Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಉಗುರುಗಳು ಬೇಗನೆ ಮುರಿದು ಹೋಗುತ್ತದೆಯೇ?
ಉಗುರುಗಳು ಬೆಳ್ಳಗೆ ಆಕರ್ಷಕವಾಗಿ ಕಂಡರೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ, ನೀವು ಆರೋಗ್ಯವಂತರಾಗಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ. ಉಗುರಿನಲ್ಲಿ ಬಿಳಿ ಚುಕ್ಕಿಗಳು ಬಿದ್ದರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಮ್ಮಿಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಹಳದಿ ಬಣ್ಣದಲ್ಲಿ ಇದ್ದರೆ ಅರಿಶಿಣ ಕಾಮಲೆ ಅಥವಾ ಮತ್ಯಾವುದೋ ಕಾಯಿಲೆ ಇದೆ ಅನ್ನುವುದು ಸೂಚಿಸುವುದು.
ಉಗುರುಗಳು ಬೇಗನೆ ಮುರಿಯುತ್ತಿದ್ದರೆ ಅಂದರೆ ಬಲಹೀನವಾಗಿದ್ದರೆ ಪೋಷಕಾಂಶದ ಕೊರತೆ, ರಕ್ತಹೀನತೆ, ಥೈರಾಯ್ಡ್ ಈ ರೀತಿಯ ತೊಂದರೆಗಳಿಂದ ಆ ರಿತಿಯಾಗುತ್ತಿರಬಹುದು. ಆದ್ದರಿಂದ ಈ ರೀತಿ ಕಂಡು ಬಂದರೆ ವೈದ್ಯರನ್ನು ಕಂಡು ಪರೀಕ್ಷಿಸುವುದು ಒಳ್ಳೆಯದು. ಕೆಲ ಮಹಿಳೆಯರಿಗೆ ಪಾತ್ರೆ ಉಜ್ಜುವುದರಿಂದ ಕೂಡ ಉಗುರುಗಳು ತೆಳ್ಳಗಾಗುವುದು.
ಅದಲ್ಲದೆ ನಾವು ಉಗುರಿನ ಆರೈಕೆ ಸರಿಯಾಗಿ ಮಾಡದಿದ್ದರೆ, ಅತೀಯಾಗಿ ಉಗುರಿಗೆ ಬಣ್ಣ ಹಚ್ಚುವುದರಿಂದ ಉಗುರುಗಳು ಬಲಹೀನವಾಗುತ್ತದೆ. ಇಲ್ಲಿ ನಾವು ಉಗುರುನ್ನು ಗಟ್ಟಿಯಾಗಿಸಿ ಆಕರ್ಷಕವಾಗಿ ಕಾಣುವಂತೆ ಮಾಡುವ ಕೆಲವೊಂದು ಟಿಪ್ಸ್ ನೀಡಿದ್ದೇವೆ ನೋಡಿ:

ಕೆಮಿಕಲ್ ಬಳಕೆ ಕಡಿಮೆ ಮಾಡಿ
ಹೆಚ್ಚಿನವರಿಗೆ ನೇಲ್ ಪಾಲಿಷ್ ಹಚ್ಚುವ ಗೀಳು ತುಂಬಾ ಇರುತ್ತದೆ. ದಿನಕ್ಕೊಂದು ನೇಲ್ ಪಾಲಿಷ್ ಹಚ್ಚುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನೇಲ್ಸ್ ಬಲಹೀನವಾಗುವುದು ಅನ್ನುವುದನ್ನು ಮರೆಯದಿರಿ.

