Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪುರುಷರೇ, ಐಬ್ರೋ ಮಾಡಿಸುವ ಅಭ್ಯಾಸವಿದೆಯೇ?
ಇದು ಫ್ಯಾಶನ್ ಯುಗ. ಮಹಿಳೆಯಂತೆ ಪುರುಷರಿಗೂ ಕೂಡ ಅನೇಕ ಮೇಕ್ ಓವರ್ ಗಳು ಬಂದಿವೆ. ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹುಬ್ಬಿನ ಪಾತ್ರ ಪ್ರಮುಖವಾದುದು. ಶೇಪ್ ಇರುವ ಹುಬ್ಬು ಮುಖದ ಅಂದ ಹೆಚ್ಚಿಸಿ ಇತರರನ್ನು ಆಕರ್ಷಿಸುತ್ತದೆ. ಈಗ ಐ ಬ್ರೋವನ್ನು ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರೂ ಮಾಡುತ್ತಾರೆ. ಆದರೆ ಇದನ್ನು ಮನೆಯಲ್ಲಿಯೇ ಮಾಡಿಕೊಂಡು ಅಂದವನ್ನು ಇನ್ನಷ್ಟು ಕೆಡಿಸಿಕೊಳ್ಳುವ ಮೊದಲು ಅದರ ಬಗ್ಗೆ ಮಾಹಿತಿ ತಿಳಿದುಕೊಂಡು ಯಾವುದನ್ನು ಮಾಡಬೇಕು ಯಾವುದು ಬೇಡ ಎಂಬುದನ್ನು ಮೊದಲೇ ತಿಳಿದುಕೊಂಡಿರುವುದು ಒಳ್ಳೆಯದು.
ಹುಬ್ಬಿನ ವಿಷಯಕ್ಕೆ ಬಂದರೆ ಪುರುಷರಿಗೆ ದೊಡ್ಡ ಮತ್ತು ದಪ್ಪ ಹುಬ್ಬುಗಳಿರುತ್ತವೆ. ಪುರುಷರ ಶೃಂಗಾರ ವಿಷಯಕ್ಕೆ ಬಂದರೆ ಐ ಬ್ರೋ ಅನ್ನು ನಿರ್ಲಕ್ಷಿಸುತ್ತಾರೆ ಎಂದೇ ಹೇಳಬಹುದು. ನೀವು ಚೆನ್ನಾಗಿ ಕಾಣಬೇಕು ಯಾರನ್ನಾದರು ಸೆಳೆಯುವ ವದನ ನಿಮ್ಮದಾಗಬೇಕು ಎಂದಿದ್ದಲ್ಲಿ ಐ ಬ್ರೋ ಕೂಡ ಇದರಲ್ಲಿ ಒಂದು ಪಾತ್ರ ವಹಿಸುತ್ತದೆ ಎಂಬುವುದು ನೆನಪಿರಲಿ.
ಹುಬ್ಬು ನಿರ್ವಹಣೆ ಪುರುಷರಲ್ಲಿ ಬೇರೆ ರೀತಿಯೇ ಇರುತ್ತದೆ.ಅಂದರೆ ನೈಸರ್ಗಿಕ ನೋಟವನ್ನು ಕಳೆದುಕೊಳ್ಳದೆ ಹೆಚ್ಚುವರಿ ಕೂದಲನ್ನು ಮಾತ್ರ ತೆಗೆಯುವುದು.ಇದು ಸ್ವಲ್ಪ ಮಟ್ಟಿಗೆ ಟ್ರಿಕ್ಕಿ ಆಗಿರಬಹುದು ಆದಾಗ್ಯೂ ನಾವು ಇಲ್ಲಿ ನೀಡಿರುವ ಕೆಲವು ಟಿಪ್ಸ್ ನಿಮ್ಮ ಸಹಾಯಕ್ಕೆ ಬರುತ್ತದೆ.
ಹುಬ್ಬಿನ ನಿರ್ವಹಣೆಗೆ ಮಾಡಬಾರದ ಕ್ರಿಯೆಗಳು

