Latest Updates
-
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ
ಚಿರ ಯೌವನದಿಂದ ಕಂಗೊಳಿಸಬೇಕೆ? ಇಲ್ಲಿದೆ ಸಲಹೆ
ಜೀವನಪೂರ್ತಿ ಸೌಂದರ್ಯದಿಂದ ಚಿರಯೌವನೆಯರಾಗಿ ಕಂಗೊಳಿಸಬೇಕೆನ್ನುವುದು ಎಲ್ಲಾ ಮಹಿಳೆಯರ ಹೆಬ್ಬಯಕೆ. ಯೋಗ್ಯ ರೀತಿಯಲ್ಲಿ ತ್ವಚೆಯ ಹಾಗೂ ಕೇಶರಾಶಿಯ ಆರೈಕೆಯೊಂದಿಗೆ ಯುಕ್ತ ರೀತಿಯಲ್ಲಿ ದೇಹಾರೋಗ್ಯದ ಕಾಳಜಿಯನ್ನೂ ತೆಗೆದುಕೊಳ್ಳುವುದರಿಂದ ಸುಂದರವಾಗಿ ಕಾಣಲು ಸಾಧ್ಯ.
ಈ ಕೆಳಗೆ ನೀಡಲಾಗಿರುವ ಸಲಹೆಗಳನ್ನು ಪಾಲಿಸಿರಿ ಹಾಗೂ ಕನ್ನಡಿಯಲ್ಲಿ ಮೂಡುವ ನಿಮ್ಮದೇ ಆದ ಪ್ರತಿಬಿಂಬದೊಡನೆ ಮನಸೋಲಿರಿ.

1. ದೇಹವನ್ನು ಚೆನ್ನಾಗಿ ಉಜ್ಜಿರಿ.
ನಿಯಮಿತವಾಗಿ ಮೈಯನ್ನು ತಿಕ್ಕಿ ತೊಳೆಯುವುದರ ಮೂಲಕ ನಿಮ್ಮ ತ್ವಚೆಯಲ್ಲಿರಬಹುದಾದ ನಿರ್ಜೀವ ಜೀವಕೋಶಗಳನ್ನು ನಿವಾರಿಸಬಹುದು ಹಾಗೂ ತ್ವಚೆಯ ಪದರದಲ್ಲಿ ಹಾನಿಕಾರಕ ಜೀವಾಣುಗಳು ಬೆಳೆಯುವುದನ್ನು ತಡೆಗಟ್ಟಬಹುದು. ಪ್ರತೀ ಬಾರಿಯೂ ಸ್ನಾನದ ನಂತರ ಉತ್ತಮವಾದ body moisturiser ಅನ್ನು ದೇಹದ ಎಲ್ಲಾ ಭಾಗದ ಮೇಲೂ ಲೇಪಿಸಿರಿ ಎಂದು ಚರ್ಮ ಚಿಕಿತ್ಸಾ ತಜ್ಞರಾದ ಡಾ| ಅಪ್ರತಿಮ್ ಗೋಯಲ್ ಸಲಹೆ ನೀಡುತ್ತಾರೆ. ತಮ್ಮ moisturiser ವಿಟಮಿನ್ E ಹಾಗೂ ಇತರ anti-oxidant ಗಳ ಒಂದು ಉತ್ತಮ ಮೂಲವಾಗಿರಬೇಕು ಎಂದೂ ಸಹ ಅವರು ಸೇರಿಸುತ್ತಾರೆ. ಜೇನುತುಪ್ಪ ಹಾಗೂ ಸಕ್ಕರೆಯ ಮಿಶ್ರಣವು ಒಂದು ಅತ್ಯುತ್ತಮ, ಪ್ರಾಕೃತಿಕವಾದ ಲೇಪವಾಗಿರುತ್ತದೆ.

2. ಹೆಚ್ಚಾಗಿ ನೀರನ್ನು ಸೇವಿಸಿರಿ
ದಿನವೊಂದಕ್ಕೆ ಕನಿಷ್ಟ 8 ರಿಂದ 10 ಲೋಟಗಳಷ್ಟು ನೀರನ್ನು ಕಡ್ಡಾಯವಾಗಿ ಸೇವಿಸಿರಿ. ಇದು ನಿರ್ಜಲೀಕರಣವನ್ನು ತಡೆಯುತ್ತದೆ ಹಾಗೂ ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ.

