Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಪರ್ಫೆಕ್ಟ್ ಸ್ಮೈಲ್ ಗಾಗಿ ಪಾಲಿಸಿ ಈ ಟಿಪ್ಸ್
ನಾವು ನಕ್ಕಾಗ ನಮ್ಮ ಹಲ್ಲು ನೋಡುಗರ ಗಮನ ಸೆಳೆಯುತ್ತದೆ. ಹಳದಿ ಬಣ್ಣದ ಹಲ್ಲುಗಳನ್ನು ಹೊಂದಿದ್ದರೆ ನಮ್ಮ ಬಗ್ಗೆ ನೋಡುಗರ ಅಭಿಪ್ರಾಯವೇ ಬದಲಾಗುವುದು. ಈ ವ್ಯಕ್ತಿ ಬಾಯಿ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ಕೊಡುವುದಿಲ್ಲವೆಂದೇ ಭಾವಿಸುತ್ತಾರೆ.
ಕೆಲವರು "ನಾನು ದಿನದಲ್ಲಿ ಎರಡು ಬಾರಿ ಹಲ್ಲುಜ್ಜುತ್ತೇನೆ, ಆದರೂ ನನ್ನ ಹಲ್ಲು ಹಳದಿ ಬಣ್ಣದಲ್ಲಿಯೇ ಇರುತ್ತದೆ, ಹಲ್ಲನ್ನು ಬಿಳುಪಾಗಿಸಲು ಸಾಧ್ಯವಿಲ್ಲವೇ?" ಎಂದು ಕೇಳುತ್ತಾರೆ. ಪ್ರತಿಯೊಬ್ಬರೂ ಬಿಳಿ ಹಲ್ಲಿನ ಸೌಂದರ್ಯ ಪಡೆಯಬಹುದು, ಆದರೆ ಅದಕ್ಕಾಗಿ ಸ್ವಲ್ಪ ಗಮನ ಕೊಡಬೇಕಷ್ಟೇ.
ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ದೇವೆ, ಇವುಗಳನ್ನು ಪಾಲಿಸಿದರೆ ಮುತ್ತಿನ ಬಿಳುಪಿನ ಹಲ್ಲುಗಳನ್ನು ಪಡೆಯಬಹುದು.

ಸೂಕ್ತ ಬ್ರೆಷ್ ನ ಆಯ್ಕೆ
ಬ್ರೆಷ್ ಕೊಳ್ಳುವಾಗ ಗುಣಮಟ್ಟದ ಬ್ರೆಷ್ ನೋಡಿ ಕೊಳ್ಳಿರಿ. ಬ್ರೆಷ್ ಸರಿಯಾಗಿ ಇಲ್ಲದಿದ್ದರೆ ಹಲ್ಲುಗಳನ್ನು ಶುದ್ಧವಾಗುವುದಿಲ್ಲ.

ನೂಲಿನಿಂದ ಹಲ್ಲಿನ ಶುಚಿತ್ವ
ಹಲ್ಲಿನ ಸಂದುಗಳನ್ನು ಕ್ಲೀನ್ ಮಾಡಲು ಬರೀ ಬ್ರಷ್ ಬಳಸಿದರಷ್ಟೇ ಸಾಲದು, ನೂಲಿನ ಸಹಾಯವನ್ನೂ ಪಡೆದುಕೊಳ್ಳಿ, ನೂಲಿನಿಂದ ಹಲ್ಲಿನ ಮಧ್ಯ ಕರೆ ನಿಲ್ಲದಂತೆ ಮಾಡಬಹುದು.

ಹಲ್ಲುಗಳ ಪಾಲಿಷ್
ಇಷ್ಟೆಲ್ಲಾ ಮಾಡಿಯೂ ಹಲ್ಲು ಬೆಳ್ಳಗಾಗಲಿಲ್ಲ ಅನಿಸಿದರೆ ಟೂತ್ ಪಿಕ್ ಬಳಸಿ ಸ್ಕ್ರಬ್ ಮಾಡಿ ಹಲ್ಲನ್ನು ಪಾಲಿಷ್ ಮಾಡಿದರೆ ಹಲ್ಲು ಬಿಳುಪನ್ನು ಪಡೆಯುವುದು.

ನಿಂಬೆ ಹಣ್ಣು
ದಿನಾ ಒಂದು ಚಿಕ್ಕ ನಿಂಬೆ ಹಣ್ಣಿನ ತುಂಡಿನಿಂದ ಹಲ್ಲನ್ನು ತಿಕ್ಕಿದರೆ ಹಲ್ಲು ಬೆಳ್ಳಗಾಗುವುದು ಮಾತ್ರವಲ್ಲ ಬಾಯಿ ದುರ್ವಾಸನೆಯನ್ನು ತಡೆಯಬಹುದು.

ಸಾಸಿವೆ ಎಣ್ಣೆ ಮತ್ತು ಉಪ್ಪು
ನಿಮ್ಮ ಹಲ್ಲು ಹಳದಿ ಬಣ್ಣಕ್ಕೆ ತಿರುಗಿದ್ದರೆ 1 ಚಮಚ ಸಾಸಿವೆ ಎಣ್ಣೆಗೆ ಅರ್ಧ ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ ಬ್ರೆಷ್ ನಿಂದ ತಿಕ್ಕಿ, ಹಲ್ಲಿನ ಬಿಳುಪು ಹೆಚ್ಚುವುದು.

ಅಡುಗೆ ಸೋಡಾ
ಹಲನ್ನು ಬೆಳ್ಳಗಾಗಿಸುವಲ್ಲಿ ಅಡುಗೆ ಸೋಡಾ ಕೂಡ ತುಂಬಾ ಪರಿಣಾಮಕಾರಿ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಅಡುಗೆ ಸೋಡಾದಿಂದ ಹಲ್ಲಿನ ಆರೈಕೆ ಮಾಡಿದರೆ ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ.

ಊಟವಾದ ಬಳಿಕ ಮೌತ್ ವಾಶ್ ಬಳಸಿ ಬಾಯಿ ಮುಕ್ಕಳಿಸಿ
ಕೆಲವರು ಊಟವಾದ ಬಳಿಕ ಬಾಯಿ ಮುಕ್ಕಳಿಸುವ ಅಭ್ಯಾಸವನ್ನು ರೂಢಿಸಿ ಕೊಂಡಿರುವುದಿಲ್ಲ, ಬಿಳಿಯಾದ, ಆರೋಗ್ಯಕರ ಹಲ್ಲು ಬೇಕೆಂದರೆ ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಒಳ್ಳೆಯದು.

ಲವಂಗ
ಹಲ್ಲಿನ ವಸಡುಗಳಲ್ಲಿ ಸೋಂಕು ತಾಗಿ ನೋವು ಕಂಡು ಬಂದರೆ ಲವಂಗ ಜಗಿದರೆ ಸಾಕು ನೋವು ಕಮ್ಮಿಯಾಗುವುದು.



Click it and Unblock the Notifications