* ರೇಜರ್ ಉಪಯೋಗಿಸುವುದು
ನಾವು ಐ ಬ್ರೋ ಗೆ ರೇಜರ್ ಉಪಯೋಗಿಸಿದರೆ ಏನಾಗುತ್ತದೆ ಎನ್ನುವುದರ ಬಗ್ಗೆ ಒತ್ತಡ ಹೇರಲು ಬಯಸುವುದಿಲ್ಲ ಆದರೆ ಇದರ ಪ್ರಯೋಗದಿಂದ ಸಿಗುವ ಉತ್ತರ ತೀವ್ರವಾಗಿರುತ್ತದೆ. ನೀವು ಹೀಗೆ ಮಾಡಿದಾಗ ಹೆಚ್ಚು ಕೂದಲುಗಳು ಕಿತ್ತು ಬರಬಹುದು ಮತ್ತು ಇದರಿಂದ ನಿಮಗೆ ಮತ್ತೆ ಬರುವ ಕೂದಲು ಬಹಳ ದಪ್ಪವಾಗಿ ರುತ್ತದೆ. ಇದು ನಿಮ್ಮ ಲುಕ್ ಅನ್ನೇ ಬದಲಾಯಿಸಿಬಿಡಬಹುದು. ಇದರಿಂದ ನಿಮ್ಮ ಹುಬ್ಬು ವಿರುದ್ಧ ದಿಕ್ಕಿನಲ್ಲಿ ಬೆಳೆಯಲು ಮತ್ತು ಹೆಚ್ಚು ಬೆಳೆಯಲು ಪ್ರಾರಂಭಿಸುತ್ತದೆ.

* ಅಶಾಂತಿ ವ್ಯಕ್ತಪಡಿಸುವುದು
ನೀವು ಶಾಂತವಾಗಿ ಇಲ್ಲದಿದ್ದಲ್ಲಿ ಕೊನೆಯಲ್ಲಿ ಸಾಕಷ್ಟು ಕೂದಲುಗಳನ್ನು ತೆಗೆದುಕೊಂಡು ಬಿಡಬಹುದು.ಸಮಯ ತೆಗೆದುಕೊಂಡು ಒಮ್ಮೆ ಒಂದೇ ಕೂದಲನ್ನು ಕಿತ್ತುಕೊಳ್ಳಿ . ನೀವು ಗಾಬರಿಯಲ್ಲಿ ಕೂದಲು ಕಿತ್ತುಕೊಂಡರೆ ಮತ್ತು ಎಷ್ಟು ಕೇಳುತ್ತಿದ್ದೇವೆ ಎನ್ನುವುದನ್ನು ಗಮನಿಸದಿದ್ದರೆ ಕೊನೆಯಲ್ಲಿ ತೆಗೆಯಬೇಕಾದ ಕೂದಲಿಗಿಂತ ಹೆಚ್ಚು ಕೂದಲನ್ನು ಕಿತ್ತುಕೊಂಡು ಬಿಡಬಹುದು.ಆದರೆ ಒಮ್ಮೆ ಕಿತ್ತು ಹೋಯಿತೆಂದರೆ ಹೋಯಿತು ಮತ್ತು ಅಂಟಿಸಲು ಸಾಧ್ಯವಿಲ್ಲ!ಆದ್ದರಿಂದ ನಿಮಗೆ ಎರಡೂ ಹುಬ್ಬು ಒಂದೇ ರೀತಿ ಆಗಬೇಕೆಂದರೆ ಸ್ವಲ್ಪ ಶಾಂತಿಯಿಂದ ಗಮನಿಸಿ ಸಮಯ ವ್ಯಯಿಸಿ ಕೀಳಬೇಕು ಮತ್ತು ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಿ.

*ಉದ್ದ ಕೂದಲನ್ನು ಕೀಳುವುದು
ಉದ್ದ ಇರುವ ಕೂದಲನ್ನು ಕೀಳಬೇಕು ಎಂದೇನಿಲ್ಲ ಅವುಗಳನ್ನು ಟ್ರಿಮ್ ಮಾಡಿದರೆ ಸಾಕು.ಹುಬ್ಬಿನ ಕೂದಲನ್ನು ವಿರುದ್ಧ ದಿಕ್ಕಿಗೆ ಬಾಚಿ ಆಗ ಉದ್ದ ಇರುವ ಕೂದಲು ಹೊರಗೆ ಬರುತ್ತದೆ ಆಗ ನೀವು ಅದನ್ನು ಟ್ರಿಮ್ ಮಾಡಬಹುದು.ಸಣ್ಣ ಬಾಚನಿಕೆಯನ್ನು ಬಳಸಿ ಹುಬ್ಬನ್ನು ಬಾಚಿ ನಂತರ ಸಣ್ಣ ಕತ್ತರಿ ತೆಗೆದುಕೊಂಡು ಟ್ರಿಮ್ ಮಾಡಿ ಇದರಿಂದ ನಿಮಗೆ ಬೇಕಾದ ರೀತಿಯಲ್ಲಿ ಬೇಕಾದಷ್ಟು ಮಾತ್ರ ಕತ್ತರಿಸಬಹುದು.

