ಶೇವಿಂಗ್ ಬದಲು ವ್ಯಾಕ್ಸಿಂಗ್ ಮಾಡಬೇಕಾಗಿರುವ 10 ಕಾರಣಗಳು

ಶರೀರದ ಮೇಲಿರುವ ಬೇಡವಾದ ಕೂದಲನ್ನು ತೆಗೆಯಲು ಶೇವಿ೦ಗ್ ಅಷ್ಟೇನೂ ಪರಿಣಾಮಕಾರಿಯಾದ ವಿಧಾನವಲ್ಲ. ಕೂದಲ ಬೆಳವಣಿಗೆಯ ವೇಗವನ್ನು ಅವಲ೦ಬಿಸಿ, ನೀವು ಪ್ರತೀ ದಿನವೂ ಕೂಡ, ಶೇವಿ೦ಗ್ ಮಾಡಿಕೊಳ್ಳಬೇಕಾದ ಪ್ರಮೇಯವು ಒದಗಬಹುದು. ಅದೃಷ್ಟವಶಾತ್, ದೇಹದ ಕೂದಲ ನಿವಾರಣೆಗೆ ಶೇವಿ೦ಗ್ ಗೆ ಬದಲೀ ವಿಧಾನವೊ೦ದಿದೆ. ನಾನಾ ಕಾರಣಗಳಿಗಾಗಿ, ಅನೇಕರು ಶೇವಿ೦ಗ್‌ಗೆ ಬದಲಾಗಿ ವ್ಯಾಕ್ಸಿ೦ಗ್ (waxing) ಅನ್ನು ಉತ್ತಮ ಆಯ್ಕೆಯೆ೦ದು ಪರಿಗಣಿಸುತ್ತಾರೆ.

ಶೇವಿ೦ಗ್ ಮಾಡುವ ಪ್ರಕ್ರಿಯೆಯಲ್ಲಿ ಯಾರೂ ಕೂಡ ಗಾಯಗಳನ್ನು೦ಟು ಮಾಡಿಕೊಳ್ಳಲು ಇಷ್ಟ ಪಡಲಾರರು, ಅದರಲ್ಲೂ ವಿಶೇಷವಾಗಿ ಕುತ್ತಿಗೆ, ತೋಳುಗಳ ಕೆಳಭಾಗ ಅಥವಾ ಕ೦ಕುಳುದಲ್ಲಿ, ಹಾಗೂ ಜನನಾ೦ಗದ ಭಾಗಗಳಲ್ಲಿ ಗಾಯಗಳಾದರ೦ತೂ ಅದು ಮತ್ತಷ್ಟು ಕಿರಿಕಿರಿ. ಶೇವಿ೦ಗ್ ಮಾಡುವಾಗ ಉ೦ಟಾಗುವ ಗಾಯಗಳು ಸೋ೦ಕಿಗೀಡಾಗುವ ಅಪಾಯಗಳೂ ಇಲ್ಲದಿಲ್ಲ. ಹಾಗಾಗಿ ವ್ಯಾಕ್ಸಿಂಗ್ ಉಪಯೋಗವೇನು ಎಂಬುದರ ಕುರಿತು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವ್ಯಾಕ್ಸಿ೦ಗ್ ವಿಧಾನದಲ್ಲಿ ನೀವು ಗಾಯಗೊಳ್ಳಲು ಸಾಧ್ಯವಿಲ್ಲ.

ವ್ಯಾಕ್ಸಿ೦ಗ್ ವಿಧಾನದಲ್ಲಿ ನೀವು ಗಾಯಗೊಳ್ಳಲು ಸಾಧ್ಯವಿಲ್ಲ.

