Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಮೈಗೆ ಮೆತ್ತಿದ ಬಣ್ಣ ಹೋಗಲಾಡಿಸಬೇಕೆ?
ಹೋಳಿ ಆಡುವ ಮುನ್ನ ಯಾವ ರೀತಿ ತ್ವಚೆ ಹಾಗೂ ಕೂದಲನ್ನು ಆರೈಕೆ ಮಾಡಬೇಕು ಎಂದು ಟಿಪ್ಸ್ ನೀಡಿದ್ದೆವು. ಹೋಳಿ ಆಡಿದ ಬಳಿಕ ಬಣ್ಣವನ್ನು ಹೋಗಲಾಡಿಸಲು ಏನು ಮಾಡಬೇಕೆಂದು ಈ ಲೇಖನದಲ್ಲಿ ಹೇಳಿದ್ದೇವೆ ನೋಡಿ:
ಹೋಳಿ ಬಣ್ಣವನ್ನು ಹೋಗಲಾಡಿಸಲು ಏನು ಮಾಡಬೇಕೆಂದು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಅಡುಗೆ ಮನೆಯಲ್ಲಿಯೇ ದೊರೆಯುವ ಈ ಕೆಳಗಿನ ಆಹಾರ ವಸ್ತುಗಳು ಸಾಕು, ನಿಮ್ಮ ಮೈ ಮೇಲಿರುವ ಬಣ್ಣವನ್ನು ಸಂಪೂರ್ಣವಾಗಿ ಹೋಗಲಾಡಿಸಲು.

ತೆಂಗಿನೆಣ್ಣೆ ಜೊತೆ ಮಿಶ್ರ ಮಾಡಿದ ತೆಂಗಿನ ಹಾಲು
ತೆಂಗಿನ ಹಾಲನ್ನು ತೆಂಗಿನೆಣ್ಣೆ ಜೊತೆ ಮಿಶ್ರಣ ಮಾಡಿ ಮುಖಕ್ಕೆ, ಮೈಗೆ ಹಚ್ಚಿ. ಈ ರೀತಿ ಮಾಡಿದರೆ ತ್ವಚೆಗೂ ಹಾನಿಯಾಗುವುದಿಲ್ಲ, ಬಣ್ಣವನ್ನೂ ಸುಲಭವಾಗಿ ತೆಗೆಯಬಹುದು.

ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆಯನ್ನು ಮೈಗೆ ಉಜ್ಜಿ ಕೆಲವು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಮೈಯನ್ನು ತಿಕ್ಕ ತೊಳೆದರೆ ಬಣ್ಣ ಹೋಗುವುದು.

ಅರಿಶಿಣ ಪುಡಿ
ಹೋಳಿಯ ಬಣ್ಣ ತೆಗೆಯಲು ಅರಿಶಿಣ ಪುಡಿಯನ್ನು ಎಣ್ಣೆ ಜೊತೆ ಮಿಶ್ರಣ ಮಾಡಿ ತಿಕ್ಕಿ, ನಂತರ ಸೋಪು ಹಚ್ಚಿ ಮೈ ತೊಳೆದರೆ ಸಾಕು.

ನಿಂಬೆ ರಸ
ಮೊದಲು ಮೈಗೆ ಎಣ್ಣೆ ತಿಕ್ಕಿ, ನಂತರ ನಿಂಬೆ ಹಣ್ಣಿನಿಂದ ಮೈಉಜ್ಜಿ. ಈ ರೀತಿ ಮಾಡಿದರೆ ಮೈಯಲ್ಲಿ ಹೋಳಿ ಬಣ್ಣ ಸ್ವಲ್ಪವೂ ಇರುವುದಿಲ್ಲ.

ಮೊಸರು
ಹೋಳಿಯಾಡಿದ ನಂತರ ಮೊಸರು ಹಚ್ಚಿದರೆ ತ್ವಚೆ ಮೃದುವಾಗಿರುವುದು.

ಜೇನು
ಹೋಳಿಯಾಡಿದ ನಂತರ ಎಣ್ಣೆ ಹಚ್ಚಿ ಸ್ನಾನ ಮಾಡಿ, ನಂತರ ಪುನಃ ಜೇನು ಹಚ್ಚಿ ಸ್ನಾನ ಮಾಡಿದರೆ ತ್ವಚೆಗೆ ಕೆಮಿಕಲ್ ನಿಂದ ಯಾವುದೇ ಹಾನಿಯಿಂಟಾಗುವುದಿಲ್ಲ.

ಗೋಧಿ ಹಿಟ್ಟು
ಗೋಧಿ ಹಿಟ್ಟನ್ನು ಎಣ್ಣೆಯಲ್ಲಿ ಮಿಕ್ಸ್ ಮಾಡಿ ಸ್ಕ್ರಬ್ ಮಾಡಿದರೆ ಬಣ್ಣ ಬೇಗನೆ ಹೋಗುತ್ತದೆ.

ವಿನಿಗರ್
1 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು 1 ಬಕೆಟ್ ತಣ್ಣೀರಿಗೆ ಹಾಕಿ ಅದರಲ್ಲಿ ತಲೆ ತೊಳೆಯಿರಿ. ಈ ರೀತಿ ಮಾಡಿದರೆ ಬಣ್ಣ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯುತ್ತದೆ.

ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ
ತಲೆ ತೊಳೆದು ಒಣಗಿಸಿದ ನಂತರ ಬಾದಾಮಿ ಅಥವಾ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ. ಈ ರೀತಿ 2-3 ದಿನ ಮಾಡಿ.

ಆಲೀವ್ ಎಣ್ಣೆ
ಮಲಗುವ ಮುನ್ನ ಆಲೀವ್ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯ ಹೊಳಪು ಹೆಚ್ಚುವುದು.



Click it and Unblock the Notifications