3. ಧೂಳಿನಿಂದ ದೂರವಿರಿ
ನೀವು ಅತಿಯಾಗಿ ಬೆವರುತ್ತೀರಾದರೆ, ದಿನಕ್ಕೆರಡು ಬಾರಿ ಸ್ನಾನ ಮಾಡುವುದು ಉತ್ತಮ. ಒಂದು ಉತ್ತಮವಾದ ಸ್ನಾನವು ನಿಮ್ಮನ್ನು ತಂಪಾಗಿರಿಸುತ್ತದೆ ಹಾಗೂ ನಿಮ್ಮ ವೈಯುಕ್ತಿಕ ಸ್ವಚತೆಯನ್ನೂ ಕೂಡ ಕಾಪಾಡುತ್ತದೆ. ಸ್ನಾನದ ನಂತರ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸುವುದರಿ೦ದ, ನಿಮ್ಮ ತ್ವಚೆಗೆ ಉಸಿರಾಡಲು ಸಹಕಾರಿಯಾಗುತ್ತದೆ.

4. ಕೇಶದ ಆರೈಕೆ
ಏರುತ್ತಿರುವ ಉಷ್ಣತೆ ಹಾಗೂ ಮಾಲಿನ್ಯ ನಿಮ್ಮ ಕೇಶರಾಶಿಯ ಆರೋಗ್ಯವನ್ನೂ ಕೂಡ ಹಾಳುಗೆಡವಬಲ್ಲದು. ಕೇಶರಾಶಿಯ ಆರೋಗ್ಯವನ್ನು ಕಾಪಾಡಲು, ನಿಮಗೆ ಒಪ್ಪಿಗೆಯಾಗುವ ರೀತಿಯಲ್ಲಿ ಶಾಂಪುವನ್ನು ಬಳಸಿ. "ಶಾಂಪುವನ್ನು ಬಳಸುವಾಗ ಎಚ್ಚರಿಕೆಯಿಂದಿರಬೇಕು. ಅಧಿಕ ಶಾಂಪು ಬಳಕೆಯಿಂದ ನಿಮ್ಮ ಕೇಶರಾಶಿಯು ಒಣ ಹಾಗೂ ಕಾಂತಿಹೀನವಾಗಿ ಕಾಣಬಹುದು" ಎಂದು ಡಾ. ಸತ್ತಾರ್ ಹೇಳುತ್ತಾರೆ. ಧೂಳು ಮತ್ತು ಮಾಲಿನ್ಯವನ್ನು ಕೂದಲಿನಿಂದ ನಿವಾರಿಸಲು, ಶಾಂಪುವನ್ನು ಬಳಸುವಾಗ, ಒಂದು ಚಿಟಿಕೆಯಷ್ಟು ಬೇಕಿಂಗ್ ಸೋಡವನ್ನು ಸೇರಿಸಿರಿ.

5. ಸೂರ್ಯನಿಂದ ರಕ್ಷಿಸಿಕೊಳ್ಳಿರಿ
ನಿಮ್ಮ ಜೀವನವಿಡೀ ನೀವು ಪಾಲಿಸಲೇಬೇಕಾದ ಒಂದು ನಿಯಮವೆಂದರೆ, ಉತ್ತಮವಾದ ಸನ್ ಸ್ಕ್ರೀನನ್ನು ಪ್ರತಿದಿನವೂ ಉಪಯೋಗಿಸುವುದು. ತ್ವಚೆಯ ಅಲರ್ಜಿಯನ್ನು ಹಾಗೂ ಕೆಂಪು ಬೊಕ್ಕೆಗಳಾಗುವುದನ್ನು ತಪ್ಪಿಸಲು, ನಿಮ್ಮ ತ್ವಚೆಯ ಪ್ರಕೃತಿಹನುಸಾರವಾದ, ಅತ್ಯುತ್ತಮವಾದ ಸನ್ ಸ್ಕ್ರೀನನ್ನು ಪಡೆಯಿರಿ.