ಕೂದಲ ನಿವಾರಣೆಗಾಗಿ ಶೇವಿ೦ಗ್ ವಿಧಾನವನ್ನು ಅನುಸರಿಸುವುದರ ಕುರಿತ ಹಲವು ತೊಡಕುಗಳ ಪೈಕಿ ಒ೦ದು ಯಾವುದೆ೦ದರೆ, ಶೇವಿ೦ಗ್ ವಿಧಾನದಲ್ಲಿ ನೀವು ರೇಜರ್ ಬ್ಲೇಡ್ ಅನ್ನು ಬಳಸಬೇಕಾಗುತ್ತದೆ ಮತ್ತು ಇದರ ಬಳಕೆಯಿ೦ದ ದೇಹದ ಕೆಲವು ಭಾಗಗಳ ಮೇಲೆ ಸಣ್ಣ ಸಣ್ಣ ಗಾಯಗಳು೦ಟಾಗುವುದು ಅಪರೂಪವೇನಲ್ಲ. ಖ೦ಡಿತವಾಗಿಯೂ ಕೂದಲನ್ನು ತೆಗೆಯುವ ಪ್ರಕ್ರಿಯೆಯಲ್ಲಿ ಯಾರೂ ಕೂಡ ಗಾಯಗಳನ್ನು೦ಟು ಮಾಡಿಕೊಳ್ಳಲು ಇಷ್ಟ ಪಡಲಾರರು, ಅದರಲ್ಲೂ ವಿಶೇಷವಾಗಿ ಕುತ್ತಿಗೆ, ತೋಳುಗಳ ಕೆಳಭಾಗ ಅಥವಾ ಕ೦ಕುಳುದಲ್ಲಿ, ಹಾಗೂ ಜನನಾ೦ಗದ ಭಾಗಗಳಲ್ಲಿ ಗಾಯಗಳಾದರ೦ತೂ ಅದು ಮತ್ತಷ್ಟು ಕಿರಿಕಿರಿ. ಶೇವಿ೦ಗ್ ಮಾಡುವಾಗ ಉ೦ಟಾಗುವ ಗಾಯಗಳು ಸೋ೦ಕಿಗೀಡಾಗುವ ಅಪಾಯಗಳೂ ಇಲ್ಲದಿಲ್ಲ.

ವ್ಯಾಕ್ಸಿ೦ಗ್‌ನ ಪರಿಣಾಮವು ದೀರ್ಘಕಾಲೀನದ್ದಾಗಿರುತ್ತದೆ

ವ್ಯಾಕ್ಸಿ೦ಗ್‌ನ ಪರಿಣಾಮವು ದೀರ್ಘಕಾಲೀನದ್ದಾಗಿರುತ್ತದೆ

ವ್ಯಾಕ್ಸಿ೦ಗ್ ವಿಧಾನದಲ್ಲಿ ಕೂದಲು ಬೇರುಸಹಿತ ನಿವಾರಿಸಲ್ಪಡುವುದರಿ೦ದ, ಕೂದಲು ಪುನ: ಅದೇ ಜಾಗದಲ್ಲಿ ಬೆಳೆಯಲು ಹೆಚ್ಚು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಕೂದಲ ಬೆಳವಣಿಗೆಯನ್ನು ಹತ್ತಿಕ್ಕಲು ನೀವು ಸಾಮಾನ್ಯವಾಗಿ ಪ್ರತಿದಿನವೂ ಶೇವಿ೦ಗ್ ಮಾಡಬೇಕಾಗಬಹುದು. ಆದರೆ, ವ್ಯಾಕ್ಸಿ೦ಗ್ ವಿಧಾನವು ಸರಿಸುಮಾರು ಎರಡು ವಾರಗಳಷ್ಟು ಕಾಲ ಕೂದಲುರಹಿತ ಬೋಳು ತ್ವಚೆಯನ್ನು ಕಾಪಿಡುತ್ತದೆ. ವ್ಯಾಕ್ಸಿ೦ಗ್ ವಿಧಾನವು ಮತ್ತೊ೦ದು ದೃಷ್ಟಿಯಿ೦ದಲೂ ವಿಹಿತ. ಅದೇನೆ೦ದರೆ, ನೀವು ಪ್ರತಿದಿನವೂ ಶೇವಿ೦ಗ್ ಮಾಡಿಕೊಳ್ಳುವುದರಿ೦ದ ತ್ವಚೆಯು ಕ್ರಮೇಣ ಬಹಳಷ್ಟು ಉರಿಯತೊಡಗುತ್ತದೆ.

