Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಂಕುಳವನ್ನು ಬಿಳುಪಾಗಿಸಲು ಟಿಪ್ಸ್
ಕಂಕುಳದಲ್ಲಿರುವ ಬೇಡದ ಕೂದಲನ್ನು ತೆಗೆಯುವುದು ಸ್ವಚ್ಛತೆಯ ದೃಷ್ಟಿಯಿಂದ ಒಳ್ಳೆಯದು. ಅದರಲ್ಲೂ ಸ್ಲೀವ್ ಲೆಸ್ ಡ್ರೆಸ್ ಧರಿಸುವಾಗ ಅಂತೂ ಕಂಕುಳ ಕ್ಲೀನ್ ಆಗಿ ಇರಬೇಕು. ಸ್ಲೀವ್ ಲೆಸ್ ಹಾಕಿದಾಗ ಕಂಕುಳ ಕ್ಲೀನ್ ಆಗಿ ಇಲ್ಲದಿದ್ದರೆ ನೋಡುವವರು ಈ ವ್ಯಕ್ತಿ ಸ್ವಚ್ಛತೆಯ ಕಡೆ ಹೆಚ್ಚು ಗಮನವನ್ನು ಕೊಡುವುದಿಲ್ಲವೆಂದೇ ಭಾವಿಸುತ್ತಾರೆ.
ಕಂಕುಳವನ್ನು ವ್ಯಾಕ್ಸ್ ಅಥವಾ ಶೇವ್ ಮಾಡಿದರೆ ಮಾತ್ರ ಸಾಲದು, ಕಂಕುಳ ಕಪ್ಪಾಗಿ ಕಾಣದಂತೆ ಕೇರ್ ತೆಗೆದುಕೊಳ್ಳಬೇಕು. ಕಂಕುಳವನ್ನು ಬೆಳ್ಳಗಾಗಿಸಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು:

ಲೋಳೆಸರ
ಪ್ರತೀದಿನ ಕಂಕುಳಕ್ಕೆ ಲೋಳೆಸರ ಹಚ್ಚಿದರೆ ಕಂಕುಳ ಕಪ್ಪಾಗುವುದಿಲ್ಲ, ಅಲ್ಲದೆ ನುಣಪಾಗಿಯೂ ಇರುತ್ತದೆ, ಅಲರ್ಜಿ ಉಂಟಾಗುವುದನ್ನು ತಡೆಯುತ್ತದೆ.

ನಿಂಬೆ ರಸ
ವ್ಯಾಕ್ಸ್ ಮಾಡಿದ ನಂತರ ನಿಂಬೆರಸ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಿರಿ. ಪ್ರತೀದಿನ ಸ್ನಾನಕ್ಕೆ ಹೋಗುವ ಮುನ್ನ ನಿಂಬೆರಸ ಹಚ್ಚಿದರೆ ಕಂಕುಳ ಕಪ್ಪಾಗುವುದಿಲ್ಲ.

ರೋಸ್ ವಾಟರ್
ಸ್ನಾನದ ನಂತರ ಕಂಕುಳಕ್ಕೆ ಸ್ವಲ್ಪ ರೋಸ್ ವಾಟರ್ ಹಚ್ಚಿದರೆ ಕಂಕುಳ ಕಪ್ಪಾಗುವುದನ್ನು ತಡೆಯಬಹುದು, ಮತ್ತು ದುರ್ವಾಸನೆ ಬೀರುವುದನ್ನು ತಡೆಯಬಹುದು.

ಅರಿಶಿಣ
ಸ್ನಾನಕ್ಕೆ ಮುಂಚೆ ಕಂಕುಳಕ್ಕೆ ಸ್ವಲ್ಪ ಅರಿಶಿಣವನ್ನು ಹಚ್ಚಿದರೆ ತ್ವಚೆ ಬಿಳುಪಾಗುವುದು. ತ್ವಚೆ ನುಣಪಾಗಿ, ಬಿಳುಪಾಗಿ ಇದ್ದರೆ ಸ್ಲೀವ್ ಲೆಸ್ ಧರಿಸಿದಾಗ ಕೈ ಎತ್ತಲು ಆತ್ಮವಿಶ್ವಾಸ ಮೂಡುವುದು.

ಕಹಿ ಬೇವಿನ ಎಲೆ
ಕಹಿಬೇವಿನ ಎಲೆಯನ್ನು ಪೇಸ್ಟ್ ಮಾಡಿ ವಾರಕ್ಕೊಮ್ಮೆ ಕಂಕುಳಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಇದರಿಂದ ಕಂಕುಳ ದುರ್ವಾಸನೆ ಬೀರುವುದನ್ನು ಹಾಗೂ ಆ ಭಾಗದಲ್ಲಿ ತ್ವಚೆ ಕಪ್ಪಾಗುವುದನ್ನು ತಡೆಯಬಹುದು.

ಮುಲ್ತಾನಿ ಮಿಟಿ
ಮುಲ್ತಾನಿ ಮಿಟಿಯ ಪೇಸ್ಟ್ ಮಾಡಿ ಹಚ್ಚಿದರೆ ಕಂಕುಳದ ಬಿಳುಪು ಹೆಚ್ಚುವುದು. ಮುಲ್ತಾನಿ ಮಿಟಿಯನ್ನು ಮುಖಕ್ಕೆ ಹಚ್ಚುವಾಗ ಕತ್ತು ಮತ್ತು ಕಂಕುಳಕ್ಕೆ ಹಚ್ಚಿ.



Click it and Unblock the Notifications
