Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚೆಂದವಾಗಿ ಕಾಣಲು ಉಗುರುಗಳು ಅಂದವಾಗಿರಬೇಕು
ನಮ್ಮ ಉಗುರಿನ ಅಂದ ಮತ್ತು ಸ್ವಚ್ಛತೆ ಬಗ್ಗೆ ನಾವು ಎಷ್ಟೋ ಗಮನ ಕೊಡುತ್ತಿದ್ದೇವೆ ಎನ್ನುವುದು ಅದನ್ನು ನೋಡಿದಾಗಲೇ ತಿಳಿಯುತ್ತದೆ. ಸ್ವಚ್ಛವಾದ, ಆಕರ್ಷಕ ಶೇಪ್ ನ ಉಗುರುಗಳು ನಮ್ಮ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ನಮ್ಮ ವ್ಯಕ್ತಿತ್ವಕ್ಕೂ ವಿಶೇಷ ಮೆರುಗನ್ನು ನೀಡುತ್ತದೆ.
ಆದರೆ ಕೆಲಸದ ಒತ್ತಡದ ನಡುವೆ ಎಷ್ಟೋ ಬಾರಿ ಅದರ ಬಗ್ಗೆ ಗಮನ ಕೊಡುವುದೇ ಇಲ್ಲ. ಇದರ ಪರಿಣಾಮ ಉಗುರುಗಳು ಅಡ್ಡಾದಿಡ್ಡವಾಗಿ ಬೆಳೆದಿರುತ್ತದೆ, ಬೆರಳಿಗೆ ಹಚ್ಚಿದ ನೇಲ್ ಪಾಲಿಷ್ ಅರ್ಧ ಹೋಗಿರುತ್ತದೆ, ಅರ್ಧ ಕೈಯಲ್ಲಿದ್ದು ಕೈಯ ಅಂದವನ್ನು ಕೆಡಿಸಿರುತ್ತದೆ. ಪ್ರತಿಯೊಂದು ಹೆಣ್ಣು ತಾನು ಅಂದವಾಗಿ ಕಾಣಬೇಕೆಂದು ಬಯಸುತ್ತಾಳೆ, ಬಯಸಿದರೆ ಮಾತ್ರ ಸಾಕೇ? ನಿಮ್ಮ ಉಗುರು ಅಂದವಾಗಿ ಕಾಣಿಸಬೇಕೆಂದು ಬಯಸುವುದಾದರೆ ಇಲ್ಲಿ 3 ಬಗೆಯ ನೇಲ್ ಕೇರ್ ಟಿಪ್ಸ್ ನೀಡಿದ್ದೇವೆ ನೋಡಿ.

ಟ್ರಿಮ್ ಮಾಡಿ
* ಉಗುರಿಗೆ ಬಣ್ಣ ಹಚ್ಚಲು ಇಷ್ಟ ಪಡದವರು ಉಗುರನ್ನು ಉದ್ದ ಬಿಡುವುದಕ್ಕಿಂತ ನೀಟಾಗಿ ಕತ್ತರಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಕೆಮಿಕಲ್ ಬಗ್ಗೆ ಎಚ್ಚರ
* ಹಾನಿಕಾರಕ ಕೆಮಿಕಲ್ ತಾಗಿ ಉಗುರುಗಳು ಹಾಳಾಗದಂತೆ ಎಚ್ಚರವಹಿಸಬೇಕು.

ಗ್ಲೌಸ್
* ಮನೆ ಕೆಲಸ ಮಾಡುವಾಗ ಗ್ಲೌಸ್ ಬಳಸುವುದು ಒಳ್ಳೆಯದು. ಇದರಿಂದ ಕೊಳೆ ತುಂಬುವುದಿಲ್ಲ.

ಮಾಯಿಶ್ಚರೈಸರ್ ಹಚ್ಚಿ
* ಉಗುರಿಗೆ ದಿನಾ ಮಾಯಿಶ್ಚರೈಸರ್ ಹಚ್ಚಿ, ಇದರಿಂದ ಉಗುರಿನಲ್ಲಿ ಬಿರುಕು ಕಂಡು ಬರುವುದಿಲ್ಲ.

ನೇಲ್ ಪಾಲಿಷ್
* ನಂತರ ಬಣ್ಣ ಹಚ್ಚುವುದಾದರೆ ಉತ್ತಮ ಗುಣ ಮಟ್ಟದ ನೇಲ್ ಪಾಲಿಷ್ ಹಚ್ಚಿ.

ರಿಮೋವರ್
ನೇಲ್ ಪಾಲಿಷ್ ಅರ್ಧಂಬರ್ಧ ಹೋದ ಮೇಲೂ ಕೈಯಲ್ಲಿಯೇ ಇಡಬೇಡಿ, ರಿಮೋವರ್ ಬಳಸಿ ತೆಗೆಯಿರಿ.

ಕೃತಕ ಉಗುರು
* ಮೊದಲನೆಯದಾಗಿ ಕೃತಕ ಉಗುರನ್ನು ಬಳಸದಿರುವುದು ಒಳ್ಳೆಯದು. ಕೃತಕ ಉಗುರು ಹಾಕಿ ನಂತರ ತೆಗೆದರೆ ಆಯ್ತು ಎಂದು ಹೇಳುವುದಾದರೂ ಕೃತಕ ಉಗುರು ಬಳಸಿದರೆ ನೈಜ ಉಗುರು ಹಾಳಾಗುವುದಂತೂ ನಿಜ.

ಕೃತಕ ಉಗುರಿನ ಆರೈಕೆ
* ಕೃತಕ ಉಗುರು ಬಳಸುವುದಾದರೂ ಅದರ ಆರೈಕೆ ಮತ್ತು ಅಲಂಕಾರವನ್ನು ಪರಿಣಿತರ ಕೈಯಿಂದ ಮಾಡಿಸುವುದು ಒಳ್ಳೆಯದು. ಇದರಿಂದ ಅದನ್ನು ದೀರ್ಘಕಾಲ ಬಳಸಬಹುದು.

Acryllic ಉಗುರು
ಉಗುರಿಗೆ ನೇಲ್ ಪಾಲಿಷ್ ಹಚ್ಚಿ ಅದರ ಮೇಲೆ ಭಿನ್ನವಾದ ವಿನ್ಯಾಸದ ಸ್ಟಿಕ್ಕರ್ ಅಂಟಿಸುವುದಾದರೆ ಜಾಗ್ರತೆಯಿಂದ ಬಳಸಿ. ಈ ರೀತಿಯ ವಿನ್ಯಾಸ ಮಾಡುವಾಗ ಮಂದವಾದ ನೇಲ್ ಪಾಲಿಷ್ ಹಚ್ಚುವ ಬದಲು ತೆಳು ನೇಲ್ ಪಾಲಿಷ್ ಹಚ್ಚಿ, ಅದು ಒಣಗಿದ ಬಳಿಕ ಈ ಸ್ಟಿಕ್ಕರ್ ಗಳನ್ನು ಅಂಟಿಸಿ.



Click it and Unblock the Notifications