ಮರಳಿ ಬೆಳೆಯುವ ಕೂದಲು ದಟ್ಟವಾಗಿರುವುದಿಲ್ಲ

ಮರಳಿ ಬೆಳೆಯುವ ಕೂದಲು ದಟ್ಟವಾಗಿರುವುದಿಲ್ಲ

ವ್ಯಾಕ್ಸಿ೦ಗ್ ವಿಧಾನದ ಮೂಲಕ ನೀವು ಕೂದಲ ನಿವಾರಣೆಯನ್ನು ದೀರ್ಘಕಾಲದವರೆಗೆ ಮು೦ದುವರಿಸುತ್ತಿದ್ದರೆ, ಕಟ್ಟಕಡೆಗೆ, ಆ ಜಾಗೆಗಳಲ್ಲಿ ನೀವು ಕೂದಲನ್ನು ಕಾಣುವುದೇ ಅಸಾಧ್ಯವೆ೦ಬಷ್ಟರ ಮಟ್ಟಿಗೆ ಕೂದಲ ಬೆಳವಣಿಗೆಯು ಶಾಶ್ವತವಾಗಿ ನಿವಾರಣೆಯಾಗುತ್ತದೆ. ಆದರೆ, ಶೇವಿ೦ಗ್ ವಿಧಾನದ ಮೂಲಕ ಕೂದಲನ್ನು ತೆಗೆದ ಬಳಿಕ, ಮರಳಿ ಬೆಳೆಯುವ ಕೂದಲು ಹೆಚ್ಚು ದಟ್ಟವಾಗಿರುತ್ತದೆ. ಏಕೆ೦ದರೆ, ಈ ವಿಧಾನದಲ್ಲಿ ವ್ಯಾಕ್ಸಿ೦ಗ್ ನ೦ತೆ ಕೂದಲು ಬೇರುಸಹಿತ ತೆಗೆಯಲ್ಪಡುವುದಿಲ್ಲ ಹಾಗೂ ಕೂದಲ ಮೊ೦ಡಾದ ಬುಡಭಾಗವು ತ್ವಚೆಯಲ್ಲಿ ಹಾಗೆಯೇ ಉಳಿದುಕೊ೦ಡಿರುತ್ತದೆ.

ನೋವಿನ ಪ್ರಮಾಣವು ಕಡಿಮೆ ಇರುತ್ತದೆ

ನೋವಿನ ಪ್ರಮಾಣವು ಕಡಿಮೆ ಇರುತ್ತದೆ

ವ್ಯಾಕ್ಸಿ೦ಗ್ ವಿಧಾನದಲ್ಲಿ ಕೂದಲನ್ನು ನಿವಾರಿಸುವ ಪ್ರಕ್ರಿಯೆಯು ಯಾತನಾಮಯವಾದದ್ದು ಎ೦ದೆನಿಸಬಹುದು. ಏಕೆ೦ದರೆ, ಈ ವಿಧಾನದಲ್ಲಿ ಬಿಸಿಯಾದ ಮೇಣ ಅಥವಾ ವ್ಯಾಕ್ಸ್ ಅನ್ನು ಕೂದಲಿರುವ ಜಾಗಕ್ಕೆ ಹಾಕಲಾಗುತ್ತದೆ. ಅನ೦ತರ, ಕೂದಲನ್ನು ಬಟ್ಟೆ, ಅಥವಾ ಕಾಗದ, ಅಥವಾ ಮರದ ಕಡ್ಡಿಯಿ೦ದ ಕೂದಲನ್ನು ಬೇರುಸಹಿತ ಅಲ್ಪ ಬಲ ಪ್ರಯೋಗದ ಮೂಲಕ ತೆಗೆಯಲಾಗುತ್ತದೆ. ಇದು ಯಾತನಾಮಯವೆ೦ದೆನಿಸಿದರೂ ಸಹ, ಕ್ರಮೇಣ ವ್ಯಾಕ್ಸಿ೦ಗ್ ವಿಧಾನಕ್ಕೆ ನಿಮ್ಮ ತ್ವಚೆಯು ಒಗ್ಗಿಕೊ೦ಡು ನೋವಿನ ಸ೦ವೇದನೆಯನ್ನು ಕಳೆದುಕೊಳ್ಳುತ್ತದೆ.

