Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಗುಲಾಬಿ ಬಣ್ಣದ ತುಟಿಯ ಸೌಂದರ್ಯಕ್ಕಾಗಿ ಟಿಪ್ಸ್
ತುಟಿಗಳು ಡ್ರೈಯಾಗಿದ್ದರೆ, ಕಪ್ಪಾಗಿ ಇದ್ದರೆ ಮುಖದ ಅಂದ ಕುಂದುವುದು. ಗುಲಾಬಿ ಬಣ್ಣದ ತುಟಿಯು ಮುಖದ ಅಂದವನ್ನು ಹೆಚ್ಚಿಸುವುದು, ಆದರೆ ತುಟಿಯ ರಂಗನ್ನು ಹೆಚ್ಚಿಸಲು ಲಿಪ್ ಸ್ಟಿಕ್ ನಂತಹ ಮೇಕಪ್ ಮಾತ್ರ ಬಳಸಿದರೆ ನೈಸರ್ಗಿಕ ತುಟಿಯ ಸೌಂದರ್ಯ ನಿಮ್ಮದಾಗುವುದಿಲ್ಲ. ಅತಿಯಾದ ಮೇಕಪ್ ನಿಮ್ಮ ತುಟಿಯ ಸೌಂದರ್ಯವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. ಆದ್ದರಿಂದ ನೈಸರ್ಗಿಕ ತುಟಿಯ ಚೆಲುವನ್ನು ಪಡೆಯುವುದು ಒಳ್ಳೆಯದು.
ತುಟಿಗಳ ಆರೈಕೆಗೆ ನೀವೇನೂ ಬಹಳಷ್ಟು ಪರಿಶ್ರಮ ಪಡಬೇಕಾಗಿಲ್ಲ. ಪ್ರತಿದಿನ ಕೇವಲ 3 ರಿಂದ 5 ನಿಮಿಷಗಳ ಕಾಲಾವಕಾಶವನ್ನು ಇದಕ್ಕಾಗಿ ಮಿಸಲಾಗಿಟ್ಟರೆ ಸಾಕು. ನಿಮ್ಮ ತುಟಿಗಳನ್ನು ಯೋಗ್ಯವಾದ ರೀತಿಯಲ್ಲಿ ಆರೈಕೆ ಮಾಡಿ, ಆರೋಗ್ಯಕರವಾದ, ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಈ ಕೆಳಗೆ ಕೆಲವು ಸರಳವಾದ ಸೂತ್ರಗಳನ್ನು ನೀಡಲಾಗಿದೆ.

ನಿಂಬೆ ಹಣ್ಣು ಪ್ರತಿದಿನ ರಾತ್ರಿ ಮಲಗುವ ಮೊದಲು, ನಿಂಬೆ ರಸ ಹಾಗೂ ಗ್ಲಿಸಿರಿನ್ ನ ಮಿಶ್ರಣವನ್ನು ನಿಮ್ಮ ತುಟಿಗಳಿಗೆ ಲೇಪಿಸಿರಿ. ಇದನ್ನು, ರಾತ್ರಿ ಪೂರ್ತಿ ಹಾಗೆಯೇ ಇರಗೊಟ್ಟು, ಮರುದಿನ ಬೆಳಗ್ಗೆ ತೊಳೆಯಿರಿ. ಇದು ನಿಮ್ಮ ತುಟಿಗಳಿಗೆ ಹೊಳಪು ನೀಡಲು ಸಹಕಾರಿಯಾಗಿದೆ.
ಸಕ್ಕರೆ ಬಳಸಿ ತುಟಿಯ ಆರೈಕೆ ಸಕ್ಕರೆಯ ಸ್ಪಟಿಕಗಳು ತುಟಿಗಳಿಗೆ ಅತ್ಯುತ್ತಮ scrubbing agents ಗಳೆಂದು ಸಾಬೀತಾಗಿದೆ. ಸ್ವಲ್ಪ ಸಕ್ಕರೆಯನ್ನು ಆಲಿವ್ ಎಣ್ಣೆ ಅಥವಾ ಹಾಲಿನ ಕೆನೆಯೊಂದಿಗೆ ಬೆರೆಸಿರಿ ಹಾಗೂ ಈ ಮಿಶ್ರಣವನ್ನು ನಿಮ್ಮ ತುಟಿಗಳ ಮೇಲೆ ನಯವಾಗಿ ಲೇಪಿಸಿರಿ. ಇದು ನಿಮ್ಮ ತುಟಿಗಳ ನಿರ್ಜೀವ ತ್ವಚೆಯನ್ನು ನಿವಾರಿಸುತ್ತದೆ ಹಾಗೂ ಅದೇ ಸಮಯಕ್ಕೆ ನಿಮ್ಮ ತುಟಿಗಳನ್ನು ತೇವವಾಗಿರಿಸುತ್ತದೆ.
ರಾತ್ರಿ ಮಲಗುವಾಗ ಬಾದಾಮಿ ಎಣ್ಣೆ ಹಚ್ಚಿ ಮಲಗಿ, ಬಾದಾಮಿ ಎಣ್ಣೆ ತುಟಿ ಡ್ರೈಯಾಗುವುದನ್ನು ತಪ್ಪಿಸಿ, ತುಟಿಯ ಹೊಳಪನ್ನು ಹೆಚ್ಚಿಸುವುದು.
ತುಟಿಗೆ ಗ್ಲಿಸೆರಿನ್ ಹಚ್ಚಿ, ಗ್ಲಿಸೆರಿನ್ ಹಚ್ಚುವುದರಿಂದ ತುಟಿ ಒಡೆಯುವ ಸಮಸ್ಯೆ, ತುಟಿ ಡ್ರೈಯಾಗುವುದು ಈ ರೀತಿಯ ಸಮಸ್ಯೆಯಿಂದ ಹೊರ ಬರಬಹುದು. ಅಲ್ಲದೆ ಗ್ಲಿಸೆರಿನ್ ತುಟಿಯ ಹೊಳಪನ್ನೂ ಹೆಚ್ಚಿಸುತ್ತದೆ.
ಸಹಜವಾದ, ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು, ಮಲಗುವ ಮುಂಚೆ ಬೀಟ್ ರೂಟ್ ರಸವನ್ನು ತುಟಿಗಳಿಗೆ ಲೇಪಿಸಿರಿ. ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಇದು ಅತ್ಯುತ್ತಮವಾದ ಪ್ರಾಕೃತಿಕ ವಿಧಾನವಾಗಿದೆ.



Click it and Unblock the Notifications
