Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
7 ದಿನಗಳಲ್ಲಿಯೇ ಮೈ ಹೊಳಪು ಹೆಚ್ಚಬೇಕೆ?
ಸಕ್ಕರೆಯನ್ನು ತಿಂದರೆ ಸೌಂದರ್ಯಕ್ಕೆ ಒಳ್ಳೆಯದಲ್ಲ, ಹೆಚ್ಚು ಸಕ್ಕರೆ ತಿನ್ನುವವರಿಗೆ ಬೇಗನೆ ಅಕಾಲಿಕ ನೆರಿಗೆ ಬೀಳುವುದು, ಅದೇ ಅದನ್ನು ಸ್ಕ್ರಬ್, ಎಕ್ಸ್ ಫೋಲೆಟ್ ಗೆ ಬಳಸಿದರೆ ಅಕಾಲಿಕ ನೆರಿಗೆ ತಡೆಗಟ್ಟಿ ಮುಖದ ಅಂದ ಹೆಚ್ಚಿಸಿಕೊಳ್ಳಬಹುದು.
ಇಲ್ಲಿ ನಾವು ಸಕ್ಕರೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೆಲ ಟಿಪ್ಸ್ ನೀಡಿದ್ದೇವೆ ನೋಡಿ:

ಬೆಸ್ಟ್ ಸ್ಕ್ರಬ್ಬರ್
ಇದನ್ನು ಬಳಸಿ ಎಕ್ಸ್ ಫೋಲೆಟ್ ಮಾಡಿದರೆ ಅಕಾಲಿಕ ನೆರಿಗೆ ಸಮಸ್ಯೆ ಕಂಡು ಬರುವುದಿಲ್ಲ. ಸಕ್ಕರೆಗೆ ಸ್ವಲ್ಪ ನಿಂಬೆ ರಸ ಹಿಂಡೆ ಅದರಿಂದ ಮುಖವನ್ನು ಸ್ಕ್ರಬ್ ಮಾಡಿ. ಕಣ್ಣಿನ ಭಾಗಕ್ಕೆ ತಾಗಿಸಬೇಡಿ. ಈ ರೀತಿ ಮಾಡಿದರೆ ನಿರ್ಜೀವ ತ್ವಚೆ ಹೋಗಿ ಮುಖದ ಹೊಳಪು ಹೆಚ್ಚಾಗುವುದು.

ತ್ವಚೆ ಡ್ರೈಯಾಗುವುದನ್ನು ತಡೆಯುತ್ತದೆ
ಸಕ್ಕರೆಗೆ ಸ್ವಲ್ಪ ಆಲೀವ್ ಆಯಿಲ್ ಹಾಕಿ ಅದರಿಂದ ಮುಖವನ್ನು ಸ್ಕ್ರಬ್ ಮಾಡಿದರೆ ಮುಖ ಡ್ರೈಯಾಗುವುದಿಲ್ಲ. ಡ್ರೈ ತ್ವಚೆಯಿರುವವರು ಈ ವಿಧಾನ ಪಾಲಿಸಿ ನೋಡಿ, ಬೆಸ್ಟ್ ರಿಸಲ್ಟ್ ಸಿಗದಿದ್ದರೆ ಮತ್ತೆ ಕೇಳಿ.

ತ್ವಚೆ ರಂಧ್ರಗಳ ಶುಚಿತ್ವಕ್ಕೆ
ಸಕ್ಕರೆಯಲ್ಲಿ ಗ್ಲೈಸೋಲಿಕ್ ಆಸಿಡ್ ಇದೆ. ಇದು ತ್ವಚೆ ರಂಧ್ರಗಳಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ. ಮುಖದಲ್ಲಿ ರಂಧ್ರ ಸಮಸ್ಯೆ ಇರುವವರು ಸಕ್ಕರೆಯಿಂದ ಎಕ್ಸ್ ಫೋಲೆಟ್ ಮಾಡಿದರೆ ರಂಧ್ರ ಎದ್ದು ಕಾಣುವುದಿಲ್ಲ.

ತುಟಿಯ ಆರೈಕೆಗೆ
ತುಟಿ ಡ್ರೈಯಾಗುವುದನ್ನು ತಪ್ಪಿಸಿ, ಮೃದುವಾದ ತುಟಿಯನ್ನು ಪಡೆಯಲು ಸಕ್ಕರೆಗೆ ಸ್ವಲ್ಪ ನಿಂಬೆ ರಸ ಹಾಕಿ ಅದರಿಂದ ತುಟಿ ಉಜ್ಜಿದರೆ ತುಟಿ ಮೃದುವಾಗುವುದು.

ಮೃದುವಾದ ದೇಹ ಸೌಂದರ್ಯಕ್ಕೆ
ಸಕ್ಕರೆಗೆ ಜೇನು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಇದರಿಂದ ಮೈ ಸ್ಕ್ರಬ್ ಮಾಡಿದರೆ ಮೃದುವಾದ ಹೊಳೆಯುವ ತ್ವಚೆಯನ್ನು ಪಡೆಯಬಹುದು.

ಶುಗರ್ ವ್ಯಾಕ್ಸ್
ಇದರಿಂದ ವ್ಯಾಕ್ಸ್ ತಯಾರಿಸಿ ಬೇಡದ ಕೂದಲನ್ನು ತೆಗೆಯಬಹುದು. ವ್ಯಾಕ್ಸ್ ಮಾಡಲು ಸಕ್ಕರೆಯಂತಹ ನೈಸರ್ಗಿಕ ವಿಧಾನ ಬಳಸುವುದು ಒಳ್ಳೆಯದು.

ಬ್ರೌನ್ ಶುಗರ್ ಬಾಡಿ ಸ್ಕ್ರಬ್
1 ಕಪ್ ಬ್ರೌನ್ ಶುಗರ್ ಗೆ ಒಂದು ಬೆಣ್ಣೆ ಹಣ್ಣು ಹಾಕಿ, ಅದಕ್ಕೆ ಸ್ವಲ್ಪ ಬಾದಾಮಿ ಎಣ್ಣೆ ಮತ್ತು 1 ಚಮಚ ಜೇನು ಸೇರಿಸಿ ಮಿಕ್ಸ್ ಮಾಡಿ ಮೈಗೆ ಹಚ್ಚಿ,ಈ ರೀತಿ ವಾರದಲ್ಲಿ 4 ಬಾರಿ ಮಾಡಿ ನೋಡಿ ಮೃದುವಾದ ಹೊಳಪಿನ ಮೈ ನಿಮ್ಮದಾಗುವುದು



Click it and Unblock the Notifications