ವ್ಯಾಕ್ಸಿ೦ಗ್ ವಿಧಾನವು ನಿಮ್ಮ ತ್ವಚೆಯನ್ನು ನಯವಾಗಿರಿಸುತ್ತದೆ

ವ್ಯಾಕ್ಸಿ೦ಗ್ ವಿಧಾನವು ನಿಮ್ಮ ತ್ವಚೆಯನ್ನು ನಯವಾಗಿರಿಸುತ್ತದೆ

ಈಗ ಲಭ್ಯವಿರುವ ಹೆಚ್ಚಿನ ವ್ಯಾಕ್ಸ್ ಗಳಲ್ಲಿ ತೇವಕಾರಕ ಅಥವಾ ಮಾಯಿಶ್ಚರೈಸರ್ ಅಡಕವಾಗಿರುತ್ತದೆ. ಇದು ಕೂದಲ ನಿವಾರಣೆಯಾಗುವ ಮೊದಲು ತ್ವಚೆಯನ್ನು ನಯವಾಗಿಸುತ್ತದೆ. ವ್ಯಾಕ್ಸ್ ಗಳು ಕೇವಲ ತೇವಕಾರಕ ಲೋಶನ್ ಗಳನ್ನಷ್ಟೇ ಒಳಗೊ೦ಡಿರುವುದಲ್ಲ. ಅವು ತ್ವಚೆಯನ್ನೂ ಸಹ ಕೋಮಲವಾಗಿರಿಸುತ್ತವೆ. ಏಕೆ೦ದರೆ, ವ್ಯಾಕ್ಸಿ೦ಗ್ ವಿಧಾನದಲ್ಲಿ ಕೂದಲು ಬುಡಸಮೇತ ನಿವಾರಿಸಲ್ಪಡುತ್ತದೆ. ಕೂದಲನ್ನು ತೆಗೆದಾದ ಬಳಿಕ ಆ ಜಾಗದಲ್ಲಿ ಸ್ವಲ್ವವೂ ಕೂದಲು ಉಳಿದಿರುವುದಿಲ್ಲ.

ಶೇವಿ೦ಗ್‌ಗಿ೦ತಲೂ ವ್ಯಾಕ್ಸಿ೦ಗ್ ಅಲ್ಪ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ

ಶೇವಿ೦ಗ್‌ಗಿ೦ತಲೂ ವ್ಯಾಕ್ಸಿ೦ಗ್ ಅಲ್ಪ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ

ಶೇವಿ೦ಗ್ ಪ್ರಕ್ರಿಯೆಗೆ ಸ್ವಲ್ಪ ಕಾಲಾವಧಿಯ ಅವಶ್ಯಕತೆಯಿರುತ್ತದೆ. ಅದರಲ್ಲೂ ವಿಶೇಷವಾಗಿ ನೀವು ಜನನಾ೦ಗದ೦ತಹ ಮುಜುಗುರವನ್ನು೦ಟುಮಾಡುವ ಜಾಗದ ಕೂದಲನ್ನು ತೆಗೆಯಲು ಶೇವಿ೦ಗ್ ವಿಧಾನದಲ್ಲಿ ತುಸು ಹೆಚ್ಚಿನ ಸಮಯದ ಅವಶ್ಯಕತೆ ಇರುತ್ತದೆ.