6. ನಿಮ್ಮ ಕಾಲ್ಬೆರಳುಗಳಿಗೆ ಉಸಿರಾಡಲು ಅವಕಾಶ ನೀಡಿರಿ
ಯಾವಾಗಲೂ ತೆರೆದ ಪಾದರಕ್ಷೆಗಳನ್ನೇ ಧರಿಸಿರಿ. ಇದರಿಂದ ಪಾದಗಳಿಗೆ ವಾಯು ಸಂಚಾರವಾಗಲು ಅವಕಾಶ ಮಾಡುತ್ತದೆ ಹಾಗೂ ಪಾದಗಳ ದುರ್ವಾಸನೆಯನ್ನು ತಡೆದು ಫಂಗಸ್ ಸೋಂಕುಗಳಿಂದ ಪಾದಗಳನ್ನು ರಕ್ಷಿಸುತ್ತದೆ.

7. ಮೊಸರನ್ನು ಹೊಸ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳಿ
ಮೊಸರನ್ನು ಹೆಚ್ಚಾಗಿ ಬಳಸಿರಿ. ಕಾರಣ, ಇದು ತ್ವಚೆಗೆ ಮರುಜೀವನ್ನು ನೀಡುವುದು ಮಾತ್ರವಲ್ಲದೆ, ತ್ವಚೆಗೆ ವಯಸ್ಸಾಗುವ ಪ್ರಕ್ರಿಯೆಯನ್ನು ಸಹ ನಿಧಾನಗೊಳಿಸುತ್ತದೆ. ಸೂರ್ಯನಿಂದಾಗುವ ಹಾನಿಯನ್ನು ಕಡಿಮೆ ಮಾಡಲು ನೀವು ಯೋಗರ್ಟ್ ಅನ್ನು ತ್ವಚೆಯ ಅಥವಾ ಕೇಶ ಪ್ಯಾಕ್ ನ ರೂಪದಲ್ಲಿಯೂ ಸಹ ಬಳಸಬಹುದು.

8. ಹೊಸ ಶೇವಿಂಗ್ ತಂತ್ರವನ್ನು ಅನುಸರಿಸಿ
ನೀವು ನಿಮ್ಮ ತೋಳುಗಳು ಹಾಗೂ ಕಾಲುಗಳಿಗೆ ರೇಜರ್ ಬ್ಲೇಡನ್ನು ಉಪಯೋಗಿಸುವವರಾದರೆ, ಸ್ನಾನ ಮಾಡುವಾಗ ಕನಿಷ್ಠ 3 ನಿಮಿಷಗಳವರೆಗೆ ಕಾಯಿರಿ. ಸ್ನಾನ ಮಾಡುವಾಗ ಬೆಚ್ಚಗಿನ ನೀರನ್ನು ಉಪಯೋಗಿಸುವುದರಿಂದ ಕೂದಲಿನ ಬೇರುಗಳು ನಯವಾಗುತ್ತವೆ ಅಲ್ಲದೆ ಇದರಿಂದ ಕೇಶರಾಶಿಯು ದೀರ್ಘಕಾಲ ನುಣುಪಾಗಿರುತ್ತದೆ. ಇದಾದ ಬಳಿಕ, ಕೆಲವು ಹನಿಗಳಷ್ಟು ಪ್ರಾಕೃತಿಕ astringent ನ್ನು ತಣ್ಣೀರಿಗೆ ಸೇರಿಸಿರಿ.

9. ರೇಷ್ಮೆಯಂತಹ ನುಣುಪಾದ ತಲೆದಿಂಬನ್ನು ಉಪಯೋಗಿಸಿರಿ
ರೇಷ್ಮೆಯಂತಹ ನುಣುಪಾದ ತಲೆದಿಂಬಿನ ಕವರನ್ನು ಬಳಸುವುದರಿಂದ, ಕೊದಲು ಮತ್ತು ತಲೆದಿಂಬಿನ ಕವರಿನ ನಡುವಿನ ಘರ್ಷಣೆಯು ತಡೆಯಲ್ಪಡುತ್ತದೆ. ಇಲ್ಲದಿದ್ದರೆ, ಈ ಘರ್ಷಣೆಯಿಂದಾಗಿ ಕೊದಲು ಮತ್ತಷ್ಟು ಘಾಸಿಗೊಳಗಾಗುತ್ತದೆ ಹಾಗೂ ಕೊದಲಿನಲ್ಲಿ ಸಣ್ಣ, ಸಣ್ಣ ಗುಂಗುರುಗಳು ಉಂಟಾಗುತ್ತವೆ.

