Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾಡಿ ಪಾಲೀಷಿಂಗ್ ಟ್ರೀಟ್ ಮೆಂಟ್ ಬಗ್ಗೆ ಗೊತ್ತೇ?
ಬಾಡಿಪಾಲೀಷಿಂಗ್ ಅನ್ನುವುದು ಒಂದು ಬಗೆಯ ಬ್ಯೂಟಿ ಟ್ರೀಟ್ ಮೆಂಟ್ ಆಗಿದೆ. ಬಾಟಿ ಪಾಲಿಷಿಂಗ್ ನ ಪ್ರಮುಖ ಉದ್ದೇಶ ನಿರ್ಜೀವ ತ್ವಚೆಯನ್ನು ತೆಗೆದು ಹಾಕಿ, ತ್ವಚೆಯನ್ನು ಮಾಯಿಶ್ಚರೈಸರ್ ಆಗಿ ಇಟ್ಟುಕೊಳ್ಳುವುದು. ಈ ಚಿಕಿತ್ಸೆ ಮಾಡಿಸಿದರೆ ನಿಮ್ಮ ತ್ವಚೆಯ ಕಾಂತಿ ನೋಡಿ ಸಂತೋಷವಾಗುವುದು ಖಚಿತ.
ಈ ಚಿಕಿತ್ಸೆ ಮಾಡಿಸಿದರೆ ಸ್ವಲ್ಪ ಕೇರ್ ತೆಗೆದುಕೊಳ್ಳುವುದು ಒಳ್ಳೆಯದು. ಬಾಡಿ ಪಾಲೀಷಿಂಗ್ ಮಾಡಿಸಿದರೆ ತ್ವಚೆಗೆ ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚುವುದು. ಆದ್ದರಿಂದ ಕೆಮಿಕಲ್ ಇರುವ ಕ್ರೀಮ್ ಗಳನ್ನು ಮೈಗೆ ಹಚ್ಚಬಾರದು. ಈ ರೀತಿ ಮಾಡಿದರೆ ನಿಮ್ಮ ತ್ವಚೆಯ ಕಾಂತಿಯನ್ನು ತುಂಬಾ ಕಾಲ ರಕ್ಷಣೆ ಮಾಡಬಹುದು.
ಆದ್ದರಿಂದ ಬಾಡಿ ಪಾಲೀಷಿಂಗ್ ಮಾಡಿಸಿದವರು ಹಾಗೂ ಮಾಡಿಸಬೇಕೆಂದು ಇರುವವರು ಈ ಟಿಪ್ಸ್ ಗಮನಿಸುವುದು ಒಳ್ಳೆಯದು:

ತ್ವಚೆಯನ್ನು ಫ್ರೀಯಾಗಿ ಬಿಡಿ
ಒಮ್ಮೆ ಬಾಡಿ ಪಾಲೀಷಿಂಗ್ ಮಾಡಿಸಿದ ನಂತರ ತ್ವಚೆಯ ಮೇಲೆ ಬೇರೆ ಯಾವುದಾದರೂ ಬ್ಯೂಟಿ ಪ್ರಯೋಗ ಮಾಡಲು ಹೋಗಬೇಡಿ. ನಿಮ್ಮ ತ್ವಚೆ ಬಾಡಿ ಪಾಲೀಷಿಂಗ್ ನ ಎಲ್ಲಾ ಗುಣಗಳನ್ನು ಹೀರಿಕೊಳ್ಳಲು ಬಿಡಿ. ಕೆಮಿಕಲ್ ಇರುವ ಯಾವುದೇ ಕ್ರೀಮ್ ಹಚ್ಚಲು ಹೋಗಬೇಡಿ.