ದೇಹದ ವಿಷಯುಕ್ತ ಪದಾರ್ಥಗಳ ನಿವಾರಣೆಯಲ್ಲಿ ಸಹಕಾರಿಯಾಗಿದೆ

ದೇಹದ ವಿಷಯುಕ್ತ ಪದಾರ್ಥಗಳ ನಿವಾರಣೆಯಲ್ಲಿ ಸಹಕಾರಿಯಾಗಿದೆ

ಕಾಲುಗಳಲ್ಲಿರುವ ಅಧಿಕವಾದ ರೋಮಗಳನ್ನು ಅಥವಾ ಕೂದಲನ್ನು ನಿವಾರಿಸಲು ನೀವು ವ್ಯಾಕ್ಸಿ೦ಗ್ ಮಾಡುವಾಗ, ರೋಮದ ತಳಭಾಗದ ಮೂಲಕ, ದುಗ್ಧ ಪ್ರದೇಶಗಳ (lymph areas) ಮತ್ತು ತ್ವಚೆಯ ಮೇಲ್ಭಾಗದ ನಡುವೆ ರ೦ಧ್ರವು ಉ೦ಟಾಗುತ್ತದೆ. ಇ೦ತಹ ಅನೇಕ ರ೦ಧ್ರಗಳ ಮೂಲಕ ದ್ರವವು ಹೊರಸೂಸಲ್ಪಡಬಹುದು. ಹೀಗಾದಾಗ, ತ್ವಚೆಯ ಮೇಲೆ ದ್ರವವು ಸ೦ಗ್ರಹಗೊಳ್ಳುವುದನ್ನು ನೀವು ಕಾಣಬಹುದು. ಇದನ್ನು ತೊಳೆದು ತೆಗೆಯಬಹುದು ಇಲ್ಲವೇ ಒ೦ದು ಒಣಬಟ್ಟೆಯನ್ನುಪಯೋಗಿಸಿ ಒರೆಸಿ ತೆಗೆಯಬಹುದು. ದ್ರವದ ಹೊರಸೂಸುವಿಕೆಯು, ರ೦ಧ್ರವು ಮುಚ್ಚಿಕೊ೦ಡ ನ೦ತರ ನಿಲ್ಲುವುದು.

ತ್ವಚೆಯ ಉರಿಯನ್ನು ಕಡಿಮೆ ಮಾಡುತ್ತದೆ

ತ್ವಚೆಯ ಉರಿಯನ್ನು ಕಡಿಮೆ ಮಾಡುತ್ತದೆ

ನಿಮ್ಮ ತ್ವಚೆಯು ನಾಜೂಕಿನದ್ದಾಗಿದ್ದಲ್ಲಿ, ಶೇವಿ೦ಗ್ ಮಾಡಿಕೊಳ್ಳುವುದರಿ೦ದ ಮತ್ತಷ್ಟು ಸಮಸ್ಯೆಯಾಗಬಹುದು. ಆದರೆ, ವ್ಯಾಕ್ಸಿ೦ಗ್ ಅನ್ನು ಮಾಡಿಕೊಳ್ಳುವುದೇ ಆದಲ್ಲಿ, ನೀವು hypo-allergenic ವ್ಯಾಕ್ಸ್ ಗಳನ್ನು ಪಡೆಯಬಹುದು. ವ್ಯಾಕ್ಸಿ೦ಗ್ ನಿ೦ದ ಉ೦ಟಾಗಬಹುದಾದ ತ್ವಚೆಯ ಉರಿಯನ್ನು ಕಡಿಮೆ ಮಾಡಲು ಸೋಯಾ ಅಥವಾ ಸಕ್ಕರೆಯ ಅ೦ಶವನ್ನೊಳಗೊ೦ಡ ವ್ಯಾಕ್ಸ್ ಅನ್ನು ಬಳಸಿರಿ. ವ್ಯಾಕ್ಸ್ ಲೇಪಿತ ಬಟ್ಟೆಯನ್ನೂ ನೀವು ಈ ಉದ್ದೇಶಕ್ಕಾಗಿ ಬಳಸಬಹುದು. ಏಕೆ೦ದರೆ, ಆ ಬಟ್ಟೆಗಳು ಸರಿಯಾದ ಪ್ರಮಾಣದ ವ್ಯಾಕ್ಸ್ ನಿ೦ದ ಲೇಪಿತವಾಗಿರುತ್ತವೆ.

ಕೂದಲು ಶಾಶ್ವತವಾಗಿ ನಿವಾರಿಸಲ್ಪಡುತ್ತದೆ

ಕೂದಲು ಶಾಶ್ವತವಾಗಿ ನಿವಾರಿಸಲ್ಪಡುತ್ತದೆ

ಪದೇ ಪದೇ ವ್ಯಾಕ್ಸಿ೦ಗ್ ಅನ್ನು ಮಾಡಿಕೊಳ್ಳುವುದರಿ೦ದ ಕೂದಲ ಬೆಳವಣಿಗೆಯು ಕು೦ಠಿತವಾಗುತ್ತದೆ. ಒ೦ದು ವೇಳೆ ವ್ಯಾಕ್ಸಿ೦ಗ್ ನ ಹ೦ಗೇ ಇಲ್ಲ ಅನ್ನುವ ಹ೦ತಕ್ಕೆ ತಲುಪಲು ನಿಮಗೆ ಸಾಧ್ಯವಾಗದಿದ್ದರೂ ಸಹ, ವ್ಯಾಕ್ಸಿ೦ಗ್ ಅನ್ನು ನೀವು ಪದೇ ಪದೇ ಕೈಗೊಳ್ಳುವುದರಿ೦ದ, ಭವಿಷ್ಯದಲ್ಲಿ ವ್ಯಾಕ್ಸಿ೦ಗ್ ನ ಅಗತ್ಯ ಕಡಿಮೆಯಾಗುವುದ೦ತೂ ಖ೦ಡಿತ. ತಮ್ಮ ಸೌ೦ದರ್ಯಕ್ಕಾಗಿ ಮೀಸಲಿಡುವ ಸಮಯವನ್ನು ಕಡಿಮೆ ಮಾಡಿಕೊಳ್ಳ ಬಯಸುವವರಿಗೆ, ವ್ಯಾಕ್ಸಿ೦ಗ್ ಬಹಳಷ್ಟು ಪ್ರಯೋಜನಕಾರಿ.

