Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬಿದ್ದಿದೆಯೇ?
ನಾವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಒತ್ತಡದ ಜೀವನವನ್ನು ನಡೆಸುತ್ತಿದ್ದೇವೆ. ಈ ಒತ್ತಡದ ಬದುಕು ನಮ್ಮ ಸೌಂದರ್ಯ ಮತ್ತು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ, ಸಾಕಷ್ಟು ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದರೆ ನಮ್ಮ ಕಣ್ಣನ್ನು ನೋಡಿದಾಗ ತಿಳಿಯುತ್ತದೆ. ಕಣ್ಣುಗಳಲ್ಲಿ ಹೊಳಪು ಮಾಯವಾಗುವುದು, ಕಣ್ಣಿನ ಸುತ್ತ ಕಪ್ಪು ಕಲೆ ಬೀಳುವುದು. ಈ ರೀತಿ ಬಿದ್ದರೆ ಮುಖ ತುಂಬಾ ಡಲ್ಲಾಗಿ ಕಾಣುವುದು.
ಕಣ್ಣಿನ ಸುತ್ತ ಕಪ್ಪು ಕಲೆಗಳು ಬಿದ್ದರೆ ಅದನ್ನು ಸ್ವಾಭಾವಿಕವಾಗಿ ಹೋಗಲಾಡಿಸಬಹುದು, ಚೆನ್ನಾಗಿ ನಿದ್ದೆ ಮಾಡಿ, ಮಾನಸಿಕ ಒತ್ತಡವನ್ನು ಹೊರಹಾಕಿದರೆ ಕಪ್ಪು ಕಲೆಗಳು ನಿಧಾನಕ್ಕೆ ಹೋಗುವುದು, ಈ ಡಾರ್ಕ್ ಸರ್ಕಲ್ ಅನ್ನು ಸ್ವಲ್ಪ ಬೇಗನೆ ಹೋಗಲಾಡಿಸುವಲ್ಲಿ ಈ ಕೆಳಗಿನ ಟಿಪ್ಸ್ ಸಹಾಯ ಮಾಡುತ್ತದೆ:

ಆಲೂಗಡ್ಡೆ
ಹಸಿ ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ಕಣ್ಣಿನ ಮೇಲೆ ಇಟ್ಟು 15-20 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ, ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಡಾರ್ಕ್ ಸರ್ಕಲ್ ಅನ್ನು ಬೇಗನೆ ಹೋಗಲಾಡಿಸಬಹುದು.

ಹಾಲು
ಹಾಲಿನಲ್ಲಿ ಸ್ವಲ್ಪ ಕಾಟನ್ ಅದ್ದಿ, ಅದರಿಂದ ಕಣ್ಣುಗಳಿಗೆ ಮಸಾಜ್ ಮಾಡಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಿದ್ದರೆ ಕಪ್ಪು ಕಲೆಗಳು ಬೇಗನೆ ಮಾಯವಾಗುವುದು.

ವಿಟಮಿನ್ ಇ ಆಯಿಲ್
ಸ್ವಲ್ಪ ಕೋಲ್ಡ್ ವಾಟರ್ ಗೆ 3-4 ಹನಿ ವಿಟಮಿನ್ ಇ ಎಣ್ಣೆಯನ್ನು ಹಾಕಿ ಅದರಲ್ಲಿ ಕಾಟನ್ ಅನ್ನು ಅದ್ದಿ, ಅದರಿಂದ ಕಣ್ಣನ್ನು ಒರೆಸಿ, ಈ ರೀತಿ ಪ್ರತೀದಿನ ಮಾಡಿ, ಕೆಲವೇ ದಿನಗಳಲ್ಲಿ ಕಣ್ಣಿನ ಸುತ್ತ ಬಿದ್ದ ಕಲೆ ಮಾಯವಾಗುವುದು.

ಸೌತೆಕಾಯಿ
ಸೌತೆಕಾಯಿರಸ ಡಾರ್ಕ್ ಸರ್ಕಲ್ ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಸೌತೆಕಾಯಿಯನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟು 10 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ. ನಂತರ ಮುಖ ತೊಳೆಯಿರಿ. ಇದು ಕಲೆ ಹೋಗಲಾಡಿಸಿ ಕಣ್ಣು ಶುಭ್ರವಾಗಿ ಕಾಣುವಂತೆ ಮಾಡುತ್ತದೆ.

ಟೀ ಬ್ಯಾಗ್
ಗ್ರೀನ್ ಟೀ ಬ್ಯಾಗ್ ಅನ್ನು ತಣ್ಣೀರಿನಲ್ಲಿ ನೆನೆಸಿ, ನಂತರ ಆ ಬ್ಯಾಗ್ ಅನ್ನು ಕಣ್ಣಿನ ಮೇಲೆ ಇಡಿ. ಈ ರೀತಿ ಮಾಡಿಯೂ ಕಣ್ಣಿನ ಸುತ್ತ ಬಿದ್ದಿರುವ ಕಲೆಯನ್ನು ಹೋಗಲಾಡಿಸಬಹುದು.

ಐಸ್
ಮಂಜುಗಡ್ಡೆಯನ್ನು ಒಂದು ಮೃದುವಾದ ಬಟ್ಟೆಗೆ ಹಾಕಿ, ಅದರಿಂದ ಕಣ್ಣು ಮತ್ತು ಮುಖವನ್ನು ಮಸಾಜ್ ಮಾಡಿ, ಇದರಿಂದ ಕಣ್ಣಿನ ಸುತ್ತ ಬಿದ್ದಿರುವ ಡಾರ್ಕ್ ಸರ್ಕಲ್ ಹೋಗುವುದಲ್ಲದೆ, ಮುಖದ ಅಂದವೂ ಹೆಚ್ಚುವುದು.

ಮೊಟ್ಟೆಯ ಬಿಳಿ
ಮೊಟ್ಟೆಯ ಬಿಳಿಯಿಂದ ಫೇಸ್ ಮಾಸ್ಕ್ ತಯಾರಿಸುವುದು ಒಳ್ಳೆಯದು. ಮೊಟ್ಟೆಯ ಬಿಳಿಯನ್ನು ಮುಖಕ್ಕೆ ಹಚ್ಚಿ, ಅದು ಒಣಗಿದ ಬಳಿಕ ಒದ್ದೆ ಬಟ್ಟೆಯಿಂದ ಒರೆಸಿ, ನಂತರ ಮುಖವನ್ನು ತೊಳೆಯಿರಿ.



Click it and Unblock the Notifications