ಸ್ವಲ್ಪ ಬ್ರೇಕ್ ತೆಗೆದುಕೊಳ್ಳಿ
ಉಗುರಿಗೆ ಬಣ್ಣ ಹಚ್ಚಿದರೆ ಅಮದವಾಗಿ ಕಾಣುತ್ತದೆ, ಆದರೆ ಸ್ವಚ್ಛ ಮಾಡಿ, ಚೆನ್ನಾಗಿ ಶೇಪ್ ನೀಡಿದ ಉಗುರು ಮತ್ತಷ್ಟು ಅಂದವಾಗಿ ಕಾಣುತ್ತದೆ. ಆದ್ದರಿಂದ ಸ್ವಲ್ಪ ದಿನ ಉಗುರಿಗೆ ಯಾವುದೇ ಬಣ್ಣ ಹಚ್ಚ ಹೋಗಬೇಡಿ. ದಿನಾ ಉಗುರಿಗೆ ಕೊಬ್ಬರಿ ಎಣ್ಣೆ ಹಚ್ಚಿ ಆರೈಕೆ ಮಾಡಿ.

ಉಗುರು ಕಚ್ಚುವ ಅಭ್ಯಾಸಗಳು
ಉಗುರು ಕಚ್ಚುವ ಅಭ್ಯಾಸ ಹೆಚ್ಚಿನವರಲ್ಲಿರುತ್ತದೆ. ಈ ಅಭ್ಯಾಸದಿಂದ ಉಗುರುಗಳು ಶೆಪ್ ಔಟ್ ಆಗುವುದು. ಅಂದದ ಉಗುರು ನಿಮ್ಮದಾಗಬೇಕೆಂಬ ಇಚ್ಛೆ ಇದ್ದರೆ ಉಗುರು ಕಚ್ಚುವ ಅಭ್ಯಾಸವನ್ನು ನಿಲ್ಲಿಸಿಬಿಡಿ.

ಕೆಲಸ ಮಾಡುವಾಗ ಕೈಗೆ ಗ್ಲೌಸ್ ಧರಿಸಿ
ಕೈಗೆ ಸೋಪು, ಇತರ ಕೆಮಿಕಲ್ಸ್ ತಾಗಿ ಡ್ರೈಯಾಗದಿರಲು ಮತ್ತು ಉಗುರಿನಲ್ಲಿ ಕೊಳೆ ಸೇರದಿರಲು ಗ್ಲೌಸ್ ಬಳಸಿ.

ಮಾಯಿಶ್ಚರೈಸರ್
ದಿನಾ ಮೈಗೆ ಮಾತ್ರ ಮಾಯಿಶ್ಚರೈಸರ್ ಹಚ್ಚಿದರೆ ಸಾಲದು, ಉಗುರಿಗೂ ಹಚ್ಚಿ, ಇದರಿಂದ ಹೊಳಪಿನ ಉಗುರಿನ ಸೌಂದರ್ಯ ನಿಮ್ಮದಾಗುವುದು.

ಉಗುರಿನ ಉದ್ದ
ಕೆಲವರಿಗೆ ಉಗುರು ಬಿಡುವುದೆಂದರೆ ತುಂಬಾ ಇಷ್ಟ. ಆದರೆ ಉಗುರು ಉದ್ದವಾದಷ್ಟು ಅದರ ಆರೈಕೆ ಕಷ್ಟವಾಗುವುದು. ಮಿತ ಅಳತೆಯಲ್ಲಿ ಬಿಟ್ಟು ಉಗುರಿಗೆ ಶೇಪ್ ಕೊಟ್ಟರೆ ಉಗುರುಗಳು ಆಕರ್ಷಕವಾಗಿ ಕಾಣುವುದು.

ಪೆಡಿಕ್ಯೂರ್ ಪಾಡಿಸಿ
ಪೆಡಿಕ್ಯೂರ್ ನಿಮ್ಮ ಉಗುರಿನಲ್ಲಿರುವ ನಿರ್ಜೀವ ಅಂಶವನ್ನು ತೆಗೆದು ಹಾಕಿ, ನಿಮ್ಮ ಉಗುರುಗಳು ಬೆಳ್ಳಗೆ ಆಕರ್ಷಕವಾಗಿ ಕಾಣುವಂತೆ ಮಾಡುವುದು.



Click it and Unblock the Notifications