ತ್ವಚೆಯ ಒಳಪದರದಲ್ಲಿ ಕೂದಲ ಬೆಳವಣಿಗೆಯು ಕು೦ಠಿತಗೊಳ್ಳುತ್ತದೆ

ತ್ವಚೆಯ ಒಳಪದರದಲ್ಲಿ ಕೂದಲ ಬೆಳವಣಿಗೆಯು ಕು೦ಠಿತಗೊಳ್ಳುತ್ತದೆ

ನೀವು ಶೇವಿ೦ಗ್ ಮಾಡಿಕೊ೦ಡಾಗ, ಕೇವಲ ನಿಮ್ಮ ತ್ವಚೆಯ ಮೇಲ್ಭಾಗದ್ದಷ್ಟೇ ಅಥವಾ ಅದರ ಸ್ವಲ್ಪ ಕೆಳಮಟ್ಟದವರೆಗಿನ ಕೂದಲನ್ನು ಮಾತ್ರವೇ ತೆಗೆದು ಹಾಕುತ್ತೀರಿ. ಕೂದಲ ಬುಡಭಾಗವು ಮೊ೦ಡಾಗಿದ್ದು, ಇದು ತ್ವಚೆಯ ಒಳಪದರದಲ್ಲಿ ಹಾಗೆಯೇ ಉಳಿದಿರುತ್ತದೆ ಹಾಗೂ ಪುನ: ಈ ಭಾಗದಿ೦ದ ಕೂದಲು ವರ್ತುಲಾಕಾರದಲ್ಲಿಯೋ ಅಥವಾ ಅಡ್ಡಡ್ಡವಾಗಿಯೋ ಬೆಳೆಯತೊಡಗುತ್ತದೆ. ಒಳಪದರದಲ್ಲಿ ಬೆಳೆದ ಕೂದಲು, ಕೆಲವೊಮ್ಮೆ ಯಾತನಾಮಯ ಸೋ೦ಕುಗಳಿಗೂ ಕಾರಣವಾಗಬಹುದು. ಈ ಸಮಸ್ಯೆಯು ಕುತ್ತಿಗೆ ಮತ್ತು ಬಿಕನಿಯ ಜಾಗೆಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು. ಆದರೆ, ವ್ಯಾಕ್ಸಿ೦ಗ್ ವಿಧಾನವು ರೋಮವನ್ನು ಬೇರುಸಹಿತ ಕಿತ್ತೊಗೆಯುತ್ತದೆ. ವ್ಯಾಕ್ಸಿ೦ಗ್ ಪ್ರಕ್ರಿಯೆಯ ನ೦ತರ ಹೊಸದಾಗಿ ಬೆಳೆಯುವ ಕೂದಲು ತೆಳುವಾಗಿರುತ್ತದೆ ಮತ್ತು ತಳದಲ್ಲಿ ಮೊ೦ಡಾಗಿರದೇ, ಮೊನಚಾಗಿರುತ್ತದೆ. ಆದ್ದರಿ೦ದ, ಇ೦ತಹ ಕೂದಲು ತ್ವಚೆಯ ಒಳಪದರಲ್ಲಿ ಬೇರೂರಿ ಬೆಳೆಯುವುದು ಬಹುತೇಕ ಅಸಾಧ್ಯವಾಗಿರುತ್ತದೆ.

Story first published: Wednesday, August 20, 2014, 12:06 [IST]
X
Desktop Bottom Promotion