10. ಬಿಸಿಲಿಂದಾಗುವ ತ್ವಚೆಯ ಕಲೆಗಳಿಗೆ ವಿದಾಯ ಹೇಳಿರಿ
ಸುಲಭವಾಗಿ ಬಿಸಿಲಿನ ಕಪ್ಪು ಕಲೆಗಳಿಗೆ ಗುರಿಯಾಗುವವರು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಾವಾಗಲೂ ಪ್ರಾಕೃತಿಕ ವಸ್ತುಗಳನ್ನೇ ಉಪಯೋಗಿಸಿರಿ. ಮೊಟ್ಟೆಯ ಲೋಳೆ, ಕಾರ್ನ್ ಫ್ಲವರ್, ಮತ್ತು ನಿಂಬೆ ರಸದ ಮಿಶ್ರಣವನ್ನು ಅಥವಾ ಕೇವಲ ಸ್ವಲ್ಪ ಬಟಾಟೆ ಅಥವಾ ನಿಂಬೆ ರಸವನ್ನು ಹಚ್ಚಿಕೊಂಡು ಬಿಸಿಲಿನ ಕಲೆಯನ್ನು ನಿವಾರಿಸಬಹುದು. ಇವುಗಳಿಂದಲೂ ಪರಿಹಾರವು ಸಿಗದೇ ಇದ್ದಲ್ಲಿ, ಕೂಡಲೇ ಚರ್ಮ ತಜ್ಞರ ಸಹಾಯವನ್ನು ಪಡೆಯಿರಿ.

11. ನಿಮ್ಮ ಬೆನ್ನನ್ನು ಆರೈಕೆ ಮಾಡಿ
ನಿಮ್ಮ ಬೆನ್ನು ಸೆಕ್ಸಿಯಾಗಿ ಕಾಣುವಂತಾಗಲು, ಬೆನ್ನನ್ನು ನಿಯಮಿತವಾಗಿ ಉಜ್ಜಿ ಸ್ವಚ್ಚಗೊಳಿಸಿರಿ. 5 ರಿಂದ 10 ನಿಮಿಷಗಳ ಕಾಲ ಪಪ್ಪಾಯಿ ಹಣ್ಣಿನ ರಸವನ್ನು ನಿಮ್ಮ ತ್ವಚೆಯ ಮೇಲೆ ಉಜ್ಜಿರಿ. ಈ ಚಿಕಿತ್ಸೆಯಿಂದ ನಿಮ್ಮ ಬೆನ್ನಿನಲ್ಲಿರುವ ನಿರ್ಜೀವ ಕೋಶಗಳು ಹಾಗೂ ಧೂಳಿನ ನಿವಾರಣೆಯಾಗುತ್ತದೆ.

12. ನಿಮ್ಮ ತಲೆಯನ್ನು ರಕ್ಷಿಸಿಕೊಳ್ಳಿ
ತಲೆಯ ಮೇಲೆ ಟೋಪಿಯನ್ನು ಧರಿಸುವುದರಿಂದ ಎಣ್ಣೆಪಸೆಯು ಚರ್ಮದಲ್ಲಿ ಹಿಡಿದಿಡಲ್ಪಡುತ್ತದೆ ಹಾಗೂ ಇದರಿಂದ ಹಣೆಯ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಗಟ್ಟಲು, ಯಾವಾಗಲೂ ನಿಮ್ಮ ಹಣೆಯನ್ನು ಒಂದು ಉತ್ತಮ ಕರವಸ್ತ್ರದಿಂದ ಒರೆಸಿಕೊಳ್ಳುತ್ತಾ ಇರಿ.

13. ಆರೋಗ್ಯಕರವಾದ ಪಾದಗಳು ನಿಮ್ಮ ಗುರಿಯಾಗಿರಲಿ
ಮುಚ್ಚಿದ ಶೂಗಳನ್ನು ಧರಿಸುವ ಮೊದಲು, ಯಾವಾಗಲೂ anti ಫಂಗಲ್ ಪುಡಿಯನ್ನು ಉಪಯೋಗಿಸಿ. ನಿರ್ಜೀವ ಕೋಶಗಳನ್ನು ತೆಗೆಯಲು ಹಾಗೂ ಪಾದಗಳಿಗೆ ಮರುಜೀವ ತುಂಬಲು ಉಜ್ಜುವ ಕಲ್ಲನ್ನು ಬಳಸಿರಿ.

