For Quick Alerts
ALLOW NOTIFICATIONS  
For Daily Alerts

ಈ ಫೇಸ್ ಸ್ಟೀಮಿಂಗ್ ನಿಮ್ಮ ಲುಕ್ ಹೆಚ್ಚಿಸುತ್ತೆ

|

ನುಣಪಾದ, ಆಕರ್ಷಕವಾದ ತ್ವಚೆ ಬೇಕೆಂದು ಬಯಸುವವರು ಮುಖಕ್ಕೆ ಸ್ಟೀಮಿಂಗ್ ಕೊಡಬೇಕು. ಸ್ಟೀಮಿಂಗ್ ಕೊಟ್ಟರೆ ಮುಖದ ರಂಧ್ರಗಳು ಓಪನ್ ಆಗಿ, ತ್ವಚೆಯ ಉಸಿರಾಟಕ್ಕೆ ಸಹಾಯಮಾಡುವುದು ಹಾಗೂ ಮಾಡುವಾಗ ಮುಖ ಬೆವರುವುದರಿಂದ ಬೇಡದ ಕಲ್ಮಶಗಳು ಹೊರಹೋಗುವುದು.

ಸ್ಟೀಮಿಂಗ್ ಅನ್ನು ವಾರದಲ್ಲಿ 2 ಬಾರಿ ಮಾಡುವುದು ತುಂಬಾ ಒಳ್ಳೆಯದು. ಈ ಸ್ಟೀಮಿಂಗ್ ಅನ್ನು ನಾನಾ ರೀತಿಯಲ್ಲಿ ಮಾಡಬಹುದು. ಇಲ್ಲಿ ನಾವು ನಿಮ್ಮ ತ್ವಚೆಯ ಅಂದ ಹೆಚ್ಚಿಸುವ ಕೆಲವು ಸ್ಟೀಮಿಂಗ್ ವಿಧಾನಗಳನ್ನು ಹೇಳಿದ್ದೇವೆ ನೋಡಿ.

ಸಲಹೆ: ವಯಸ್ಸು 35 ದಾಟಿದವರು ಸ್ಟೀಮಿಂಗ್ ಮಾಡದಿರುವುದು ಒಳ್ಳೆಯದು.

ಬಿಸಿ ನೀರಿನಿಂದ ಸ್ಟೀಮಿಂಗ್

ಬಿಸಿ ನೀರಿನಿಂದ ಸ್ಟೀಮಿಂಗ್

ಬಿಸಿ ನೀರನ್ನು ಕುದಿಸಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಆ ಆವಿಗೆ ಮುಖ ಹಿಡಿದು ಮುಖ ಸಂಪೂರ್ಣ ಬೆವರಿದ ನಂತರ ನಂತರ ಮುಖವನ್ನು ತಣ್ಣೀರಿನಿಂದ ತೊಳೆದು, ಸ್ವಲ್ಪ ಹತ್ತಿಯ ಉಂಡೆ ತೆಗೆದು ಅದಕ್ಕೆ ವಿನೆಗರ್ ಹಾಕಿ ಮುಖವನ್ನು ಉಜ್ಜಿ.

ಹರ್ಬಲ್ ಸ್ಟೀಮ್

ಹರ್ಬಲ್ ಸ್ಟೀಮ್

ನೀರಿಗೆ ಹರ್ಬ್ಸ್ ಹಾಕಿ ಕುದಿಸಿ, ಆ ನೀರಿನಿಂದ ಮುಖಕ್ಕೆ ಸ್ಟೀಮ್ ತೆಗೆದುಕೊಂಡರೆ ಮತ್ತಷ್ಟು ಪ್ರಯೋಜನಕಾರಿ. ಬಿಸಿ ನೀರಿಗೆ ಲ್ಯಾವೆಂಡರ್ ಎಣ್ಣೆ ಹಾಕಿ ಕೂಡ ಸ್ಟೀಮ್ ತೆಗೆದುಕೊಳ್ಳಬಹುದು.

 ಐರನ್ ಸ್ಟೀಮ್

ಐರನ್ ಸ್ಟೀಮ್

ಇದರ ಸ್ಟೀಮ್ ನಿಂದ ಮುಖದ ಆರೈಕೆ ಮಾಡಬಹುದು. ಐರನ್ ಬಾಕ್ಸ್ ನ ಸ್ಟೀಮ್ ಗೆ ಸ್ವಲ್ಪ ದೂರದಲ್ಲಿ ನಿಂತು ಮುಖವನ್ನು ಒಡ್ಡಿ ನಿಂತರೆ ಮುಖ ಸಂಪೂರ್ಣ ಬೆವರಿ ಕಲ್ಮಶಗಳು ಹೋಗುವುದು, ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಇವುಗಳನ್ನು ಸುಲಭದಲ್ಲಿ ತೆಗೆಯಬಹುದು.

 ಸ್ಟೀಮ್ ಶವರ್

ಸ್ಟೀಮ್ ಶವರ್

ಬಾತ್ ರೂಂನ ಬಾಗಿಲು ಕಿಟಕಿಗಳನ್ನು ಮುಚ್ಚಿ, ಬಿಸಿ- ಬಿಸಿಯಾದ ನೀರನ್ನು ಬಕೆಟ್ ಗೆ ಹಾಕಿ ಅದರ ಆವಿಗೆ ಮುಖವನ್ನು 5 ನಿಮಿಷ ಒಡ್ಡಿ. ಈ ರೀತಿ ಮಾಡಿದರೆ ಮುಖಕ್ಕೆ ಉತ್ತಮ ಕ್ಲೆನ್ಸಿಂಗ್ ಮಾಡಿದಂತೆ ಆಗುವುದು.

 ಕೊನೆಯದಾಗಿ

ಕೊನೆಯದಾಗಿ

ಹೊಳಪಿನ ತ್ವಚೆ ಬೇಕೆನ್ನುವವರು ಮುಖಕ್ಕೆ ಸ್ಟೀಮ್ ಕೊಡುವುದು ಮರೆಯಬೇಡಿ. ಸ್ಟೀಮ್ ತ್ವಚೆ ಹೊಳಪನ್ನು ಹೆಚ್ಚಿಸುವುದು ಮಾತ್ರವಲ್ಲ, ಚಿರಯೌವನದಿಂದ ಕಾಣುವಂತೆ ಮಾಡುವುದು.

English summary

Different Ways Of Steaming Face

Steaming your face will cause it to be clean inside-out. Face steaming causes you to sweat and pushes out the dirt and debris by unclogging your pores. Face steaming is a simple process and you can easily do it at home.
X
Desktop Bottom Promotion