Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆಕರ್ಷಕ ತುಟಿಗೆ ಆರೈಕೆ ಮುಖ್ಯ,ಮೇಕಪ್ ಅಲ್ಲ
ಸಾಮಾನ್ಯವಾಗಿ ನಾವು ಲಿಪ್ ಕೇರ್ ಕ್ಕಿಂತ, ಲಿಪ್ ಮೇಕಪ್ ಕಡೆ ಹೆಚ್ಚು ಗಮನ ಕೊಡುತ್ತೇವೆ. ಆದರೆ ತುಟಿಯ ತ್ವಚೆಯ ಆರೈಕೆ ಮಾಡದೆ, ತುಟಿಗೆ ಮೇಕಪ್ ಮಾಡುವುದರಿಂದ ಆಕರ್ಷಕವಾದ ತುಟಿ ಪಡೆಯಲು ಸಾಧ್ಯವಿಲ್ಲ.
ಒಣ ತುಟಿ, ತುಟಿ ಕಪ್ಪಾಗುವುದು, ತುಟಿಯಲ್ಲಿ ಬಿರುಕು ಉಂಟಾಗಿ ನೋವಾಗುವುದು, ತುಟಿ ತನ್ನ ಹೊಳಪನ್ನು ಕಳೆದುಕೊಳ್ಳುವುದು ಹೀಗೆ ಅನೇಕ ತುಟಿ ಸಮಸ್ಯೆಗಳಿವೆ. ಇಲ್ಲಿ ನಾವು ತುಟಿ ಸಮಸ್ಯೆಗೆ ಕಾರಣ ಮತ್ತು ಪರಿಹಾರ ಬಗ್ಗೆ ಹೇಳಿದ್ದೇವೆ ನೋಡಿ:

ತುಟಿ ಡ್ರೈಯಾಗಲು ಕಾರಣಗಳು
* ದೇಹದಲ್ಲಿ ನೀರಿನಂಶ ಕಡಿಮೆಯಾದರೆ
* ಧೂಮಪಾನ
* ಹೆಚ್ಚು ಹೊತ್ತು ಬಿಸಿಲಿನಲ್ಲಿ ಇದ್ದರೆ
* ವಿಟಮಿನ್ ಎ, ಬಿ, ಸಿಯ ಕೊರತೆ
* ಮದ್ಯಪಾನ
* ಮೇಕಪ್
ಪರಿಹಾರ: ಹೆಚ್ಚು ನೀರು ಕುಡಿದು, ವಿಟಮಿನ್ ಇರುವ ಆಹಾರಗಳನ್ನು ತಿನ್ನಬೇಕು. ಕೆಟ್ಟ ಚಟಗಳನ್ನು ದೂರಮಾಡಿ, ಮೇಕಪ್ ಪ್ರತೀದಿನ ಮಾಡಿದ್ದರೆ ತುಟಿಯ ಹೊಳಪು ಹೆಚ್ಚುವುದು.
ತುಟಿ ಕಪ್ಪಾಗಲು ಕಾರಣ:
* ಧೂಮಪಾನ ಮತ್ತು ಮದ್ಯಪಾನ
* ಕಳಪೆ ಮಟ್ಟದ ಸೌಂದರ್ಯವರ್ಧಕಗಳನ್ನು ಬಳಸುವುದು
* ಡ್ರೈಯಾಗುವುದರಿಂದ
ಪರಿಹಾರ
* ಒಳ್ಳೆಯ ಲಿಪ್ ಬಾಮ್ ಬಳಸಿ ಮಸಾಜ್ ಮಾಡಿ.
* ಬಿಸಿಲಿಗೆ ಹೋಗುವಾಗ ತ್ವಚೆ ಮತ್ತು ತುಟಿಯ ರಕ್ಷಣೆ ಕಡೆಗೆ ಎಚ್ಚರವಹಿಸಿ.
* ತುಪ್ಪ, ಜೇನು ಈ ರೀತಿಯ ನೈಸರ್ಗಿಕವಾದ ವಸ್ತುಗಳನ್ನು ಹಚ್ಚಿದರೂ ತುಟಿ ಹೊಳಪನ್ನು ಪಡೆಯುವುದು.



Click it and Unblock the Notifications