14. ಪ್ರೋಟೀನ್ ನಿಂದ ಸಮೃದ್ದವಾದ ಆಹಾರವನ್ನು ಸೇವಿಸಿ
ಆರೋಗ್ಯಕರ ಹಾಗೂ ಕಾಂತಿಯುಕ್ತ ತ್ವಚೆಗಾಗಿ, ಪ್ರೋಟೀನ್ ಯುಕ್ತ ಚೀಸ್, ಹಾಲು, ಧಾನ್ಯಗಳು, ಮೊಟ್ಟೆ, ಹಾಗೂ ಸಾಕಷ್ಟು ಮಾಂಸವನ್ನು ಉಪಯೋಗಿಸಿ. ಈ ಪ್ರೋಟೀನ್ ಭರಿತ ಆಹಾರ ಪದಾರ್ಥಗಳು ಆರೋಗ್ಯಕರವಾದ ಮೂಳೆ ಹಾಗೂ ಹಲ್ಲುಗಳನ್ನು ಹೊಂದುವಲ್ಲಿಯೂ ಕೂಡ ಸಹಕಾರಿ.

15. ಸಾಕಷ್ಟು ವಿಶ್ರಾಂತಿ ಪಡೆಯಿರಿ
ಸೌಂದರ್ಯದಿಂದ ಕಂಗೊಳಿಸಲು, ನಿಮ್ಮ ದೈನಂದಿನ ಜೀವನದಲ್ಲಿ ಸಾಕಷ್ಟು ವಿಶ್ರಾಂತಿಯನ್ನು ಪಡೆಯಿರಿ ಹಾಗೂ ಧಾರಾಳ ನೀರನ್ನು ಕುಡಿಯಿರಿ. ಈ ಎರಡು ಅಂಶಗಳು ನೀವು ಹೊಳೆಯುವ, ಕಾಂತಿಯುಕ್ತವಾದ ತ್ವಚೆಯನ್ನು ಪಡೆಯಲು ಸಹಕಾರಿಯಾಗಿವೆ. ಕಾರಣ, ಇವು ತ್ವಚೆಯನ್ನು ವಿಷಮುಕ್ತವಾಗಿಸುತ್ತವೆ ಹಾಗೂ ಕಣ್ಣುಗಳು ಕೆಂಪಾಗಿ ಉಬ್ಬುವುದನ್ನು ತಡೆಯುತ್ತವೆ.

16. ಮೇಕಪ್ ಅನ್ನು ಅತಿಯಾಗಿ ಬಳಸದಿರಿ
ಮುಖಕ್ಕೆ ಮೇಕಪ್ ಅನ್ನು ಹಿತಮಿತವಾಗಿ ಬಳಸಿ. ಮೇಕಪ್ ನ ಅತಿಯಾದ ಬಳಕೆಯು ನಿಮ್ಮ ತ್ವಚೆಯ ರಂಧ್ರಗಳನ್ನು ಮುಚ್ಚುತ್ತವೆ ಹಾಗೂ ಇದರಿಂದ ಚರ್ಮವು ಬೇಗನೆ ಸುಕ್ಕಾಗುತ್ತದೆ. ರಾತ್ರಿ ಮಲಗುವ ಮುನ್ನ, ನಿಮ್ಮ ಎಲ್ಲಾ ಪ್ರಸಾಧನಗಳನ್ನು ತೆಗೆದಿರುವುದನ್ನು ಖಚಿತಪಡಿಸಿಕೊಳ್ಳಿ.