*ಪೂರ್ವ ತಯಾರಿ ಮಾಡಿಕೊಳ್ಳಿ
ಹುಬ್ಬಿನ ಜಾಗ ಸ್ವಚ್ಚವಾಗಿ ಎಣ್ಣೆರಹಿತವಾಗಿ ದೂಳು ರಹಿತವಾಗಿ ಇದೆ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಿ. ಬಿಸಿ ನೀರು ನಿಮಗೆ ಐ ಬ್ರೋ ಸ್ವಚ್ಚಗೊಳಿಸಲು ಸಹಕರಿಸಬಹುದು. ಶೇವಿಂಗ್ ಮಾಡಲು ಬಳಸುವಂತೆ ಮೊದಲು ಕೂದಲನ್ನು ಮೃದು ಮಾಡಿಕೊಳ್ಳಿ.ಇದರಿಂದ ನಿಮಗೆ ಐ ಬ್ರೋ ಮಾಡುವಾಗ ನೋವಾಗುವುದಿಲ್ಲ.

*ಅಗತ್ಯ ಉಪಕರಣಗಳು ಒಟ್ಟುಗೂಡಿಸಿ ಇಟ್ಟುಕೊಳ್ಳಿ
ಒಳ್ಳೆಯ ಗುಣಮಟ್ಟದ ವ್ಯಾಕ್ಸ್ ಬಳಸುವುದು ಉತ್ತಮ. ಕಡಿಮೆ ಗುಣಮಟ್ಟದವನ್ನು ಬಳಸಿದರೆ ಬೇರೆ ಗುಣಮಟ್ಟಕ್ಕೆ ಹೋಲಿಸಿದಾಗ ಕಳಪೆ ಫಲಿತಾಂಶ ದೊರೆಯುತ್ತದೆ. ಮಾಂಸ ಖಂಡಗಳಿಗೆ ತುತ್ತಾಗಬಹುದು. ಆದ್ದರಿಂದ ಬೇಕಾದ ಸಲಕರಣೆಗಳನ್ನು ಒಟ್ಟುಗೂಡಿಸಿಕೊಂಡು ಒಳ್ಳೆಯ ಗುಣಮಟ್ಟದ ಸಲಕರಣೆಗಳನ್ನು ಬಳಸಿ.

*ಐ ಬ್ರೋ ಮಾಡಿಸಿಕೊಳ್ಳದೆ ಇರುವುದನ್ನು ನಿರ್ಲಕ್ಷಿಸಿ
ಕೆಲವೊಂದು ಯಾವಾಗಲು ಫ್ಯಾಶನ್ ಆಗಿರುವುದಿಲ್ಲ ಮತ್ತು ಫ್ಯಾಶನ್ ಆಗಲು ಕೂಡ ಸಾಧ್ಯವಿಲ್ಲ. ಆದ್ದರಿಂದ ಮೂಗಿನ ಮೇಲೆ ಕೂದಲುಗಳಿದ್ದರೆ ಆದಷ್ಟು ಬೇಗ ಸಲೂನ್ ಗೆ ಹೋಗಿ ತ್ರೆಡ್ಡಿಂಗ್ ಮಾಡಿಸಿಕೊಳ್ಳಿ ಇದನ್ನು ಮನೆಯಲ್ಲಿ ಮಾಡುವುದಾದರೆ ಶೇವ್ ಮಾಡಬೇಡಿ ವ್ಯಾಕ್ಸ್ ಮಾಡಿ.
ಜನರು ಕೇವಲ ಮಹಿಳೆಯರು ಮಾತ್ರ ಸೌಂದರ್ಯಕ್ಕೆ ಮಹತ್ವ ಕೊಡುತ್ತಾರೆ ಎಂದು ತಿಳಿದಿದ್ದಾರೆ ನೀವು ಅದು ಸುಳ್ಳು ಎಂಬುದನ್ನು ಸಾಬೀತುಪಡಿಸಿನೋಡಿ. ಈ ಮೇಲೆ ಕೊಟ್ಟಿರುವ ಕ್ರಿಯೆಗಳನ್ನು ಗಮನದಲ್ಲಿಟ್ಟು ನೀವು ಮೇಕ್ ಓವರ್ ಮಾಡಿಕೊಳ್ಳಿ.



Click it and Unblock the Notifications
