ ಮಿಶ್ರ ಮಾಡಿ ಕೊನೆಯಲ್ಲಿ ಕ್ಯನೋಲ ಆಯಿಲ್ ಬೆರೆಸಿ.ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ನಿಮ್ಮ ದೇಹಕ್ಕೆ ಹಚ್ಚಿ.ಸ್ವಲ್ಪ ಸಮಯದ ನಂತರ ತೊಳೆಯಿರಿ.

ವಿಟಮಿನ್ ಇ ಮತ್ತು ಕಬ್ಬಿನ ಸಕ್ಕರೆ ಬಳಸಿ ಸ್ಕ್ರಬ್:
ವಿಟಮಿನ್ ಇ ಇರುವ ಸ್ಕ್ರಬ್ ತ್ವಚೆಯ ಒಣಗಿದ ಚರ್ಮ ಹೋಗಲಾಡಿಸಿ ತೇವಾಂಶ ಕಾಪಾಡಿ ಹೊಳೆಯುವ ಚರ್ಮವನ್ನು ನೀಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.ಜೊತೆಗೆ ಇದರಲ್ಲಿ ತೆಂಗಿನ ಎಣ್ಣೆ ಬಳಸುವುದರಿಂದ ಇದು ಹೆಚ್ಚು ತೇವಾಂಶ ನೀಡುತ್ತದೆ.
ಬೇಕಾಗುವ ಪದಾರ್ಥಗಳು:
ಒಂದು ಕಪ್ ಕಬ್ಬಿನ ಸಕ್ಕರೆ
೧/೩ ಉಪ್ಪು
ಅರ್ಧ ಕಪ್ ತೆಂಗಿನ ಎಣ್ಣೆ
ಒಂದು ಚಮಚ ವಿಟಮಿನ್ ಇ ಎಣ್ಣೆ ಅಥವಾ ಪುಡಿ
ಸುವಾಸನೆಗೆ ಕೆಲವು ಹನಿ ಲ್ಯಾವೆಂಡರ್ ಆಯಿಲ್
ಎಣ್ಣೆಗಳನ್ನು ಬಿಟ್ಟು ಉಳಿದವುಗಳನ್ನು ಚೆನ್ನಾಗಿ ಮಿಶ್ರ ಮಾಡಿ.ಕೊನೆಯಲ್ಲಿ ವಿಟಮಿನ್ ಇ ಮತ್ತು ಲ್ಯಾವೆಂಡರ್ ಎಣ್ಣೆ ಬೆರೆಸಿ ತ್ವಚೆಗೆ ಇದನ್ನು ಸರಿಯಾಗಿ ಹಚ್ಚಿ.ಇದರಿಂದ ಸತ್ತ ಚರ್ಮವನ್ನು ಹೋಗಲಾಡಿಸಬಹುದು.

ಸಮುದ್ರದ ಉಪ್ಪಿನ ಸ್ಕ್ರಬ್:
ಇದು ಅತ್ಯುತ್ತಮವಾದ ಮನೆಯಲ್ಲಿ ಮಾಡುವ ಸ್ಕ್ರಬ್ ಎನ್ನಬಹುದು.ಇದರಲ್ಲಿ ಬಳಸುವ ಸಮುದ್ರದ ಉಪ್ಪು ತ್ವಚೆ ಹೊಳಪು ನೀಡುವುದರ ಜೊತೆಗೆ ಕಲ್ಮಶವನ್ನು ಹೋಗಲಾಡಿಸಲು ಕೂಡ ಸಹಕರಿಸುತ್ತದೆ.
ಬೇಕಾಗುವ ಪದಾರ್ಥಗಳು :
ಒಂದು ಕಪ್ ತರಿತರಿಯಾದ ಸಮುದ್ರದ ಉಪ್ಪು
ಅರ್ಧ ಕಪ್ ಎಣ್ಣೆ (ತೆಂಗಿನ ಎಣ್ಣೆ,ಬಾದಾಮಿ ಎಣ್ಣೆ ಮತ್ತು ಆಲಿವ್ ಎಣ್ಣೆ)
ಉಪ್ಪಿನ ಮೇಲೆ ಎಣ್ಣೆಯನ್ನು ಹಾಕಿ ಇದನ್ನು ಒಂದು ದಿನ ಹಾಗೆಯೇ ಇಡಿ.ಮರುದಿನ ಇದನ್ನು ದೇಹಕ್ಕೆ ಹಚ್ಚಿ.ಇದನ್ನು ಹೆಚ್ಚು ಗಟ್ಟಿಯಾಗಿ ಸ್ಕ್ರಬ್ ಮಾಡಬೇಡಿ ಇದರಿಂದ ಚರ್ಮ ತುರಿಕೆ ಪ್ರಾರಂಭವಾಗಬಹುದು.
ಇವುಗಳೆಲ್ಲ ನೀವು ಚಳಿಗಾಲದಲ್ಲಿ ತ್ವಚೆಯ ತೇವಾಂಶ ಕಾಪಾಡಿಕೊಳ್ಳಲು ಮಾಡಬಹುದಾದ ಸ್ಕ್ರಬ್ ಗಳು.ಇದರಿಂದ ತ್ವಚೆ ಮೃದುವಾಗಿ ಕಾಂತಿಯುತವಾಗಿ ಕಾಣುತ್ತವೆ.ಇವುಗಳನ್ನು ತಯಾರಿಸುವಾಗ ಬಹಳ ಗಟ್ಟಿ ಕೂಡ ಆಗಿರಬಾರದು ಮತ್ತು ನೀರಿನಂತೆ ಕೂಡ ಇರಬಾರದು ಎಂಬುದನ್ನು ನೆನಪಿಟ್ಟುಕೊಳ್ಳಿ.ನಿಮ್ಮ ದೇಹಕ್ಕೆ ಯಾವರೀತಿ ಅಂಶಗಳು ಬೇಕು ಎಂಬುದರ ಮೇಲೆ ನಿಮಗೆ ಬೇಕಾದ ಎರಡು ರೀತಿಯ ರೆಸಿಪಿ ಮಿಶ್ರ ಮಾಡಿ ಕೂಡ ಸ್ಕ್ರಬ್ ತಯಾರಿಸಿಕೊಳ್ಳಬಹುದು.



Click it and Unblock the Notifications