17 .ಯಾವಾಗಲೂ CTM ನಿಯಮವನ್ನು ಪಾಲಿಸಿ
ಯಾವಾಗಲೂ CTM ( Cleansing, Toning, Moisturising ) ನಿಯಮವನ್ನು ಪಾಲಿಸಿ.
ನಿಮ್ಮ ತ್ವಚೆಯ ಪ್ರಕೃತಿಗೆ ಅನುಗುಣವಾದ cleanser ಮತ್ತು toner ಅನ್ನು ಆಯ್ಕೆ ಮಾಡಿ, ಅಂತೆಯೇ CTM ನಿಯಮವನ್ನು ಪ್ರತಿದಿನ ಅನುಸರಿಸಿ. ಒಂದು ಉತ್ತಮ cleanser ನಿಮ್ಮ ತ್ವಚೆಯ ಎಲ್ಲಾ
ನಿರ್ಜೀವ ಕೋಶಗಳನ್ನು ನಿವಾರಿಸುತ್ತದೆ. ಆದರೆ, ಅದರೊಂದಿಗೆ ಇದು ನಿಮ್ಮ ತ್ವಚೆಯ ಸ್ವಾಭಾವಿಕ ತೈಲದ ಅಂಶವನ್ನೂ ಸಹ ತೆಗೆದು ಬಿಡುತ್ತದೆ. ಅದ್ದರಿಂದ, ಇದಕ್ಕೆ ಪೂರಕವಾಗಿ ಒಂದು ಒಳ್ಳೆಯ ತೈಲ ಮುಕ್ತವಾದ moisturiser ಅನ್ನು ಉತ್ತಮ ತ್ವಚೆಗಾಗಿ ಬಳಸಿ.

18. ಕರವಸ್ತ್ರವನ್ನು ಯಾವಗಲೂ ಜೊತೆಗಿರಿಸಿಕೊಳ್ಳಿ
ಕೊಳಕು ಕೈಗಳಿಂದ ಮುಖವನ್ನು ಪದೇ ಪದೇ ಸ್ಪರ್ಶಿಸುವುದರಿಂದ ಬೊಕ್ಕೆಗಳು ಏಳಬಹುದು ಹಾಗೂ ತ್ವಚೆಯಲ್ಲಿ ಬಿರುಕು ಉಂಟಾಗಬಹುದು. ಅದ್ದರಿಂದ, ಹೊರಗೆ ಎಲ್ಲಿಗಾದರೂ ಹೋಗುವಾಗ ಕರವಸ್ತ್ರವನ್ನು ಕೊಂಡೊಯ್ಯಿರಿ ಹಾಗೂ ಸಾಧ್ಯವಾದಷ್ಟೂ ಕೈಗಳನ್ನು ಮುಖದಿಂದ ದೂರವಿರಿಸಿರಿ.

19. ತ್ವಚೆಯನ್ನು ಮೇಲಿಂದ ಮೇಲೆ ಉಜ್ಜಿಕೊಳ್ಳಿ
Exfoliator ಅನ್ನು ಕನಿಷ್ಟ ವಾರಕ್ಕೆ ಒಮ್ಮೆಯಾದರೂ ಬಳಸಿ. ಇದು ಎಲ್ಲಾ ಧೂಳು ಮತ್ತು ಮಲಿನಕಾರಕಗಳನ್ನು ನಿವಾರಿಸುತ್ತದೆ ಹಾಗೂ ನಿಮ್ಮ ತ್ವಚೆಗೆ ಆರೋಗ್ಯಕರ ಹೊಳಪನ್ನು ನೀಡುತ್ತದೆ.

20. ನಿಮ್ಮ ಕೇಶರಾಶಿಯನ್ನು ಕಂಡೀಶನ್ ಮಾಡಿ
ಮಾಲಿನ್ಯದಿಂದಾಗಬಹುದಾದ ಕೂದಲಿನ ಗುಂಗುರು ಹಾಗೂ ಹಾಳಾಗುವಿಕೆಯನ್ನು ತಡೆಗಟ್ಟಲು, ನಿಮ್ಮ ಕೂದಲನ್ನು ತೊಳೆದಾದ ನಂತರ ಒಂದು ಒಳ್ಳೆಯ conditioner ನಿಂದ ನಿಮ್ಮ ಕೂದಲನ್ನು ಕಂಡೀಶನ್ ಮಾಡಿ. ಅದಕ್ಕಿಂತ ಹೆಚ್ಚಾಗಿ, ಪದೇ ಪದೇ ಬಾಯಿಯಿಂದ ಗಾಳಿಯನ್ನು ಉದುವುದರ ಮೂಲಕ ಕೂದಲನ್ನು ಒಣಗಿಸುವುದನ್ನು ತಪ್ಪಿಸಿ.



Click it and Unblock the Notifications