ಏನಾದರೂ ಅಡ್ಡ ಪರಿಣಾಮ ಆಗಿದೆಯೇ ಎಂದು ಪರೀಕ್ಷಿಸಿ
ಬಾಡಿ ಪಾಲೀಷಿಂಗ್ ನಿಂದ ಏನಾದರೂ ಅಡ್ಡ ಪರಿಣಾಮ ಉಂಟಾಗಿದೆಯೇ ಎಂದು ಗಮನಿಸುವುದು ಒಳ್ಳೆಯದು. ಈ ಬ್ಯೂಟಿ ಟ್ರೀಟ್ ಮೆಂಟ್ ಅನ್ನು ನೈಸರ್ಗಿಕ ವಸ್ತುಗಳನ್ನು ಬಳಸಿ ಮಾಡುವುದು ಒಳ್ಳೆಯದು. ಕೆಮಿಕಲ್ ಬಳಸಿ ಮಾಡುವುದಾದರೆ ಆ ಕೆಮಿಕಲ್ ನಿಮ್ಮ ತ್ವಚೆಗೆ ಹೊಂದುವುದಾದರೆ ಮಾತ್ರ ಮಾಡಿ.

ಎಕ್ಸ್ ಫೋಲೆಟ್
ಎಕ್ಸ್ ಫೋಲೆಟ್ ಎಂದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸುವುದು. ಇದನ್ನು ಒಮ್ಮೆ ಮಾಡಿ ಬಿಡಬೇಡಿ. ಈ ಟ್ರೀಟ್ ಮೆಂಟ್ ಮಾಡಿದ ಕೆಲವು ದಿನಗಳ ಬಳಿಕ ಮತ್ತೆ ಎಕ್ಸ್ ಫೋಲೆಟ್ ಮಾಡಿಸಿದರೆ ಉತ್ತಮ ಫಲಿತಾಂಶ ದೊರೆಯುವುದು.

ಬಿಸಿಲಿಗೆ ಹೋಗಬೇಡಿ
ಬಾಡಿ ಫಾಲಿಷಿಂಗ್ ಮಾಡಿ ಬಿಸಿಲಿಗೆ ಹೋದರೆ ತ್ವಚೆ ಬೇಗನೆ ಟ್ಯಾನ್ ಆಗುತ್ತದೆ. ಆದ್ದರಿಂದ ಸೂರ್ಯನ ಬಿಸಿಲು ನೇರವಾಗಿ ಮೈ ಮೇಲೆ ಬೀಳದಂತೆ ಎಚ್ಚರವಹಿಸಿ, ತ್ವಚೆ ರಕ್ಷಣೆ ಮಾಡುವುದು ಒಳ್ಳೆಯದು.

ಸನ್ ಸ್ಕ್ರೀನ್ ಲೋಷನ್ ಬಳಸಿ
ಸ್ವಲ್ಪವೂ ಬಿಸಿಲಿಗೆ ಓಡಾಡದೆ ಇರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸನ್ ಸ್ಕ್ರಿನ್ ಲೋಷನ್ ಬಳಸುವುದು ಒಳ್ಳೆಯದು.

ಸ್ಟ್ರಾಂಗ್ ಕೆಮಿಕಲ್ ಬಳಸಬೇಡಿ
ಘಾಟು ವಾಸನೆಯ ಸುಗಂಧದ್ರವ್ಯಗಳನ್ನು ಬಳಸುವುದು ಮಾಡಬೇಡಿ. ಸ್ಟ್ರಾಂಗ್ ಇರುವ ಬಾಡಿ ಲೋಷನ್ , ಕ್ರೀಮ್ ಹಚ್ಚಬೇಡಿ. ತ್ವಚೆಗೆ ಉಸಿರಾಡಲು ಅವಕಾಶ ಕೊಡಿ.

ಸೋಪ್ ಬಳಸಬೇಡಿ
ಈ ಟ್ರೀಟ್ ಮೆಂಟ್ ತುಂಬಾ ಸುವಾಸನೆ ಇರುವ ಸೋಪ್ ಬಳಸಿದರೆ ತ್ವಚೆಯಲ್ಲಿರುವ ಮಾಯಿಶ್ಚರೈಸರ್ ಕಡಿಮೆಯಾಗುವುದರಿಂದ ಈ ಟ್ರೀಟ್ ಮೆಂಟ್ ನ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.



Click it and Unblock the Notifications
