Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಪುರುಷರು ಐ ಬ್ರೋ ಮಾಡುವುದರಲ್ಲಿ ತಪ್ಪೇನು?
ಐ ಬ್ರೋ ಹುಡುಗಿಯರು ಮಾತ್ರವಲ್ಲ ಹುಡುಗರು ಮಾಡಬಹುದು. ಹುಡುಗರಿಗೆ ಐ ಬ್ರೋ ಮಾಡುವಾಗ ಸ್ವಲ್ಪ ದಪ್ಪವಾಗಿ ಮಾಡಿದರೆ ಮುಖದ ಅಂದ ಮತ್ತಷ್ಟು ಹೆಚ್ಚಾಗುವುದು.
ಕೆಲವರಿಗೆ ಹುಬ್ಬು ತುಂಬಾ ಇರುತ್ತದೆ. ತುಂಬಾ ಹುಬ್ಬಿದ್ದರೆ ಮುಖ ಅಷ್ಟೊಂದು ಚೆಂದ ಕಾಣುವುದಿಲ್ಲ. ಅನೇಕ ಚಿತ್ರ ನಟರು ಕೂಡ ಐ ಬ್ರೋ ಮಾಡಿಸುತ್ತಾರೆ. ಹೆಚ್ಚಿನ ಹುಡುಗರಿಗೆ ಐ ಬ್ರೋ ಮಾಡಿಸಲು ಹಿಂಜರಿಕೆ ಇರುತ್ತದೆ. ಆದರೆ ನನ್ನ ಸಲಹೆ ಏನೆಂದರೆ ತುಂಬಾ ದಪ್ಪದ ಐ ಬ್ರೋ ಇರುವವರು ಅದಕ್ಕೊಂದು ಶೇಪ್ ಕೊಟ್ಟರೆ ನಿಮ್ಮ ಲುಕ್ ಹೆಚ್ಚಾಗುವುದು.
ಹುಬ್ಬು ತುಂಬಾ ತೆಳ್ಳಗಿದ್ದರೆ ಕೂಡ ಚಿಂತೆ ಮಾಡಬೇಡಿ, ಹುಬ್ಬನ್ನು ದಪ್ಪಗಾಗಿಸುವುದು ಹೇಗೆ ಎಂಬ ಸಲಹೆಯನ್ನು ನೀಡಿದ್ದೇವೆ. ಅವುಗಳಂತೆ ಮಾಡಿದರೆ ಸಾಕು ನಿಮ್ಮ ಮುಖದ ಆಕರ್ಷಣೆ ಹೆಚ್ಚುವುದು.

ಸಾಧಾರಣ ಗಾತ್ರದ ಹುಬ್ಬು
ತುಂಬಾ ಹುಬ್ಬು ದಪ್ಪವಿದ್ದರೆ ಅದನ್ನು ಸ್ವಲ್ಪ ತೆಳ್ಳಗೆ ಮಾಡಿಸಬೇಕು. ಹಾಗಂತ ತುಂಬಾ ತೆಳ್ಳಗೆ ಮಾಡಿಸಬೇಡಿ. ಜಸ್ಟ್ ಮೇಲೆ-ಮೇಲೆ ತೆಗೆದರಾಯ್ತು.
ಹುಬ್ಬು ತುಂಬಾ ಬದಲಾಗಬಾರದು
ನಿಮ್ಮ ಹುಬ್ಬು ನೈಸರ್ಗಿಕವಾಗಿ ಕಾಣಬೇಕು. ತುಂಬಾ ಬದಲಾಗಬಾರದು. ನಿಮ್ಮ ಹುಬ್ಬಿನ ಆಕಾರ ಹೇಗಿದೆಯೋ ಹಾಗೆಯೇ ಶೇಪ್ ಕೊಡಿ.
ಹುಬ್ಬು ತುಂಬಾ ತೆಳ್ಳಗಿದೆಯೇ?
ಕೆಲವು ಹುಡುಗರಿಗೆ ಹುಬ್ಬು ತುಂಬಾ ತೆಳ್ಳಗಿರುತ್ತದೆ. ತೆಳ್ಳಗಿನ ಹುಬ್ಬು ಪುರುಷರ ಮುಖಕ್ಕೆ ಅಷ್ಡು ಚೆಂದ ಕಾಣುವುದಿಲ್ಲ. ನಿಮ್ಮ ಹುಬ್ಬು ತುಂಬಾ ತೆಳ್ಳಗಿದ್ದರೆ ದಿನಾ ಹರಳೆಣ್ಣೆ ಹಚ್ಚಿದರೆ ಸಾಕು ಹುಬ್ಬು ದಪ್ಪಗಾಗಿ ಆಕರ್ಷಕವಾಗಿ ಕಾಣುವಿರಿ.



Click it and Unblock the Notifications
